ಜೆಕೆ ಟೈರ್ ಪ್ರಾಯೋಜಿತ ಬಹುನಿರೀಕ್ಷಿತ ‘ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2026’ರ ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತು ಇದೇ ಸೆಪ್ಟೆಂಬರ್ 19 ಮತ್ತು 20ರಂದು ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇನಲ್ಲಿ ನಡೆಯಲಿದೆ.
ಮೊದಲ ಸುತ್ತಿನ ಬಳಿಕ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಅರಿಸ್ ಕಿರಿಯಾಕೋ 51 ಅಂಕಗಳೊಂದಿಗೆ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ಮೂರು ರೇಸ್‌ಗಳಲ್ಲೂ ಸ್ಥಾನ ಗಳಿಸುವ ಮೂಲಕ ಅವರು ಆರಂಭಿಕ ಹಂತದಲ್ಲೇ ಪ್ರಬಲ ಮುನ್ನಡೆ ಸಾಧಿಸಿದ್ದಾರೆ. ಮೊದಲ ರೇಸ್‌ನಲ್ಲಿ ಗೆಲುವು ಪಡೆದ ಲುವಿವೆ ಸಾಂಬುಡ್ಲಾ 38 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಆರನ್ ಮೆಹ್ತಾ 32 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇದೀಗ ಸೆಪ್ಟೆಂಬರ್ 19 ಮತ್ತು 20ರಂದು ನಡೆಯಲಿರುವ ಮೂರು ರೇಸ್‌ಗಳು ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಲಿವೆ.
ಮೊದಲ ಸುತ್ತಿನಲ್ಲಿ ಅರಿಸ್ ಕಿರಿಯಾಕೋ ಉತ್ತಮ ಪ್ರದರ್ಶನ ನೀಡಿ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದರು. ಬಳಿಕ ಮೂರನೇ ರೇಸ್‌ನಲ್ಲಿ ಗೆಲುವು ಸಾಧಿಸಿ ತಮ್ಮ ವೇಗವನ್ನು ಸಾಬೀತುಪಡಿಸಿದರು. ಲುವಿವೆ ಸಾಂಬುಡ್ಲಾ ಮತ್ತು ಆರ್ಯನ್ ನರೋಲಾ ತಲಾ ಒಂದು ರೇಸ್‌ನಲ್ಲಿ ಗೆಲುವು ದಾಖಲಿಸಿದ್ದು, ಎರಡನೇ ಸುತ್ತಿನಲ್ಲೂ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ, ಅತಿ ಕಿರಿಯ ಚಾಲಕರಲ್ಲಿ ಒಬ್ಬರಾದ ಆರನ್ ಮೆಹ್ತಾ ಕೂಡ ಉತ್ತಮ ಫಲಿತಾಂಶಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ಜೆಕೆ ಟೈರ್ ಪ್ರಾಯೋಜಿತ ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2026 ಆರು ಸುತ್ತುಗಳ ಪೈಕಿ ಎರಡನೇ ಸುತ್ತಿಗೆ ಕಾಲಿಟ್ಟಿದೆ. ಚಾಂಪಿಯನ್‌ಶಿಪ್‌ನ ಪೈಪೋಟಿ ಆರಂಭವಾಗಿರುವ ಬೆನ್ನಲ್ಲೇ, ಕೊಯಮತ್ತೂರಿನಲ್ಲಿ ನಡೆಯಲಿರುವ ಈ ವಾರಾಂತ್ಯದ ರೇಸ್‌ಗಳು ಭಾರತದ ಯುವ ರೇಸಿಂಗ್ ಪ್ರತಿಭೆಗಳಿಗೆ ಮತ್ತೊಂದು ಪ್ರಮುಖ ಅವಕಾಶ ಒದಗಿಸಲಿವೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ರೇಸ್‌ಗಳನ್ನು ಸ್ಟಾರ್ ಸ್ಪೋರ್ಟ್ಸ್ ಖೇಲ್ ನಲ್ಲಿ ಹಿಂದಿ-ಇಂಗ್ಲಿಷ್‌ನಲ್ಲಿ, ಸ್ಟಾರ್ ಸ್ಪೋರ್ಟ್ಸ್ 2 ಕನ್ನಡದಲ್ಲಿ ಮತ್ತು ಸ್ಟಾರ್ ಸ್ಪೋರ್ಟ್ಸ್ 2 ತಮಿಳಿನಲ್ಲಿ ವೀಕ್ಷಿಸಬಹುದು.
ಜಿಯೋಹಾಟ್ಸ್ಟಾರ್ನಲ್ಲೂ ಇಂಗ್ಲಿಷ್, ಹಿಂದಿ-ಇಂಗ್ಲಿಷ್, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ರೇಸ್‌ಗಳ ನೇರ ಪ್ರಸಾರ ಇರಲಿದೆ. ಭಾರತದ ಹೊರಗಿನವರು ಸ್ಟಾರ್ ಸ್ಪೋರ್ಟ್ಸ್ ಯೂಟ್ಯೂಬ್ನಲ್ಲಿ ರೇಸ್‌ಗಳನ್ನು ನೇರವಾಗಿ ವೀಕ್ಷಿಸಬಹುದು.
ಎಫ್4 ಇಂಡಿಯನ್ ಚಾಂಪಿಯನ್‌ಶಿಪ್ – 2ನೇ ಸುತ್ತಿನ ಚಾಲಕರ ಪಟ್ಟಿ:
ಕೊಲ್ಕತ್ತಾ ರಾಯಲ್ ಟೈಗರ್ಸ್: ಆರನ್ ಮೆಹ್ತಾ (ಸಿಂಗಾಪುರ), ಸ್ವರ್ಣವ್ ದಾಸ್ (ಭಾರತ)
ಚೆನ್ನೈ ಟರ್ಬೋ ರೈಡರ್ಸ್: ಸಾಯಿ ಆದಿತ್ಯ (ಅಮೆರಿಕ/ಭಾರತ), ಅನಯ್ ದೋಷಿ (ಕೀನ್ಯಾ)
ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್: ಭುವನ್ ಬೋನು (ಭಾರತ), ಶ್ರವಣ್ ಶಣ್ಮುಗವೇಲ್ (ಬ್ರಿಟನ್)
ಸ್ಪೀಡ್ ಡೀಮನ್ಸ್ ದೆಹಲಿ: ಕೃಷಯ್ ಗುಟ್ಟೆ (ಭಾರತ), ಎನ್‌ತಿಸೋ ಮಬುಂಡಾ (ದಕ್ಷಿಣ ಆಫ್ರಿಕಾ)
ಗೋವಾ ಏಸಸ್ ಜೆಎ ರೇಸಿಂಗ್: ಆರ್ಯನ್ ನರೋಲಾ (ಅಮೆರಿಕ/ಭಾರತ), ಲುವಿವೆ ಸಾಂಬುಡ್ಲಾ (ದಕ್ಷಿಣ ಆಫ್ರಿಕಾ)
ಗಾಡ್‌ಸ್ಪೀಡ್ ಕೊಚ್ಚಿ: ಮಹ್ಲೋರಿ ಮಬುಂಡಾ (ದಕ್ಷಿಣ ಆಫ್ರಿಕಾ)
ಅಹಮದಾಬಾದ್ ಅಪೆಕ್ಸ್ ರೇಸರ್ಸ್: ಮಥಿಯಾಸ್ ಅಲೆಕ್ಸಾಂಡರ್ ಫೋರ್ಲ್ಯಾಂಡ್ (ನಾರ್ವೆ)
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು: ಎಂಜೊ ರುಜುಗಿರೊ (ದಕ್ಷಿಣ ಆಫ್ರಿಕಾ), ಅರಿಸ್ ಕಿರಿಯಾಕೋ (ಆಸ್ಟ್ರೇಲಿಯಾ)





