ವಿಶ್ವದಲ್ಲಿನ ಪ್ರತಿಯೊಂದು ಸಮಾಜದಲ್ಲಿಯೂ ಅದು ಮುಂದುವರಿದ ವರ್ಗವಾಗಲಿ ಅಥವಾ ಹಿಂದುಳಿದ ವರ್ಗವಾಗಲಿ, ಮೂಢನಂಬಿಕೆಯ ಛಾಯೆ ಹರಡಿಕೊಂಡಿದೆ. ಮೂಢನಂಬಿಕೆಯು ವಿಭಿನ್ನ ಪ್ರಕಾರದ್ದಾಗಿರುತ್ತದೆ. ಕೆಲವು, ಜಾತಿಗೆ ಸಂಬಂಧಿಸಿದ್ದರೆ ಇನ್ನು ಕೆಲವು ಧರ್ಮ, ಸಮಾಜಗಳಿಗೆ ಸಂಬಂಧಪಟ್ಟಿರುತ್ತವೆ. ಮತ್ತೆ ಕೆಲವು ವಿಶ್ವವ್ಯಾಪಿಯಾಗಿದ್ದು ಅದೆಷ್ಟು ಆಳವಾಗಿ ಬೇರೂರಿರುತ್ತವೆಂದರೆ, ಅವುಗಳನ್ನು ಕಿತ್ತೊಗೆಯುವುದು ಕಷ್ಟ ಸಾಧ್ಯ. ಧರ್ಮದ ಹೆಸರಿನಲ್ಲಿ ಸ್ತ್ರೀಯರಿಗೆ ಬಗೆಬಗೆಯ ಆಚಾರ ಪದ್ಧತಿಗಳನ್ನು ರೂಪಿಸಲಾಗಿದ್ದು, ಅವರನ್ನು ಪುರುಷರಿಂದ ಪ್ರತ್ಯೇಕವಾಗಿ ಮತ್ತು ಸಾಮಾಜಿಕ ಹಕ್ಕುಗಳಿಂದ ದೂರವಾಗಿ ಇರಿಸಲಾಗಿದೆ.

ಬಹುತೇಕ ಧರ್ಮಗಳಲ್ಲಿ ಋತುಚಕ್ರದ ದಿನಗಳಲ್ಲಿ ಮಹಿಳೆಯರನ್ನು ಮೈಲಿಗೆಯೆಂದು ಭಾವಿಸಲಾಗುತ್ತದೆ. ಅಡುಗೆಮನೆ, ದೇವರ ಕೋಣೆಗಳಿಗೆ ಪ್ರವೇಶವನ್ನು ನಿಷಿದ್ಧಗೊಳಿಸುವುದಲ್ಲದೆ, ಅವರಿಗೆ ಮನೆಯಲ್ಲಿನ ಯಾವುದೇ ವಸ್ತುವನ್ನು ಮುಟ್ಟಲು ಆಸ್ಪದವಿರುವುದಿಲ್ಲ. ತಿನ್ನುವುದು, ತೊಡುವುದು, ಸ್ನಾನ, ನಿದ್ರೆಯ ವಿಷಯಗಳಲ್ಲಿಯೂ ಅವರಿಗೆ ಶತಮಾನಗಳಿಂದಲೂ ಕಟ್ಟುಕಟ್ಟಳೆ ಹೇರಲಾಗಿದೆ. ಇಂದೂ ಸಹ ಇದರಲ್ಲಿ ಹೆಚ್ಚಿನ ಪರಿವರ್ತನೆ ಆಗಿರುವುದಿಲ್ಲ.

ಕಾಲ ಕಳೆದಂತೆ ಖಂಡಿತಾ ವಿಜ್ಞಾನ ಯುಗದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ನೂರಾರು ವರ್ಷಗಳಿಂದ ಆಗದಿದ್ದುದು ಈಗ ಕಳೆದ 20-30 ವರ್ಷಗಳಲ್ಲಿ ನಡೆಯುತ್ತಿದೆ. ಮಹಿಳೆಯರು ತಮ್ಮ ಹಕ್ಕು ಮತ್ತು ಆತ್ಮಗೌರವಗಳ ಬಗ್ಗೆ ಜಾಗೃತರಾಗುತ್ತಿದ್ದಾರೆ. ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಪದ್ಧತಿಗಳನ್ನು ಮುರಿದು ಮುಂದೆ ನಡೆಯುತ್ತಿದ್ದಾರೆ. ಆದರೆ 21ನೇ ಶತಮಾನದಲ್ಲಿಯೂ ಅವರು ಹಿಂದಿನ ಕೆಲವಾರು ಆಹಾರ ಪದ್ಧತಿ, ಆಡಂಬರಗಳನ್ನು ಮುಂದುವರಿಸಿಕೊಳ್ಳುತ್ತಾ ನಡೆದಿದ್ದಾರೆ.

ಇದನ್ನೆಲ್ಲ ಅವರು ತಾವಾಗಿ ಇಷ್ಟಪಟ್ಟು ಮಾಡುತ್ತಿರುವವರೋ ಅಥವಾ ಇದು ಅವರ ದಡ್ಡತನವೋ ಎಂಬುದನ್ನು ಕೆಲವು ಸ್ವತಂತ್ರ ವಿಚಾರಧಾರೆಯುಳ್ಳ ಮಹಿಳೆಯರಿಂದ ತಿಳಿಯೋಣ ಬನ್ನಿರಿ.

ಧರ್ಮದ ಹೊದಿಕೆಯಲ್ಲಿ ನಿಯಮಗಳು : ಪತ್ರಕರ್ತೆ ಮತ್ತು ಲೇಖಕಿ ರೇಣುಕಾ ಶರ್ಮ ಹೀಗೆ ಹೇಳುತ್ತಾರೆ, ``ನಮ್ಮ ಪೂರ್ವಿಕರು ಮಹಿಳೆಯರಿಗಾಗಿ ಮಾಡಿದ ಕಟ್ಟಳೆಗಳು ಅವರ ಒಳಿತಿಗಾಗಿಯೇ ಇದ್ದವು. ತಿಂಗಳ ಮುಟ್ಟಿನ ದಿನಗಳ ನಿಯಮಗಳನ್ನು ಮಹಿಳೆಯರ ಆರೋಗ್ಯದ ದೃಷ್ಟಿಯಿಂದಲೇ ರೂಪಿಸಲಾಗಿದ್ದವು. ದಿನವಿಡೀ ಮೈಮುರಿತದ ದುಡಿಮೆಯಿಂದ ಕೊಂಚ ವಿಶ್ರಾಂತಿ ಸಿಗಲಿ ಎಂಬುದು ಅದರ ಉದ್ದೇಶ. ವಾಸ್ತವವಾಗಿ ಇದಕ್ಕೆ ವೈಜ್ಞಾನಿಕ ಆಧಾರ ಇದೆ. ಏಕೆಂದರೆ ತಿಂಗಳ ಆ ದಿನಗಳಲ್ಲಿ ಮಹಿಳೆಯರಲ್ಲಿ ಕೆಲವು ಶಾರೀರಿಕ ಮತ್ತು ಮಾನಸಿಕ ಏರುಪೇರುಗಳಾಗುತ್ತವೆ. ಅದಕ್ಕಾಗಿ ಮಾಡಿದ ನಿಯಮಗಳಿಗೆ ಧಾರ್ಮಿಕ ಹೊದಿಕೆ ಹೊದಿಸಿ, ಅವರನ್ನು ಮೈಲಿಗೆಯೆಂದು ಘೋಷಿಸಲಾಯಿತು. ಇದರಿಂದ ಅವರು ದೇವರ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಮಾಡಿದುದು ಮೂಢನಂಬಿಕೆ.

``ನನಗೆ ಇದರಲ್ಲಿ ನಂಬಿಕೆ ಇಲ್ಲ. ಆದರೆ ಶತಮಾನಗಳಿಂದ ನಡೆದು ಬಂದಿರುವ ಪದ್ಧತಿಯನ್ನು ಬದಲಾಯಿಸುವಲ್ಲಿ ಸಮಯ ಹಿಡಿಯುತ್ತದೆ. ನಾವು ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎನ್ನುವುದು ನಮ್ಮ ವೈಯಕ್ತಿಕ ವಿಷಯ. ಇದರಲ್ಲಿ ಮೂಢನಂಬಿಕೆ ಬೇಡ.''

ಮಹಿಳೆಯರ ಆರೋಗ್ಯ ಹಿತರಕ್ಷಣೆಗಾಗಿ ನಮ್ಮ ಪೂರ್ವಿಕರು ಇಂತಹ ನಿಯಮಗಳನ್ನು ಮಾಡಿರುವರೆಂಬ ರೇಣುಕಾ ಮಾತು ಎಷ್ಟು ಸರಿ? ಪೂಜಾರಿಗಳು ಮತ್ತು ಧರ್ಮಾಧಿಕಾರಿಗಳಿಂದ ಈ ಪದ್ಧತಿ ಜಾರಿಗೆ ಬಂದಿರಬಹುದು. ಇಲ್ಲವಾದರೆ ಒಂಟಿ ಮಹಿಳೆಯು ಹೇಗೆ ಋತು ಧರ್ಮವನ್ನು ಸಾವರಿಸಿಕೊಂಡು ಅಡುಗೆ ಮಾಡುತ್ತಾಳೆ ಮತ್ತು ಮಕ್ಕಳನ್ನು ಪೋಷಿಸುತ್ತಾಳೆ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ