ಬೋರ್ಡಿಂಗ್ ಸ್ಕೂಲ್ : ಸುರಕ್ಷತೆ ಮತ್ತು ಓದಿಗೆ ಕುತ್ತು
ಒಂದು ಒಳ್ಳೆಯ ದುಬಾರಿ ಬೋರ್ಡಿಂಗ್ ಶಾಲೆ ಹುಡುಗಿಯರಿಗೆ ಸುರಕ್ಷತೆ ಕೊಡುತ್ತದೆ ಎನ್ನುವುದರಲ್ಲಿ ಯಾವುದೇ ಗ್ಯಾರಂಟಿ ಇಲ್ಲ. ಬಹಳಷ್ಟು ಪೋಷಕರು ತಮ್ಮ ಮಗಳನ್ನು ಬೋರ್ಡಿಂಗ್ ಸ್ಕೂಲಿಗೆ ಹಾಕಿದರೆ ಓದಿನಲ್ಲಿ ಅವಳು ಪರ್ಫೆಕ್ಟ್ ಹಾಗೂ ಸುರಕ್ಷತೆ ಗ್ಯಾರಂಟಿ ಇರುತ್ತದೆ ಎಂದು ಭಾವಿಸುತ್ತಾರೆ. ಈ ಎರಡನ್ನೂ ಅವರು ಹಣ ಕೊಟ್ಟು ಖರೀದಿಸಲು ಯತ್ನಿಸುತ್ತಾರೆ. ಆದರೆ ವಿಷಾದದ ಸಂಗತಿಯೆಂದರೆ, ಈ ಬೋರ್ಡಿಂಗ್ ಸ್ಕೂಲ್‌ಗಳು ಸ್ವಚ್ಛ ಮೋರಿಗಿಂತ ಬೇರೇನೂ ಅಲ್ಲ.
ಬಹಳಷ್ಟು ಹುಡುಗಿಯರು ಒಂದೇ ಕಡೆ ಜೊತೆ ಜೊತೆಗೆ ಇರಬಹುದು. ಅಲ್ಲಿಯೂ ಕೂಡ ಸುರಕ್ಷತೆ ಹಾಗೂ ಓದುವ ವಾತಾವರಣ ಇರುತ್ತದೆ ಎಂದೇನಿಲ್ಲ. ಇದಕ್ಕೆ ತದ್ವಿರುದ್ಧವೆಂಬಂತೆ ಅಲ್ಲಿ ಪುಂಡಾಟಿಕೆ, ತಂದೆತಾಯಿಯಿಂದ ದೂರ, ಪ್ರೀತಿಯ ಹಸಿವಿನ ತಮ್ಮ ದೈಹಿಕ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಮತ್ತಷ್ಟು ಮುಕ್ತ ಹಾಗೂ ನಿರ್ಭಯರಾಗಿ ಪ್ರತಿಯೊಂದು ತೆರನಾದ ಪ್ರಯೋಗ ಮಾಡಲು ಸ್ವತಂತ್ರರಾಗಿರುತ್ತಾರೆ.
ಡೆಹ್ರಾಡೂನಿನ ಒಂದು ಶಾಲೆಯಲ್ಲಿ ಹುಡುಗಿಯ ಜೊತೆ ಗ್ಯಾಂಗ್ ರೇಪ್ ಮತ್ತು ಶಾಲಾ ಆಡಳಿತ ಮಂಡಳಿಯಿಂದ ಅನಧಿಕೃತವಾಗಿ ಗರ್ಭಪಾತ ಮಾಡಲು ಪ್ರಯತ್ನ ಏನನ್ನು ತೋರಿಸುತ್ತದೆಂದರೆ, ಈ ಶಾಲೆ ಎಷ್ಟೊಂದು ಹಿಂದುಳಿದಿದೆಯೆಂದು ಗೊತ್ತಾಗುತ್ತದೆ. ಭಾರಿ ಭವ್ಯ ಕಟ್ಟಡ, ವಿಶಾಲ ಆಟದ ಮೈದಾನ, ಬಹುದೊಡ್ಡ ಮೆಸ್, ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್, ಕಂಪ್ಯೂಟರ್, ಕಠಿಣ ಶಿಸ್ತು ಇವೆಲ್ಲ ಹುಡುಗಿಯರಿಗೆ ಸೂಕ್ತ ವಾತಾವರಣ ಎಂದು ಹೇಳಲಾಗದು. ಅದು ಗಂಗೆಯಲ್ಲಿರುವ ಚರಂಡಿಗಿಂತಲೂ ಹೆಚ್ಚು ಕೊಳಕು. ಆ ಹುಡುಗಿಯನ್ನು 4 ಹುಡುಗರು ಗ್ಯಾಂಗ್ ರೇಪ್ ಮಾಡಿದರು. ಹುಡುಗಿಯ ತಂದೆ ದೂರು ಕೊಟ್ಟಿದ್ದರಿಂದ ಪ್ರಕರಣ ದಾಖಲಾಯಿತು. ಹುಡುಗಿಯ ಗರ್ಭಪಾತ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಹುಡುಗರನ್ನು ಬಂಧಿಸಲಾಗಿದೆ. ಆದರೆ ಇದರಿಂದ ಏನು ಸುಧಾರಣೆ ಆಗುತ್ತದೆ? ಇಲ್ಲಿನ ಪ್ರಕರಣ ಬಯಲಿಗೆ ಬಂತು. ಆದರೆ ಪ್ರತಿಯೊಂದು ಬೋರ್ಡಿಂಗ್ ಸ್ಕೂಲಿನಲ್ಲೂ ಇಂಥದು ನಡೆಯುತ್ತದೆ. ಏಕೆಂದರೆ ಅಲ್ಲಿ ಹುಡುಗರು ಅಥವಾ ಹುಡುಗಿಯರೇ ಇರಬಹುದು ಅವರು ಉದ್ದಂಡತನ ತೋರುತ್ತಿರುತ್ತಾರೆ. ಒಬ್ಬರಿಂದ, ಒಬ್ಬರ ಬ್ಲ್ಯಾಕ್ ಮೇಲ್ ನಡೆಯುತ್ತಲೇ ಇರುತ್ತದೆ. ಉದ್ದಂಡತನ ಪ್ರತಿಯೊಂದು ಉಪಾಯವನ್ನೂ ಕಲಿಸುತ್ತದೆ. ಹುಡುಗಿಯರಲ್ಲೂ ಗ್ಯಾಂಗ್ ನಿರ್ಮಾಣ ಆಗುತ್ತವೆ. ಹುಡುಗರಲ್ಲೂ ಕೂಡ. ಡ್ರಗ್ಸ್, ಮದ್ಯ, ಸಿಗರೇಟು, ಸೆಕ್ಸ್, ತುಂಟಾಟ ಇತರರಿಗೆ ಹಿಂಸೆ ಕೊಡುವುದು ಶಾಲಾ ಜೀವನದ ಅಂಗಗಳಾಗಿಬಿಡುತ್ತವೆ. ಬೋರ್ಡಿಂಗ್ ಶಾಲೆಯ ಯಾವೊಬ್ಬ ವಿದ್ಯಾರ್ಥಿಯೂ ಇವುಗಳಿಂದ ಹೊರಬರಲು ಆಗುವುದಿಲ್ಲ.
ಮನೆಯಲ್ಲಿರುವ ಮಕ್ಕಳು ಹೆಚ್ಚು ಸುರಕ್ಷಿತರು. ಮನೆಗೆಲಸದವರು ಹಾಗೂ ಆಯಾಗಳ ಆಸರೆಯಲ್ಲಿ ಬೆಳೆಯುವ ಮಕ್ಕಳು ಕೂಡ ಸುರಕ್ಷಿತರು. ಏಕಾಂಗಿ ತಂದೆಯ ಆಶ್ರಯದಲ್ಲಿ ಬೆಳೆಯುವ ಹುಡುಗಿಯರು ಹಾಸ್ಟೆಲ್‌ನಲ್ಲಿರುವ ಹುಡುಗಿಯರಿಗಿಂತ ಹೆಚ್ಚು ಸುರಕ್ಷಿತರು. ಅವರಿಗೆ ಯಾವಾಗಲೂ ಮಾನಸಿಕ ಸುರಕ್ಷತೆ ದೊರೆಯುತ್ತಿರುತ್ತದೆ. ಮುಂಜಾನೆಯ ಸಮಸ್ಯೆ ಸಂಜೆ ಹೊತ್ತಿಗೆ ಬಗೆಹರಿದಿರುತ್ತದೆ. ಬೋರ್ಡಿಂಗ್ ಶಾಲೆಗಳಲ್ಲಂತೂ ದೂರು ಕೊಡುವವರನ್ನು ನಿಕೃಷ್ಟರೆಂಬಂತೆ ಕಾಣಲಾಗುತ್ತದೆ. ಅಲ್ಲಿನ ಶಾಲೆಗಳು ಪ್ರತಿಯೊಂದು ಬಗೆಯ ದೂರುಗಳನ್ನೂ ನಿವಾರಿಸಲು ಆಗುವುದಿಲ್ಲ. ಅವರ ಬಳಿ ಎಷ್ಟೇ ಹಣವಿದ್ದರೂ ವಾರ್ಡನ್ ಅಥವಾ ಸಹಪಾಠಿಗಳು ಆತ್ಮೀಯತೆ ತೋರಿಸುವುದಿಲ್ಲ.