ಹಣ ಮತ್ತು ಹೆಸರು ಕೂಡಾ : ಮಿಸ್‌ ಕಾಂಟೆಸ್ಟ್ ಗೆ ಕೇವಲ ಉದ್ದನೆ  ಕಾಲಾಡಿಸಿದರೆ ಸಾಲದು. ಪರ್ಫೆಕ್ಟ್ ಫಿಸಿಕಲ್, ನಡಿಗೆಯ ಶೈಲಿ, ಹೇರ್‌ಸ್ಟೈಲ್, ಪ್ರಶ್ನೋತ್ತರಕ್ಕಾಗಿ ತಲೆಯಲ್ಲಿ ತುಸು ಬುದ್ಧಿ, ಉತ್ತಮ ಹವ್ಯಾಸಗಳೂ ಬೇಕು. ಇತ್ತೀಚೆಗೆ ಪೂರ್ವ ಯೂರೋಪಿನ ಬೇಲಾರೂಸ್‌ ಎಂಬ ದೇಶದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಇಂಥ ಷರತ್ತುಗಳನ್ನು ಒಡ್ಡಲಾಯಿತು. 4-6 ಹುಡುಗಿಯರು ಬಂದು ನಿಂತರು. ಇದರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ವಿಜೇತರು, ಮುಂದೆ ಸೆಲೆಬ್ರಿಟಿ ಆಗುವುದರಲ್ಲಿ ಸಂದೇಹವಿಲ್ಲ.

ಕಂದಾಚಾರವ ಹಿಮ್ಮೆಟ್ಟಿದ ಸ್ವಾತಂತ್ರ್ಯಲಾಹೋರ್‌ ಕುರಿತಾಗಿ ಮಾತನಾಡುವುದು ಈಗ ದೇಶದ್ರೋಹವೋ ಏನೋ ಗೊತ್ತಿಲ್ಲ, ಆದರೆ ಇತ್ತೀಚೆಗೆ ಅಲ್ಲಿ ನಡೆದ ಲಾಹೋರಿಯಾ ಫ್ಯಾಷನ್‌ ಶೋ, ಆ ಊರಿನಲ್ಲಿ ಕಂದಾಚಾರ ಎಷ್ಟೇ ತೀವ್ರವಾಗಿದ್ದರೂ, ಸ್ವಾತಂತ್ರ್ಯ ಅದನ್ನು ಮೆಟ್ಟಿ ನಿಂತಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.

ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಬಹುದು :  ಲಾರೇನ್‌ ಲೂಯೀ ಅಮೆರಿಕಾದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಚೀನೀ ಪ್ಲೇರೈಟರ್‌, ಅಂದ್ರೆ ನಾಟಕಕಾರ್ತಿ. ಆದರೆ ಅವಳ ಅಜ್ಜಿ ತಾತಾ ಸಹ ಅಲ್ಲಿ ವರ್ಣಭೇದ ಸಮಸ್ಯೆ ಎದುರಿಸಬೇಕಾಯ್ತು. ತನ್ನ ಪರಿಶ್ರಮದಿಂದ ಆ ತಾತಾ ಚೈನಾ ಟೌನ್‌ನಿಂದ ಹೊರಗೆ ಒಂದು ದೊಡ್ಡ ಕಟ್ಟಡ ನಿರ್ಮಿಸಿದರು. ಇವರ ಕುಟುಂಬದ್ದೇ ಒಂದು ಥಿಯೇಟರ್‌ ಕೂಡ ಇದೆ. ಲಾರೇನ್‌ ಲೂಯೀ ಇದೀಗ ಅಮೆರಿಕಾದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾಳೆ. ಈಕೆ ಅಲ್ಲೀಗ ಭಾರತೀಯ ಮೂಲದ ಲೇಖಕರಿಗೆ ಭಾರಿ ಪೈಪೋಟಿ ನೀಡುತ್ತಿದ್ದಾಳೆ.

ಎಲ್ಲೆಡೆ ಇದೆ ವರ್ಣಭೇದ :  ಯಾವ ರೀತಿ ನಮ್ಮ ದೇಶದಲ್ಲಿ ಭಕ್ತ ಶಿರೋಮಣಿಗಳು ಇತರರೆಡೆ ಭೇದಭಾವ ತೋರುತ್ತಾರೋ, ಹಾಗೆ ಅಮೆರಿಕಾದಲ್ಲಿ ಕರಿಯರ ವಿರುದ್ಧ ಹೆಂಗಸರೂ ಧಿಕ್ಕಾರ ತೋರುತ್ತಾರೆ. ಅಮೆರಿಕಾದ ಡಲಾಸ್‌ ನಗರದಲ್ಲಿ ಒಬ್ಬ ಮಹಿಳಾ ಪೊಲೀಸ್‌ ಅಧಿಕಾರಿ ತನ್ನ ನೆರೆಮನೆಯ 30 ವರ್ಷದ ಕರಿಯ ಹೆಂಗಸನ್ನು ನಿರ್ದಯವಾಗಿ ಕೊಂದಿದ್ದಾಳೆ. ಅವಳ ತಪ್ಪು! ಅರಿಯದೆ ಬಿಳಿ ಅಧಿಕಾರಿಯ ಮನೆ ಪ್ರವೇಶಿಸಿದ್ದು. ಹೀಗೆ ಅನಧಿಕೃತವಾಗಿ ಹಾಜರಾದ ಕರಿ ಮಹಿಳೆಯನ್ನು ಕಂಡು ಕೋಪದಿಂದ, ಅಧಿಕಾರಿ ಅವಳನ್ನು ಕೊಂದೇಬಿಡುವುದೇ? ನಮ್ಮಲ್ಲಿ ಯಾವ ತರಹ ಹಸುವನ್ನು ಮೇಯಿಸಲಿಕ್ಕಾಗಿ ಕರೆದೊಯ್ಯುವ ಒಬ್ಬ ದಾಡೀವಾಲಾನನ್ನು ಕೊಂದು ಹಾಕಿದರೆ ಯಾವ ಅಪರಾಧ ಅಲ್ಲವೋ, ಅದೇ ರೀತಿ ಬಿಳಿ ಅಧಿಕಾರಿ ಆ್ಯಂಬರ್‌ ಗುರ್‌ ಬಹುಮತದ ಕಾರಣ ನಿರಪರಾಧಿ ಎನಿಸಬಹುದು, ಆಶ್ಚರ್ಯವೇನಿಲ್ಲ. ಮೃತಳಾದ ಬಾಥಮ್ ಜೀನ್‌ ವಿದ್ಯಾವಂತ ಹಾಗೂ ಅನುಕೂಲಸ್ಥ ಕುಟುಂಬಕ್ಕೆ ಸೇರಿದವಳು ಎಂಬುದನ್ನು ಅವಳ ಕೌಟುಂಬಿಕ ಚಿತ್ರವೇ ಸಾರುತ್ತದೆ.

ಮಕ್ಕಳ ಆಸೆಯೇ ಗೆಲ್ಲುವುದು : ಸೆಲೆಬ್ರಿಟಿಗಳಾದರು ಸಾಮಾನ್ಯವಾಗಿ ಮಿಸ್‌ ಕಾಂಟೆಸ್ಟ್ ವಿಜೇತೆಯರನ್ನೇ ಮದುವೆಯಾಗುತ್ತಾರೆ. ಆದರೆ ಅಂಥ ಮನೆಯ ಹೆಣ್ಣುಮಕ್ಕಳು ಇಂಥ ಮದುವೆಗಳಲ್ಲಿ ಭಾಗವಹಿಸುವುದೇ ಕಡಿಮೆ. ಆಸ್ಟ್ರೇಲಿಯಾದ ಇಲಿನೋರ್‌ ಇದಕ್ಕೆ ಅಪವಾದ, ಏಕೆಂದರೆ ಅವಳ ತಂದೆ ಆಸ್ಟ್ರೇಲಿಯಾದ ಒಂದು ರಾಜ್ಯ ವಿಕ್ಟೋರಿಯಾದ ಪ್ರೀಮಿಯರ್‌ ಅಂದ್ರೆ ಮುಖ್ಯಮಂತ್ರಿ ಆಗಿದ್ದರು. ಮಕ್ಕಳಂತೂ ತಮ್ಮ ಆಸೆಯನ್ನೇ ಈಡೇರಿಸಿಕೊಳ್ಳುವುದು.

ಹಣ್ಣು ತರಕಾರಿ ತಿನ್ನಿ ಆರೋಗ್ಯವಾಗಿರಿ : ಅಮೆರಿಕಾದ ಪ್ರಸಿದ್ಧ ಫ್ಲೋರಿಡಾ ನಗರದ ಮುನಿಸಿಪಲ್ ಕಾರ್ಪೊರೇಷನ್‌ ನೀಡುತ್ತಿರುವ ಸಂದೇಶ ಎಂದರೆ ಹೃದ್ರೋಗ, ಸ್ಥೂಲತೆ, ಕ್ಯಾನ್ಸರ್‌ನಂಥ ರೋಗಗಳ ನಿವಾರಣೆಗಾಗಿ ಏನಾದರೂ ಮಾಡಬೇಕು, ಅಂತಹ ರೋಗಗಳ ವಿರುದ್ಧದ ಹೋರಾಟ ಸುಲಭ ಆಗಬೇಕು. ಇದಕ್ಕಾಗಿ ನಗರದ ಪ್ರಮುಖ ಸ್ಟೋರ್‌ಗಳು ತಮ್ಮ ಓಪನ್‌ ಶಾಪ್‌ಗಳಲ್ಲಿ ಉತ್ತಮ ಗುಣಮಟ್ಟದ ಹಣ್ಣು ತರಕಾರಿಗಳನ್ನು ಭಾರಿ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿವೆ.

ಎಲ್ಲರಿಗೂ ಸಮಾನ ಅವಕಾಶ : ಭಾರತೀಯ ಸೇನೆ ಸಲಿಂಗಿಗಳಿಗೆ ಅವಕಾಶ ಕಲ್ಪಿಸುವುದನ್ನೇ ನಿಷೇಧಿಸಿದೆ. ಆದರೆ ಅಮೆರಿಕಾದಲ್ಲಿ ಹಾಗಲ್ಲ, ಅಂಥವರನ್ನೂ ಯುದ್ಧಕ್ಕೆ ಕಳುಹಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಸೆಕ್ಸ್ ಚೇಂಜ್‌ ಮಾಡಿಕೊಂಡವರನ್ನು. ಲಿಂಡ್ಸ್ ಮುಲ್ಲರ್‌ ತನ್ನ ಸೆಕ್ಸ್ ಚೇಂಜ್‌ ಮಾಡಿ ಹೆಣ್ಣಾಗಿದ್ದಾಳೆ, ಆದರೆ ಅವಳ ಶಕ್ತಿ ಸಾಮರ್ಥ್ಯದಲ್ಲಿ ಯಾವುದೇ ಕೊರತೆಯಿಲ್ಲ. ಟ್ರಾನ್ಸ್ ಜೆಂಡರ್ಸ್‌  ಬೀದಿ ಬದಿ ಭಿಕ್ಷೆ ಬೇಡುತ್ತಲೇ ಬದುಕಬೇಕು ಎಂಬುದು ನಮ್ಮ ಮಹಾನ್‌ ಪ್ರಾಚೀನ ಸಂಸ್ಕೃತಿಯಲ್ಲಷ್ಟೆ ಕಂಡುಬರುತ್ತದೆ.

ಸಣ್ಣದಾದರೂ ಮುಖ್ಯ ವಿಷಯ : ಇದೊಂದು ಸಣ್ಣ ಕ್ಲೇ ಇರಬಹುದು, ಆದರೆ ಸೈನ್ಸ್ ಮಕ್ಕಳನ್ನು ಬೆಟ್ಟದ ಟ್ರಿಪ್‌ಗೆ ಕರೆದೊಯ್ದಾಗ, ಇಂಥ ಸಣ್ಣ ವಿಷಯಗಳೂ ಅವರಿಗೆ ಮಹತ್ವದ್ದಾಗುತ್ತವೆ. ಕಲಿಯಲು ನೆರವಾಗುತ್ತವೆ. ಈ ಕ್ರಿಸ್ಟಲ್‌ನಲ್ಲಿ ಏನೇನಿವೆ, ಎಷ್ಟು ಸಾವಿರ ವರ್ಷ ಹಳೆಯದು, ಅಲ್ಲಿಂದ ಇಲ್ಲಿಗೆ ಹೇಗೆ ಬಂತು, ಇಂಥ ಬೆಟ್ಟ ಬೇರೆಲ್ಲಿದೆ ಇತ್ಯಾದಿ ಎಲ್ಲಾ ಮಾಹಿತಿ ಸಿಗುತ್ತದೆ. ಇಂಥ ವಿಷಯಗಳನ್ನು ಪ್ರೇಮಿಗಳ ಕುರಿತಾಗಿ ನಡೆಸಿದರೆ ಅಂಥ ಪ್ರೇಮಪಾಠ ಕಲಿಯಲು ಲಕ್ಷಾಂತರ ಟೀನೇಜರ್ಸ್‌ ಹಾತೊರೆದು ಸೇರುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ