ಇದೇನು ಕುಂಬಳವೋ... ಆನೆ ಮೊಟ್ಟೆಯೋ? : ಅಮೆರಿಕಾದ ಕ್ಯಾಲಿಫೋರ್ನಿಯಾದ ಒಂದು ತೋಟದಲ್ಲಿ ಇತ್ತೀಚೆಗೆ ಬೆಳೆಯಲಾದ  ಕುಂಬಳಕಾಯಿ ಎಷ್ಟು ದೊಡ್ಡದಾಗಿತ್ತೆಂದರೆ, ಅದರ ಮುಂದೆ ಕುಳಿತ ಒಂದು ಮಗು ಚಿಕ್ಕದಾಗಿ ಕಾಣಿಸುತ್ತಿತ್ತು. ವಿಶ್ವದಾಖಲೆ ಎಂದರೆ ಇದರ ತೂಕ ಬರೋಬ್ಬರಿ 1,053 ಕಿಲೋ! ಒಂದನ್ನು ಮನೆಗೆ ತನ್ನಿ, ಇಡೀ ವರ್ಷ ಸೇವಿಸಬಹುದು. ಮತ್ತೆ ಅಂಗಡಿಗೆ ಓಡಬೇಕಾದ್ದಿಲ್ಲ. ಆದರೆ ಇದನ್ನು ಅಡುಗೆಮನೆಯಲ್ಲಿ ಎಲ್ಲಿಡುವುದು ಎಂಬುದೇ ಸಮಸ್ಯೆ.

ಗ್ಲಾಮರಸ್ಫ್ಯಾಷನ್ನಿನ ಬೆಡಗು : ರಾಂಪ್‌ ಮೇಲೆ ಹೀಗೆ ಅಂಡರ್‌ವೇರ್‌ ಫ್ಯಾಷನ್‌ ಮಾಡಿಸುತ್ತಾರೇಕೆ ಎಂಬುದೇ ಅರ್ಥವಾಗುವುದಿಲ್ಲ. ಏಕೆಂದರೆ ಈ ಒಳವಸ್ತ್ರಗಳಂತೂ ಮೇಲುವಸ್ತ್ರಗಳ ಒಳಗೆ ಯಾರಿಗೂ ಕಾಣದಂತೆ ಅಡಗಿರುತ್ತವೆ. ಹಾಗಿರುವಾಗ ಅದು ಹೇಗಿದೆ, ಗೆಟಪ್‌ ಎಂಥದು ಎಂದು ತಲೆ ಕೆಡಿಸಿಕೊಳ್ಳಬೇಕೇಕೆ?

ಹೀಗಾಗಬಹುದೆಂಬ ಅರಿವಿರಲಿಲ್ಲ :  ಅಡುಗೆಮನೆಗೆ ನುಗ್ಗಿ ಖೀರಿನ ಬಟ್ಟಲಿಗೆ ಬಾಯಿಹಾಕಿ ಆ ಪಾತ್ರೆಗೆ ಮೂತಿ ಸಿಕ್ಕಿಸಿಕೊಂಡ ಬೆಕ್ಕಿನ ಕಥೆ ನಮಗೆ ಗೊತ್ತೇ ಇದೇ, ಆದರೆ ಚಿರತೆಯಂಥ ಘಟಾನುಘಟಿ ಜೊತೆಯೂ ಹೀಗಾಗಬಹುದು ಎಂಬ ಅಂದಾಜು ಯಾರಿಗೂ ಇರಲಿಲ್ಲ. ರಾಜಸ್ಥಾನ್‌ ರಾಜ್ಯದ ಸಾರ್ದು್‌ ಖೇಡಾ ಎಂಬಲ್ಲಿ ಒಂದು ಚಿರತೆ ಇದನ್ನು ನಿಜವಾಗಿಸಿತು. ಆಗಿದ್ದಿಷ್ಟೆ, ಒಂದು ಚಿರತೆ ಯಾವುದೋ ಮಾಯದಲ್ಲಿ ಒಂದು ಲೋಹದ ಬಿಂದಿಗೆಗೆ ಬಾಯಿಹಾಕಿ ಮೂತಿ ಸಿಕ್ಕಿಸಿಕೊಂಡು, ದಾರಿ ಕಾಣದೆ ಓಡಾಡುತ್ತಿದ್ದಾಗ, ಜನ ಅದರ ವಿಡಿಯೋ ಮಾಡಿಕೊಂಡರು. ನಂತರ ಅರಣ್ಯಾಧಿಕಾರಿಗಳು ಬಂದು, ಅದರ ಜ್ಞಾನ ತಪ್ಪಿಸಿ, 5 ಗಂಟೆಗಳ ಸತತ ಆಪರೇಷನ್‌ ನಡೆಸಿ, ಬಿಂದಿಗೆ ಕತ್ತರಿಸಿ ಅದಕ್ಕೆ ಮುಕ್ತಿ ಕೊಡಿಸಿದರು.

ಕಲೆಯ ಚಮತ್ಕಾರ ನೋಡಿ : ವ್ಯರ್ಥ ಎನಿಸುವ ಪ್ಲಾಸ್ಟಿಕ್‌ನಿಂದ ಈಗ ಉಪಯುಕ್ತ ಕಲಾತ್ಮಕ ವಸ್ತುಗಳು ತಯಾರಾಗುತ್ತಿವೆ. ತಾನಾಗಿ ಎಂದೂ ಹಾಳಾಗದ ಪ್ಲಾಸ್ಟಿಕ್‌ನ್ನು ಕಸದ ರಾಶಿಗೆ ಹಾಕುವುದಕ್ಕಿಂತ, ಇದನ್ನು ಕಲಾತ್ಮಕವಾಗಿ ಬಳಸುವುದು ಲೇಸು, ಆಗ ಕನಿಷ್ಠ ನಿಮ್ಮ ನಗರ ಸುಂದರವಾಗುತ್ತದೆ. ಇಟಲಿಯ ಕಲಾವಿದರು, ಫ್ರಾನ್ಸ್ ನ ಒಂದು ನಗರದಲ್ಲಿ ಈ ಕಲಾಕೃತಿಗಳನ್ನು ಪಬ್ಲಿಕ್‌ಪ್ಲೇಸ್‌ನಲ್ಲಿ ಅಳವಡಿಸಿ ಕಸದಲ್ಲೂ ರಸ ಮಾಡಬಹುದೆಂದು ಸಾಧಿಸಿ ತೋರಿಸಿದ್ದಾರೆ. ಕುರೂಪಿಗಳನ್ನೂ ಪ್ರೇಮಿಸಿ ಹೊಸ ಬಾಳು ನೀಡಬಹುದೆಂಬಂತೆ.

ಉಸಿರೇ ನಿಂತು ಹೋದಂತೆ! :  ರೋಮಾಂಚಕ ಜಿಗಿಯುವಿಕೆಯ ಕಾಂಪಿಟಿಶನ್‌, ಈಗ ಅಮೆರಿಕಾದಲ್ಲಿ ಅಪಾಯಕಾರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರ ಮಧ್ಯೆ ಬಹಳ ಜನಪ್ರಿಯವಾಗುತ್ತಿದೆ. ಮೌಂಟೆನ್‌ ಬೈಕ್‌ನಲ್ಲಿ ಲಾಂಗ್‌ ಜಂಪ್‌ ಎಗರುವುದಕ್ಕಾಗಿ, ಒಂದು ಗಜದ ನಿಮ್ಮ ಎದೆಯೊಡ್ಡಿ ನಿಲ್ಲಬೇಕಾಗುತ್ತದೆ. ಕ್ಷೇಮವಾಗಿ ಹಿಂದಿರುಗಲು ಬಹಳ ಬುದ್ಧಿವಂತಿಕೆ ಹಾಗೂ ಟೆಕ್ನಿಕ್ಸ್ ಸಹ ಅತ್ಯಗತ್ಯ. ಇದರಲ್ಲಿ ಸೆಂಟರ್‌ ಆಫ್‌ ಗ್ರಾವಿಟಿ, ವಿತ್‌ ಪ್ರೆಶರ್‌, ಟ್ರಾಜೆಕ್ಟ್ರಿ ಮುಂತಾದ ವೈಜ್ಞಾನಿಕ ಸಿದ್ಧಾಂತಗಳ ಸಂಪೂರ್ಣ ಅರಿವು, ಖಂಡಿತಾ ಅತ್ಯಗತ್ಯ.

ಮತ್ತೊಬ್ಬ ಮುನ್ನಿ ಮರಳಿಗೂಡಿಗೆ :  ಪಾಕಿಸ್ತಾನದಿಂದ ಮರಳಿದ ಮೂಕಿ ಕಿವುಡಿ ಹುಡುಗಿ ಗೀತಾ, `ಬಜರಂಗಿ ಭಾಯಿಜಾನ್‌' ಚಿತ್ರದ ಕಾಲ್ಪನಿಕ ಕಥೆಯಂತೆಯೇ ನಿಜ ಜೀವನದಲ್ಲೂ ನಡೆಯುತ್ತದೆಂಬುದಕ್ಕೆ ಸಾಕ್ಷಿಯಾಗಿದ್ದಾಳೆ. ಆಕೆ 10 ವರ್ಷಕ್ಕೂ ಹೆಚ್ಚು ಕಾಲ ಪಾಕಿಸ್ತಾನದಲ್ಲಿದ್ದು, ನಂತರ ಭಾರತದ ತನ್ನ ಗೂಡಿಗೆ ಮರಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ