16ನೇ ರಾಜ್ಯಮಟ್ಟದ `ಅಬಾಕಸ್‌ ಬೌದ್ಧಿಕ ಅಂಕಗಣಿತ' ಸ್ಪರ್ಧೆ

ಪ್ರಾಡಿಜಿ ಎಂದರೆ ಅದ್ಭುತ, ಅಸಾಧಾರಣ ಎಂದರ್ಥ. ಮಕ್ಕಳಲ್ಲಿನ ಅದ್ಭುತ, ಬೌದ್ಧಿಕ ಸಾಮರ್ಥ್ಯ ಹೊರಹೊಮ್ಮಿಸುವುದೇ ಈ ಸ್ಪರ್ಧೆಯ ಮುಖ್ಯ ಉದ್ದೇಶ. ರಾಜ್ಯದ ನಾನಾ ಜಿಲ್ಲೆಗಳಾದ ಹುಬ್ಬಳ್ಳಿ, ರಾಣೆಬೆನ್ನೂರು, ಬಳ್ಳಾರಿ, ಹರಿಹರ, ಬ್ಯಾಡಗಿ, ಚಿಕ್ಕಬಳ್ಳಾಪುರ, ತುಮಕೂರು, ಗುಲ್ಬರ್ಗಾ, ಉಡುಪಿ, ನೆಲಮಂಗಲ, ತುಮಕೂರು, ಕೊಪ್ಪಳ, ಮೈಸೂರು, ಸಿರಗುಪ್ಪ, ಕುಮಟಾ, ಹೊನ್ನಾರ ಮುಂತಾದ ಭಾಗಗಳಿಂದ ಸುಮಾರು 4000 ಮಕ್ಕಳು ಭಾಗವಹಿಸಿದ್ದು, ಈ ಸ್ಪರ್ಧೆಯ ವಿಶೇಷವಾಗಿದೆ.

ಮಕ್ಕಳ ಪ್ರತಿಭೆ ಮತ್ತು ಮಾನಸಿಕ ಬೆಳಣಿಗೆಗೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ಅಬಾಕಸ್‌ ಪದ್ಧತಿಯ ಮೂಲಕ ಕಲಿಕೆಯ ಸಾಮರ್ಥ್ಯ ಹೆಚ್ಚಿಸುವುದು ವಿಶೇಷ ಎನಿಸುತ್ತಿದೆ. ಅಬಾಕಸ್‌ನಿಂದ ಮಕ್ಕಳಿಗೆ ಕಲಿಕೆಯ ಸಾಮರ್ಥ್ಯ ಹೆಚ್ಚಳ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಳ, ತಾರ್ಕಿಕ ಶಕ್ತಿ ಮತ್ತು ಕಲಾತ್ಮಕ ಗುಣಗಳ ಬೆಳವಣಿಗೆ, ಭಯ ಆತಂಕ ನಿವಾರಣೆ ಆಗಲಿದೆ.

ಈ ದಿಸೆಯಲ್ಲಿ ಅಬಾಕಸ್‌ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿರುವ SIP ಅಕಾಡೆಮಿ ಇಂಡಿಯಾ ಪ್ರೈ.ಲಿ. ಇತ್ತೀಚೆಗೆ ಹೆಬ್ಬಾಳದ ಮಾನ್ಯತಾ ಟೆಕ್‌ ಪಾರ್ಕ್‌ನ ಕನ್ವೆನ್ಷನ್‌ ಸೆಂಟರ್‌ನಲ್ಲಿ 16ನೇ ಪ್ರಾದೇಶಿಕ ಅಬಾಕಸ್‌ ಮತ್ತು ಬೌದ್ಧಿಕ ಅಂಕಗಣಿತ ಸ್ಪರ್ಧೆ ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 4000ಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಅಬಾಕಸ್ ಮೂಲಕ ತಮ್ಮ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಅಚ್ಚರಿ ಮೂಡಿಸಿದರು. ಕಾರ್ಯಕ್ರಮದಲ್ಲಿ SIP ಅಕಾಡೆಮಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್‌ ವಿಕ್ಟರ್‌ ಸಂಸ್ಥೆಯ ಕಾರ್ಯ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಸ್ಪರ್ಧೆಯ ವಿಶೇಷ ಅಬಾಕಸ್

ಈ ಮೂಲಕ ಬ್ರೈನ್‌ ಜಿಮ್ ಸ್ಪರ್ಧೆ ಏರ್ಪಡಿಸಿತ್ತು. ಅಬಾಕಸ್‌ನಿಂದ ಮಕ್ಕಳ ಏಕಾಗ್ರತೆ, ವಿಶ್ವಾಸ, ಬುದ್ಧಿವಂತಿಕೆ, ವೇಗ, ನಿಖರತೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಈ ಸ್ಪರ್ಧೆಯ ಉದ್ದೇಶ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತಮಪಡಿಸುವುದಾಗಿತ್ತು. SIP ಅಕಾಡೆಮಿಯು ಅಂತಾರಾಷ್ಟ್ರೀಯ ಅಬಾಕಸ್‌ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಿರುವುದಕ್ಕೆ ಮತ್ತು SIP ಸ್ಪರ್ಧೆಯಲ್ಲಿ 5 ನಿಮಿಷದ ಅವಧಿಯಲ್ಲಿ ಅತಿ ಹೆಚ್ಚಿನ ಸಮಸ್ಯೆಗಳನ್ನು ಪರಿಹಾರ ಮಾಡಿದ ಸಾಧನೆಗಾಗಿ ಲಿಮ್ಕಾ ಸಾಧನೆಯ ಪುಸ್ತಕಕ್ಕೆ ದಾಖಲಾಯಾಯಿತು.

ಅಬಾಕಸ್‌ ಮತ್ತು ಬೌದ್ಧಿಕ ಕಸರತ್ತು

ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಅಬಾಕಸ್‌ನ ಬಳಕೆ ಬೆರಳುಗಳಿಂದ ನರಗಳನ್ನು ಜಾಗೃತಗೊಳಿಸಲಿದ್ದು, ಮೆದುಳಿಗೆ ತ್ವರಿತವಾಗಿ ಸಂದೇಶ ರವಾನೆಯಾಗುತ್ತದೆ. ಇದರ ನಿರಂತರ ಪ್ರತಿಕ್ರಿಯೆಯು ಮೆದುಳಿಗೆ ಶಕ್ತಿಯನ್ನು ಒದಗಿಸಲಿದೆ. ಮಕ್ಕಳಲ್ಲಿ ವಿಶೇಷವಾಗಿ ಮೆದುಳಿನಲ್ಲಿ ನಿರಂತರವಾಗಿ ಹೊಸ ಹೊಸ ಸಂವಹನದ ಸಾಧ್ಯತೆಗಳು ಸೃಷ್ಟಿಯಾಗುತ್ತಾ ಹೋಗುತ್ತದೆ. ಇದರಿಂದ ಅಬಾಕಸ್‌ ಮತ್ತು ಬೌದ್ಧಿಕ ಕಸರತ್ತು ಒಟ್ಟಾರೆಯಾಗಿ ಮೆದುಳಿನ ವಿಕಸನ ಮತ್ತು ಬುದ್ಧಿಮತ್ತೆಯ ಸಮತೋಲನಕ್ಕೆ ದಾರಿಯಾಗಲಿದೆ.

SIP ಅಕಾಡೆಮಿಯ ಪರಿಚಯ

SIP ಅಕಾಡೆಮಿ ಇಂಡಿಯಾ ಸಂಸ್ಥೆ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಳಗೊಳಿಸಬೇಕೆಂಬ ಉದ್ದೇಶದಿಂದ ಸ್ಥಾಪನೆಯಾದ ಸಂಸ್ಥೆಯಾಗಿದೆ. ವಿಶ್ವದ 10 ರಾಷ್ಟ್ರಗಳಲ್ಲಿ ತನ್ನ ಅಕಾಡೆಮಿ ಮೂಲಕ ಅಬಾಕಸ್‌ ಕಲಿಕೆಯನ್ನು ಹೇಳಿಕೊಡುತ್ತಿದೆ. 2003ರಲ್ಲಿ ಚೆನ್ನೈನಲ್ಲಿ ಆರಂಭಗೊಂಡ ಈ ಸಂಸ್ಥೆ ಇಂದು ದೇಶದ 20 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತದಲ್ಲಿ 600ಕ್ಕೂ ಹೆಚ್ಚಿನ SIP ಅಕಾಡೆಮಿಗಳಲ್ಲಿ 2 ಲಕ್ಷಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕರ್ನಾಟಕವೊಂದರಲ್ಲೇ 65 ಕೇಂದ್ರಗಳಿವೆ. ಇಲ್ಲಿ 5-12 ವರ್ಷದ ಮಕ್ಕಳಿಗೆ ಅಬಾಕಸ್‌ ತರಬೇತಿಯನ್ನು ನೀಡುತ್ತಿದೆ. SIP ಅಕಾಡೆಮಿ ಸೇರಿದ ನಂತರ ಮುಂಚಿನಕ್ಕಿಂತ 5 ಪಟ್ಟು ಅವರ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಭರವಸೆಯನ್ನು ಸಂಸ್ಥೆ ನೀಡುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ