ಹಿಮಾಲಯದ ಭವ್ಯತೆಗೆ ಸರಿಸಾಟಿಯಾದದ್ದು ವಿಶ್ವದಲ್ಲಿ ಬೇರೊಂದಿಲ್ಲ. ಚಾರಣಿಗರಿಗೆ, ಸಾಹಸ ಪ್ರಿಯರಿಗೆ ಹಿಮಾಲಯದ ಸೆಳೆತ ಸೂಜಿಗಲ್ಲಿನಂತಿದ್ದು, ಸೌಂದರ್ಯಾರಾಧಕರಿಗೆ ಸವಿದಷ್ಟೂ ಬರಿದಾಗದ ಅಕ್ಷಯ ಪಾತ್ರೆ ಇದು. ಜೀವನದ ಜಂಜಾಟದಿಂದ ಬೇಸತ್ತ ಮನಕ್ಕೆ ಮುದ ನೀಡುವ ತಾಣ ಹಿಮಾಲಯ.

ಹಿಮಾಲಯದ ತಪ್ಪಲಿನಲ್ಲಿ ಪ್ರೇಕ್ಷಣೀಯ ಸ್ಥಳಗಳು ಅಸಂಖ್ಯ. ಹಿಮಾಚ್ಛಾದಿತ ಪ್ರದೇಶಗಳು, ಜಲಧಾರೆಗಳು, ನದಿ ತೊರೆಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಅಂತಹ ಸ್ಥಳಗಳಲ್ಲಿ `ಮಲಾನಾ' ಸಹ ಒಂದು, ಮನಾಲಿ ಮತ್ತು ಮಲಾನಾ ಒಂದೇ ರಾಜ್ಯದಲ್ಲಿ ಬರುವ ಊರುಗಳು. ಆದರೆ ಮನಾಲಿಯಷ್ಟು ಪ್ರಸಿದ್ಧವಾದುದಲ್ಲ ಮಲಾನಾ.

ಹಿಮಾಚಲ ಪ್ರದೇಶದ ದೌಲಾಧಾರ ಪರ್ವತ ಶ್ರೇಣಿಯಲ್ಲಿ ಅತ್ಯಂತ ಕಡಿದಾದ ಪರ್ವತ ಒಂದರ ಮಡಿಲಲ್ಲಿ ಸಮುದ್ರ ಮಟ್ಟದಿಂದ ಸುಮಾರು 9,000 ಅಡಿಗಳ ಎತ್ತರದಲ್ಲಿರುವ ಒಂದು ಪುಟ್ಟ ಹಳ್ಳಿ ಮಲಾನಾ. ಈ ಹಳ್ಳಿಗೆ ಯಾವುದೇ ರಸ್ತೆ, ಮಾರ್ಗಗಳು ಇಲ್ಲ. ಯಾವುದೇ ವಾಹನ ಸಂಚಾರವಿಲ್ಲ. ಕಾಲ್ನಡಿಗೆಯಲ್ಲಿ ಚಂದ್ರಖಾನಿ ಪಾಸ್‌ ಎಂಬ ಹಿಮಾಚ್ಛಾದಿತ ಪ್ರದೇಶದ ಮೂಲಕ ಸುಮಾರು 12 ಕಿ.ಮೀ. ನಡೆದೇ ಈ ಹಳ್ಳಿಯನ್ನು ತಲುಪಬೇಕು.

ಈ ಹಳ್ಳಿಯನ್ನು ವೀಕ್ಷಿಸಲು ಪ್ರವಾಸಿಗರು ಯಾವಾಗ ಬೇಕಾದರೂ ಹೋಗಲು ಸಾಧ್ಯವಿಲ್ಲ. ಮಾರ್ಚ್‌ನಿಂದ ಡಿಸೆಂಬರ್‌ತಿಂಗಳವರೆಗೆ ಮಾತ್ರ ಪ್ರವಾಸಿಗರಿಗೆ ತೆರೆದಿರುತ್ತದೆ. ಉಳಿದ ಎರಡು ತಿಂಗಳು ಅತಿಯಾದ ಹಿಮವಾದ್ದರಿಂದ ವೀಕ್ಷಿಸಲು ಅಸಾಧ್ಯ. ಮಲಾನಾ ಹಳ್ಳಿಯ ಜನಸಂಖ್ಯೆ 1500-2000 ಅಷ್ಟೆ. ಮರದಿಂದ ನಿರ್ಮಿಸಿದ ಮನೆಗಳು, ದೇವಾಲಯಗಳು, ದೇವಾಲಯದ ಸುಂದರ ಕೆತ್ತನೆಗಳು ಜನರನ್ನು ಆಕರ್ಷಿಸುತ್ತವೆ. ಈ ಹಳ್ಳಿಯ ಜನ ಗ್ರೀಕ್‌ಪೂರ್ವಜರೆಂದು ಹೇಳಿಕೊಳ್ಳುತ್ತಾರೆ. ಭಾರತ ಬ್ರಿಟಿಷರಿಂದ ಸ್ವಾತಂತ್ರ ಹೊಂದಿ ತನ್ನದೇ ಆದ ಸಂವಿಧಾನವನ್ನು ಹೊಂದಿದ್ದರೂ ಸಹ ಈ ಪುಟ್ಟ ಹಳ್ಳಿ ತನ್ನ ಪ್ರತ್ಯೇಕತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ತನ್ನದೇ ಆದ ವಿಚಿತ್ರ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಹಾಗೂ ಭಾಷೆ ಮತ್ತು ಬದುಕಿನ ರೀತಿ ನೀತಿ ನಿಯಮಗಳಿಂದ ವಿಶ್ವ ಭೂಪಟದಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿದೆ.

ಮಲಾನಾ ಹಿಮಾಲಯದ ಉಳಿದ ಹಳ್ಳಿಗಳಿಗಿಂತ ತೀರಾ ಭಿನ್ನವಾದದ್ದು. ಈ ಹಳ್ಳಿಯ ಜನ ವಿಚಿತ್ರ ಮುಖ ಲಕ್ಷಣವನ್ನು ಹೊಂದಿರುವರು. ಕೋಲುಮುಖ, ಉದ್ದನೆಯ ಚೂಪಾದ ಮೂಗು, ಕೆಂಪು, ಹಳದಿ ಮತ್ತು ಬಿಳಿ ಮಿಶ್ರಿತ ಕಂದು ವರ್ಣದ ತ್ವಚೆ, ಕರಿದಾದ ಕಣ್ಣು ಇವರ ಪ್ರಧಾನ ಲಕ್ಷಣ. ಇಂತಹ ಲಕ್ಷಣಗಳು ಅತಿ ಸಮೀಪದ ಹಳ್ಳಿಗಳಲ್ಲಿ ಕಂಡುಬರುವುದಿಲ್ಲ. ಇವರು ಧರಿಸುವ ವಸ್ತ್ರಗಳಲ್ಲೂ ಸಹ ಭಿನ್ನತೆ ಇದೆ.

ಇವರು ತಾವೇ ಕೈಯಿಂದ ನೇಯ್ದ ಒರಟಾದ ಮೇಲಂಗಿ, ತೇಪೆಗಳಂತೆ ಕಾಣುವ ಜೇಬುಗಳಿಂದ ಕೂಡಿರುವ ಪ್ಯಾಂಟನ್ನು ಪುರುಷರು ಧರಿಸಿದರೆ, ಸ್ತ್ರೀಯರು ಮೇಲಂಗಿ ಮತ್ತು ಲಂಗವನ್ನು ಧರಿಸುವರು. ಮಹಿಳೆಯರಂತೂ ಅಲಂಕಾರ ಪ್ರಿಯರು. ಮೂಗಿನ ಎರಡು ಕಡೆಗೂ ಮೂಗುಬಟ್ಟು, ಕಿವಿಗೆ ಬೃಹತ್‌ ಗಾತ್ರದ ನೇತಾಡುವ ಬಳೆಗಳು, ಮೊಣಕೈ ತುಂಬಾ ಬಳೆಗಳು, ಕತ್ತಿಗೆ ನೇತಾಡುವ ಸರಗಳು ಇವರಿಗೆ ತುಂಬಾ ಪ್ರಿಯ. ಪುರುಷರು ತಲೆಗೆ ಟೋಪಿಯನ್ನು ಮಹಿಳೆಯರು ತಲೆಗೆ ಬಟ್ಟೆಯನ್ನು ಕಡ್ಡಾಯವಾಗಿ ಕಟ್ಟುವವರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ