ಜಿಮ್ ನಲ್ಲಿ ಸಂಧ್ಯಾ ಜೊತೆ ಟ್ರೆಡ್‌ಮಿಲ್ ‌ಮೇಲೆ ವಾಕ್‌ ಮಾಡುತ್ತಾ ಶಾಪಿಂಗ್‌ಗೆ ಹೋಗುವ ಪ್ಲಾನ್‌ ಮಾಡಿದೆ. ನಾನು ಮನೆಗೆ ಹೋಗಿ ಸ್ನಾನ ಮಾಡಿ, ಫ್ರೆಶ್‌ ಆಗಿ, ಒಂದಿಷ್ಟು ಆಹಾರ ಸೇವನೆ ಮಾಡಿದೆ. ಅಷ್ಟರಲ್ಲಿ ಸಂಧ್ಯಾಳ ಫೋನ್‌ ಬಂತು. ಅವಳು ಹೇಳಿದ್ದು, ``ಇವತ್ತು ನಾನು ಬರೋಕೆ 1 ಗಂಟೆ ತಡವಾಗುತ್ತೆ. ಅಡುಗೆ ಕೆಲಸ ಮತ್ತು ಮನೆ ಸ್ವಚ್ಛತೆ ಮಾಡಿ ಮುಗಿಸಬೇಕು. ನಮ್ಮ ಮನೆ ಕೆಲಸದವಳು ಇಂದು ಬಂದಿಲ್ಲ. ಬರಲು ಆಗುವುದಿಲ್ಲ ಎಂದು ಮೊದಲೇ ಹೇಳಿರಲಿಲ್ಲ,'' ಎಂದಳು. ನಾನಾದರೂ ಏನು ಮಾಡಲು ಸಾಧ್ಯವಿತ್ತು? 1 ಗಂಟೆ ತಡವಾದರೂ ಸರಿ, ಹೋಗಲು ತಯಾರಾದೆ. ಏಕೆಂದರೆ ಮರುದಿನ ಸಂಜೆ ನನಗೆ ಡಾಕ್ಟರ್‌ಅಪಾಯಿಂಟ್‌ಮೆಂಟ್‌ ಇತ್ತು. ನಮಗೀಗ ಶಾಪಿಂಗ್‌ಗೆ ಕಡಿಮೆ ಸಮಯವಿತ್ತು. ಮಕ್ಕಳು ಶಾಲೆಯಿಂದ ವಾಪಸ್‌ ಬರುವ ಮೊದಲೇ ನಾವು ಮನೆಗೆ ವಾಪಸ್‌ ಬರಬೇಕಿತ್ತು.

ಅನೇಕ ಸಮಸ್ಯೆಗಳು

ಮರುದಿನ ನಮ್ಮ ಮನೆ ಕೆಲಸದಾಕೆ ತಡವಾಗಿ ಬಂದಳು. ನಾನು ಬೆಡ್‌ರೂಮ್ ಲಾಕ್‌ ಮಾಡಿ ಮನೆಯ ಬೀಗದ ಕೈಗಳನ್ನು ಪಕ್ಕದ ಮನೆಯವರ ಕೈಗೆ ಕೊಟ್ಟು ಬಂದೆ. ಏಕೆಂದರೆ ಅವಳು ಬಂದು ಮನೆಯ ಅಡುಗೆ ಹಾಗೂ ಸ್ವಚ್ಛತೆಯ ಕೆಲಸ ಮುಗಿಸಲಿ ಎನ್ನುವುದು ನನ್ನ ಅಪೇಕ್ಷೆಯಾಗಿತ್ತು. ನಾನು ಅವಳೊಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗುವುದು ಸರಿ ಎನಿಸುತ್ತಿರಲಿಲ್ಲ. ಆದರೆ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಏಕೆಂದರೆ ನನ್ನದು ಸಣ್ಣ ಕುಟುಂಬ. ಈ ಸಮಸ್ಯೆ ಸಾಮಾನ್ಯವಾಗಿ ಎಲ್ಲರದ್ದೂ ಆಗಿರುತ್ತದೆ. ನೌಕರಿ ಮತ್ತು ವರ್ಗಾವಣೆಗಳಿಂದಾಗಿ ಒಟ್ಟು ಕುಟುಂಬಗಳು ಒಡೆದು ಹೋಗುತ್ತಿವೆ. ಇನ್ನೊಂದು ಕಡೆ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳು, ವೃದ್ಧರು ಮನೆಯಲ್ಲಿ ಹೆಚ್ಚು ಕಡಿಮೆ ಮನೆಗೆಲಸದವರನ್ನೇ ಅಲಂಬಿಸಿದ್ದಾರೆ.

ಮನೆಯ ಸ್ವಚ್ಛತೆಯ ಕೆಲಸದಿಂದ ಹಿಡಿದು ಅಡುಗೆ ಕೆಲಸದ ತನಕ, ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದರಿಂದ ಹಿಡಿದು, ಹಿರಿಯ ನಾಗರಿಕರನ್ನು ಗಮನಿಸಿಕೊಳ್ಳುವುದರ ತನಕ ಹಲವು ಕೆಲಸಗಳನ್ನು ಈ ಮನೆಗೆಲಸದವರು ಮಾಡುತ್ತಾರೆ. ಅವರಿಂದಾಗಿ ಹಲವು ಅನುಕೂಲಗಳು ಆಗುತ್ತಿವೆ. ಅದರ ಜೊತೆಗೆ ಅವರಿಂದ ಕೆಲಸ ಮಾಡಿಸಿಕೊಳ್ಳಲು ಹಲವು ಸಮಸ್ಯೆಗಳೂ ಆಗುತ್ತಿವೆ.

ಮೇಡ್‌ ಮೇಡಮ್ ಪರಸ್ಪರ ಪೂರಕ

ಬೆಂಗಳೂರಿನಲ್ಲಿ ವಾಸಿಸುವ ಕೃತಿಕಾ ಹೀಗೇ ಹೇಳುತ್ತಾರೆ, ``ನಾನು ಗರ್ಭಿಣಿಯಾಗಿದ್ದಾಗ ನನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನನ್ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಳು. ಕೆಲವೊಂದು ಕೆಲಸಗಳನ್ನು ನಾನು ಹೇಳದಿದ್ದರೂ ಅವಳೇ ಮಾಡುತ್ತಿದ್ದಳು. ಮಗಳಿಗೆ ಜನ್ಮ ನೀಡಿದ ಬಳಿಕ ಕೂಡ ಅವಳು ಮಗುವಿನ ಪಾಲನೆಗೆ ಸಾಕಷ್ಟು ನೆರವು ನೀಡಿದಳು. ನಾನು ಯಾವುದಾದರೂ ಕೆಲಸದಲ್ಲಿ ಮಗ್ನಳಾದರೆ ಅವಳು ಮಗುವನ್ನು ನೋಡಿಕೊಳ್ಳುತ್ತಿದ್ದಳು. ಹೊರಗಡೆ ಹೋದಾಗ ನನ್ನೊಂದಿಗೆ ಬಂದು ಮಗುವನ್ನು ನೋಡಿಕೊಂಡು ನನ್ನ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದಳು.

``ಅವಳ ನಡವಳಿಕೆ ಗಮನಿಸಿ ನಾವೆಲ್ಲ ಅವಳಿಗೆ ಮನೆಯ ಸದಸ್ಯೆ ಎಂಬಂತೆ ಭಾವಿಸಿದೆವು. ಮನೆಗೆ ಯಾರಾದರೂ ಸಂಬಂಧಿಕರು ಬಂದರೆ ನಮ್ಮ ಮನೆಯ ಸದಸ್ಯೆ ಎಂಬಂತೆಯೇ ಪರಿಗಣಿಸುತ್ತಿದ್ದರು. ನಾನು ಸ್ವತಃ ಅವಳ ಕೌಟುಂಬಿಕ ಅಗತ್ಯಗಳ ಬಗ್ಗೆ ಗಮನಹರಿಸುತ್ತಿದ್ದೆ. ನಾವಿಬ್ಬರೂ ಪರಸ್ಪರ ಪೂರಕ ಎಂಬಂತಿದ್ದೆವು. ಕೆಲವು ವರ್ಷಗಳ ಬಳಿಕ ಅವಳು ಮದುವೆಯಾಗಿ ಹೋದಾಗ ನಾವು ಅವಳಿಗೆ ಮಗಳ ಹಾಗೆಯೇ ವಿದಾಯ ಹೇಳಿದೆವು. ಅವಳ ಕೌಟುಂಬಿಕ ಅಗತ್ಯಗಳನ್ನು ಪೂರೈಸಿದೆವು!''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ