ದುಬೈನ ವಿಮಾನ ನಿಲ್ದಾಣ ಮಾಯಾ ನಗರಿಯಂತೆ. ಮರುಭೂಮಿ ಎನ್ನುವ ವಿಷಯ ಮರೆಸುವಷ್ಟು ಅನುಕೂಲಗಳು, ನಿಗಿನಿಗಿ ಹೊಳೆಯುವ ದೀಪದ ಸಾಲುಗಳನ್ನು ಹೊತ್ತ ಅಂಗಡಿಗಳು, ಮಿಂಚುವ ಚಿನ್ನದ ಬಣ್ಣದ ಎತ್ತರದ ಖರ್ಜೂರದ ಮರಗಳು, ಎತ್ತರದ ಬೆಳ್ಳಿಯ ರಂಗಿನ ವಿಶಾಲವಾದ ಕಂಬಗಳಿಗೆ ಬಣ್ಣ ಬಣ್ಣದ ಹೊಳೆಯುವ ದೀಪಗಳು, ವಿಶಾಲವಾದ ವಿಮಾನ ನಿಲ್ದಾಣ. ನೂರಕ್ಕೂ ಹೆಚ್ಚು ಟರ್ಮಿನಲ್‌ಗಳು, ಸುಲಭವಾಗಿ ದಾರಿ ಸವೆಸಲು ನಡೆದಂತೆ ಸಾಗುವ ಎಸ್ಕಲೇಟರ್‌ಗಳು, ಪೂರ್ಣವಾಗಿ ಗಾಜಿನಿಂದ ನಿರ್ಮಿಸಲ್ಪಟ್ಟ ಲಿಫ್ಟ್ ಗಳು, ಒಂದೆಡೆ ಸಾಲಾಗಿ ರೂಪಿಸಲ್ಪಟ್ಟ ಹಸಿರು ಖರ್ಜೂರದ ಮರಗಳು, ನಿಜಕ್ಕೂ ಎಲ್ಲ ಕಣ್ಣು ಕೋರೈಸುವಷ್ಟು ಚಂದವೆನಿಸಿತು.

ಇಷ್ಟೊಂದು ಶ್ರೀಮಂತವಾದ, ವಿಶಾಲವಾದ ವಿಮಾನ ನಿಲ್ದಾಣದಲ್ಲೂ ಕಿಕ್ಕಿರಿದಂತೆ ಜನಸಮೂಹ. ಕೆಲಸಕ್ಕಾಗಿ ವಲಸೆ ಬಂದಿರುವ ಜನರ ಸಾಲುಗಳು, ಶ್ರೀಮಂತ ವಿದೇಶಿಯರೇ ಅಲ್ಲದೆ, ಅತಿ ಸಾಮಾನ್ಯ ಉಡುಪಿನ ಜನಸಾಮಾನ್ಯರು, ಬಾಂಗ್ಲಾ ದೇಶದವರು, ಪಾಕಿಸ್ತಾನಿಗಳು, ಇನ್ನು ನಮ್ಮ ಕೇರಳದವರು ಢಾಳಾಗಿ ಕಾಣುತ್ತಿದ್ದರು. ಅಷ್ಟೊಂದು ಜನರಿರುವ ವಿಮಾನ ನಿಲ್ದಾಣವನ್ನು ಯಾವಾಗಲೂ ಶುಚಿ ಮಾಡುತ್ತಲೇ ಇದ್ದರು. ಆ ಕೆಲಸಗಾರರಲ್ಲಿ ಹೆಚ್ಚಾಗಿ ಕೇರಳದ ಮಲೆಯಾಳಿಗಳೇ ಕಾಣುತ್ತಿದ್ದರು. ನೋಡಲು  ಚಂದದ ಹರೆಯದ ಹುಡುಗರು ಮಾಪ್‌ ಹಿಡಿದು ಗುಡಿಸುವುದು, ಒರೆಸುವುದನ್ನು ಕಂಡಾಗ ಪಾಪವೆನಿಸಿತು. ಅಲ್ಲದೆ ಅವಶ್ಯಕತೆ ಇದ್ದಾಗ ಮನುಷ್ಯ ಅನಿವಾರ್ಯವಾಗಿ ಯಾವ ಕೆಲಸವನ್ನಾದರೂ ಮಾಡಬೇಕಾಗುತ್ತದೆ. ಮನೆಯಲ್ಲಿ ಅಕ್ಕ ತಂಗಿಯರು, ಅಮ್ಮನ ಹತ್ತಿರ ಮುದ್ದುಗರೆಸಿಕೊಂಡು ಗಂಡು ಮಗನೆಂದು ಜಂಭ ಮಾಡುವ ಮಕ್ಕಳ ನೆನಪಾಯಿತು. ಆದರೆ ಜೀವನಾಧಾರಕ್ಕೆ ದೇಶವನ್ನು ತೊರೆಯಬೇಕು, ಎಲ್ಲ ಕೆಲಸವನ್ನೂ ಮಾಡಬೇಕು. ಅಲ್ಲದೆ, ನಮ್ಮ ದೇಶದಲ್ಲಿದ್ದು ಅಷ್ಟು ಹಣವನ್ನು, ಅವರು ಪಡೆದಿರುವ ವಿದ್ಯಾಭ್ಯಾಸಕ್ಕೆ ಎಲ್ಲಿ ಪಡೆಯಲು ಸಾಧ್ಯ? ನಮ್ಮ ಭಾರತದಲ್ಲಿ ನಾವು ಹೆಚ್ಚಿನ ಮಕ್ಕಳನ್ನು ಹೆತ್ತು ಕೂಲಿಗಾಗಿ ವಿದೇಶಗಳಿಗೆ ಕಳುಹಿಸುತ್ತಿದ್ದೇವೇನೋ ಎನ್ನುವ ಹತಾಶ ಭಾವ, ಭಾರತದವರನ್ನು ಅದರಲ್ಲೂ ದಕ್ಷಿಣ ಭಾರತದವರನ್ನು ಕಂಡರೆ ನಗುನಗುತ್ತಾ ಮಾತನಾಡಿಸುವ ಆ ಮಕ್ಕಳನ್ನು ನೋಡಿದರೆ ಸಂಕಟವಾಯಿತು. ಪ್ರಯಾಣಿಕರ ಸಂಖ್ಯೆ ಎಷ್ಟು ಹೆಚ್ಚಿತ್ತೆಂದರೆ ಅಷ್ಟೊಂದು ಹೊತ್ತು ಕೂರಲಾರದೆ ನಮ್ಮ ರೈಲ್ವೆ ಸ್ಟೇಷನ್‌ನಲ್ಲಿ ಮಲಗುವಂತೆ ಸಾಲಾಗಿ ಮಲಗಿದ ಮಾಮೂಲಿ ಎಕನಾಮಿಕ್‌ ಕ್ಲಾಸ್‌ನ ಪ್ರಯಾಣಿಕರು, ಫಸ್ಟ್ ಕ್ಲಾಸ್‌ ಮತ್ತು ಬಿಸ್‌ನೆಸ್‌ ಕ್ಲಾಸ್‌ನ ಪ್ರಯಾಣಿಕರಿಗೆ ರಾಜೋಪಚಾರ. ಮಿಕ್ಕವರಿಗೂ ಅವರ ಕ್ಲಾಸ್‌ಗೆ ತಕ್ಕನಾದ ಉಪಚಾರ. ಎಲ್ಲಿ ಹೋದರೂ ಅಷ್ಟೇ ಅಲ್ಲವೇ? ಕಾಸಿಗೆ ತಕ್ಕನಾಗಿ ಮಣೆ ಹಾಕುವುದಲ್ಲವೇ? ಕೆಲಸಗಾರರ ರಹದಾರಿ ಪತ್ರ ಅರ್ಥಾತ್‌ ಪಾಸ್‌ಪೋರ್ಟ್‌ಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಹೋಗುವ ದಲ್ಲಾಳಿಗಳು. ಅವರ ಹಿಂದೆ ಅಲೆದಾಡುವ ಪ್ರಯಾಣಿಕರು. ಅವರ ಬಟ್ಟೆಬರೆ ರೀತಿ ನೀತಿಗಳನ್ನು ನೋಡಿದರೆ ಕೂಲಿ ಕೆಲಸ ಮಾಡುವ ಜನರಂತೆ ಕಾಣುತ್ತಿದ್ದರು.

ಒಟ್ಟಿನಲ್ಲಿ  ಶ್ರೀಮಂತ ದೇಶದವರು ಬಡ ದೇಶದ ಬಡವರನ್ನು ಯಾವ ರೀತಿ ಬಳಸಿಕೊಳ್ಳಬಹುದೆನ್ನುವ ಚಿತ್ರಣವನ್ನು ಪ್ರತ್ಯಕ್ಷಕವಾಗಿ ನೋಡಿದಂತೆ ಆಯಿತು. ವಿಭಿನ್ನ ರೀತಿಯ ಜನರ ಒಂದು ಸಂತೆಯಂತೆ ಇತ್ತು. ಬೆಳಗಿನ ಆರೂವರೆ ಗಂಟೆ ಅಂದರೆ ಭಾರತದಲ್ಲಿ ಎಂಟೂವರೆ ವಿಮಾನದ ಮೆಟ್ಟಲನ್ನು ಇಳಿದು ಬಂದ ಮೇಲೆ ಹವಾ ನಿಯಂತ್ರಿತ ಬಸ್ಸಿನಲ್ಲಿ ನಮ್ಮನ್ನು ಕರೆದುಕೊಂಡು ಹೋಗಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ