- ಕೆ. ಸರಸ್ವತಿ

ನೀವು ಇಲ್ಲಿ ಕೊಟ್ಟಿರುವ ಕೆಲವು ಸಂಗತಿಗಳನ್ನು ಗಮನಿಸಿದರೆ ಹೊಸದಾಗಿ ಬಂದ ನೆರೆಮನೆಯವರ ಜೊತೆ ಮಧುರ ಸಂಬಂಧ ಕಾಯ್ದುಕೊಂಡು ಹೋಗುವಲ್ಲಿ ಯಶಸ್ವಿಯಾಗುವಿರಿ.

ಅದೆಷ್ಟೋ ತಿಂಗಳಿನಿಂದ ನೀವು ಎದುರು ಮನೆಯ ಫ್ಲ್ಯಾಟ್‌ ಮುಂದೆ `ಫಾರ್‌ ಸೇಲ್ ` ಫಲಕವನ್ನು ಕಂಡಿರುತ್ತೀರಿ. ಒಂದು ದಿನ ಅದೇ ಜಾಗದಲ್ಲಿ `ಸೋಲ್ಡ್' ಫಲಕ ಕಂಡು ಬರುತ್ತದೆ. ಆಗ ನಿಮಗೆ ಬಂದ ತಕ್ಷಣದ ವಿಚಾರವೆಂದರೆ, ಆ ಮನೆಯನ್ನು ಯಾರು ಖರೀದಿಸಿದರು? ನಮ್ಮ ಮನೆ ಪಕ್ಕದಲ್ಲಿ ಬರುವ ಹೊಸಬರು ಯಾರು? ಯಾರೋ ನಮಗೆ ಅಪರೂಪದ ವಸ್ತುವೊಂದನ್ನು ಉಡುಗೊರೆಯಾಗಿ ಕೊಟ್ಟಾಗ ಹೇಗೆ ಖುಷಿಯಾಗುತ್ತೋ, ಅದೇ ರೀತಿ ಪಕ್ಕದಲ್ಲಿ ಹೊಸಬರು ಬಂದಾಗ ಕೂಡ ಅಷ್ಟೇ ಖುಷಿಯಾಗುತ್ತದೆ. ನೆರೆಮನೆಯವರೊಂದಿಗೆ ಮಧುರ ಬಾಂಧವ್ಯ ನಾಗರಿಕ ಸಮಾಜದ ಗುರುತು. ನಾವು ಹೊಸ ಸ್ನೇಹಿತರನ್ನೇನೊ ಮಾಡಿಕೊಳ್ಳುತ್ತೇವೆ. ಆದರೆ ನೆರೆಮನೆಯವರನ್ನು ಬದಲಿಸುವುದು ಸುಲಭದ ಸಂಗತಿಯಲ್ಲ. ಪ್ರಧಾನಮಂತ್ರಿ ಕುರ್ಚಿ ಅಲಂಕರಿಸಿದ ಬಳಿಕ ನರೇಂದ್ರ ಮೋದಿ ಅವರು ಕೂಡ ನೆರೆಯ ದೇಶಗಳೊಂದಿಗೆ ಸಂಬಂಧ ಸುಧಾರಣೆ ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ನೆರೆಯ ದೇಶಗಳಷ್ಟೇ ಅಲ್ಲ, ಜಗತ್ತಿನ ಬೇರೆ ಬೇರೆ ದೇಶಗಳೊಂದಿಗೆ ಸ್ನೇಹ ಹಸ್ತ ಚಾಚುತ್ತಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿ ಕೂಡ ನೆರೆಹೊರೆಯವರೊಂದಿಗೆ ಉತ್ತಮ ಸೌಹಾರ್ದ ಸಂಬಂಧ ಹೊಂದಬೇಕೆಂದು ಹೇಳುತ್ತದೆ. ಏಕೆಂದರೆ ಒಬ್ಬ ಒಳ್ಳೆಯ ನೆರೆಮನೆಯು 10 ಸಂಬಂಧಿಕರಿಗೆ ಸಮ. ನೆರೆಮನೆಯವರೊಂದಿಗೆ  ಸಂಬಂಧಗಳ ಆರಂಭ ಹೇಗೆ ಮಾಡಬೇಕು ಎಂಬ ಬಗ್ಗೆ ತಿಳಿದುಕೊಳ್ಳಿ.

ನೆರೆಮನೆಯವರು ಯಾರು?

ಎಲ್ಲಕ್ಕೂ ಮುಂಚೆ ನೀವು ತಿಳಿದುಕೊಳ್ಳಬೇಕಾದ ವಿಷಯವೆಂದರೆ, ನಿಮ್ಮ ಮನೆ ಪಕ್ಕದಲ್ಲಿ ಬಂದಿರುವವರು ಯಾರು? ಅದು ಮಕ್ಕಳಿರುವ ಮನೇನಾ? ಆ ಮನೆಯಲ್ಲಿ ಯಾರಾದರೂ ವೃದ್ಧರು ಇದ್ದಾರಾ? ಆ ಕುಟುಂಬದಲ್ಲಿರುವವರು ನವವಿವಾಹಿತ ಜೋಡಿಯಾ? ಎಂಬುದನ್ನು ತಿಳಿದುಕೊಳ್ಳಬೇಕು.

ಹೊಸ ಮನೆಗೆ ಶಿಫ್ಟ್ ಆದನಂತರ ನಿಮ್ಮ ನೆರೆಮನೆಯವರಿಗೆ ಮೊದಲು ಯಾವ ಸಂಗತಿಯ ಅವಶ್ಯಕತೆ ಬೀಳಬಹುದು ಎಂಬುದನ್ನು ತಿಳಿದುಕೊಳ್ಳಿ.

ನೆರೆಮನೆಯ ಹೊಸ ಅತಿಥಿಗಳನ್ನು ಸ್ವಾಗತಿಸುವ ಕುರಿತಂತೆ ಟಿ.ವಿ.ಯಲ್ಲಿ ಒಂದು ಜಾಹೀರಾತು ನೋಡಿರುತ್ತೀರಿ. ವೃದ್ಧ ದಂಪತಿಗಳು ತಮ್ಮ ವಾಹನದಲ್ಲಿ ಮನೆಯ ಸಾಮಾನುಗಳನ್ನು ತೆಗೆದುಕೊಂಡು ಬರುತ್ತಾರೆ. ಆ ಕಟ್ಟಡದ ಎಲ್ಲ ನಾಗರಿಕರು ಅವರ ಫೋಟೋವನ್ನು ಮೊಬೈಲ್ ಮೂಲಕ ರವಾನಿಸಿ ಅವರ ಸಾಮಾನುಗಳನ್ನು ಮನೆಗೆ ರವಾನಿಸುವಲ್ಲಿ ನೆರವಾಗುತ್ತಾರೆ. ಒಂದು ವೇಳೆ ಇದು ವಾಸ್ತವದಲ್ಲಿ ನಡೆದದ್ದಾದರೆ ಆ ವೃದ್ಧ ದಂಪತಿಗಳಿಗೆ ಹೊಸಮನೆಯ ವಾತಾವರಣ ಅದೆಷ್ಟು ಖುಷಿ ಕೊಡಬಹುದು ನೀವೇ ಯೋಚಿಸಿ.

ಟೀ ಪಾರ್ಟಿಗೆ ಆಫರ್‌ ಕೊಡಿ

ನೀವು ನಿಮ್ಮ ನೆರೆಮನೆಯವರಿಗೆ ಒಂದು ವೆಲ್‌ಕಮ್ ಬ್ಯಾಸ್ಕೆಟ್‌ ರೆಡಿ ಇಟ್ಟುಕೊಂಡು ಕೂಡ ಅವರನ್ನು ಸ್ವಾಗತಿಸಬಹುದು. ಮಾರುಕಟ್ಟೆಯಿಂದ ಒಂದು ವಿಶಿಷ್ಟ ಆಕಾರದ ಬ್ಯಾಸ್ಕೆಟ್‌ ತಂದು, ಅದರಲ್ಲಿ ಶೋಪೀಸ್‌ ಅಲಂಕರಿಸಿಟ್ಟು ಜೊತೆಗೊಂದು ಕಾರ್ಡ್‌ ಇಟ್ಟು ನೆರೆಮನೆಯವರನ್ನು ಆಹ್ವಾನಿಸಿ. ಪಕ್ಕದಮನೆಗೆ ಹೊಸಬರು ಬಂದ ದಿನವೇ ಕೊಟ್ಟರೆ ಅದಕ್ಕೊಂದು ವಿಶೇಷ ಅರ್ಥ ಬರುತ್ತದೆ. ಬಂದ ದಿನವೇ ಶಿಫ್ಟಿಂಗ್‌ ಕಾರಣದಿಂದ ಅವರು ಸುಸ್ತಾಗಿದ್ದರೆ ಮರುದಿನ ಅವರಿಗೆ ಟೀ ಪಾರ್ಟಿಗೆ ಬರಲು ಆಮಂತ್ರಣ ಕೊಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ