ಮಹಿಳೆಯರ ಕೈಯಲ್ಲಿ ಏನೂ ಇಲ್ಲ

ಏಪ್ರಿಲ್-ಮೇನಲ್ಲಿ ನಡೆಯುವ ಚುನಾವಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಲಿದೆ. ಏಕೆಂದರೆ ಈ ಸಲ ಎಂತಹ ಕೆಲವು ಪ್ರಮುಖ ವಿಷಯಗಳಿವೆಯೆಂದರೆ, ಆ ಮಹಿಳೆಯರ ಮೇಲೆ ನೇರ ಪರಿಣಾಮ ಬೀರಲಿವೆ…….!

2014ರ ಚುನಾವಣೆಗೂ ಮುಂಚೆ ಭ್ರಷ್ಟಾಚಾರ ಮುಖ್ಯ ವಿಷಯವಾಗಿತ್ತು. ಆದರೆ ಆಗ ಅದು ಜನಸಾಮಾನ್ಯರ ಮೇಲೆ ಅಷ್ಟೊಂದು ಪರಿಣಾಮ ಬೀರುವಂಥದ್ದಲ್ಲ. ಈಗ ನರೇಂದ್ರ ಮೋದಿ ಭಾರತ-ಪಾಕಿಸ್ತಾನ ವಿಷಯವನ್ನು ಮುಖ್ಯ ವಿಷಯವಾಗಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಏಕೆಂದರೆ ಪಾಕಿಸ್ತಾನವನ್ನು ನಾಶ ಮಾಡುವುದು ಭಾರತಕ್ಕೆ ಅತ್ಯವಶ್ಯ ಎಂದು ಜನರನ್ನು ಹೆದರಿಸಲು ಹೊರಟಿದ್ದಾರೆ. ಯಾರು ಇದನ್ನು ಒಪ್ಪುವುದಿಲ್ಲವೋ ಅವರನ್ನು ದೇಶದ್ರೋಹಿಗಳೆಂದು ಪರಿಗಣಿಸಲಾಗುತ್ತದೆ.

ಈ ಕಪಟ ದೇಶಭಕ್ತಿ ಹಾಗೂ ದೇಶಪ್ರೇಮದ ಹಿಂದೆ ಮಹಿಳೆಯರನ್ನು ಮಾನಸಿಕವಾಗಿ, ಸಾಮಾಜಿಕವಾಗಿ ಗುಲಾಮರನ್ನಾಗಿಸುವುದು ಹಾಗೂ ಧಾರ್ಮಿಕ ಪರಂಪರೆಯಲ್ಲಿ ಬಂಧಿಸಿಡುವುದಾಗಿದೆ.

ಕಳೆದ 5 ವರ್ಷಗಳಲ್ಲಿ ದೇಶದಲ್ಲಿ ಆರ್ಥಿಕ ವ್ಯವಹಾರಗಳಿಗಿಂತ ಹೆಚ್ಚಾಗಿ ಧಾರ್ಮಿಕ ಅಥವಾ ಧರ್ಮ ಅಥವಾ ಧರ್ಮ ನೀಡಿದ ಜಾತಿಗೆ ಸಂಬಂಧಪಟ್ಟ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಲಾಗಿತ್ತು. ಪೌರಾಣಿಕ ಗ್ರಂಥಗಳಲ್ಲಿ ಗೋವಿನ ಮಹಿಮೆಯ ಬಗ್ಗೆ ಹೇಳಲಾಗಿದೆ. ವಾಸ್ತವದಲ್ಲಿ ಅದು ಎಂತಹ ಒಂದು ಸಂಪತ್ತು ಆಗಿತ್ತೆಂದರೆ ಯಾರೋ ಒಬ್ಬ ಗೃಹಸ್ಥನಿಗಿಂತ ಹೆಚ್ಚಾಗಿ ಪೂಜಾರಿ ಪುರೋಹಿತರೇ ದಾನದ ರೂಪದಲ್ಲಿ ಪಡೆಯುತ್ತಿದ್ದರು.

ಈಗ ಗೋವಿನ ಹೆಸರಿನಲ್ಲಿ ಭಾರಿ ರಾಜಕೀಯ ನಡೆಯುತ್ತಿದೆ. ಅವುಗಳಿಂದ ನಗರಗಳು ಗಲೀಜಾಗುತ್ತಿರಬಹುದು. ಮನೆಗಳು ಸುರಕ್ಷಿತ ಆಗಿರದೇ ಇರಬಹುದು ಅಥವಾ ರೈತರ ಫಸಲು ನಷ್ಟವಾಗುತ್ತಿರಬಹುದು.

ಅದರ ಬೆಲೆಯನ್ನು ಮಹಿಳೆಯರೇ ತೆರಬೇಕಾಗಿ ಬರುತ್ತದೆ. ಒಂದೆಡೆ ಈ ಕಾರಣದಿಂದಾಗಿ ದುಬಾರಿ ಆಗುತ್ತಿರುವ ವಸ್ತುಗಳ ಬೆಲೆಯನ್ನು ಹೊರಬೇಕಾಗಿ ಬರುತ್ತಿದೆ. ಅವರ ಮುಂದೆ ದೊಡ್ಡ ಪಟ್ಟಿ ಓದಿ ಗೋಸೇವೆ ಅಥವಾ ಸಂತರ ಸೇವೆ ಮಾಡಿ ಎಂದು ಹೇಳಲಾಗುತ್ತದೆ.

ಈ 5 ವರ್ಷಗಳಲ್ಲಿ ಕುಂಭಮೇಳಗಳು, ನರ್ಮದಾ ಯಾತ್ರೆ, ತೀರ್ಥಯಾತ್ರೆ, ಮೂರ್ತಿ ಮಂದಿರಗಳ ಮಾತುಗಳೇ ಹೆಚ್ಚಾದವು. ವಾಸ್ತವದಲ್ಲಿ ಉದ್ಧಾರದ ಹೆಸರಿನಲ್ಲಿ ಕೆಲವು ರಸ್ತೆಗಳು ಹಾಗೂ ಸೇತುವೆಗಳನ್ನು ಉದ್ಘಾಟಿಸಲಾಯಿತು. ಅವುಗಳ ಕೆಲಸ ಕೆಲವು ವರ್ಷಗಳ ಹಿಂದೆಯೇ ಶುರುವಾಗಿತ್ತು.

ಭಾರತ ಅಭಿವೃದ್ಧಿ ಹೊಂದುತ್ತಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಇದರಲ್ಲಿನ ಬಹುದೊಡ್ಡ ಭಾಗವನ್ನು ಸರ್ಕಾರ ತೀರ್ಥಸೇವೆ, ಗೋಸೇವೆಗೆ ಮೀಸಲಿಟ್ಟರೆ ಮನೆಯಾಕೆಗೆ ಏನು ತಾನೆ ಉಳಿಯುತ್ತದೆ? ಇತ್ತೀಚಿನ ವರ್ಷಗಳಲ್ಲಿ ವಾಸದ ಮನೆಗಳ ಕೊರತೆ ಇದೆ. ಅವುಗಳ ಬೆಲೆಯೂ ಹೆಚ್ಚುತ್ತಿಲ್ಲ. ಏಕೆಂದರೆ ಮನೆ ಕೊಂಡುಕೊಳ್ಳಲು ಜನರ ಬಳಿ ಹಣವೇ ‌ಉಳಿಯುತ್ತಿಲ್ಲ. ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ತನ್ನದೇ ಆದ ಸೂರು ಹೊಂದಲು ಗೃಹಿಣಿಗೆ ಹಣ ಹೊಂದಿಸಲು ಆಗುತ್ತಿಲ್ಲ.

ಚುನಾವಣೆಯಲ್ಲಿ ಗೆಲ್ಲಿಸಲು ಮಹಿಳೆಯರನ್ನು ತೊಡಗಿಸಿದರೆ ಅದು ಒಂದು ರೀತಿಯ ಹೊಡೆತವೇ ಹೌದು. ಹಿಂದೆ ರಾಜರು ತೆರಿಗೆ ವಸೂಲಿ ಮಾಡಲು, ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳಲು ಬಲಿದಾನಕ್ಕಾಗಿ ಅವರನ್ನು ಆಯ್ಕೆ ಮಾಡುತ್ತಿದ್ದರು. ಜನರನ್ನು ಸೈನ್ಯದಲ್ಲಿ ಭರ್ತಿ ಮಾಡುತ್ತಿದ್ದರು. ಹೆಚ್ಚು ಕೆಲಸ ಮಾಡಿ ಕಂದಾಯ ವಸೂಲಿ ಮಾಡುತ್ತಿದ್ದರು. ಈಗಲೂ ಅನೇಕ ದೇಶಗಳಲ್ಲಿ ಇದು ನಡೆಯುತ್ತಿದೆ.

ಮಹಿಳೆಯರಿಗೆ ಸ್ವಾತಂತ್ರ್ಯ ಬೇಕು, ಅದು ಶಾಂತಿ ದೊರಕಿಸಿಕೊಡುವ ಕಡಿಮೆ ಒತ್ತಡ ಹೇರುವ ಸರ್ಕಾರದಿಂದ ದೊರೆಯಬಹುದು. ಧರ್ಮಯುದ್ಧಕ್ಕೆ ಪುಕಾರು ಕೊಡುವವರಿಂದ ಅಲ್ಲ.

ಧರ್ಮ ಇದೆಯೆಂದರೆ ಅಲ್ಲಿ ದಂಧೆಯೂ ಇದೆ

ಮಹಿಳೆಯರಿಗೆ ಸ್ವಾಮಿಗಳೆಂದರೆ ಅಪಾರ ಶ್ರದ್ಧೆ. ತಾವಷ್ಟೇ ಅಲ್ಲ, ಗಂಡ, ಮಕ್ಕಳು ಹಾಗೂ ಗೆಳತಿಯರನ್ನು ಕೂಡ ಸ್ವಾಮಿಗಳ ಪಾದಕ್ಕೆ ಶಿರಬಾಗುವಂತೆ ಮಾಡುತ್ತಾರೆ. ರಜನೀಶ್‌, ಆಸಾರಾಂ, ರಾಮ್ ರಹೀಮ್, ರಾಮ್ ಪಾಲ್‌, ನಿರ್ಮಲ ಬಾಬಾರಂತಹ ಅದೆಷ್ಟೋ ಸ್ವಾಮಿಗಳ ರಹಸ್ಯ ಬಹಿರಂಗದ ಬಳಿಕವೂ ಅವರು ಗುರುಗಳು ಸ್ವಾಮಿಗಳ ಮೂಢಭಕ್ತಿಯಲ್ಲಿ ತಲ್ಲೀನರಾಗಿರುತ್ತಾರೆ.

ಕೋಟಿ ಕೋಟಿ ವ್ಯವಹಾರ ಮಾಡುವ ರಾನ್‌ಬ್ಯಾಕ್ಸಿ ಕಂಪನಿಯ ಶಿವೇಂದ್ರ ಸಿಂಗ್‌ ಕೂಡ ಇದೇ ತೆರನಾದ ಗುರುಕುಲವೊಂದರ ಸಹ ಸಂಚಾಲಕ ಆಗಿದ್ದಾರೆ. ಅದನ್ನು ಒಂದು ದಂಧೆಯ ತರಹ ನಡೆಸುತ್ತಿದ್ದಾರೆ. ಅಲ್ಲಿ ಬಿಳಿ ಬಟ್ಟೆ ಧರಿಸಿದ ಸಾವಿರಾರು ಭಕ್ತರು ಕಂಡುಬರುತ್ತಾರೆ. ಈ ರೀತಿಯ ದೂರೊಂದನ್ನು ಕೊಟ್ಟವರು ಬೇರಾರೂ ಅಲ್ಲ, ಶಿವೇಂದ್ರಸಿಂಗ್‌ನ ಸೋದರ ಹಾಗೂ ಪಾಲುದಾರ ಮಾನೀಂದ್ರ ಸಿಂಗ್‌.

ರಾಧಾ ಸ್ವಾಮಿ ಸತ್ಸಂಗದ ಮುಖ್ಯ ಗುರು ಗುರೀಂದ್ರ ಸಿಂಗ್‌ ದಿಲ್ಲೋನ್‌ ಮತ್ತು ಅವರ ವಕೀಲರಾದ ಫರೀದಾ ಚೋಪ್ರಾ ತನಗೆ ಜೀವ ಬೆದರಿಕೆ ಹಾಕಿದ್ದಾರೆಂದೂ, ಸೋದರನ ಕಂಪನಿಯಲ್ಲಿ ಅಪಾರ ಅವ್ಯವಹಾರ ನಡೆಯುತ್ತಿತ್ತೆಂದೂ ಮಾನೀಂದ್ರ ಸಿಂಗ್‌ ಆರೋಪಿಸಿದ್ದಾರೆ.

ರಾಧಾ ಸ್ವಾಮಿ ಸತ್ಸಂಗದ ಸಂಪರ್ಕಕ್ಕೆ ಬಂದಾಗ್ಯೂ ಕೂಡ ಶಿವೇಂದ್ರಸಿಂಗ್‌ ಪ್ರಾಮಾಣಿಕತೆ ಮೆರೆಯಲಿಲ್ಲ. ಜಪಾನಿ ಕಂಪನಿಯೊಂದಕ್ಕೆ ಮೋಸ ಮಾಡಿದ ಆರೋಪದ ಮೇರೆಗೆ 3500 ಕೋಟಿ ರೂ. ಪರಿಹಾರ ಕೊಡಲು ಕೂಡ ನ್ಯಾಯಾಲಯ ಆದೇಶಿಸಿದೆ.

ಬಹುತೇಕ ಸ್ವಾಮಿಗಳ ಆಶ್ರಮಗಳು, ಈ ತೆರನಾದ ಆರೋಪಗಳಿಂದ ಆವೃತವಾಗಿವೆ. ಇಂತಹ ಕಡೆ ಅದೆಷ್ಟೋ ಮಹಿಳೆಯರು ಶೋಷಣೆಗೆ ತುತ್ತಾಗುತ್ತಿದ್ದಾರೆ. ಅವರು ಭಕ್ತರ ಹಣವನ್ನಷ್ಟೇ ಸ್ವಾಹಾ ಮಾಡುವುದಿಲ್ಲ, ಸರ್ಕಾರಿ ಜಮೀನನ್ನೂ ನುಂಗಿ ಹಾಕುತ್ತಾರೆ. ತಮ್ಮ ವಿರೋಧಿಗಳನ್ನು ಮುಗಿಸುತ್ತಾರೆ. ತಮ್ಮ ವಿರುದ್ಧ ಮಾತನಾಡುವ ಕಾರ್ಮಿಕರನ್ನು ನಾಪತ್ತೆ ಮಾಡಿಬಿಡುತ್ತಾರೆ. ಆದರೂ ಅವರಿಗೆ ಭಕ್ತರ ಕೊರತೆ ಏನೂ ಆಗುವುದಿಲ್ಲ.

ಇಂತಹ ಆಶ್ರಮಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಕಂಡುಬರುತ್ತಾರೆ. ಕೆಲವರು ಮನೆಯಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಹೊರಬಂದು ಇಂಥವರಲ್ಲಿ ಆಶ್ರಯವನ್ನೇನೋ ಪಡೆದುಕೊಳ್ಳುತ್ತಾರೆ. ಆದರೆ ಬೇರೆ ತೆರನಾದ ಚಕ್ರವ್ಯೂಹಕ್ಕೆ ಸಿಲುಕಿ ಹೊರಬರಲಾರದೆ ಒದ್ದಾಡುತ್ತಾರೆ. ಆಶ್ರಮಗಳಲ್ಲಿ ಕುಣಿತ, ಮೋಜು ಏನೆಲ್ಲ ನಡೆಯುತ್ತಿರುತ್ತದೆ. ಸ್ವಾಮಿಗಳು ಅವರ ಚೇಲಾಗಳ ಹೊಸ ಅವತಾರವನ್ನು ಭಕ್ತರು ನೋಡಬೇಕಾಗುತ್ತದೆ.

ಭಕ್ತೆಯರು ತಮ್ಮ ಅಮೂಲ್ಯ ವಸ್ತುಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ಕೆಲವರು ತಮ್ಮ ಅಪ್ರಾಪ್ತ ಪುತ್ರಿಯರನ್ನೂ ಸೇವೆಗೆಂದು ಬಿಟ್ಟು ಬರುತ್ತಾರೆ. ಕೇರಳದ ಒಂದು ಪ್ರಕರಣ ಸುಪ್ರೀಂಕೋರ್ಟ್‌ತನಕ ಬಂದಿತ್ತು. 16 ವರ್ಷದ ಹುಡುಗಿಯೊಬ್ಬಳನ್ನು ಸ್ವತಃ ಅವಳ ತಾಯಿಯೇ ಸ್ವಾಮಿಯ ಸೇವೆಗೆ  ಬಿಟ್ಟು ಬಂದಿದ್ದಳು. ಅದರಿಂದ ತನಗೆ ಪುಣ್ಯ ಬರುತ್ತದೆಂದು ಆಕೆ ನಂಬಿದ್ದಳು.

ಶಿವೇಂದ್ರಸಿಂಗ್‌ ಹಾಗೂ ಮಾನೀಂದ್ರಸಿಂಗ್‌ ವಿವಾದದಲ್ಲಿ ರಾಧಾ ಸ್ವಾಮಿ ಸತ್ಸಂಗ ಪರಿಪೂರ್ಣವಾಗಿ ಸಿಲುಕಿದೆ. ಇದರಿಂದ ಸ್ಪಷ್ಟವಾಗುವ ಸಂಗತಿಯೇನೆಂದರೆ ಈ ರೀತಿಯ ಗುರುಗಳ ಅಕ್ರಮ ದಂಧೆಗಳು ಇನ್ನಷ್ಟು ಹೆಚ್ಚಲು ಕುಮ್ಮಕ್ಕು ಕೊಡುವುದು ನಿಜಕ್ಕೂ ಹಾನಿಕಾರಕ. ಕೆಲವೇ ಕೆಲವು ಮುಖಂಡರನ್ನು ಹೊರತುಪಡಿಸಿ ಬಹುತೇಕ ಮುಖಂಡರು ಇಂತಹ ಸ್ವಾಮಿಗಳ ಮುಂದೆ ಮಂಡಿ ಊರುತ್ತಿದ್ದಾರೆ. ನೀವು ಅಂತಹ ಭಕ್ತೆ ಅಲ್ಲ ತಾನೇ?

ನಂಬಿದರೂ ಯಾರನ್ನು ನಂಬಬೇಕು?

ವೃದ್ಧರನ್ನು ನೋಡಿಕೊಳ್ಳುವುದರಿಂದ ಈಗ ಬ್ಲ್ಯಾಕ್‌ಮೇಲ್‌ ಮತ್ತು ಸೆಕ್ಸ್ ಹರಾಸ್‌ಮೆಂಟ್‌ ತೊಂದರೆಯನ್ನು ಪುತ್ರರು ಎದುರಿಸಬೇಕಾಗಿ ಬಂದಿದೆ. ಮುಂಬೈನಲ್ಲಿ 68 ವರ್ಷದ ವೃದ್ಧರೊಬ್ಬರನ್ನು ನೋಡಿಕೊಳ್ಳಲು ನೇಮಿಸಲಾಗಿದ್ದ ನರ್ಸ್‌ವೊಬ್ಬಳು, ವೃದ್ಧನ ಮಸಾಜ್‌ ಮಾಡುವುದರ ವಿಡಿಯೋ ಮಾಡಿ, ಅದನ್ನು ಆಧಾರವಾಗಿಟ್ಟುಕೊಂಡು 25 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಳು. ಇಂತಹ 1-2 ಘಟನೆ ಬೆಳಕಿಗೆ ಬಂದಿರಬಹುದು. ಇಂತಹ ಬೇರೆ ಘಟನೆಗಳು ನಡೆಯುವುದಿಲ್ಲ ಎಂದೇನೂ ಅಲ್ಲ. ವೃದ್ಧರನ್ನು ನೋಡಿಕ್ಳೊಲು ನೇಮಿಸಲಾದ ನೌಕರರು ಸಾಮಾನ್ಯವಾಗಿ ದೂರವುದೇನೆಂದರೆ, ಅವರು ತಮ್ಮ ಮೇಲೆ ಹಲ್ಲೆ ನಡೆಸುತ್ತಾರೆ. ಅದಕ್ಕಾಗಿ ನಾವು ಆ ಕೆಲಸ ಬಿಡಬೇಕಾಗಿ ಬಂದಿದೆ ಎಂದು ಹೇಳಿ ಅವರ ಮಕ್ಕಳಿಂದ ಹಣ ವಸೂಲಿ ಮಾಡುತ್ತಾರೆ. ಕೆಲವು ನೌಕರರು ಕುಖ್ಯಾತರಾಗಿ ಹಣ ವಸೂಲಿಗೆ ನೂರೆಂಟು ದಾರಿ ಹುಡುಕುತ್ತಾರೆ.

ಉದ್ಯೋಗಸ್ಥ ಮಕ್ಕಳು ವೃದ್ಧ ತಂದೆತಾಯಿಯರ ಹಟವನ್ನು ಚೆನ್ನಾಗಿ ಬಲ್ಲವರು. ಏಕೆಂದರೆ ಆ ವಯಸ್ಸಿನತನಕ ಬರುವಷ್ಟು ಹೊತ್ತಿಗೆ ಅವರ ಮನಸ್ಸಿನಲ್ಲಿ ಸಂದೇಹಗಳು ತುಂಬಿಕೊಳ್ಳುತ್ತವೆ. ಎಲ್ಲರೂ ತನ್ನನ್ನು ಬಿಟ್ಟು ಹೋದಾರು ಅಥವಾ ಯಾರಾದರೂ ಕಾಗದದ ಮೇಲೆ ಸಹಿ ಪಡೆದರೆ, ಲೂಟಿ ಮಾಡಿದರೆ ಈ ತೆರನಾದ ಯೋಚನೆಗಳು ಅವರನ್ನು ಮುತ್ತಿಕೊಳ್ಳುತ್ತವೆ. 24 ಗಂಟೆ ತಮ್ಮೊಂದಿಗೆ ಇರುವ ನೌಕರರ ಮೇಲೆ ಅವರು ವಿಶ್ವಾಸ ಇಡುತ್ತಾರೆ. ಇಲ್ಲಿ ಸದಾ ಸಂದೇಹಪಡುತ್ತಾರೆ.

ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುವುದು ಅತ್ಯಂತ ಸುಲಭ. ದೊಡ್ಡ ಮನೆತನದ ಪುತ್ರ ಪುತ್ರಿಯರಿಗೆ ತಮ್ಮ ತಂದೆಯನ್ನು ಕೇಳುವ ಧೈರ್ಯ ಇರುವುದಿಲ್ಲ. ತಮ್ಮ ಹೆಸರು ಕೆಡುವುದನ್ನೂ ಇಚ್ಛಿಸುವುದಿಲ್ಲ. ಅವರು ಪೊಲೀಸರ ಬಳಿ ಹೋದರೆ ಎಲ್ಲಿ ತಮ್ಮೆಲ್ಲ ರಹಸ್ಯವನ್ನು ಬಯಲು ಮಾಡುತ್ತಾರೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ.

ಈ ಸಮಸ್ಯೆಗೆ ಸುಲಭ ಪರಿಹಾರವಿಲ್ಲ. ಜಗತ್ತಿನಲ್ಲಿ ಒಂದೆಡೆ ಯುವಕ-ಯುವತಿಯರ ಸಂಖ್ಯೆ ಕುಗ್ಗುತ್ತಿದ್ದರೆ, ಇನ್ನೊಂದೆಡೆ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಮೊಮ್ಮಕ್ಕಳ ಮೇಲೆ ಅದರ ಹೊರೆ ಬೀಳುತ್ತಿದೆ. ವೃದ್ಧರು ನಿಸ್ಸಹಾಯಕರಾಗುವ ಹೊತ್ತಿಗೆ ಮೊಮ್ಮಕ್ಕಳು ದುಡಿಯುವ ಸ್ಥಿತಿಗೆ ಬಂದಿರುತ್ತಾರೆ. ಈಗ ಅವರು ಕೆಲಸಗಾರರೊಂದಿಗೆ ಸೆಣಸಾಡುವ ಸ್ಥಿತಿ ಬಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ