ಇಡೀ ವಿಶ್ವದಲ್ಲಿ ಬೆಂಗಳೂರು ನಗರವನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಗುರುತಿಸಲಾಗುತ್ತದೆ. ಬೆಂಗಳೂರು ನಗರ ಆ ರೀತಿಯ ಖ್ಯಾತಿಯನ್ನು ಪಡೆಯಲು ಪ್ರಮುಖ ಪಾತ್ರವನ್ನು ವಹಿಸಿರುವ ಬೆಂಗಳೂರಿನ ಅತ್ಯಂತ ಪುರಾತನ ಪ್ರದೇಶವಾದ ಕೋರಮಂಗಲದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ 5ನೇ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಬೆಂಗಳೂರಿನಿಂದ ಹೊಸೂರಿಗೆ ಹೋಗುವ ಮಾರ್ಗದಲ್ಲಿ ಆಡುಗೋಡಿಯನ್ನು ದಾಟುತ್ತಿದ್ದಂತೆಯೇ ಸಿಗುವ ಪ್ರದೇಶವೇ ಕೋರಮಂಗಲವಾಗಿದ್ದು, ಜಕ್ಕಸಂದ್ರ, ಶ್ರೀನಿವಾಗಿಲು ಪ್ರದೇಶಗಳನ್ನು ತನ್ನ ಜೊತೆಯಲ್ಲೇ ಸೇರಿಸಿಕೊಂಡು, ಒಂದು ಕಡೆಯಲ್ಲಿ ಈಜಿಪುರ, ಮತ್ತೊಂದೆಡೆಯಲ್ಲಿ ಎಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ಜಯನಗರ ಪ್ರದೇಶಗಳಿಂದ ಸುತ್ತುವರಿದ ಪ್ರದೇಶವಾಗಿದೆ. ಬೆಂಗಳೂರಿನ ಹಿರಿಯ ನಾಗರೀಕರಿಗೆ ಕೋರಮಂಗಲದ ಬಗ್ಗೆ ಕೇಳಿದರೆ, ಹೇ ಅದಾ, 80 ಮತ್ತು 90ರ ದಶಕಗಳಲ್ಲಿಯೂ ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು ಮಳೆ ಬಂದರೆ ಮೆನಗೆಳಿಗೆಲ್ಲಾ ನೀರು ನುಗ್ಗುವಂತಹ ಪ್ರದೇಶವಾಗಿದ್ದು ಜನರು ವಾಸಿಸಲು ಯೋಗ್ಯವಾದ ಸ್ಥಳವಾಗಿರಲಿಲ್ಲ ಎಂದೇ ಹೇಳುತ್ತಾರೆ.
ಕಾವೇರೀ ನದಿಯಲ್ಲಿ ನೀರು ಹರಿಯುತ್ತಿದ್ದಂತೆಯೇ ಕಾಲವೂ ಬದಲಾಗಿ 90ರ ದಶಕದಲ್ಲಿ ದೇಶವು ಜಾಗತೀಕರಣಕ್ಕೆ ತೆರೆದುಕೊಂಡ ಪರಿಣಾಮ ಮಾಹಿತಿ ತಂತ್ರಜ್ಞಾನದ ಹೊಸಾ ಆವಿಷ್ಕಾರಗಳಿಗೆ ಸೂಕ್ತವಾದ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಭಾರತದ ಪ್ರತಿಭೆಯನ್ನು ಬಳಸಿಕೊಳ್ಳಲು ಇಡೀ ವಿಶ್ವವೇ ಬಯಸುತ್ತಿದ್ದಂತಹ ಸಂದರ್ಭವನ್ನು ಎರಡೂ ಕೈಗಳಿಂದ ಬರಸೆಳೆದುಕೊಂಡ ಬೆಂಗಳೂರಿಗರೂ ತಮ್ಮ ಕಂಪನಿಗಳಿಗೆ ಅದರಲ್ಲೂ Startup companyಗಳಿಗೆ ಕೋರಮಂಗಲವನ್ನೇ ಪ್ರಧಾನವನ್ನಾಗಿಸಿದ ಪರಿಣಾಮ, ಇದ್ದಕ್ಕಿದ್ದಂತೆಯೇ ಕೋರಮಂಗಲದ ಪ್ರತಿ ಇಂಚು ಇಂಚು ಪ್ರದೇಶವೂ ಕೋಟ್ಯಾಂತರ ಬೆಲೆ ಬಾಳುವಂತಾಗಿರುವುದು ಈಗ ಇತಿಹಾಸ.

ಸುಮಾರು 1800 ಎಕರೆಗಳಷ್ಟು ವಿಸ್ತೀರ್ಣದ ಕೋರಮಂಗಲವನ್ನು 8 ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಆರಂಭದಲ್ಲಿ 1 ರಿಂದ 4 ಬ್ಲಾಕ್‌ಗಳು ಒಂದೆಡೆಯಾದರೆ, 5 ರಿಂದ 8 ಬ್ಲಾಕ್‌ಗಳನ್ನು ದೊಮ್ಮಲೂರು, ಇಂದಿರಾನಗದಿಂದ ಬರುವ ಒಳವರ್ತುಲ ರಸ್ತೆಯಿಂದ ಪ್ರತ್ಯೇಕಿಸಲಾಗಿದೆ. ಬೆಂಗಳೂರಿನ ಹೃದಯ ಭಾಗವಾಗಿರುವ ಮತ್ತು ಕಾಸ್ಲ್ಮೋಪಾಲಿಟಿನ್ ಸಂಸ್ಕೃತಿಯನ್ನು ಹೊಂದಿರುವಂತಹ ಎಂ.





