ಮೈಸೂರಿನ ಪುಟ್ಟವೀರಮ್ಮ ಕಿವುಡು ಹೆಣ್ಣುಮಕ್ಕಳ ವಸತಿ ಶಾಲೆ ಹಲವು ವೈಶಿಷ್ಟ್ಯತೆಗಳಿಂದ ಜನರ ಪ್ರೀತಿಗೆ ಪಾತ್ರವಾಗಿದೆ.

ಈ ಶಾಲೆಯ ಬಗ್ಗೆ ಹೇಳುವ ಮುನ್ನ ಈ ಶಾಲೆಯ ಸ್ಥಾಪನೆಗೆ ಕಾರಣಕರ್ತರಾದ ಪುಟ್ಟವೀರಮ್ಮನವರ ಛಲದ ಸಾಧನೆಯ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದು ಸೂಕ್ತ ಎನಿಸುತ್ತದೆ.

ಪುಟ್ಟವೀರಮ್ಮನವರು ಯಾವುದೇ ಅಕಾಡೆಮಿಕ್‌ ಸಾಧನೆ ಮಾಡಿದವರಲ್ಲ. ಆರ್ಥಿಕವಾಗಿ ಸ್ಥಿತಿವಂತರೂ ಆಗಿರಲಿಲ್ಲ. ಹೊಟ್ಟೆಪಾಡಿಗಾಗಿ ಕಾಫಿ ಕ್ಯೂರಿಂಗ್‌ ವರ್ಕ್ಸ್ನಲ್ಲಿ ಕೆಲಸಕ್ಕೆ ಸೇರಿದ್ದರು. ಬಳಿಕ ಮೈಸೂರಿನ ಸರ್ಕಾರಿ ರೇಷ್ಮೆ ಕಾರ್ಖಾನೆಯಲ್ಲಿ  ಕೆಲಸಕ್ಕೆ ಸೇರಿದರು. ನೌಕರಿಯಿಂದ ನಿವೃತ್ತರಾಗುವ ತನಕ ಅವರು ಅಷ್ಟಿಷ್ಟು ಹಣ ಉಳಿತಾಯ ಮಾಡಿದ್ದರು. ಅದರ ಜೊತೆಗೆ ವೃತ್ತಿಯ ಇಡುಗಂಟು ಕೂಡ ಸೇರಿತು. ಈ ಹಣದಲ್ಲಿ ಏನನ್ನಾದರೂ ಮಾಡಬೇಕೆಂದು ಅವರ ಮನಸ್ಸು ತವಕಿಸಿತು.

ಮೈಸೂರಿನ ವಿದ್ಯಾರಣ್ಯಪುರಂ ಸಮೀಪ ಒಂದು ಮನೆಯನ್ನು ಕೊಂಡುಕೊಂಡು ಆ ಮನೆಯನ್ನು ದಾಸೋಹ ಮನೆಯಂತೆ ಪರಿವರ್ತಿಸಿ ಹಸಿದವರಿಗೆ ಅನ್ನ ನೀಡುವ ಕಾಯಕದಲ್ಲಿ ತೊಡಗಿಕೊಂಡರು. ಬಳಿಕ ಆ ಮನೆಯನ್ನು ಒಂದು ಟ್ರಸ್ಟ್ ಆಗಿ ಪರಿವರ್ತಿಸಿದರು.

ಕಿವುಡು ಬಾಲೆಯರ ಶಾಲೆ ಸ್ಥಾಪನೆ : 1989. ಅದೊಂದು ದಿನ ಕಿವಿ ಕೇಳದ, ಮಾತು ಬಾರದ ಮಕ್ಕಳ ಶಾಲೆಯ ಶಿಕ್ಷಕಿಯೊಬ್ಬರು ಪುಟ್ಟವೀರಮ್ಮನವರನ್ನು ಭೇಟಿಯಾಗಲು ಬಂದಿದ್ದರು, ``ನೀವು ಸಮಾಜಕ್ಕೆ ಇಷ್ಟೊಂದು ದುಡಿಯುತ್ತಿದ್ದೀರಾ. ಕಿವಿ ಕೇಳದ, ಮಾತು ಬಾರದ ಕೆಲವು ಹೆಣ್ಣುಮಕ್ಕಳ ಜವಾಬ್ದಾರಿಯನ್ನೇಕೆ ತೆಗೆದುಕೊಳ್ಳಬಾರದು?'' ಎಂದು ಕೇಳಿದರು. ಆ ಮಾತು ಪುಟ್ಟವೀರಮ್ಮನವರ ಹೃದಯ ಕಲುಕಿತು.

ಕೆಲವೇ ದಿನಗಳಲ್ಲಿ ಶಾಲೆಯ ಸ್ಥಾಪನೆಯ ನಿರ್ಧಾರಕ್ಕೆ ಬಂದು ಆ ಜವಾಬ್ದಾರಿಯನ್ನು ಅದೇ ಶಿಕ್ಷಕಿಗೆ ವಹಿಸಿಕೊಟ್ಟರು. ಒಂದೆರಡು ವರ್ಷಗಳಲ್ಲಿ ಆ ಶಿಕ್ಷಕಿಯ ಅನಾಸಕ್ತಿ ಕಂಡು ಪುಟ್ಟವೀರಮ್ಮನವರೇ ಸ್ವತಃ ಶಾಲೆಯ ಜವಾಬ್ದಾರಿಯನ್ನು ವಹಿಸಿಕೊಂಡರು.

ಅವರ ಶಾಲೆಗೆ ಸೇರುತ್ತಿದ್ದ ಹೆಣ್ಣುಮಕ್ಕಳು ಕಡುಬಡತನದ ಕುಟುಂಬದಿಂದ ಬಂದವರು. ಅವರ ಪೋಷಕರು ಒಂದು ಸಲ ಬಂದು ಬಿಟ್ಟುಹೋದರೆ ರಜೆ ಬಂದಾಗಲೂ ಕೂಡ ಕರೆದುಕೊಂಡು ಹೋಗುತ್ತಿರಲಿಲ್ಲ.

ಬಿದ್ದರೆ ಅಳಲಾರದ, ಕೂಗಿದರೆ ಓಗೊಡಲಾರದ ಮಕ್ಕಳನ್ನು ಎದುರು ನಿಂತೇ ನೋಡಿಕೊಳ್ಳಬೇಕೆಂಬ ಕಳಕಳಿ ಪುಟ್ಟವೀರಮ್ಮನವರಿಗೆ ಇತ್ತು. ಹೀಗಾಗಿ ಒಂದು ದಿನ ಗೊಣಗದೇ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಿ ಶಾಲೆಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದರು. ಅವರ ಬಾಳಿಗೆ ದಾರಿದೀಪವಾದರು.

ಹೆಚ್ಚುತ್ತಿರುವ ವಯಸ್ಸು ಮತ್ತು ಶಾಲೆಯ ಖರ್ಚು ವೆಚ್ಚಗಳಿಂದ ಧೃತಿಗೆಟ್ಟ ಪುಟ್ಟವೀರಮ್ಮನವರು ಶಾಲೆಯ ಜವಾಬ್ದಾರಿಯನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಶಾಲೆಯ ಉಸ್ತುವಾರಿ ವಹಿಸಲು ಕೋರಿದರು. ಆದರೆ ಸ್ವಾಮೀಜಿಯರು ನೀವೇ ಟ್ರಸ್ಟ್ ನ ಅಧ್ಯಕ್ಷರಾಗಿರಿ, ನಾವು ನಿಮಗೆ ಸಕಲ ನೆರವನ್ನು ನೀಡುವುದಾಗಿ ಹೇಳಿದರು.

2014ರವರೆಗೂ ಶಾಲೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಪುಟ್ಟವೀರಮ್ಮನವರು ಸೆಪ್ಟೆಂಬರ್‌ 7ರಂದು ನಿಧನರಾದರು. ಈಗ ಆ ಶಾಲೆಯಲ್ಲಿ 100ಕ್ಕೂ ಹೆಚ್ಚು ಬಾಲಕಿಯರು ಓದುತ್ತಿದ್ದಾರೆ.

ಸಮಾಜದ ಅವಗಣನೆಗೆ ತುತ್ತಾಗಬಹುದಾಗಿದ್ದ ಬಾಲೆಯರ ಬಾಳಿಗೆ ಪುಟ್ಟವೀರಮ್ಮನವರು ಬೆಳಕಾಗಿ ನಿಂತರು.

ಉಚಿತ ವಿದ್ಯಾಭ್ಯಾಸ : ಈ ಶಾಲೆಗೆ ಸೇರುವ ವಿದ್ಯಾರ್ಥಿನಿಯರಿಗೆ 1 ರಿಂದ 10ನೇ ತರಗತಿಯವರೆಗೆ ಉಚಿತ ವಿದ್ಯಾಭ್ಯಾಸ, ಊಟ, ವಸತಿ ಸೌಕರ್ಯ ಸಿಗುತ್ತದೆ. ಇಲ್ಲಿ ಪ್ರತಿ ತರಗತಿಯಲ್ಲೂ ಗುಂಪು ಶ್ರವಣೋಪಕರಣದ ವ್ಯವಸ್ಥೆ, ವೈಯಕ್ತಿಕ ಬಿಟಿಇ ಶ್ರವಣೋಪಕರಣದ ವ್ಯವಸ್ಥೆ ಮಾಡಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ