ಹಿಂದಿಯ ಕಾಮಿಡಿ ಸೀರಿಯಲ್ `ಭಾಭೀಜಿ ಘರ್ ಪರ್ ಹೈ'ನ ಕಥೆ ಹಲವಾರು ಬಾರಿ ಸೆಕ್ಸ್ ಫ್ಯಾಂಟಸಿಗಳನ್ನು ತೋರಿಸುವ ಪ್ರಯತ್ನ ಮಾಡುತ್ತದೆ. ಈ ಸೀರಿಯಲ್ನಲ್ಲಿ ಅನಿತಾ ಹಾಗೂ ವಿಭೂ ಮಿಶ್ರಾ ಎಂಬ ಪತಿ ಪತ್ನಿಯರು ಬಹಳ ರೊಮ್ಯಾಂಟಿಕ್ ಆಗಿರುತ್ತಾರೆ. ಅನಿತಾ ಹಲವಾರು ಬಾರಿ ಸಮಾಜದ ಸೆಕ್ಸ್ ಫ್ಯಾಂಟಸಿಗಳನ್ನು ತೋರಿಸಲು ಪ್ರಯತ್ನಿಸುತ್ತಾಳೆ. ಅವಳು ಹೆಚ್ಚು ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾಗ ಗಂಡನಿಗೆ ಬೇರೊಂದು ರೂಪದಲ್ಲಿ ಪ್ರೀತಿಸಲು ಹೇಳುತ್ತಾಳೆ. ಒಮ್ಮೆ ಅವನಿಗೆ ಪ್ಲಂಬರ್ ಆಗಲು ಹೇಳುತ್ತಾಳೆ. ಒಮ್ಮೆ ಎಲೆಕ್ಟ್ರೀಶಿಯನ್ ಆದರೆ ಇನ್ನೊಮ್ಮೆ ರೌಡಿ, ಗೂಂಡಾ ತರಹ ಪ್ರೀತಿಸಲು ಹೇಳುತ್ತಾಳೆ. ಗಂಡ ಅದೇ ಗೆಟಪ್‌ನಲ್ಲಿ ಬಂದು ಅವರಂತೆಯೇ ವರ್ತಿಸಿ ಮಾತನಾಡುತ್ತಾನೆ. ಅದರಿಂದ ಅನಿತಾಗೆ ಬಹಳ ಖುಷಿಯಾಗುತ್ತದೆ. ಅವಳು ದುಪ್ಪಟ್ಟು ಎನರ್ಜಿಯಿಂದ ಪ್ರೀತಿಸುತ್ತಾಳೆ. ಅದು ಕಾಮಿಡಿ ಸೀರಿಯಲ್ ಆಗಿದ್ದರೂ ಅದರಲ್ಲಿ ಪತಿಪತ್ನಿಯರ ಸಂಬಂಧಗಳನ್ನು ಬಹಳ ನಾಟಕೀಯ ರೀತಿಯಲ್ಲಿ ತೋರಿಸಲಾಗಿದೆ.
ಸೆಕ್ಸ್ ಕುರಿತು ಮಹಿಳೆಯರ ಸಾಂಪ್ರದಾಯಿಕ ಆಲೋಚನೆಗಳು ರೂಢಿಯಲ್ಲಿವೆ. ಆದರೆ ಸಮಯ ಕಳೆದಂತೆ ಅವು ಬದಲಾಗುತ್ತಿವೆ. ಈಗ ಪುರುಷರಂತೆ ಮಹಿಳೆಯರೂ ಸಹ ಸೆಕ್ಸನ್ನು ಸಂಪೂರ್ಣವಾಗಿ ಎಂಜಾಯ್ ಮಾಡಲು ಇಚ್ಛಿಸುತ್ತಾರೆ. ಅದರ ಬಗ್ಗೆ ಅವರ ಮನದಲ್ಲಿ ಅನೇಕ ಕನಸುಗಳೂ ಇರುತ್ತವೆ. ಈಗ ಕೌಮಾರ್ಯವನ್ನು ಹುಡುಗಿ ಕಾಪಾಡಿಕೊಳ್ಳಬೇಕು ಎನ್ನುವುದು ಹಳೆಯ ವಿಷಯವಾಗಿದೆ. ಈಗ ಮದುವೆಗೆ ಮೊದಲು ಅಷ್ಟೇ ಅಲ್ಲ ಮದುವೆಯ ನಂತರ ಸೆಕ್ಸ್ ನಿಷೇಧಗಳು ಮುರಿದುಬೀಳುತ್ತವೆ. ಮದುವೆಯ ನಂತರ ಪತಿಪತ್ನಿಯರು ಮುಕ್ತವಾಗಿ ತಮ್ಮ ಬಯಕೆಗಳನ್ನು ಪೂರೈಸಿಕೊಳ್ಳುವ ಸಂದರ್ಭಗಳನ್ನು ಹುಡುಕುತ್ತಿದ್ದಾರೆ.
ತೊಂದರೆಗಳಿಂದ ರಕ್ಷಣೆ
ಸೆಕ್ಸ್ ನಂತರ ಬರುವ ತೊಂದರೆಗಳಿಂದ ರಕ್ಷಿಸಿಕೊಳ್ಳಲೂ ಮಹಿಳೆಯರು ಸಿದ್ಧರಿರುತ್ತಾರೆ. ಪ್ಲ್ಯಾಸ್ಟಿಕ್ ಸರ್ಜನ್ ಡಾ. ಆರತಿ ಹೀಗೆ ಹೇಳುತ್ತಾರೆ, ``ಮದುವೆಗೆ ಕೆಲವು ದಿನಗಳ ಮುಂಚೆ ಹುಡುಗಿಯರು ನಮ್ಮ ಬಳಿ ಬರುತ್ತಾರೆ. ತಾವು ಮದುವೆಗೆ ಮುಂಚೆ ಸೆಕ್ಸ್ ನಡೆಸಿದ್ದೇವೆ. ಅದರ ಬಗ್ಗೆ ಮದುವೆ ಆಗಲಿರುವ ಗಂಡನಿಗೆ ಗೊತ್ತಾಗಬಾರದು. ಅದಕ್ಕೇನು ಮಾಡಬೇಕು?``
ಹುಡುಗಿಯರಿಗೆ ಅದರ ಬಗ್ಗೆ ಸಲಹೆ ಕೊಟ್ಟರೆ ಅವರು ಅವಕಾಶ ಸಿಕ್ಕ ಕೂಡಲೇ ಸೆಕ್ಸ್ ಎಂಜಾಯ್ ಮಾಡಲು ಹಿಂಜರಿಯುವುದಿಲ್ಲ. ಮದುವೆಯಾಗಿ ಹಲವಾರು ವರ್ಷಗಳ ನಂತರ ತಮ್ಮನ್ನು ಶಾರೀರಿಕವಾಗಿ ಕುಮಾರಿಯರನ್ನಾಗಿ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿ ಬರುತ್ತಾರೆ.
''ವಿದೇಶಗಳಲ್ಲಿ ಸೆಕ್ಸ್ ಕುರಿತು ಬಹಳಷ್ಟು ಸಮೀಕ್ಷೆ ನಡೆಯುತ್ತಿರುತ್ತದೆ. ಆದರೆ ನಮ್ಮ ದೇಶದಲ್ಲಿ ಅಂತಹ ಸಮೀಕ್ಷೆ ನಡೆಯುವುದು ಬಹಳ ಕಡಿಮೆ. ಅನೇಕ ಬಾರಿ ಅಂತಹ ಸಮೀಕ್ಷೆಗಳಲ್ಲಿ ಮಹಿಳೆಯರು ತಮ್ಮ ಮನಸ್ಸಿನ ಮಾತನ್ನು ವ್ಯಕ್ತಪಡಿಸುತ್ತಾರೆ. ಸೆಕ್ಸ್ ಬಗ್ಗೆ ಅಲ್ಲಿ ಹೊಸ ಆಲೋಚನೆ ಮೂಡಿದೆ ಎಂದು ಅದರಿಂದ ತಿಳಿದುಬರುತ್ತದೆ. ಡಾ. ಆರತಿ ಹೀಗೆ ಹೇಳುತ್ತಾರೆ, ``ಮದುವೆಗೆ ಮೊದಲು ಬಂದಿದ್ದ ಒಬ್ಬ ಹುಡುಗಿಯ ಸಮಸ್ಯೆಯನ್ನು ಬಗೆಹರಿಸಿದ ನಂತರ ಕೆಲವು ದಿನಗಳ ಬಳಿಕ ಅವಳು ಮತ್ತೆ ಬಂದಳು. ಕೇಳಿದಾಗ ಮೇಡಂ, ಮತ್ತೆ ತಪ್ಪಾಗಿ ಹೋಯಿತು ಎಂದಳು.''
ಸೆಕ್ಸ್ ಕಾಯಿಲೆಗಳ ವೈದ್ಯೆ ಪ್ರಭಾ ಹೀಗೆ ಹೇಳುತ್ತಾರೆ, ನನ್ನ ಬಳಿ ಬರುವ ಕೆಲವು ಮಹಿಳೆಯರು ಎಮರ್ಜೆನ್ಸಿ ಪಿಲ್ಸ್ ಎಷ್ಟು ಬಾರಿ ಸೇವಿಸಬಹುದು ಎಂದು ಕೇಳುತ್ತಾರೆ. ಕೆಲವು ಮಹಿಳೆಯರು ವೈದ್ಯರ ಸಲಹೆ ಪಡೆಯದೇ ಇಂತಹ ಮಾತ್ರೆಗಳನ್ನು ಸೇವಿಸುತ್ತಾರೆ. ಕೆಲವು ಮಹಿಳೆಯರು ಗರ್ಭ ಧರಿಸಿದ ನಂತರ ತಾವೇ ಮೆಡಿಕಲ್ ಸ್ಟೋರ್‌ನಿಂದ ಗರ್ಭಪಾತದ ಔಷಧ ತಂದು ಸೇವಿಸುತ್ತಾರೆ. ವೈದ್ಯರ ಸಲಹೆ ಪಡೆಯದೆ ಇಂತಹ ಔಷಧ ಸೇವಿಸುವವರು ಪತಿಪತ್ನಿಯರಲ್ಲವೆಂದು ಮೆಡಿಕಲ್ ಸ್ಟೋರ್ಸ್ ನವರು ಹೇಳುತ್ತಾರೆ.