ಎಲ್ಲರಂತೆ ಕಿಟ್ಟಿ ಪಾಡೂ ಅದೇ ಆಗಿತ್ತು. ಕೋಪಗೊಂಡ ಹೆಂಡತಿಯನ್ನು ಸಮಾಧಾನಪಡಿಸಲಾಗದೆ, ಕೌಟುಂಬಿಕ ಸಲಹೆಗಾರರ ಬಳಿ ಬಂದು ಅಳಲು ತೋಡಿಕೊಂಡ. ಅವರು 2 ಗಂಟೆಕಾಲ ಕಿಟ್ಟಿಗೆ ಬೋಧಿಸಿ ಸಂಸಾರದ ಸಾಮರಸ್ಯ ಉಳಿಸಿಕೊಳ್ಳಲು, ಹೆಂಡತಿ ಬಳಿ ವಾದ ಮಾಡುವ ಬದಲು, ಕಿರುನಗೆ ಸೂಸಿ ಮೌನವಾಗಿರುವಂತೆ ತಾತ್ಪರ್ಯ ತಿಳಿಸಿದರು. 2500/ ರೂ. ಬಿಲ್‌ ವಸೂಲಿ ಮಾಡಿಕೊಂಡರು.

ಅದನ್ನು ನಂಬಿಕೊಂಡು ಬಂದ ಕಿಟ್ಟಿ, ಇತ್ತೀಚೆಗೆ ಹೆಂಡತಿ ರೇಗಿದಾಗೆಲ್ಲ ಕಿರುನಗೆ ಸೂಸುತ್ತಾ ಸುಮ್ಮನೆ ಇರತೊಡಗಿದ. ಇದನ್ನು ಕಂಡು ಅವಳಿಗೆ ಮತ್ತೆ ರೇಗಿಹೋಯಿತು. ``ಏನು.... ಎಲ್ಲದಕ್ಕೂ ಹಲ್ಲು ಕಿಸಿಯುತ್ತೀರಿ....? ತಲೆಗೆ ನಿಂಬೆಹಣ್ಣು ತಿಕ್ಕಲೇನು... ಒಳ್ಳೆ ಐಲು ಸಹವಾಸ ಆಯ್ತು....'' ಈಗ ಕಿಟ್ಟಿ ನಿಜವಾಗಿಯೂ ಐಲಾಗಿದ್ದಾನಂತೆ!

ಪತಿ : ನನಗೀಗ ಕೋಪ ಬಂದಿದೆ.... ಅಷ್ಟು ಹೊತ್ತಿನಿಂದ ನಿನ್ನ ನಂಬರ್‌ಗೆ ಡಯಲ್ ಮಾಡ್ತಿದ್ದೀನಿ, ನಿನಗೆ ಫೋನ್‌ ರಿಸೀವ್ ಮಾಡಕ್ಕೇನು ರೋಗ?

ಪತ್ನಿ : ನೀವು ಹಾಕಿಸಿಕೊಟ್ಟ ರಿಂಗ್‌ ಟೋನ್‌ಗೆ ಡ್ಯಾನ್ಸ್ ಮಾಡುತ್ತಿದ್ದೆ.... ಸರೀನಾ?

ತಾಯಿ : ಗುಂಡ, 2 ದಿನ ಆಫೀಸಿಗೆ ರಜಾ ಹಾಕಿ ಬಾ. ಅರ್ಜೆಂಟ್‌ ಕೆಲಸವಿದೆ.

ಗುಂಡ : ನಿನಗೇನಮ್ಮ ಗೊತ್ತು ಬೆಂಗಳೂರಿನಲ್ಲಿ ನನ್ನ ಕೆಲಸದ  ಕಷ್ಟ...? ಹಾಗೆಲ್ಲ ನೆನೆಸಿಕೊಂಡಾಗ ಊರಿಗೆ ಬರೋಕ್ಕಾಗಲ್ಲ ಬಿಡು, ರಜಾ ಸಿಗೋಲ್ಲ.

ಹೀಗೆ 2 ವಾರಗಳು ಕಳೆದ ನಂತರ.

ತಾಯಿ : ಗುಂಡ, ನಿನಗೆ ಹುಡುಗಿ ತೋರಿಸಲೆಂದು ವಧು ಕಡೆಯವರು ನಾಳೆ ಬರ್ತಿದ್ದಾರೆ. ರಜೆ ಇಲ್ಲ ಅಂತೀಯಲ್ಲಪ್ಪ.... ನಾನೇ ನೋಡಿ ಫೈನಲ್ ಮಾಡ್ಲಾ?

ಗುಂಡ : ಬೇಡಮ್ಮ ಬೇಡ! ನೀನು ಹೇಳೋದು ಹೆಚ್ಚಾ ನಾನು ರಜಾ ಹಾಕೋದು ಹೆಚ್ಚಾ? ಹೇಗೋ ಬರ್ತೀನಿ ಬಿಡು.

ಗುಂಡ ಬಾಸ್‌ಗೆ ಮಸ್ಕಾ ಹೊಡೆದು, ತತ್ಕಾಲ್‌ನಲ್ಲಿ ರಿಸರ್ವ್ ಮಾಡಿಸಿ ರೈಲು ಹತ್ತಿ ಊರಿಗೆ ಬಂದೇಬಿಟ್ಟ. ರಾತ್ರಿ ಊಟ ಬಡಿಸಿದ ತಾಯಿ, ಬೆಳಗ್ಗೆ ಬೇಗ ಏಳುವಂತೆ ತಾಕೀತು ಮಾಡಿದರು.

ಗುಂಡ ನಿದ್ದೆ ಮಾಡಿದ್ದರೆ ತಾನೇ? ಬೇಗ ಎದ್ದು ಸ್ನಾನ ಮಾಡಿಕೊಂಡು ಠಾಕುಠೀಕಾಗಿ ಸಿಂಗಾರ ಮಾಡಿಕೊಂಡ. `ಅವರು ಇನ್ನೊಂದ್ಸಲ ಬರ್ತಾರಂತೆ, ಹೇಗೂ ರೆಡಿ ಆಗಿದ್ದಿ. ನಡಿ, ಡಾಕ್ಟರ್‌ ಹತ್ತಿರ ಹೋಗಿ, ನನ್ನ ಮಂಡಿ ನೋವು ತೋರಿಸಿಕೊಂಡು ಬರೋಣ, ಎಂದು ಅಮ್ಮ ಸಿದ್ಧರಾಗ ತೊಡಗಿದರು.

ಗುಂಡ ತಲೆಗೂದಲು ಕಿತ್ತುಕೊಳ್ಳುವುದೊಂದು ಬಾಕಿ!

ಕುಡುಕನೊಬ್ಬ ರೇಡಿಯೋಗೆ ಕಾಲ್ ಮಾಡಿದ.

ಕುಡುಕ : ನಮಸ್ಕಾರ ಸಾ... ನಂಗೆ ಎಂ.ಜಿ ರೋಡ್‌ನಲ್ಲಿ ಒಂದು ಪರ್ಸ್‌ ಸಿಕ್ಕಿದೆ. ಅದರಲ್ಲಿ 15 ಸಾವಿರ ಕ್ಯಾಶ್‌, ಒಂದು ಕ್ರೆಡಿಟ್‌ ಕಾರ್ಡ್‌, ಜೊತೆಗೆ ಯಾರೋ ಪಲ್ಲವಿ ಎಂಬ ಹೆಸರಲ್ಲಿ  ಒಂದು ಐಡಿ ಕಾರ್ಡ್‌ ಸಿಕ್ಕಿದೆ.

ರೇಡಿಯೋ ಜಾಕಿ : ಸರ್‌... ನಿಮ್ಮಂಥ ಪ್ರಾಮಾಣಿಕರು ತುಂಬಾ ಕಮ್ಮಿ! ನೀವು ಅವರಿಗೆ ವಾಪಸ್‌ ತಲುಪಿಸಲಿಕ್ಕೆ ನಮಗೆ ಕಾಲ್ ಮಾಡಿದ್ರಿ ಅಲ್ವೇ?

ಕುಡುಕ : ಇಲ್ಲ ಸಾ..... ! ಪಾಪ.... ಪಲ್ಲವಿಗೋಸ್ಕರ ತುಂಬಾ ದುಃಖದ ಒಂದು ಹಾಡು ಹಾಕ್ಬಿಡಿ ಸಾ.....

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ