ಹೊಸ ಸರ್ಕಾರ ಹೆಂಗಸರಿಗಾಗಿಯೂ ಕ್ರಮ ಕೈಗೊಳ್ಳಲಿ

ಹೊಸ ಕೇಂದ್ರ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ಹಿಂದಿನ ಸರ್ಕಾರಗಳ ವ್ಯವಹಾರ, ವ್ಯವಸ್ಥೆ, ಯೋಜನೆಗಳ ಮೇಲೆ ಜಡ್ಡುಗಟ್ಟಿದ ಜೇಡರ ಬಲೆಗಳನ್ನು ಕೊಡುತ್ತಿದೆ. ಇತ್ತೀಚೆಗಂತೂ ಪ್ರತಿದಿನ ಒಂದೊಂದು ಹೊಸ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ, ಅದು ದೇಶಕ್ಕೆ ಸರ್ಕಾರಿ ನೌಕರರಿಂದ ಆದಷ್ಟೂ ಮುಕ್ತಿ ಕೊಡಿಸುತ್ತಿದೆ ಹಾಗೂ ಕೆಲಸ ಮುಂದುವರಿಯಲು ಒಂದು ಹೊಸ ಅವಕಾಶ ಮಾಡಿಕೊಡುತ್ತಿದೆ. ಕಲ್ಲಿದ್ದಲ ಗಣಿಗಳ ವ್ಯವಹಾರ ಸುಗಮಗೊಳ್ಳಲು, ಆ ಕುರಿತಾದ ಅವ್ಯವಹಾರಗಳ ಬಗ್ಗೆ ಸುಪ್ರೀಂಕೋರ್ಟ್‌ ಕಟ್ಟುನಿಟ್ಟಾದ ತೀರ್ಪು ನೀಡುತ್ತಾ, 1993ರಿಂದ ಖುಲಾಸೆಗೊಳಿಸಲಾಗಿದ್ದ ಕೇಸುಗಳನ್ನೂ ಮತ್ತೆ ರೀಓಪನ್ ಮಾಡಿಸಿ, ಹೊಸ ವಾಗ್ವಾದಕ್ಕೆ ಅವಕಾಶ ಕಲ್ಪಿಸಿ, ಇಂಟರ್‌ ನೆಟ್‌ನಲ್ಲೂ ಈ ಸ್ಕೀಂ ಕುರಿತು ವಿವರಣೆ ಜಾರಿಗೊಳಿಸಿ ಭೇದಭಾವ ಇಲ್ಲದಂತೆ ಮಾಡಲಾಯಿತು.

ಡೀಸ್‌ನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದೆ ಹಾಗೂ ಅದರ ಬ್ಲ್ಯಾಕ್‌ ಮಾರ್ಕೆಟ್‌ನ ಅವಕಾಶವನ್ನು ಮೊಟಕುಗೊಳಿಸಲಾಗಿದೆ. ವಿಶ್ವ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕುಸಿದ ಕಾರಣ ಡೀಸಲ್ ಬೆಲೆ ಇಳಿಯತೊಡಗಿದೆ.

ತೈಲದ ಬಾವಿಗಳ ಕುರಿತಾಗಿ ಆಸಕ್ತಿ ತೋರುವವರ ಸಂಖ್ಯೆ ಕಡಿಮೆ, ಆದರೂ ಅವುಗಳ ಮೇಲಿನ ಏಕಸ್ವಾಮ್ಯತೆಯನ್ನು ರದ್ದುಗೊಳಿಸಲಾಗಿದೆ. ಇಂಥ ದಂಧೆ, ವ್ಯವಹಾರಗಳನ್ನು ಇನ್‌ಸ್ಪೆಕ್ಟರ್‌ ಗಿರಿಯ ಕಪಿಮುಷ್ಟಿಯಿಂದ ಬಿಡಿಸಲಾಗಿದೆ.

ಹೊಸ ಸರ್ಕಾರದ ಇಂಥ ಪ್ರಯತ್ನ ಶ್ಲಾಘನೀಯ. ಹಿಂದಿನ ಸರ್ಕಾರಗಳೆಲ್ಲ, ಸಾಮಾನ್ಯ ಜನರ ಮೇಲೆ ಹೊಸ ಹೊಸ ಕಾನೂನು ಕ್ರಮಗಳನ್ನು ಹೇರಿ ಅವರನ್ನು ಕ್ಷಣಕ್ಷಣ ಉಸಿರುಗಟ್ಟಿಸುವಂತೆ ಮಾಡುವುದು ಹೇಗೆ ಎಂಬುದರತ್ತಲೇ ವಿಚಾರ ನಡೆಸುತ್ತಿತ್ತು.

ಇಂಥ ತೀರ್ಪುಗಳ ಪರಿಣಾಮ ಪ್ರತಿಯೊಬ್ಬರ ಮೇಲೂ ಆಗುತ್ತದೆ. ದಂಧೆ ಚೆನ್ನಾಗಿ ನಡೆಯುತ್ತಿದ್ದರೆ ವ್ಯಾಪಾರಿ ಲಾಭ ಕಡಿಮೆ ಪಡೆದು, ಹೆಚ್ಚು ಸರಕನ್ನು ಮಾರಿ ತನ್ನ ಆದಾಯ ಹೆಚ್ಚಿಸಿಕೊಳ್ಳುತ್ತಾನೆ, ಆಗ ಮಾತ್ರ ಜನರಿಗೆ ತುಸು ಅಗ್ಗದಲ್ಲಿ ವಸ್ತು ಸಿಗುತ್ತದೆ.

ಈಗೆಲ್ಲ ಕಟ್ಟಡ ನಿರ್ಮಾಣ ಅತಿ ವೇಗವಾಗಿ ನಡೆಯುತ್ತಿದ್ದರೂ, ವಾಸಕ್ಕೆ ಹೊಸ ಕಟ್ಟಡಗಳು ಸಿಗುವುದು ಕಷ್ಟವಾಗಿದೆ. ಇದರಲ್ಲಿ ಸರ್ಕಾರಿ ಕೈವಾಡ ಹಿರಿದು, ಹೀಗಾಗಿ ಅದು ಸರ್ಪದಂತೆ ನೆಲದಡಿಯೂ ಹುತ್ತಗಳನ್ನು ಹಬ್ಬಿಸಿದೆ. ಹೀಗಾಗಿ ಜನರ ಜಂಜಾಟ ತಪ್ಪಿದ್ದಲ್ಲ. ಹಿಂದಿನ ಸರ್ಕಾರ ರೈತರ ಹಿತದೃಷ್ಟಿಯ ಹೆಸರಲ್ಲಿ, ರೈತರು ತಮ್ಮದೇ ಜಮೀನನ್ನು ತಮಗಿಷ್ಟ ಬಂದ ದರಕ್ಕೆ ಮಾರಾಟ ಮಾಡಲಾಗದಂತೆ ಒಂದು ಅವ್ಯವಹಾರಿಕ ಕಾನೂನು ಕ್ರಮ ಮಾಡಿಟ್ಟಿತ್ತು. ಮೋದಿ ಸರ್ಕಾರ ಈ ಕಟ್ಟಳೆ ಸಡಿಲಿಸಿ, ರೈತರು ಸುಲಭವಾಗಿ ಜಮೀನು ಮಾರಿಕೊಳ್ಳುವಂತೆ ಹಾಗೂ ಶ್ರೀಸಾಮಾನ್ಯರಿಗೆ ಮನೆಗಳು ಸಿಗುವಂತೆ ಅವಕಾಶ ಕಲ್ಪಿಸಿದ್ದಾರೆ.

ಹಿಂದಿನ ಸರ್ಕಾರಗಳು ಕೇವಲ ಸರ್ಕಾರಿ ಲಾಭದ ದೃಷ್ಟಿಯಿಂದ ಮಾತ್ರ ತೀರ್ಮಾನ  ಕೈಗೊಳ್ಳುತ್ತಿದ್ದವು. ಸಾಮಾನ್ಯ ಜನರ ಕುರಿತಾಗಿ, ಅದರಲ್ಲೂ ಹೆಂಗಸರ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ.

ಪ್ರತಿ ನಿಯಮ ಹೆಂಗಸರನ್ನು ಚಿಂತೆಗೆ ದೂಡುವಂಥವೇ! ಏಕೆಂದರೆ ಈ ನಿಯಮಗಳಾ ಸರಳವಲ್ಲ. 2 + 2 + 2 ಎಂಬುದನ್ನು ಸಾಮಾನ್ಯ ಹೆಂಗಸರು ಅರ್ಥ ಮಾಡಿಕೊಳ್ಳುವರು, ಆದರೆ  ಎಂಬುದರ 12% ಎಷ್ಟು ಎಂಬುದನ್ನು ಸುಲಭವಾಗಿ ಹೇಗೆ  ಗ್ರಹಿಸಿಯಾರು? ಸರ್ಕಾರದ ಕಾನೂನು ಕಟ್ಟಳೆಗಳೆಲ್ಲ ಇದೇ ತರಹದ್ದು. ಒಂದು ನಿಯಮ ಆಧರಿಸಿ ಇನ್ನೊಂದು, ಅದನ್ನು ಅವಲಂಬಿಸಿ ಮತ್ತೊಂದು. ಒಬ್ಬ ಎಕ್ಸ್ ಪರ್ಟ್‌ರ ಸಲಹೆ ನಂತರ ಮತ್ತೊಬ್ಬರದು, ಅದರ ನಂತರ ಇನ್ನೊಬ್ಬರದು…… ಹೀಗೆ.

ಹೊಸ ಸರ್ಕಾರ ಈ ಘನಘೋರ ಸಿಕ್ಕುಗಳನ್ನು ಸರಿಪಡಿಸುವುದೇ? ಹೆಂಗಸರಿಗೆ ಸರ್ಕಾರಿ ಕಬಂಧ ಕವಚದಿಂದ ಮುಕ್ತಿ ಸಿಗುವುದೇ? ಹಿಂದಿನ ಕಾಲದಲ್ಲಿ ಹೆಂಗಸರು ಶಕ್ತಿಹೀನರು ಎಂದು ಅವರನ್ನು ಬಾಯಿಬಡಿದು ಮೂಲೆಗೊತ್ತರಿಸಿದ್ದರು. ಆದರೆ ನೈಸರ್ಗಿಕವಾಗಿ ಗಂಡಸು ಹೆಂಗಸರಲ್ಲಿ ಬಲು ಹೆಚ್ಚಿನ ಪ್ರಮಾಣದ ವ್ಯತ್ಯಾಸವೇನೂ ಇಲ್ಲ. ಸಮಾಜ ಮೊದಲು ಧರ್ಮದ ಹೆಸರಿನಲ್ಲಿ, ನಂತರ ಕಾನೂನಿನ ಹೆಸರಲ್ಲಿ ಈಗ ಟೆಕ್ನಿಕ್‌ ಹೆಸರಲ್ಲಿ ಹೆಂಗಸರನ್ನು ಗುಲಾಮರನ್ನಾಗಿಸಿ ಅವರನ್ನು ಮಣ್ಣು ಮುಕ್ಕಿಸಿದೆ. ಹೊಸ ಸರ್ಕಾರ ಇಂಥ ಸಂಕೋಲೆಯಿಂದ ಹೆಂಗಸರನ್ನು ಬಿಡಿಸಬಲ್ಲದೇ? ಈಗ ಬರುತ್ತಿರುವ ಬದಲಾವಣೆಗಳು ಗಂಡಸರಿಗೆ ಲಾಭ ತರಬಹುದು, ಹೆಂಗಸರಿಗಲ್ಲ.

ಇಷ್ಟೆಲ್ಲ ಮಾಡಿದ ನರೇಂದ್ರ ಮೋದಿಯವರ ಸರ್ಕಾರ ಪ್ರತಿ ನಿಯಮದಲ್ಲೂ ಹೆಂಗಸರಿಗೆ ವಿಶೇಷ ರಿಯಾಯಿತಿ ನೀಡಲು ಮುಂದಾದರೆ ಒಳಿತು, ಅಂದರೆ ಆಸ್ತಿ ವರ್ಗಾವಣೆ ಮಾಡುವಾಗ ಸ್ಟ್ಯಾಂಪ್‌ ಡ್ಯೂಟಿಯಲ್ಲಿ 2% ಸೋಡಿ ನೀಡಿದಾಗಿನಿಂದ ರಿಜಿಸ್ಟ್ರಾರ್ ಆಫೀಸ್‌ಗಳಲ್ಲಿ ಎಲ್ಲೆಲ್ಲೂ ಹೆಂಗಸರೇ ತುಂಬಿಕೊಂಡಿದ್ದಾರೆ. ಅದೇ ತರಹ ಲೈಸೆನ್ಸ್ ಆಫೀಸ್‌, ಕಾರ್ಖಾನೆಗಳ ರಿಜಿಸ್ಟ್ರೇಷನ್‌, ಮುಖ್ಯವಾಗಿ ಮನೆ ಖರೀದಿಸುವವರ ಗುಂಪಲ್ಲೂ ಹೆಂಗಸರು ಹೆಚ್ಚಾಗಿ ಕಾಣಿಸುವಂತಾಗಬೇಕು.

ಧರ್ಮದ ಮೂಲ ಪ್ರವೃತ್ತಿ ವಿವಾದ ಉಂಟು ಮಾಡುವುದು

ಧರ್ಮವನ್ನು ಹೊಗಳುವವರು ಅದು ಪ್ರೇಮವನ್ನು ಕಲಿಸುತ್ತದೆ, ವೈಮನಸ್ಯವನ್ನಲ್ಲ ಎಂಬುದನ್ನು ಸಾಬೀತುಪಡಿಸಲು ಈ ಕಥೆಯನ್ನು ಮತ್ತೆ ಮತ್ತೆ ಹೇಳುತ್ತಿರುತ್ತಾರೆ. ಕಳೆದ ಅಕ್ಟೋಬರ್‌ನಲ್ಲಿ ದೆಹಲಿಯ ತ್ರೋವೆಕಪುರಿಯಲ್ಲಿ ಒಂದು ಮಸೀದಿಯ ಎದುರಿಗೆ ಒಂದು ಭಜನಾ ಮಂಡಳಿಯವರು ರಾತ್ರಿಯೆಲ್ಲಾ ಜಾಗರಣೆ ಮಾಡಿದಾಗ ನಡೆದ ಜಗಳ ಹಿಂಸಾರೂಪ ಪಡೆದುಕೊಂಡಿತು. ಸಾವು ಸಂಭವಿಸದಿದ್ದರೂ ಬಹಳಷ್ಟು ಜನರಿಗೆ ಗಾಯಗಳಾದವು. ಈ ಗಲಾಟೆಯಲ್ಲಿ ಒಬ್ಬ ಸಿಖ್‌ ಹರ್ಬನ್ಸ್ ಸಿಂಗ್‌, ಮಹಮದ್‌ ಖುರ್ಬಾನ್ ಎಂಬ ಮುಸ್ಲಿಮ್ ಗೆ ತನ್ನ ಮನೆಯಲ್ಲಿ  ಆಶ್ರಯ ನೀಡಿದರು. ಈ ಹರ್ಬನ್ಸ್ ಸಿಂಗ್‌ಗೆ ಅವರ ಮುಸ್ಲಿಂ ನೆರೆಹೊರೆಯವರು 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಕಾಂಗ್ರೆಸ್‌ನರ ಸೂಚನೆಯ ಮೇರೆಗೆ ನಡೆದ ಸಿಖ್ಖರ ಹತ್ಯಾಕಾಂಡದಲ್ಲಿ ಆಶ್ರಯ ನೀಡಿದ್ದರು. ಹರ್ಬನ್ಸ್ ಸಿಂಗ್‌ ತಾನು ಮಾನವೀಯತೆಯಿಂದ ಹಾಗೆ ಮಾಡಿದೆನೆಂದು ಹೇಳಿದರು.

ಇದು ಧರ್ಮದ ಪ್ರಖರತೆಯ ಪರವಾಗಿದೆಯೇ? ಇಲ್ಲ, ಇದು ಮಾನವೀಯತೆ ಮತ್ತು ಸಾಮಾಜಿಕತೆಯ ಪರವಾಗಿದೆ. ಧರ್ಮ ಹರಡಿರುವ ಶತ್ರುತ್ವ, ವೈಮನಸ್ಯ, ತಿರಸ್ಕಾರ, ಆತಂಕ ಇತ್ಯಾದಿಗಳೆಲ್ಲಾ ಇದ್ದರೂ ಅದು ಇನ್ನೂ ಜೀವಂತವಾಗಿದೆ. ಒಂದು ವೇಳೆ ಧರ್ಮ ಇಲ್ಲದಿದ್ದರೆ ಹರ್ಬನ್ಸ್ ಸಿಂಗ್‌ ಸಿಖ್‌ ಆಗಿ ಇರುತ್ತಿರಲಿಲ್ಲ. ಮಹಮದ್‌ ಖುರ್ಬಾನ್‌ ಮುಸ್ಲಿಂ ಆಗುತ್ತಿರಲಿಲ್ಲ. ಇಬ್ಬರೂ ಏನೇ ಆಗಿದ್ದರೂ ನೆರೆಹೊರೆಯವರಾಗಿರುತ್ತಿದ್ದರು, ಸಹೋದ್ಯೋಗಿಗಳಾಗಿರುತ್ತಿದ್ದರು, ಪರಸ್ಪರ ಸಹಕಾರ ನೀಡುವವರಾಗಿರುತ್ತಿದ್ದರು.

ವಿಜ್ಞಾನ ಮತ್ತು ಟೆಕ್ನಿಕ್‌ ಇದ್ದೂ, ತರ್ಕ, ಆಲೋಚನೆಗಳಿದ್ದೂ ಧರ್ಮದ ಅಸಲಿ ರೂಪವಾದ ಹಿಂಸಾರೂಪ ಇಂದಿಗೂ ವಿಶ್ವದೆಲ್ಲೆಡೆ ಇದ್ದೇ ಇದೆ. ವಿಶ್ವ ಎಲ್ಲ ಮೂಲೆಯ ಧಾರ್ಮಿಕ ಆತಂಕದಿಂದ ಭಯಭೀತವಾಗಿದೆ. ಸುರಕ್ಷಾ ಕವಚವೊಂದು ತಿಳಿಯಾಗುವ ಧರ್ಮ ಅಸಲಿಗೆ ಸಿಹಿ ಲೇಪನದಿಂದ ಕೂಡಿದೆ. ಅದನ್ನು ಅಲುಗಾಡಿಸಲು ವಿಷಕೀಟಗಳಂತಹ ಇನ್ನೊಂದು ಧರ್ಮದ ಜನ ಸದಾ ಕಾಯುತ್ತಿರುತ್ತಾರೆ. ನಮ್ಮ ದೇಶದ ರಾಜಕಾರಣ ಕಾಂಗ್ರೆಸ್‌ ಹುಟ್ಟಿದಾಗಿನಿಂದಲೇ ಧರ್ಮದ ಮೇಲೆ ಅವಲಂಬಿತವಾಗಿತ್ತು. ಹಿಂದೆ ಬಾಲಗಂಗಾಧರ ತಿಲಕ್‌ ಮತ್ತು ಗೋಪಾಲಕೃಷ್ಣ ಗೋಖಲೆ ಕಾಂಗ್ರಸ್‌ನ್ನು ಧರ್ಮಮಯನ್ನಾಗಿ ಮಾಡಿದರು. ನಂತರ ಮಹಾತ್ಮ  ಗಾಂಧಿಯನರು ರಘುಪತಿ ರಾಘ ರಾಜಾ ರಾಮ ಮಯನನ್ನಾಗಿ ಮಾಡಿಬಿಟ್ಟರು.

ಅದರಿಂದಾಗಿ ಮಹಮದಾಲಿ ಜಿನ್ನಾ ಕಾಂಗ್ರೆಸ್‌ನ್ನು ಬ್ರಾಹ್ಮಣರ ಪಾರ್ಟಿ ಎಂದು ಕರೆದು ಪಾರ್ಟಿ ಬಿಟ್ಟರು. ಈಗ ಕಾಂಗ್ರೆಸ್‌ನ ಧರ್ಮದ ಹೊದಿಕೆಯನ್ನು ಭಾರತೀಯ ಜನತಾ ಪಾರ್ಟಿ ಕಿತ್ತುಕೊಂಡು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಆಧುನಿಕ ಡಿಸೈನ್‌ನಲ್ಲಿ ಹೊಲಿಸಿದೆ. ಆದರೆ ಧರ್ಮವಂತೂ ಧರ್ಮವೇ ಆಗಿದೆ.

vihangam-2

ತ್ರೋವೆಕಪುರಿಯ ವಿಷಯ ಹೊಸದೇನಲ್ಲ. ಭಾಜಪಾ ವಿರುದ್ಧ ಒಳಸಂಚೂ ಅಲ್ಲ. ಯಾವುದಾದರೊಂದು ರೀತಿಯಲ್ಲಿ ವಿವಾದ ಎಬ್ಬಿಸುವುದು ಧರ್ಮದ ಮೂಲ ಪ್ರವೃತ್ತಿಯಾಗಿದೆ. ಅದು ಸಾಯಿಬಾಬಾರನ್ನು ಪೂಜಿಸುವ ಬಗ್ಗೆಯಾಗಲಿ ಅಥವಾ ರಾಮ ರಹೀಮ ಪಂಥದಲ್ಲಿ ದಾಳಿಯ ಬಗ್ಗೆಯಾಗಲಿ, ಧರ್ಮದ ಹೆಸರಿನಲ್ಲಿ ದೇಶದಲ್ಲಿ ಅಂತರ್ಯುದ್ಧಗಳಂತೂ ಆಗುತ್ತಿಲ್ಲ. ಆದರೆ ಜಾರ್ಖಂಡ್‌ನ ಝರಿಯಾದ ಕಲ್ಲಿದ್ದಲಿನ ಗಣಿಗಳ ತರಹ ಬೆಂಕಿ ಸತತ ಆ ನೆಲದ ಕೆಳಗೆ ಹೊತ್ತಿಕೊಂಡಿದೆ. ಅದರ ಮೇಲೆ ಜನ ತಮ್ಮ ಮನೆಗಳನ್ನು ಕಟ್ಟಿಕೊಂಡಿದ್ದಾರೆ.

ಉಳಿತಾಯದಲ್ಲೇ ನಿಜವಾದ ಸುಖ ಇದೆ

ಒಂದು ಸೆಮಿ ಬ್ಯಾಂಕಿಂಗ್‌ ಕಂಪನಿಯ ಟಿವಿ ಜಾಹೀರಾತಿನಲ್ಲಿ ಮುಖ್ಯ ಪಾತ್ರಧಾರಿ ಮಳೆಯಲ್ಲಿ ಅದೂ ಕಾಲ್ನಡಿಗೆಯಲ್ಲಿ ಕೆಲಸಕ್ಕೆ ಹೊರಡುತ್ತಾನೆ. ಹಣ ಉಳಿಸಲು ಆಟೋ ಬದಲು ಬಸ್‌ನಲ್ಲಿ ಹೋಗುತ್ತಾನೆ. ಅಂತಹ ಜನರಿಗೆ ತಾನು ಸುಲಭವಾಗಿ ಸಾಲ ಕೊಡುವುದಾಗಿ ಆ ಕಂಪನಿ ಹೇಳುತ್ತದೆ.

ನಿಜವಾದ ಸುಖ ಉಳಿತಾಯದಲ್ಲೇ ಇದೆ, ಕಡಿಮೆ ಖರ್ಚು ಮಾಡುವುದರಲ್ಲಿ ಇದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೆಚ್ಚಿನ ಜಾಹೀರಾತುಗಳು ಸುಖ ಪಡೆಯಲು ಹೆಚ್ಚು ಖರ್ಚು ಮಾಡಿ ಎನ್ನುತ್ತವೆ. ಜಾಹೀರಾತುಗಳ ನಿಜವಾದ ಉದ್ದೇಶ ಸರಿಯಾದ ಬೆಲೆಯಲ್ಲಿ ಉತ್ತಮ ವಸ್ತು ಒದಗಿಸುವುದು ಹಾಗೂ ಗ್ರಾಹಕರಿಗೆ ಆಯ್ಕೆಗಳನ್ನು ಕೊಡುವುದು. ಈಗ ಜನರಲ್ಲಿ ಹೆಚ್ಚು ಹೆಚ್ಚು  ಖರೀದಿಸಲು ಸ್ಪರ್ಧೆಯುಂಟಾಗಿದೆ. ಆದರೆ ಭವಿಷ್ಯದ ಸುರಕ್ಷತೆಗಾಗಿ ಹಣ ಉಳಿಸಿ ಎಂದು ಯಾರೂ ಹೇಳುತ್ತಿಲ್ಲ.

ಆದರೆ ಹಣ ಉಳಿಸುವ ಹುಚ್ಚಿನಲ್ಲಿ ಅತಿ ಜಿಪುಣರಾಗಬೇಡಿ. ಅದರಿಂದ ಹೆಚ್ಚು ನಷ್ಟವೇ ಆಗುತ್ತದೆ. ಜೀವನದ ಮಟ್ಟ ಹಾಳಾಗುತ್ತದೆ. ಸರಿಯಾದ ಕಡೆ ಖರ್ಚು ಮಾಡುವಲ್ಲಿಯೂ ಹಿಂಜರಿತ ಉಂಟಾಗುತ್ತದೆ. ಶಿಕ್ಷಣಕ್ಕಾಗಿ ಖರ್ಚು ಮಾಡುವುದು ನಿಂತುಹೋಗುತ್ತದೆ. ಉಳಿತಾಯದ ಹೆಸರಿನಲ್ಲಿ ಇನ್ನೊಬ್ಬರ ಹಣ ಅಪಹರಿಸುವುದು ಶುರುವಾಗುತ್ತದೆ. ಮನೆಯವರಲ್ಲಿ ಬೇಸರ ಮೂಡುತ್ತದೆ.

ಇನ್ನೊಂದು ಕಡೆ, ಮಧ್ಯಾಹ್ನ 2 ಬ್ರೆಡ್‌ ಟೋಸ್ಟ್ ತಿನ್ನಲು ಪ್ರಯತ್ನಿಸುವವರಿಗೆ ಮಾರುಕಟ್ಟೆಯ ದುಬಾರಿ ಸ್ಯಾಂಡ್‌ವಿಚ್‌ ಕೊಡಿಸುವ ಪತ್ನಿ ಆಫೀಸಿನಲ್ಲಿ ಕೆಲಸ ಮಾಡಿಯೂ ಹಣ ಉಳಿಸುವ ಬಗ್ಗೆ ಮಾತನಾಡದೆ ಹಣ ಹಾಳು ಮಾಡುವ ಬಗ್ಗೆ ಮಾತಾಡುತ್ತಿದ್ದರೆ ಅದನ್ನು ವಿರೋಧಿಸಬೇಕು. ಮೋಜಿಗಾಗಿ 500 ರೂ. ಆದರೂ ಖರ್ಚು ಮಾಡಿ. ಆದರೆ 5 ರೂ.ನಲ್ಲಿ ಕೆಲಸವಾಗುವ ಕಡೆ 50 ರೂ. ಅಥವಾ 500 ರೂ. ಖರ್ಚು ಮಾಡುವುದು ಮೋಜಲ್ಲ, ಮೂರ್ಖತನ.

ಉಳಿತಾಯದ ಬಲದಿಂದಲೇ ಚೈನಾ, ಜಪಾನ್‌ನಂತಹ ದೇಶಗಳು ಅಭಿವೃದ್ಧಿ ಸಾಧಿಸಿವೆ. ಉಳಿತಾಯದಿಂದಲೇ ಶ್ರೀಮಂತ ರಾಷ್ಟ್ರಗಳಿಗೆ ಹೋದ ಬಡರಾಷ್ಟ್ರಗಳ ಕೆಲಸಗಾರರು ಅಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಅವುಗಳಲ್ಲಿ ಭಾರತೀಯರು, ಚೀನೀಯರು, ನೈಜೀರಿಯನ್ನರು, ಯಹೂದಿ ಹಾಗೂ ಇರಾನಿಗಳು ಸೇರಿದ್ದಾರೆ. ಅವರುಗಳು ಖಾಲಿ ಕೈಯಲ್ಲಿ ಅಮೆರಿಕಾಗೆ ಹೋಗಿ ನೆಲೆಸಿದ್ದರು. 2 ಪೀಳಿಗೆಯ ನಂತರ ಅವರು ಅಮೆರಿಕಾದ ಶ್ರೀಮಂತರಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಪ್ರತಿ ಮನೆಯಲ್ಲೂ ಉಳಿತಾಯ ಮಾಡುವುದನ್ನು ಕಲಿಸಬೇಕು. ತಾವೇ ಸ್ವತಃ ಕೆಲಸ ಮಾಡಬೇಕು. ಟಿವಿ ಅಥವಾ ಮೊಬೈಲ್ ಸ್ಕ್ರೀನ್‌ ಮುಂದೆ ಕೆಲಸವಿಲ್ಲದೆ ಕೂಡಬಾರದು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ