– ಸಿ. ಮಮತಾ

ನಮ್ಮ ದಿನನಿತ್ಯದ ಖರ್ಚುಗಳ ಮಧ್ಯೆ ಸಣ್ಣ ಪುಟ್ಟ ಉಳಿತಾಯವನ್ನಂತೂ ನಾವು ಮಾಡುತ್ತೇವೆ. ಆದರೆ ಉಳಿತಾಯದೊಂದಿಗೆ ಹೂಡಿಕೆ ಮಾಡುವ ಅಭ್ಯಾಸವಿಟ್ಟುಕೊಂಡರೆ ಆಗ ಲಾಭವುಂಟಾಗುತ್ತದೆ. ಹೂಡಿಕೆಯ ವಿಷಯ ಬಂದಾಗ ಹೆಚ್ಚಿನ ಜನಕ್ಕೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಇಚ್ಛೆಯುಂಟಾಗುತ್ತದೆ. ಆದರೆ ಅಸಲಿಗೆ ನಿಮಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಅಭ್ಯಾಸವಿದ್ದರೆ ಅದು ನಷ್ಟದ ವ್ಯಾಪಾರವೆಂದು ಸಾಬೀತಾಗುತ್ತದೆ.

ಫೈನಾನ್ಶಿಯರ್ ಪ್ಲ್ಯಾನರ್‌ ಸುರೇಶ್‌ರ ಪ್ರಕಾರ ಹೊಸ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡುವುದು ಒಂದು ಉತ್ತಮ ಆಯ್ಕೆಯಾಗಿದೆ. ಮ್ಯೂಚುವಲ್‌ ಫಂಡ್‌ನಲ್ಲಿ ಹೂಡುವುದರಿಂದ ಯಾವುದೇ ಅಪಾಯವಿಲ್ಲ ಎಂದಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡುವುದಕ್ಕೆ ಹೋಲಿಸಿದರೆ ಇದು ಕಡಿಮೆ ಅಪಾಯಕಾರಿ.

ಈಕ್ವಿಟಿಯಲ್ಲಿ ಹೂಡಿಕೆಗೆ ಹೋಲಿಸಿದರೆ ಮ್ಯೂಚುವಲ್‌ ಫಂಡ್‌ ಏಕೆ ಉತ್ತಮವೆಂದು ತಿಳಿಯೋಣ ಬನ್ನಿ :

ನೀವು ಮ್ಯೂಚುವಲ್ ಫಂಡ್‌ನಲ್ಲಿ ಹೂಡುವ ಮೊದಲು ಷೇರು ಮತ್ತು ಮ್ಯೂಚುವಲ್ ಫಂಡ್‌ನ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು. ನೀವು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದಾಗ ಅದರರ್ಥ ನೀವು ಒಂದು ಸಾರ್ವಜನಿಕ ಕಂಪನಿಯಲ್ಲಿ ಷೇರಿನ ದರ ಕಡಿಮೆ ಇದ್ದಾಗ ಕೊಂಡು ದರ ಹೆಚ್ಚಾದಾಗ ಅವನ್ನು ಮಾರುತ್ತೀರಿ ಎಂದು. ಆದಾಗ್ಯೂ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆಯ ಅರ್ಥವೇನೆಂದರೆ ನಿಮ್ಮ ಫಂಡ್‌ ಮ್ಯಾನೇಜರ್‌ ನೀವು ಹೂಡಿದ ಹಣವನ್ನು ಬಾಂಡ್‌, ಷೇರು, ಡಿಬೆಂಚರ್‌ ಮುಂತಾದವು ಬೇರೆ ಬೇರೆ ಕಡೆ ಹೂಡುತ್ತಾರೆ. ಹೀಗಿರುವಾಗ ಮ್ಯೂಚುವಲ್‌ ಫಂಡ್‌ನ ರಿಟರ್ನ್ಸ್ ಬೇರೆ ಬೇರೆ ಶ್ಯೂರಿಟಿಗಳಿಂದ ಬರುವ ಲಾಭವನ್ನು ಅಲಂಬಿಸಿರುತ್ತದೆ.

ಅಪಾಯ

ಮ್ಯೂಚುವಲ್‌ ಫಂಡ್‌ ಮತ್ತು ಷೇರು ಈಕ್ವಿಟಿಯಲ್ಲಿ ಹೂಡಿಕೆ ಎರಡರಲ್ಲೂ ಅಪಾಯ ಇದೆ. ನೀವು ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿದಾಗ ಈ ಅಪಾಯ ಕೊಂಚ ಕಡಿಮೆಯಾಗುತ್ತದೆ. ಅಲ್ಲಿ ಹಣ ಹೂಡಿದಾಗ ನಿಮ್ಮ ಹೂಡಿಕೆ ವಿಭಿನ್ನ ಪ್ರಕಾರದ ಇನ್‌ವೆಸ್ಟ್‌ ಮೆಂಟ್ ಟೂಲ್ಸ್‌ಗಳಲ್ಲಿ ಮಾಡಲಾಗುತ್ತದೆ. ಒಂದು ಟೂಲ್ಸ್ ಪ್ರದರ್ಶನ ಸರಿ ಇಲ್ಲದಿದ್ದರೆ ಇನ್ನೊಂದು ಚೆನ್ನಾಗಿರಬಹುದು. ಆಗ ಅಪಾಯ ಕಡಿಮೆ ಆಗುತ್ತದೆ. ಈಕ್ವಿಟಿಯಲ್ಲಿ ಹೂಡಿಕೆಯ ಅತ್ಯಂತ ದೊಡ್ಡ ನಷ್ಟವೆಂದರೆ ಒಂದು ವೇಳೆ ಷೇರು ಮಾರುಕಟ್ಟೆ ಕೆಳಹೋಗುತ್ತಿದ್ದರೆ ಅದೇ ಅನುಪಾತದಲ್ಲಿ ನಿಮಗೆ ಅಷ್ಟೇ ನಷ್ಟವಾಗುತ್ತದೆ. ಒಟ್ಟಿನಲ್ಲಿ ನಿಮ್ಮ ಹೂಡಿಕೆಯ ಪ್ರದರ್ಶನ ಯಾವುದಾದರೂ ಒಂದು ಕಂಪನಿಯ ಷೇರುಗಳ ಪ್ರದರ್ಶನದವರೆಗೆ ಮಾತ್ರ ಸೀಮಿತವಾಗಿರುತ್ತದೆ.

ಹೊಸ ಹೂಡಿಕೆದಾರರಿಗೆ ಉತ್ತಮ

ಮೊದಲ ಬಾರಿ ಹೂಡುತ್ತಿರುವವರಿಗೆ ಹಾಗೂ ಷೇರು ಮಾರುಕಟ್ಟೆಯ ಅನುಭವವಿಲ್ಲದವರಿಗೆ ಮ್ಯೂಚುವಲ್ ಫಂಡ್‌ ಉತ್ತಮ. ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿದ ನಂತರ ಅದರ ವ್ಯವಸ್ಥೆಯ ಎಲ್ಲ ಜವಾಬ್ದಾರಿ ಫಂಡ್‌ ಮ್ಯಾನೇಜರ್‌ದಾಗಿದೆ. ಆದ್ದರಿಂದ ಹೂಡಿಕೆದಾರ ಭಯಪಡಬೇಕಿಲ್ಲ. ಆದಾಗ್ಯೂ ಹೂಡಿಕೆದಾರ ಇದರ ವ್ಯವಸ್ಥೆಗಾಗಿ ಕಾಲಕಾಲಕ್ಕೆ ಫೀಸ್‌ ಕಟ್ಟಬೇಕಾಗುತ್ತದೆ. ಈಕ್ವಿಟಿ ಷೇರಿನಲ್ಲಿ ಹೂಡಿಕೆಗಾಗಿ ಸಾಕಷ್ಟು ರಿಸರ್ಚ್‌ ಮಾಡುವ ಅಗತ್ಯವಿದೆ. ಒಂದು ವೇಳೆ ನಷ್ಟವಾದರೆ ಜವಾಬ್ದಾರಿ ನಿಮ್ಮದೇ.

ಡೈವರ್ಸಿಫಿಕೇಶನ್

ಒಬ್ಬ ಒಳ್ಳೆಯ ಹೂಡಿಕೆದಾರನೆಂದರೆ ಲಾಭ ಸಂಪಾದಿಸಲು ಕೇವಲ ಒಂದೇ ರೀತಿಯ ಹೂಡಿಕೆ ಆಯ್ಕೆ ಮತ್ತು ಸೆಕ್ಟರ್‌ನ್ನು ಅಲಂಬಿಸದಿರುವುದು. ವಿಭಿನ್ನ ಸೆಕ್ಟರ್‌ಗಳು ಮತ್ತು ಹೂಡಿಕೆಗಳಲ್ಲಿ ಹಣ ಹಾಕುವುದನ್ನೇ `ಡೈವರ್ಸಿಫಿಕೇಶನ್‌’ ಎನ್ನುತ್ತಾರೆ. ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆದಾರನಿಗೆ ಡೈವರ್ಸಿಫಿಕೇಶನ್‌ನ ಆಯ್ಕೆ ಸಿಗುತ್ತದೆ. ಆದರೆ ಈಕ್ವಿಟಿ ಷೇರಿನಲ್ಲಿ ಹಾಗಿಲ್ಲ.

ಎಚ್ಚರಿಕೆಗಳು

ಸಾಧಾರಣವಾಗಿ ಮ್ಯೂಚುವಲ್ ಫಂಡ್‌ ಅಥವಾ ಬೇರಾವುದೋ ಕಂಪನಿಯಲ್ಲಿ ಹೂಡುವಾಗ ಬಹಳಷ್ಟು ಜನ ಅಲಕ್ಷ್ಯದಿಂದ ಕಾಗದ ಪತ್ರಗಳ ಮೇಲೆ ಸಹಿ ಹಾಕಿಬಿಡುತ್ತಾರೆ. ಹಾಗೆ ಮಾಡುವುದರಿಂದ ನೀವು ಕಷ್ಟಕ್ಕೆ ಸಿಲುಕುತ್ತೀರಿ. ಆದ್ದರಿಂದ ಸಹಿ ಮಾಡುವ ಮುಂಚೆ ಪಾಲಿಸಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ಗಮನವಿಟ್ಟು ಓದಿ.

– ಅರ್ಜಿ ತುಂಬಿಸುವಾಗ, ಅಡ್ರೆಸ್‌ ಪ್ರೂಫ್‌ ಕೊಡುವಾಗ ನಿಮ್ಮ ಪರ್ಮನೆಂಟ್‌ ಅಡ್ರೆಸ್‌ ಕೊಡಿ. ಎಲ್ಲ ರೀತಿಯ ಪತ್ರ ವ್ಯವಹಾರಗಳು ಸುಗಮವಾಗುತ್ತವೆ.

– ನಿಮ್ಮ ಹೂಡಿಕೆಗೆ ಸಂಬಂಧಿಸಿದ ಎಲ್ಲ ಸ್ಟೇಟ್‌ಮೆಂಟ್‌ ಬಹಳ ಸುಲಭವಾಗಿ ಇಮೇಲ್ನಲ್ಲಿ ಸಿಗುತ್ತದೆ. ಆದ್ದರಿಂದ ಇಮೇಲ್‌ ಅಡ್ರೆಸ್‌ ಬರೆಯುವಾಗ ಎಚ್ಚರದಿಂದಿರಿ.

– ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಫಂಡ್‌ಗಳನ್ನು ವ್ಯವಸ್ಥೆ ಮಾಡುವುದು ಫಂಡ್‌ ಮ್ಯಾನೇಜರ್‌ರ ಜನಾಬ್ದಾರಿ. ಅಂದರೆ ಆಗಾಗ್ಗೆ ನಿಮ್ಮ ಹೂಡಿಕೆಯ ಸಮೀಕ್ಷೆ ಮಾಡಬೇಕು. ಒಂದುವೇಳೆ ನಿಮಗೆ ಈ ಪ್ರದರ್ಶನದಿಂದ ಸಂತೋಷವಾಗದಿದ್ದರೆ ಫಂಡ್‌ ಮ್ಯಾನೇಜರ್‌ನ್ನು ಬದಲಿಸಲು ತೀರ್ಮಾನಿಸಿ.

– ಮ್ಯೂಚುವಲ್‌ ಫಂಡ್‌ ಕೂಡ ಅನೇಕ ರೀತಿಯಲ್ಲಿ ಬರುತ್ತವೆ. ಉದಾಹರಣೆಗೆ ಡೇಟ್‌, ಈಕ್ವಿಟಿ, ಲಿಕ್ವಿಡ್‌, ಮ್ಯೂಚುವಲ್ ಫಂಡ್‌ ಇತ್ಯಾದಿ. ಹೀಗಾಗಿ  ಅದರಲ್ಲಿ ಹೂಡುವ ಮೊದಲು ತುಂಬ ಅಗತ್ಯವಾದದ್ದೇನೆಂದರೆ ನೀವು ಹಣ ಹಾಕಿರುವ ಮ್ಯೂಚುವಲ್‌ ಕಂಪನಿ ಯಾವುದು ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಅದರ ಪ್ರದರ್ಶನ ಹೇಗಿರುತ್ತದೆಂದು ತಿಳಿದುಕೊಳ್ಳುದು.

Tags:
COMMENT