ಈ ಬಾರಿ ಮಗಳ ಮನೆಗೆ ಮುಂಬೈಗೆ ಹೋದಾಗ ಹತ್ತಿರದಲ್ಲಿರುವ ಮಹಾಬಲೇಶ್ವರಕ್ಕೆ ಹೋಗೋಣವೆಂದುಕೊಂಡೆವು. ಈಗ  ಎಕ್ಸ್ ಪ್ರೆಸ್‌ ಹೈವೇ ಕೂಡ ಆಗಿದೆ, ರಸ್ತೆ ಬಹಳ ಚೆನ್ನಾಗಿದೆ. ಪ್ರಯಾಣದ ಆಯಾಸ ಅಷ್ಟೇನೂ ಆಗದು. ದೂರ ಸ್ವಲ್ಪ ಜಾಸ್ತಿಯಾದರೂ, ದುಬಾರಿ ಟೋಲ್ ಕೊಡಬೇಕಾಗಿ ಬಂದರೂ ಪರವಾಗಿಲ್ಲ. ಆದರೆ ಪ್ರಯಾಣ ಅಷ್ಟೇ ಸುಖಕರವಾಗಿರುತ್ತದೆ ಎಂದಾಗ ಕಾರಿನಲ್ಲೇ ಮಹಾಬಲೇಶ್ವರಕ್ಕೆ ಹೊರಟೆವು.

ಪಂಚಗಣಿ ಐದು ಗಂಟೆಗಳ ಪ್ರಯಾಣ, ಬೆಳಗ್ಗೆ ಏಳು ಗಂಟೆಗೆ ಹೊರಟವರು ಹನ್ನೆರಡಕ್ಕಾಗಲೇ ಪಂಚಗಣಿ ತಲುಪಿದೆವು. ಅಲ್ಲಿಂದ ಮಹಾಬಲೇಶ್ವರ 40 ಕಿ.ಮೀ. ದೂರವಿದೆ. ಅಲ್ಲದೆ, ಪಂಚಗಣಿಯಲ್ಲೂ ನೋಡುವುದು ಬೇಕಾದಷ್ಟಿದೆ. ಅಲ್ಲಿಯ ಟೇಬಲ್ ಲ್ಯಾಂಡ್‌ ದಕ್ಷಿಣ ಆಫ್ರಿಕಾದ ಟೇಬಲ್ ಟಾಪ್‌ ಪರ್ವತವನ್ನು ನೆನಪಿಸುತ್ತದೆ. ಸಮತಟ್ಟಾದ ಸ್ಥಳ, ಮಾನವ ನಿರ್ಮಿತವೇ, ಅಲ್ಲಿಂದ ಸುತ್ತಲಿನ ಬೆಟ್ಟಗಳ ತಪ್ಪಲು ಅರ್ಥಾತ್‌ ಮೇಲ್ಭಾಗ ಇದರಂತೆ ಸಮತಟ್ಟಾಗಿಯೇ ಒಂದು ದುಂಡಾದ ಮೇಜಿನ ಮೇಲ್ಭಾಗದಂತೆ ಕಾಣುತ್ತಿತ್ತು. ಜೊತೆಗೆ ಆ ಎತ್ತರದ ತಾಣದಿಂದ ಸುತ್ತಲಿನ ದೃಶ್ಯ ನೋಡಲು ಆಹ್ಲಾದಕರವಾಗಿತ್ತು. ಹಸಿರು ಬೆಟ್ಟ ಮತ್ತು ಯಾವುದೋ ಶಿಲ್ಪ ಕೊರೆದಂತಿರುವ ಕಲ್ಲಿನ ಬೆಟ್ಟದ ಸಾಲು ಅಮೆರಿಕಾದ ಗ್ರ್ಯಾಂಡ್‌ ಕೆನ್ಯಾನ್‌ನ್ನು ನೆನಪಿಗೆ ತಂದಿತು. ಸುತ್ತಲಿನ ದೃಶ್ಯಾವಳಿಗಳನ್ನು ನೋಡಲು ಕುದುರೆಗಳಿದ್ದವು. ಅದರ ಮೇಲೆ ಕುಳಿತು ಒಂದು ಸುತ್ತು ಹಾಕಿದಾಗ ಕುದುರೆ ಸವಾರಿಯೊಡನೆ ಸುಂದರ ದೃಶ್ಯಗಳ ದರ್ಶನ ಆಯಿತು. ಅಲ್ಲಲ್ಲಿ ಬೇಯಿಸಿದ ಜೋಳಗಳನ್ನು ಮಾರುತ್ತಿದ್ದರು. ಅಲ್ಲಿನ ಜೋಳ ಬಹು ಜನಪ್ರಿಯ ಹಾಗೂ ರುಚಿಯೂ ಹೆಚ್ಚು. ಅಲ್ಲಿ ಸುತ್ತಲೂ ನೋಡಿಕೊಂಡು ಛೋಟಾ ಕಾಶ್ಮೀರ್‌ ಎನ್ನಿಸಿಕೊಂಡ ಮುನ್ನಾ ಲೇಕ್‌ ಬಳಿ ಹೋದೆವು. ಸುಂದರವಾಗಿದ್ದ ಸರೋವರದಲ್ಲಿ ಎಲ್ಲರೂ ಬೋಟಿಂಗ್‌ ಮಾಡುತ್ತಿದ್ದರು. ಕುದುರೆ ಸವಾರಿ ಮಾಡಿ ಬಿಸಿಬಿಸಿ ಜೋಳವನ್ನು ತಿಂದು ಮುನ್ನಾ ಸರೋವರದಲ್ಲಿ ಜಲವಿಹಾರ ನಡೆಸಬಹುದು. ಪಂಚಗಣಿಗೆ ಬಂದೊಡನೆಯೇ ಸಾಲಾಗಿ ಹೊಳೆಯುವ ಕೆಂಪನೆಯ ಸ್ಟ್ರಾಬೆರಿಯ ಅಂಗಡಿಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಮುಂಬೈನ ಬಿಸಿಲಿಗೆ ಆ ಕೆಂಪನೆಯ ಹಣ್ಣುಗಳನ್ನು ನೋಡಿದಾಗ ಬಾಯಲ್ಲಿ ನೀರೂರುತ್ತದೆ. ಬೆಲೆಯೂ ಬಹಳ ಕಡಿಮೆ. ಅಲ್ಲಿ ನಾವಿದ್ದ ಎರಡು ದಿನ ಊಟ ತಿಂಡಿ ತಿಂದದ್ದಕ್ಕಿಂತ ಸ್ಟ್ರಾಬೆರಿ ತಿಂದದ್ದೇ ಹೆಚ್ಚು.

ನಿಜಕ್ಕೂ ಹೊಳೆಯುವ ಕೆಂಪನೆಯ ಹಣ್ಣುಗಳು ಬಹಳ ರುಚಿಯಾಗಿದ್ದವು. ಅಂತಹ ಸ್ಟ್ರಾಬೆರಿ ಬೇರೆ ಎಲ್ಲಿಯೂ ತಿಂದಿರಲಿಲ್ಲ. ಒಮ್ಮೆ ಸ್ಯಾನ್‌ಫ್ರಾನ್ಸಿಸ್ಕೋನಲ್ಲಿ ಇದಕ್ಕಿಂತಲೂ ದಪ್ಪಗಿನ ಹಣ್ಣುಗಳನ್ನು ತಿಂದಿದ್ದೆ. ಅದು ಬಿಟ್ಟರೆ ಬೆಂಗಳೂರಿಗೆ ಬರುವ ಹುಳಿ ಸ್ಟ್ರಾಬೆರಿಗೆ ಹೋಲಿಸಿದರೆ ಇವು ಬಹಳ ರುಚಿಯಾಗಿದ್ದವು. ಸ್ಟ್ರಾಬೆರಿಯ ಹುಟ್ಟೂರಿನಲ್ಲಿ ರುಚಿಯಾಗಿರದೆ ಮತ್ತೆಲ್ಲಿ ದೊರಕೀತು ಅಲ್ಲವೇ? ಇಡೀ ಭಾರತದಲ್ಲಿ ಇಲ್ಲಿ ಮಾತ್ರವೇ ಹೆಚ್ಚು ಸ್ಟ್ರಾಬೆರಿ ಬೆಳೆಯುವುದು. ಅಲ್ಲಿಯ ತಾಪಮಾನ ಮತ್ತು ಕೆಂಪು ಮಣ್ಣು ಸ್ಟ್ರಾಬೆರಿಯ ಬೆಳೆಯುವಿಕೆಗೆ ಅನುಕೂಲವಾಗಿರುತ್ತದಂತೆ. ನಮ್ಮ ಹೋಟೆಲ್ ಹಳೆಯ ಮಹಾಬಲೇಶ್ವರದಲ್ಲಿ ಇದ್ದುದರಿಂದ ನಾವು ಸ್ವಲ್ಪ ದೂರ ಹೋಗಬೇಕಾಯಿತು. ಅಕ್ಕಪಕ್ಕ ಹಸಿರು ಮರಗಳು ಯಾವುದೋ ಕಾಡಿನೊಳಗೆ ಹೋದಂತಿತ್ತು. ಎತ್ತ ನೋಡಿದರೂ ಬರೀ ಸಿಮೆಂಟ್‌ ಕಟ್ಟಡಗಳ ದರ್ಶನವೀಯುವ ಮುಂಬೈ ಎಲ್ಲಿ? ಈ ಹಸಿರು ಕಾಡೆಲ್ಲಿ? ಅದಕ್ಕೆ ಏನೋ ಹತ್ತಿರದಲ್ಲೇ ಇರುವ ಈ ಸುಂದರ ನಿಸರ್ಗಧಾಮ ಮುಂಬಯಿಗರನ್ನು ಬಹಳಷ್ಟು ಆಕರ್ಷಿಸುತ್ತಿರುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ