ಪ್ರಜಾಪ್ರಭುತ್ವಕ್ಕೆ ಜಯ : ಅಮೆರಿಕಾದಲ್ಲಿ ಜುಲೈ 4 ರಂದು ಸ್ವಾತಂತ್ರ್ಯಸಮಾರಂಭದ ಉತ್ಸವ ಕೇವಲ ಪ್ರಧಾನಮಂತ್ರಿ, ರಾಷ್ಟ್ರಪತಿಗಳಿಗೆ ಮಾತ್ರ ಸೀಮಿತವಲ್ಲ. ಈ ದಿನವನ್ನು ಅಲ್ಲಿನ ಪ್ರತಿಯೊಂದು ಊರಿನಲ್ಲೂ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಸ್ಯಾಂಡ್ರೋಲಿಯಂಥ ಸಣ್ಣ ಹೋಬಳಿಯಲ್ಲೂ ಸಹ ಪ್ರಧಾನ ಬೀದಿಗಳಲ್ಲಿ ರೋಚಕ ಪೆರೇಡ್ ನಡೆಯಿತು. ಇದರಲ್ಲಿ ಸರ್ಕಾರಿ ಅಬ್ಬರವೇನೂ ಇಲ್ಲದೆ, ಸಾಮಾನ್ಯ ಪ್ರಜೆಗಳ ಒಡನಾಟವೇ ಹೆಚ್ಚಾಗಿತ್ತು. ಅದೇ ನಮ್ಮ ದೇಶದಲ್ಲಾದರೋ..... ಸರ್ಕಾರದ ಅಥವಾ ಧರ್ಮದ ಗುತ್ತಿಗೆದಾರರು ಬಂದು ಇಂಥ ಕಾರ್ಯಕ್ರಮ ನಡೆಸಿಕೊಡಲಿ ಎಂಬ ನಿರೀಕ್ಷೆ ಇರುತ್ತದೆ.
ಜೀವನದ ಅಸಲಿ ಮಜಾ : ಬೀದಿ ಬದಿಯ ಅಂಗಡಿಗಳಲ್ಲಿ ಶಾಪಿಂಗ್ ಮಾಡುವುದರಲ್ಲಿ ಸಿಗುವ ಸುಖ, ಅದು ಖಂಡಿತಾ ಮಾಲ್‌ಗಳಲ್ಲಿ ಸಿಗುವುದಿಲ್ಲ. ಹೀಗಾಗಿ ನ್ಯೂ ಮೆಕ್ಸಿಕೋದ ಸೇಂಟಾ ಫಿಲೋಮಿನಲ್ಲಿ ಕಮ್ಯೂನಿಟಿ ಫೇರ್ ನಡೆದಾಗೆಲ್ಲ, 100-150 ಅಂಗಡಿಯವರು ತಮ್ಮ ಸಾಮಗ್ರಿ ಜೊತೆ ಅಲ್ಲಿಗೆ ಧಾವಿಸುತ್ತಾರೆ. ಮೆಕ್ಸಿಕನ್ ಹ್ಯಾಟ್ ಧರಿಸಿದ ಗ್ರಾಹಕರು ಅಲ್ಲಿನ ವಾತಾವರಣವನ್ನು ಮತ್ತಷ್ಟು ರಂಗುಗೊಳಿಸುತ್ತಾರೆ.
ಕೇವಲ ಲೂಟಿಯ ನೆಪದಲ್ಲಿ : ಪೋರ್ನ್ ಸೆಕ್ಸ್ ಈಗ ಕೇವಲ ಮೊಬೈಲ್‌ಗೆ ಸೀಮಿತವಲ್ಲ, ಅದು ಹಾಗೆಯೇ ಜೀವಂತ ಎನ್ನಬಹುದು. ಲೈವ್ ಕ್ಲಬ್ಬುಗಳು ಇಡೀ ಯೂರೋಪ್, ಅಮೆರಿಕಾಗಳಲ್ಲಿ ಈಗಲೂ ಜನಪ್ರಿಯ. ಇದಂತೂ ಪಾಪದ ಜನರನ್ನು ಲೂಟಿ ಮಾಡವುದನ್ನೇ ಮುಖ್ಯ ದಂಧೆಯಾಗಿಸಿಕೊಂಡಿದೆ. ನಮ್ಮ ಸರ್ಕಾರಗಳಿಗೆ ಜೈ ಎನ್ನಬೇಕು, ಇಂಥ ಕ್ಲಬ್ಬುಗಳು ನಮ್ಮಲ್ಲಿ ಬಹಳ ಕಡಿಮೆ. ಹೀಗಾಗಿ ತಮ್ಮ ಗಂಡಂದಿರು ತಡರಾತ್ರಿವರೆಗೆ ಎಲ್ಲಿ ಹೋದರೋ ಎಂದು ಹೆಂಡತಿಯರು ಚಿಂತಿಸಬೇಕಿಲ್ಲ.
ಮನಮೋಹಕ ಭಂಗಿಗಳು : ಹಾಗೆ ನೋಡಿದರೆ ಜಾರ್ಜ್ ಬಿಲ್ಯಾನ್ ರಷ್ಯಾ ಮೂಲದವರು, ಆದರೀಗ ಅಪ್ಪಟ ಅಮೆರಿಕನ್ ಆಗಿದ್ದಾರೆ. ಅವರ ನ್ಯೂಯಾರ್ಕ್ ಬಿಲ್ಯಾನ್ ಅಮೆರಿಕನ್ ರಾಷ್ಟ್ರೀಯ ಧ್ವಜದ ಸ್ಟ್ರೀಪ್ಸ್ ಸ್ಟಾರ್ಸ್‌ನ ಥೀಮ್ ಹೊಂದಿದೆ. ನಮ್ಮ ತ್ರಿವರ್ಣ ಧ್ವಜದ ಬಣ್ಣಗಳಂತೆಯೇ ಸ್ಟ್ರೀಪ್ಸ್ ಸ್ಟಾರ್ಸ್ ಮಿಂಚುತ್ತಿವೆ.
ಆರೋಗ್ಯಕರ ಸ್ಟೈಲ್ : ಬೇಸಿಗೆಯಲ್ಲೂ ಬಿಸಿಲಿಗೆ ಮೈಯೊಡ್ಡಿ ಹಾಯಾಗಿರುವುದು ಬಿಳಿಯರ ಯುವತಿಯರಿಗೆ ಆರೋಗ್ಯಕರವೇ ಹೌದು. ಇದರಿಂದ ಅವರುಗಳ ಸ್ಕಿನ್ ಟ್ಯಾನ್ ಆಗುತ್ತದೆ, ವಿಟಮಿನ್ `ಡಿ' ಸಿಗುತ್ತದೆ. ಆದರೆ ಇದಕ್ಕಾಗಿ ಸೂಕ್ತ ಸ್ಲಿಮ್ ವೇರ್ ಅತ್ಯಗತ್ಯ. ಹೀಗಾಗಿಯೇ ಟ್ಯಾಂಜೀನ್ ಕಂಪನಿ ಒನ್ ಪೀಸ್ ತಯಾರಿಸುವಲ್ಲಿ ಹೆಸರು ಗಳಿಸಿದೆ. ಚಳಿಗಾಲದಲ್ಲೂ ಉಪಯುಕ್ತವೆನಿಸುವ ಈ ಡ್ರೆಸ್, ಬೇಸಿಗೆಯಲ್ಲಿ ಅಗ್ಗವಾಗಿ ಸಿಗುತ್ತದೆ.
ಸಂಪ್ರದಾಯ ಮುಂದುವರಿದಿದೆ : ಯೂರೋಪಿನ ಸೇಂಟ್ ಚಾರ್ಲ್ಸ್ ನಗರದಲ್ಲಿ ಓಲ್ಡ್ ಸಿಟಿ ಚಾರ್ಮ್ ಇನ್ನೂ ಇದೆ, ಜೊತೆಗೆ ಹಳೆ ಸಂಪ್ರದಾಯದಿಂದ ಜನರೂ ಖುಷಿಯಾಗಿದ್ದಾರೆ. ಇಂದಿನ ಜೆಟ್ ಯುಗದಲ್ಲೂ ಕುದುರೆ ಟಾಂಗಾ ಬಲು ಜನಪ್ರಿಯ. ಕ್ರಿಸ್‌ಮಸ್ ಸಂದರ್ಭದಲ್ಲಂತೂ ಮಕ್ಕಳು ಇದರಲ್ಲಿ ಕುಳಿತು ನಗರವಿಡೀ ಸುತ್ತಾಡಿ ಮೋಜು ಮಾಡುತ್ತಾರೆ.
ಪತ್ರಿಕೋದ್ಯಮ ಇನ್ನೂ ಜೀವಂತ : ನಾವು ಅಂದುಕೊಳ್ಳುವುದೆಂದರೆ ಪಾಕಿಸ್ತಾನದಲ್ಲಿ ಪತ್ರಿಕೋದ್ಯಮಕ್ಕೆ ಏನು ಕೆಲಸ ಅಂತ. ಆದರೆ ವರ್ತಮಾನ ಸ್ಥಿತಿ ನೋಡಿದರೆ ಅಲ್ಲಿ ನಮಗಿಂತಲೂ ಹೆಚ್ಚಿನ ಪ್ರಗತಿ ಕಾಣುತ್ತಿದೆ. ಪಂಜಾಬ್ ಯೂನಿವರ್ಸಿಟಿ, ಲಾಹೋರ್‌ನ ಅಸಿಸ್ಟೆಂಟ್ ಪ್ರೊಫೆಸರ್ ಆಯೇಶಾ ಅಶ್‌ಫಾಕ್‌ರಿಗೆ ಅಮೆರಿಕಾದ ಏರಿರೋನಾ ರಾಜ್ಯದ ಸ್ಟೇಟ್ ಯೂನಿವರ್ಸಿಟಿ ಅತಿ ಸಣ್ಣ ವಯಸ್ಸಿನಲ್ಲೇ ಡಾಕ್ಟರೇಟ್ ಪಡೆದ ಸಾಧನೆಗಾಗಿ ಶ್ಲಾಘಿಸಿದೆ. ಆಯೇಶಾ ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್‌ರ ಗೆಲುವು ಹಾಗೂ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್‌ರ ಗೆಲುವಿನಲ್ಲಿ ಮೀಡಿಯಾದ ಪಾತ್ರವೇನು ಎಂದು ಸಂಶೋಧನೆ ನಡೆಸಿದ್ದರು. ಭಾರತದ ನರೇಂದ್ರ ಮೋದಿಯವರನ್ನೂ ಸೇರಿಸಿಕೊಂಡಿದ್ದರೆ, ಅಲ್ಲಿಂದಲೇ ಬರುತ್ತಿದ್ದ ತೀರ್ಪು ಎಂದರೆ, ನೀತಿ ಮುಖ್ಯವಲ್ಲ, ಮೀಡಿಯಾ ಮ್ಯಾನಿಪುಲೇಶನ್ ಆಗಿದೆ ಅಂತ.