ಈ ವರ್ಷದ ಇಂಡಿಯಾ ಕಾಫಿ ಅವಾರ್ಡ್‌ ಸಮಾರಂಭವನ್ನು ಕಳೆದ ತಿಂಗಳು ಹೋಟೆಲ್ ‌ಲಲಿತ್‌ ಅಶೋಕಾದಲ್ಲಿ ಏರ್ಪಡಿಸಲಾಗಿತ್ತು. ಕಾಫಿಯ ರಫ್ತು, ಫ್ಲೇವರ್‌ ಆಫ್‌ ಇಂಡಿಯಾ ಕಾಂಪಿಟಿಷನ್‌, ನ್ಯಾಷನಲ್ ಬರಿಸ್ತಾ ಚಾಂಪಿಯನ್‌ ಶಿಪ್ ಇತ್ಯಾದಿಗಳಿಗೆ ಸಂಬಂಧಿಸಿತ್ತು.

ಗ್ರೀನ್‌ ಕಾಫಿ, ಸ್ಪೆಷಾಲಿಟಿ ಕಾಫಿ, ಇನ್‌ಸ್ಟೆಂಟ್‌ ಮತ್ತು ರೋಸ್ಟೆಡ್‌ ಕಾಫಿಯ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್ ಈ ಸಮಾರಂಭದ ಪ್ರಮುಖ ಅತಿಥಿಯಾಗಿ ಕಾಫಿ ಕುರಿತು ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್‌ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದರು. 1984ರಿಂದ ಕಾಫಿ ಬೋರ್ಡ್‌ ಸದಸ್ಯರಾಗಿದ್ದ ಅವರು, ಕಾಫಿ ಬೋರ್ಡ್‌ನ ಮಾಜಿ ಚೇರ್ಮನ್‌ ಇತರ ದೇಶಗಳಿಗೂ ಕರ್ನಾಟಕದ ಕಾಫಿ ರಫ್ತಿನ ಕುರಿತು ವಹಿಸಿದ ಕಾಳಜಿಯನ್ನು ಪ್ರಶಂಸಿಸಿದರು.

ಕೊಲಂಬಿಯಾ, ಬ್ರೆಝಿಲ್‌ಗಳ ಕಾಫಿಗೆ ಹೋಲಿಸಿದರೆ ಭಾರತದ ಅದರಲ್ಲೂ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಕಾಫಿಯಲ್ಲಿ ವಿಶಿಷ್ಟ ಸ್ವಾದವಿದೆ. ಇದನ್ನು ಆಧರಿಸಿ ಐ.ಟಿ. ಕ್ಷೇತ್ರದ ಮಾದರಿಯಲ್ಲಿ ಅದನ್ನು ಬ್ರ್ಯಾಂಡಿಂಗ್‌ ಮಾಡಬೇಕು. ಆಗ ಮಾತ್ರ ಅದು ಹೈ ಎಂಡ್‌ ಪ್ರಾಡಕ್ಟ್ ಆಗುತ್ತದೆ ಎಂದರು. ಈ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಸ್ಟಾರ್ಟ್‌ ಅಪ್‌ ಮಾದರಿಯಲ್ಲಿ ದೇಶವಿದೇಶಗಳಲ್ಲಿ ಕಾಫಿ ಉತ್ಪನ್ನದ ಮಾರುಕಟ್ಟೆ ವಿಸ್ತಾರಗೊಳ್ಳಬೇಕು ಎಂದು ಸೂಚಿಸಿದರು.

ಕಾಫಿ ಮಂಡಳಿ ಅಧ್ಯಕ್ಷೆ ಲೀನಾ ನಾಯರ್‌, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರ ಆಪ್ತ ಸಲಹೆಗಾರ ಜಿ.ವಿ. ಕೃಷ್ಣರಾವ್‌, ಕರ್ನಾಟಕ ಪ್ರವಾಸೋದ್ಯಮದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್‌ ಸಿಂಗ್‌ ಕರೋಲ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಟಾಟಾ ಕಾಫಿ ಲಿಮಿಟೆಡ್‌ ಸಂಸ್ಥೆಗೆ ಫ್ಲೇವರ್‌ ಆಫ್‌ ಇಂಡಿಯಾ ಫೈನಲ್ ಕಪ್‌ ಪ್ರಶಸ್ತಿಯನ್ನು ಲೀನಾ ನಾಯರ್‌ ಪ್ರದಾನ ಮಾಡಿದರು. ಕಾಫಿ ರಫ್ತಿನಲ್ಲಿ ಉತ್ತಮ ಸಾಧನೆ ತೋರಿದ ಹೈದರಾಬಾದ್‌ನ ಸಿಎಲ್ಎಲ್ ಪ್ರೈ.ಲಿ., ಬೆಂಗಳೂರಿನ ಅವಾನ್‌ಸನ್ ಪ್ರೈ.ಲಿ., ಮುಂತಾದ ಕಾಫಿ ಸಂಸ್ಥೆಗಳಿಗೆ ಗೋಲ್ಡ್ ಅವಾರ್ಡ್‌ ನೀಡಲಾಯಿತು. ನ್ಯಾಷನಲ್ ಬರಿಸ್ಟಾ ಚಾಂಪಿಯನ್‌ ಅವಾರ್ಡ್‌ನ್ನು ನಮನ್‌ ಕೊಹ್ಲಿ, ಅರುಣ್‌ ಮಧುಕರ್‌, ಕ್ಲಾಡ್‌ ಜಾನ್ಸನ್‌, ಪರಾಸ್‌ ಬಿಂದ್ರಾ ಪಡೆದರು.

ಕೆಪಿಟಿಸಿಎಲ್ ಎಂಡಿ ಜಾವೇದ್‌ ಅಖ್ತರ್‌ ಮಾತನಾಡಿ ಆರ್ಥಿಕ ಸಂಕಷ್ಟದಲ್ಲಿದ್ದ ಕಾಫಿ ಕ್ಷೇತ್ರ ಚೇತರಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನ ತೃಪ್ತಿಕರ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ