ಸಿಂಗಾಪೂರ್ ಎಂದರೆ ಭಾರತೀಯರಿಗೆ ಅಚ್ಚುಮೆಚ್ಚಿನ ಪ್ರವಾಸೀ ತಾಣ. ಮುಖ್ಯವಾಗಿ ಅಲ್ಲಿನ ಲಿಟಲ್ ಇಂಡಿಯಾ ನಮ್ಮ ಭಾರತೀಯ ಆಹಾರದ ಕೊರತೆ ನೀಗಿಸುತ್ತದೆ. ಇದರ ಕುರಿತು ಹೆಚ್ಚಿನ ವಿವರ ತಿಳಿಯೋಣವೇ?

ಸಿಂಗಾಪೂರ್‌ ಎಂದರೆ ಎಲ್ಲರಿಗೂ ಪ್ರಿಯ. ಅದರಲ್ಲೂ ನಮ್ಮ ಭಾರತೀಯರಿಗೆ ಮತ್ತೂ ಇಷ್ಟ, ಅಲ್ಲಿಗೆ ಹೋದರೆ ವಿದೇಶ ಪ್ರವಾಸದ ಅನುಭವ ಮುದವನ್ನು ಕೊಡುತ್ತದೆ. ಹತ್ತಿರದ ದೇಶ, ಖರ್ಚು ಕಡಿಮೆ, ನೋಡಲು ಸಾಕಷ್ಟು ಆಕರ್ಷಣೀಯ ತಾಣಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ನಮ್ಮ ದೇಶದವರನ್ನು ಮಿಸ್‌ ಮಾಡದಂತೆ ಅಲ್ಲಿನ ಲಿಟ್ಲ್ ಇಂಡಿಯಾ ನಿಮಗೆ ಭಾರತೀಯ ಆಹಾರದ ಕೊರತೆ ನೀಗಿಸುತ್ತದೆ. ದೇವಸ್ಥಾನಗಳ ದರ್ಶನ ನೀಡುತ್ತದೆ. ಲಿಟ್ಲ್ ಇಂಡಿಯಾ ನಿಜಕ್ಕೂ ನಮ್ಮ ಭಾರತೀಯರಿಗೆ ಸಿಂಗಾಪೂರ್‌ನ ಕಾಮಧೇನು ಎಂದರೆ ತಪ್ಪಾಗಲಾರದು. ಲಿಟ್ಲ್ ಇಂಡಿಯಾದಲ್ಲಿ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಎಲ್ಲಾ ಭಾರತೀಯ ತಿನಿಸುಗಳೂ ಅದರ ಜೊತೆ ನಮ್ಮ ಯುವ ಜನರ  ಪ್ರೀತಿಯ ಬರ್ಗರ್‌, ಪಿಜ್ಜಾ ಮತ್ತು ಪಾಸ್ತಾಗಳಿಗೂ ಕೊರತೆ ಇಲ್ಲ. ಆದರೆ ನಾವು ನೋಡಲು ಹೋಗುವ ಪ್ರವಾಸಿ ತಾಣಗಳಲ್ಲಿ ಮಾತ್ರಾ ಅದರಲ್ಲೂ ಸಸ್ಯಾಹಾರಿಗಳಿಗಂತೂ ಊಟ ಒಂದು ಸಮಸ್ಯೆಯೇ ಮತ್ತು ದುಬಾರಿಯೂ ಹೌದು.

ಆದರೆ ಲಿಟ್ಲ್ ಇಂಡಿಯಾದಲ್ಲಿ ಮುಂಜಾನೆ ಬೆಳಗಿನ ಉಪಾಹಾರವನ್ನು ತಿಂದ ನಂತರ ಮಧ್ಯಾಹ್ನದ ಊಟಕ್ಕೂ ಡಬ್ಬಿ ದೊರಕುತ್ತದೆ. ಅಚ್ಚುಕಟ್ಟಾಗಿ ಅವರೇ ಪ್ಯಾಕ್‌ ಮಾಡಿ ಕೊಡುತ್ತಾರೆ. ಭಾರತೀಯ ಪ್ರವಾಸಿಗಳೆಲ್ಲರೂ ಸ್ವಲ್ಪ ಮಟ್ಟಿನ ಕುರುಕಲು ತಿಂಡಿಗಳನ್ನು ತೆಗೆದುಕೊಂಡೇ ಹೋಗಿರುತ್ತಾರೆ. ಆದರೆ ಆ ಎಣ್ಣೆಯ ಪದಾರ್ಥಗಳನ್ನು ಎಷ್ಟಾದರೂ ತಿನ್ನಲು ಹೇಗೆ ಸಾಧ್ಯ? ಆದ್ದರಿಂದ ಸ್ವಲ್ಪ ಪ್ಯಾಕ್‌ ಮಾಡಿಸಿಕೊಂಡಾಗ ಖಂಡಿತ ಹೊಟ್ಟೆ ತಣ್ಣಗಾಗುತ್ತದೆ. ನಾವು ಇದ್ದದ್ದು ಲಿಟ್ಲ್ ಇಂಡಿಯಾದ ಹೋಟೆಲ್‌ ಒಂದರಲ್ಲಿ, ಅಲ್ಲಿ ಹತ್ತಿರದಲ್ಲೇ ಅನೇಕ ಹೋಟೆಲ್‌ಗಳು, ನಮ್ಮ ಭಾರತವನ್ನೇ ನೋಡಿದಂತಾಗುತ್ತಿತ್ತು. ಆನಂದ ಭವನ್‌, ಕೋಮಲ್ ವಿಲಾಸ್‌, ಶರವಣ, ಗಾಯತ್ರಿ ಭವನ್‌, ಎಂ.ಟಿ.ಆರ್‌. ಈ ರೀತಿ ಸಾಕಷ್ಟು ಭಾರತೀಯ  ಹೋಟೆಲ್ ಗಳು ಇದ್ದವು. ಬೆಲೆಯೂ ಪರವಾಗಿಲ್ಲ, ಜೊತೆಗೆ ನಮಗೆ ಬೇಕಾದ ತಿಂಡಿ ತಿನಿಸುಗಳೂ ದೊರಕುತ್ತಿದ್ದವು. ನಾವು ಸಿಂಗಾಪೂರ್‌ನಲ್ಲಿ ಇದ್ದಷ್ಟು ದಿನ ಬಹಳಷ್ಟು ಊಟ ಉಪಾಹಾರಗಳನ್ನು ಅಲ್ಲಿನ ಆನಂದ ಭವನದಲ್ಲೇ ಮಾಡಿದೆವು. ತಿನ್ನಲು ರುಚಿಯಾಗಿರುತ್ತಿತ್ತು. ಶುಚಿತ್ವ ತಕ್ಕಮಟ್ಟಿಗೆ ಪಾಲನೆಯಾಗಿತ್ತು.

ಇವೆಲ್ಲಕ್ಕೂ ಮೀರಿದ ಒಂದು ವಿಷಯವೆಂದರೆ ಅಲ್ಲಿನ ನಿರ್ವಹಣೆ ಮಾಡುವರೆಲ್ಲರೂ ಮಹಿಳೆಯರೇ! ಕ್ಯಾಷ್‌ನಿಂದ ಹಿಡಿದು ತಿಂಡಿ ನೀಡುವುದು, ತಯಾರಿಸುವುದು ಮತ್ತು ಕ್ಲೀನ್‌ ಮಾಡುವುದು ಎಲ್ಲ ಹೆಣ್ಣುಮಕ್ಕಳೇ. ಒಂದು ಕುಟುಂಬದವರೇ ನಡೆಸುತ್ತಿದ್ದಾರೆ. ಏನೇ ಇರಲಿ ಎಲ್ಲವನ್ನೂ ಮಹಿಳೆಯರೇ ನಡೆಸುತ್ತಿದ್ದಾರೆ ಎಂದಾಗ ನಿಜಕ್ಕೂ ಒಂದು ರೀತಿಯ ಹೆಮ್ಮೆ . ಭಾರತೀಯರೇ ಹೆಚ್ಚಾಗಿರುವ ಈ ಲಿಟ್ಲ್ ಇಂಡಿಯಾ ಹೇಗೆ ಅಸ್ತಿತ್ವಕ್ಕೆ ಬಂತೆಂದು ಇತಿಹಾಸದ ಒಳಹೊಕ್ಕಾಗ  ಮೊದಲಿಗೆ ಸಿಂಗಾಪೂರ್‌ ಕಾಲೋನಿಯ ಒಂದು ಭಾಗವಾದ ಚುಲಿಯಾ ಕಾಂಪಾಂಗ್‌ ಎನ್ನುವ ಸ್ಥಳದಲ್ಲಿ ವಲಸೆ ಬಂದ ತಮಿಳರು ವಾಸಿಸುತ್ತಿದ್ದರು. ಕ್ರಮೇಣ ಅಲ್ಲಿನ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಭೂಮಿಯ ಬೆಲೆಯೂ ಗಗನಕ್ಕೇರಿತು. ಆಗ ಒಂದಷ್ಟು ತಮಿಳರು ಈಗ ಲಿಟ್ಲ್ ಇಂಡಿಯಾ ಎಂದು ಕರೆಯಲ್ಪಡುವ ಸ್ಥಳಕ್ಕೆ ತಮ್ಮ ವಾಸಸ್ಥಳವನ್ನು ವರ್ಗಾಯಿಸಿದರು. ಈಗ ಆ ಚುಲಿಯಾ ಕಾಂಪಾಂಗ್‌ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ