ಸಿಂಧಿಯಾ ಗರ್ಲ್ಸ್ ಸ್ಕೂಲ್‌' ಗ್ವಾಲಿಯರ್‌ನ ದಟ್ಟ ಕಾಡಿನಲ್ಲಿದೆ. ನಾನು ಅಲ್ಲಿ 2 ವರ್ಷ ಓದಿದ್ದೆ. ಆ ದಿನಗಳಲ್ಲಿ ನನಗೆ ಕಾಡಿನಲ್ಲಿ ಒಂದು ಚಿಕ್ಕ ದೇವಸ್ಥಾನ ಕಂಡುಬಂದಿತ್ತು.  ಆಗ ನನಗೆ ಯಾರೊ ಒಬ್ಬರು ಶಾಲೆಯ ಹೋಂವರ್ಕ್‌ ಮಾಡುವ ಬದಲು ನಾನು ಅಲ್ಲಿ 101 ಸಲ ಪೂಜೆ ಮಾಡಿಸಿದರೆ, ಕ್ಲಾಸ್‌ನಲ್ಲಿ ಸದಾ ಪ್ರಥಮ ಸ್ಥಾನದಲ್ಲಿ ಇರ್ತೀಯಾ ಎಂದು ಹೇಳಿದ್ದರು.

ದಿನಕ್ಕೆ 2 ಗಂಟೆ ಓದುವ ನಾನು 2 ಗಂಟೆ ಪೂಜೆಯಲ್ಲಿ ಮಗ್ನಳಾದೆ. ಇದರ ಪರಿಣಾಮವೆಂಬಂತೆ, 80% ಅಂಕ ತೆಗೆದುಕೊಳ್ಳುತ್ತಿದ್ದ ನಾನು ತೆಗೆದುಕೊಂಡದ್ದು ಕೇವಲ ಶೇ.50 ಮಾತ್ರ. ನನ್ನ ಮೂರ್ಖತನದ ನಿರ್ಧಾರಕ್ಕಾಗಿ ಪೋಷಕರು ನನ್ನನ್ನು ತರಾಟೆಗೆ ತೆಗೆದುಕೊಂಡರು.

ಮೋಸದ ಹೊಸ ಉದಾಹರಣೆಗಳು

ನಾನು ಪ್ರತಿದಿನ `ಪೀಪಲ್ಸ್ ಫಾರ್‌ ಅನಿಮಲ್'ಗಾಗಿ ಕಾರ್ಯ ನಿರ್ವಹಿಸುತ್ತ ಮಾನವ ಸ್ವಭಾವದ ಮೂರ್ಖತನಗಳು, ಕ್ರೂರತೆ ಹಾಗೂ ವ್ಯಾಪಾರೀಕರಣದ ಉದಾಹರಣೆಗಳ ರಹಸ್ಯಗಳು ಯಥೇಚ್ಛವಾಗಿ ದೊರಕುವುದನ್ನು ಗಮನಿಸಿದೆ. ನಮ್ಮ ಜೊತೆಗೆ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗಿ ಒಂದು ಸುದ್ದಿ ತೆಗೆದುಕೊಂಡು ಬಂದಳು. ಕೆಲವು ಮಂತ್ರವಾದಿಗಳು ಮಧ್ಯಪ್ರದೇಶದ ಕಾಡುಗಳಿಂದ ಅಪರೂಪದ ಗಿಡಮೂಲಿಕೆಗಳನ್ನು ಫ್ಲಿಪ್‌ ಕಾರ್ಟ್‌ ಮತ್ತು ಓಎಲ್ಎಕ್ಸ್ ನಲ್ಲಿ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗಾಗಿ ಪ್ರಚಾರ ಮಾಡುತ್ತಿದ್ದಾರೆಂದು ಹೇಳಿದಳು. ಸ್ಥಳೀಯ ಭಾಷೆಯಲ್ಲಿ ಅದಕ್ಕೆ `ಹಠ್‌ ಜೋಡಿ' ಎಂದು ಹೆಸರು. ಫ್ಲಿಪ್‌ಕಾರ್ಟ್‌ಗೆ ಈ ಬಗ್ಗೆ ಕೇಳಿದಾಗ ಅವರು ಖೇದ ವ್ಯಕ್ತಪಡಿಸುತ್ತ ಅದನ್ನು ವಾಪಸ್‌ ಪಡೆದರು. ಆದರೆ ಬೇರೆ ವೆಬ್‌ಸೈಟ್‌ಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ತಂತ್ರವಾದ, ಸ್ಪೀಕಿಂಗ್‌ ಟ್ರೀ, ಆಸ್ಟ್ರೋವಿಧಿ, ಕಾಮ್ಯ ಸಿಂಧೂರ ವೆಬ್‌ಸೈಟ್‌ಗಳು ನಿರಂತರವಾಗಿ ಹೊಸ ಹೊಸ ಬಕರಾಗಳನ್ನು ಹುಡುಕಿ ಇದನ್ನು ಮಾಡುತ್ತಿವೆ. ಅವರು `ಹಠ್‌ ಜೋಡಿ'ಯ ಫೋಟೋ ಹಾಕಿ, ಅದರ ಚಮತ್ಕಾರಿಕ ಶಕ್ತಿಗಳನ್ನು ವಿವರಿಸಿ ಒಂದು ಮೊಬೈಲ್ ನಂಬರಿಗೆ ಸಂಪರ್ಕಿಸಲು ತಿಳಿಸುತ್ತಾರೆ. ಧಾರ್ಮಿಕ ಕೆಲಸ ಮಾಡುವ ಈ ವೆಬ್‌ಸೈಟ್‌ಗಳಿಗೆ ಅನೈತಿಕ ಹಾಗೂ ಅಕ್ರಮ ಕೆಲಸ ಮಾಡುವ ಉದ್ದೇಶವಿರುತ್ತದೆ. ಹೀಗಾಗಿ ಅಲ್ಲಿ ವಿಳಾಸ ಕೊಡುವ ಸಂದರ್ಭವೇ ಉದ್ಭವಿಸುವುದಿಲ್ಲ. ನಾವಿದನ್ನು ಮಾಡುತ್ತಿಲ್ಲ, 40 ದೇಶಗಳಲ್ಲಿ ಮಾನವ ಸೇವೆಯಲ್ಲಿ ನಿರತರಾಗಿದ್ದೇವೆ ಎಂದರು.

ಏನಿದು `ಹಠ್‌ ಜೋಡಿ'?

`ಹಠ್‌ ಜೋಡಿ' ಹೆಸರಿನ ಇದು ಖಂಡಿತವಾಗಿಯೂ ಸಸ್ಯ ಮೂಲದ್ದಂತೂ ಅಲ್ಲವೇ ಅಲ್ಲ. ಯಾವುದೇ ವೆಬ್‌ಸೈಟ್‌ ಇದರ ವೈಜ್ಞಾನಿಕ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಯಾವ ಕಾಡಿನಲ್ಲಿ ಯಾವ ಆದಿವಾಸಿಗಳು ಇದನ್ನು ಬೆಳೆಯುತ್ತಾರೆ ಎಂಬುದನ್ನು ಕೂಡ ಅವರು ಹೇಳುವುದಿಲ್ಲ. ಕೆಲವರು ಇದನ್ನು ಗಿಡಮೂಲಿಕೆ ಎಂದರೆ, ಇನ್ನೂ ಕೆಲವರು ಇದನ್ನು ಮರದ ಮೇಲೆ ಬೆಳೆ ಒಂದು ವಿಶಿಷ್ಟ ಸಸ್ಯ ಎನ್ನುತ್ತಾರೆ. ಒಂದು ಸೈಟ್‌ನಲ್ಲಿ ಇದರ ಹೆಸರನ್ನು `ಭರ್ನಾನಿಯಾ ಅನುವಾ' ಎಂದು ಉಲ್ಲೇಖಿಸಲಾಗಿದೆ. ಅದರ ಪರ್ಪಲ್ ಬಣ್ಣದ ಹೂವಿನ ಬೀಜಗಳು ಮಾವಿನ ಹಣ್ಣಿನ ಆಕಾರದಲ್ಲಿರುತ್ತವೆ, ಅದರಲ್ಲಿ ಹುಕ್‌ ತೆರನಾದದ್ದು ಇರುವುದರಿಂದ, ಅದು ಪ್ರಾಣಿಗಳ ಕಾಲುಗಳಲ್ಲಿ ತಗುಲಿ ಹೊಸ ಸ್ಥಳಕ್ಕೆ ಹೋಗಿ ಬೆಳೆಯುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ