ಜೀವ ವಿಮೆ ಎನ್ನುವುದು ಹಣಕಾಸು ಯೋಜನೆಗಾಗಿ ಅತ್ಯಂತ ಮಹತ್ವದ್ದಾಗಿದೆ. ಜೀವ ವಿಮೆಯ ಪಾಲಿಸಿ ಮೊತ್ತ ನಿಮ್ಮ ನಿಧನಾನಂತರ ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಆದಾಯದ ಕೊರತೆಯನ್ನು ನಿವಾರಿಸಿ ನಿಮ್ಮ ಕುಟುಂಬ ಒಡೆದು ಚೂರಾಗುವುದರಿಂದ ರಕ್ಷಿಸುತ್ತದೆ. ನೀವು ನಿಮ್ಮ ಮಕ್ಕಳಿಗೆ ಯಾವ ಕನಸು ಕಂಡಿರುತ್ತೀರೊ, ಅದು ಈಡೇರುತ್ತದೆ. ನಿಮ್ಮ ಹೆಂಡತಿ ವೃದ್ಧಾಪ್ಯದಲ್ಲಿ ಯಾರ ಮುಂದೆಯೂ ಕೈ ಚಾಚುವ ಪ್ರಸಂಗ ಎದುರಾಗದು.

ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳು ಹಲವು ತೆರನಾಗಿರುತ್ತವೆ. ಅದರಲ್ಲಿ ನೀವು ಯಾವುದಾದರೊಂದು ಪಾಲಿಸಿ ಖರೀದಿಸುವ ಯೋಜನೆ ಮಾಡುತ್ತಿದ್ದರೆ, ನೀವು ಸರಿಯಾದ ಪಾಲಿಸಿ ಆಯ್ದುಕೊಳ್ಳಲು ಎಲ್ಲಕ್ಕೂ ಮುಂಚೆ ನಿಮ್ಮ ಅಗತ್ಯಗಳನ್ನು ತಿಳಿದುಕೊಳ್ಳುವುದು ಮುಖ್ಯ. ಒಂದು ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಸಮಯದಲ್ಲಿ ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಪಾಲಿಸಿಯ ಪ್ರಕಾರ : ಲೈಫ್‌ ಇನ್ಶೂರೆನ್ಸ್ ಪಾಲಿಸಿ ಹಲವು ಪ್ರಕಾರದ್ದಾಗಿರುತ್ತವೆ.  ಎಂಡೊಮೆಂಟ್‌ ಇನ್ಶುರೆನ್ಸ್ ಪ್ಲಾನ್‌, ಟರ್ಮ್ ಪಾಲಿಸಿ ಮತ್ತು ಯುಎಲ್ಐಪಿ ಜೀವನ ಸುರಕ್ಷತೆಯ ಜೊತೆಗೆ ಹೂಡಿಕೆಯ ಲಾಭವನ್ನು ದೊರಕಿಸಿಕೊಡುತ್ತವೆ. ಆದರೆ ಒಂದು ಟರ್ಮ್ ಪ್ಲಾನ್‌, ಕೇವಲ ಜೀವನ ಸುರಕ್ಷತೆ ಮಾತ್ರ ದೊರಕಿಸಿ ಕೊಡುತ್ತದೆ. ಇದು ಯಾವುದೇ ಮೆಚ್ಯುರಿಟಿ ಹಣ ದೊರಕಿಸಿ ಕೊಡುವುದಿಲ್ಲ. ನೀವು ಕೇವಲ ನಿಧನಾನಂತರದ ಸುರಕ್ಷತೆ ಬೇಕು ಎಂದರೆ ಟರ್ಮ್ ಪಾಲಿಸಿ ಎಲ್ಲಕ್ಕೂ ಉಪಯುಕ್ತ.

ಪಾಲಿಸಿ ಎಷ್ಟು ಅವಧಿಗೆ : ಪಾಲಿಸಿ ಕನಿಷ್ಠ ನಿಮ್ಮ ನಿವೃತ್ತಿಯ ದಿನದ ತನಕವಾದರೂ ಸುರಕ್ಷತೆ ನೀಡಲು ಸಮರ್ಥವಾಗಿರಬೇಕು. ಈಗ ನಿಮ್ಮ ವಯಸ್ಸು 25 ಆಗಿದ್ದು, ನೀವು 60ನೇ ವಯಸ್ಸಿನಲ್ಲಿ ನಿವೃತ್ತರಾದರೆ, ಪಾಲಿಸಿ ನಿಮಗೆ ಕನಿಷ್ಠ 35 ವರ್ಷಗಳ ಮಟ್ಟಿಗೆ ಸುರಕ್ಷತೆ ದೊರಕಿಸಿ ಕೊಡಬೇಕು. ಮಾರುಕಟ್ಟೆಯಲ್ಲಿ ಎಂತಹ ಕೆಲವು ಪಾಲಿಸಿಗಳಿವೆಯೆಂದರೆ, ನಿಮಗೆ 75 ವರ್ಷಗಳ ಕಾಲ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಸುರಕ್ಷತೆ ದೊರಕಿಸಿಕೊಡುತ್ತವೆ. ಆದರ್ಶ ರೂಪದಲ್ಲಿ ಅದರ ಕಾರ್ಯ ಅವಧಿ ಅಷ್ಟು ದೀರ್ಘಕಾಲ ಇರಬೇಕು.

ಲೈಫ್‌ ಇನ್ಶೂರೆನ್ಸ್ ಪಾಲಿಸಿಯ ಜೊತೆಗೆ ಆ್ಯಡ್‌ ಆನ್‌ : ಒಂದು ಲೈಫ್‌ ಇನ್ಶೂರೆನ್ಸ್ ಪಾಲಿಸಿಯ ಜೊತೆಗೆ ಲಭ್ಯವಾಗುವ ಆ್ಯಡ್‌ ಆನ್‌ ನಿಮ್ಮ ಹಣವನ್ನು ರಕ್ಷಿಸುತ್ತದೆ. ಅದು ಬೇರೆ ಬೇರೆ ಪಾಲಿಸಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುತ್ತದೆ. ಉದಾಹರಣೆಗಾಗಿ ಅಪಘಾತ ಮೃತ್ಯು ಲಾಭ, ಗಂಭೀರ ರೋಗ ಸುರಕ್ಷತೆ ಮತ್ತು ಅನುವಂಶಿಕ ಅಥವಾ ಖಾಯಂ ವಿಕಲಾಂಗತೆಯ ಲಾಭವಿರುವ ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳು ಮೂಲಭೂತ ಪಾಲಿಸಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹೀಗಾಗಿ ಲೈಫ್‌ ಇನ್ಶೂರೆನ್ಸ್ ಪಾಲಿಸಿಯ ಜೊತೆಗೆ ಆ್ಯಡ್‌ ಆನ್‌ ರೈಡರ್‌ ಖರೀದಿಸುವ ಮುಂಚೆ ನೀವು ನಿಮ್ಮ ಅಗತ್ಯಗಳ ಬಗ್ಗೆ ಗಮನಹರಿಸಬೇಕು.

ಕ್ಲೇಮ್ ಸೆಟ್ಲ್ ಮೆಂಟ್‌ ರೇಶ್ಯೊ ಬಗ್ಗೆ ತಿಳಿಯಿರಿ : ಕ್ಲೇಮ್ ರೇಶ್ಯೊನಿಂದ ಒಂದು ಇನ್ಶೂರೆನ್ಸ್ ಕಂಪನಿ ಕಳೆದ ವರ್ಷ ಎಷ್ಟು ಶೇಕಡವಾರು ಕ್ಲೇಮ್ ಗಳನ್ನು ನಿರ್ವಹಿಸಿತ್ತು ಎಂಬ ಸಂಗತಿ ತಿಳಿಯುತ್ತದೆ. ಸಿಎಸ್‌ಆರ್‌ ಎಷ್ಟು ಅಧಿಕವಾಗಿರುತ್ತದೊ, ಅಷ್ಟೇ ಉತ್ತಮ. ಐಆರ್‌ಡಿಓ ಪ್ರತಿ ವರ್ಷ ಕ್ಲೇಮ್ ರೇಶ್ಯೂ ಡೇಟಾ ಪ್ರಕಟಿಸುತ್ತದೆ. ಅದರಿಂದ ಗ್ರಾಹಕರಿಗೆ ಸೂಕ್ತ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಲು ನೆರವಾಗುತ್ತದೆ. ಒಂದು ಸಂಗತಿ ನೆನಪಿನಲ್ಲಿಡಿ, ನಿಮ್ಮ ನಿಧನಾನಂತರ ಇನ್ಶೂರೆನ್ಸ್ ಗಾಗಿ ಕ್ಲೇಮ್ ಮಾಡಿದಾಗ ಅದು ನಿರಾಕರಿಸಲ್ಪಟ್ಟರೆ, ಅದರ ಕಾರಣದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಆ ಸಮಯದಲ್ಲಿ ನೀವೇ ಇರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ