ಕಳೆದ ರಾತ್ರಿ ಒಲಿಂಪಿಕ್ಸ್ ಇತಿಹಾಸದಲ್ಲೇ ಫೈನಲ್‌ ಪ್ರವೇಶಿಸಿದ ಮೊದಲ ಭಾರತದ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಪಾತ್ರರಾಳಾಗುತ್ತಿದ್ದಂತೆಯೇ, ಆಷ್ಟು ತಡರಾತ್ರಿಯಲ್ಲೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆಕೆಯ ಪಂದ್ಯವನ್ನು ನೋಡಿ ಸಂಭ್ರಮಿಸಿದ ಕೊಟ್ಯಾಂತರ ದೇಶಾಭಿಮಾನಿ ಭಾರತೀಯರಲ್ಲಿ ನಾನು ಸಹಾ ಒಬ್ಬ. ಅಬ್ಬಾ ಈ ಬಾರಿಯ ಓಲಂಪಿತ್ಸಿನಲ್ಲಿ ಭಾರತದ ಮಾನವನ್ನು ಕಾಪಾಡಿದ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂಬ ಶೀರ್ಷಿಕೆಯಲ್ಲಿ ಲೇಖನವನ್ನೂ ಸಿದ್ದಮಾಡಿ ಆಕೆ ಚಿನ್ನದ ಪದಕವನ್ನು ಗೆದ್ದ ನಂತರ ಪ್ರಕಟಿಸೋಣ ಎಂದು ಸುಮ್ಮನಾಗಿದ್ದೆ.

kishore

ಕೇವಲ 99 ಸ್ಥಾನಗಳನ್ನು ಗಳಿಸಿದ ವ್ಯಕ್ತಿಯೊಬ್ಬ ಇಡೀ ದೇಶವನ್ನೇ ಗೆದ್ದಂತೆ ಸಂಭ್ರಮಿಸುತ್ತಿದ್ದಾನೋ ಅದೇ ಮನಸ್ಥಿತಿಯ, ಸದಾ ಕಾಲವೂ ದೇಶ ವಿರೋಧಿ ಭಾವನೆಯ ಎಡಚರನ್ನು ಸಮರ್ಥಿಸುತ್ತಾ,ದೇಶವನ್ನೇ ಖಂಡಿಸುವ ಬಹುಭಾಷಾ ನಟ ಕಿಶೋರ್‌ , ಸಾಮಾಜಿಕ ಜಾಲತಾಣದಲ್ಲಿ, ಪ್ರಧಾನಿ ಮೋದಿಯವರಿಗೆ ನೇರವಾಗಿ ಟಾಂಗ್‌ ಎನ್ನುವಂತೆ ವಿನೀಶ್‌ ಪೋಗಟ್ ಅವರಿಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಂತಹ ನಿಮ್ಮಂತಹವರಿಗೆ ಅವರ ಗೆಲುವನ್ನು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಿಮಗಿಲ್ಲ ಎನ್ನುವ ಸಂದೇಶ ಹಾಕುವ ಮೂಲಕ ದ್ವೇಷದ ಭಾವನೆಯನ್ನು ಬಿತ್ತಿರುವುದು ನೋಡಿ ಛೇ!! ಇಂತಹ ಕೀಳು ಮನಸ್ಥಿತಿಯವರಿಂದಲೇ ಈ ದೇಶ ಇನ್ನೂ ಉದ್ದಾರ ಆಗಿಲ್ಲಾ ಎಂದು ಅನಿಸಿಕೊಳ್ಳುತ್ತಿರುವಾಗಲೇ,

Screenshot 2024-08-07 at 12.50.57 PM

ಯಾವ ಪೋಗಟ್ ಸಾಧನೆಯನ್ನು ಬಣ್ಣಿಸಲು ಪ್ರಧಾನಿಗಳನ್ನೇ ಎದಿರು ಹಾಕಿಕೊಂಡು “ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ. – ಡಾ. ಬಿ.ಆರ್. ಅಂಬೇಡ್ಕರ್. ವಿನೇಶ್ ನಿಮಗೆ ಸಲಾಂ. ಇಲ್ಲಿಯ ಅಮಾನವೀಯ ವ್ಯವಸ್ಥೆ ನಿಮ್ಮನ್ನು ದೆಹಲಿಯ ಬೀದಿಗಳಲ್ಲಿ ಎಳೆದಾಡಿದ್ದರಿಂದ ಹಿಡಿದು ಒಲಿಂಪಿಕ್ ಪದಕದವರೆಗೆ, ಅಷ್ಟು ಕಹಿ ಅನುಭವಗಳ ನಂತರವೂ ನೀವು ಮಾಡಿರುವ ಈ ಸಾಧನೆ ಅಭೂತಪೂರ್ವ. ಆದರೆ ಇಂದು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಾವು ಭಾರತೀಯರು ಕಳೆದುಕೊಂಡಿದ್ದೇವೆ. ನಾವು ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು. ಧಿಕ್ಕಾರವಿರಲಿ ಮೋದಿ, ಬ್ರಿಜ್‌ಭೂಷಣ್, ** ನೆಕ್ಕುವ ಗೋದೀ ಮಾಧ್ಯಮಕ್ಕೆ ಮತ್ತು ಆ ವಿಕೃತ ಮನಸ್ಥಿತಿಯ ಸಮಾಜಕ್ಕೆ” ಎಂದಿದ್ದ ಕಿಶೋರ್, ಈಗ ಅದೇ ವಿನೀಶ್ ಪೋಗೋಟ್ ಮಾಡಿದ ಸಣ್ಣ ತಪ್ಪಿನಿಂದಾಗಿ ಆಕೆ ಒಲಂಪಿಕ್ಸ್ ಸ್ಪರ್ಧೆಯಿಂದಲೇ ಅನರ್ಹಗೊಂಡಿರುವ ಆಘಾತಕಾರಿ ವಿಷಯ ಹೊರಬಿದಿದ್ದುದ್ದು ಇ ಆತುರಗಾರನಿಗೆ ಬುದ್ಧಿ ಮಟ್ಟ ಎನ್ನುವಂತಾಗಿದ್ದು ಈಗ ಕಿಶೋರ್ ನಂತಹ ಎಡಬಿಡಂಗಿ ದೇಶವಿರೋಧಿಗಳು ಇಂಗು ತಿಂದ ಮಂಗನಂತಾಗಿದ್ದಾರೆ..

priyankajantar_manthar

ಕುಸ್ತಿ ಫೆಡರೇಷನ್‌ನ ಮಾಜೀ ಅಧ್ಯಕ್ಷ ಬ್ರಿಜ್‌ ಭೂಷಣ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಿಸಿ ಆತನ ವಿರುದ್ಧ ತೊಡೆ ತಟ್ಟಿದ್ದ ಮಹಿಳಾ ಕುಸ್ತಿಪಟುಗಳಲ್ಲಿ ವಿನೀತ್ ಪೋಗಟ್ ಸಹಾ ಒಬ್ಬಳಾಗಿದ್ದು. ದೆಹಲಿಯ ಜಂತರ್‌ ಮಂತರ್‌ನಲ್ಲಿ ಬಜರಂಗ ಪುನಿಯಾ, ಸಾ‍ಕ್ಷಿ ಮಲಿಕ್ ಸೇರಿ ಹಲವು ಕುಸ್ತಿ ಪಟುಗಳ ಸಮ್ಮುಖದಲ್ಲಿ ಉಗ್ರ ಹೋರಾಟವನ್ನು ಮಾಡಿ, ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಅಧಿಕಾರದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾಗಲೂ ಕೇಂದ್ರ ಸರ್ಕಾರ ಮಾತ್ರ ಈ ಪ್ರತಿಭಟನೆ ಕಡೆ ತಿರುಗಿಯೋ ನೋಡದೆ, ಬ್ರಿಜ್ ಭೂಷಣ್ ಪರವಾಗಿಯೂ ನಿಲ್ಲದೇ ತಟಸ್ಥವಾಗಿ, ನ್ಯಾಯಾಲಯದ ಆದೇಶದಂತೆ ನಡೆದುಕೊಂಡಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ