ಸಾಯಂಕಾಲ..... ನಲಿಯುವ ಕಾಲ : ಹಗಲಿನಲ್ಲಿ ದಿನವಿಡೀ ನ್ಯೂಯಾರ್ಕ್ ಜನರಿಂದ ಕಿಕ್ಕಿರಿದು ತುಂಬಿರುತ್ತದೆ, ಆದರೆ ಅದರ ಅಸಲಿ ಹೊಳಪು ಹೊರಹೊಮ್ಮುವುದೇ ಸಂಜೆಯ ನಂತರ. ಕಛೇರಿ ಕೆಲಸ ಮುಗಿಸಿಕೊಂಡ ಜನ ಮಂದೆ ಮಂದೆಯಾಗಿ ರಸ್ತೆಗಿಳಿಯುತ್ತಿದ್ದಂತೆ ಅವರ ಮನರಂಜನೆಗಾಗಿ ಎಲ್ಲೆಲ್ಲೂ ಸ್ಟ್ರೀಟ್ ಪ್ಲೇಯರ್ಸ್ ಸಿದ್ಧರಾಗಿರುತ್ತಾರೆ. ಈ ನಗರ ಅಂಥವರನ್ನು ಓಡಿಸುವುದಿಲ್ಲ, ಸ್ವಾಗತಿಸುತ್ತದೆ. ಅಂಥವರೇ ಈ ನಗರದ ನಾಡಿಮಿಡಿತ ಎನಿಸುತ್ತಾರೆ. ನೀವು ಮುಂದಿನ ಸಲ ಈ ನಗರಕ್ಕೆ ಹೋದಾಗ ಸಂಜೆ 8 ಗಂಟೆ ನಂತರದ ಈ ರಸಘಳಿಗೆಗಳನ್ನು ಕಳೆದುಕೊಳ್ಳಬೇಡಿ. ಇಂಥ ಕ್ಷಣ ಬಿಟ್ಟೋರುಂಟೇ ಎಂದು ಜನ ಅಲ್ಲಿ ಈ ಚಿತ್ರದಲ್ಲಿರುವಂತೆ ಸಂಭ್ರಮಿಸುತ್ತಾರೆ.
ಕೇವಲ ಇವಳ ಡ್ರೆಸ್ ಮಾತ್ರ ನೋಡಿ : ಮಾಡ್ ಹುಡುಗಿಯರ ಡ್ರೆಸ್‌ಗಳಲ್ಲಿ ದಿನೇದಿನೇ ಹೊಸ ಪ್ರಯೋಗ ನಡೆಯುತ್ತಲೇ ಇರುತ್ತದೆ. ಆದರೆ ಎಷ್ಟು ವೈವಿಧ್ಯತೆ ಬಂದರೂ ಹುಡುಗಿಯರಿಗೆ ತೃಪ್ತಿ ಎಂಬುವುದಿಲ್ಲ. ಮೆಸ್ ಬ್ರಾಂಡ್‌ನ ಈ ಮ್ಯಾಕ್ಸಿ ಶಿಫಾನ್ ನದು. ಇದರ ಮಸ್ಟರ್ಡ್ ಬಣ್ಣದ ಝಿಗ್‌ಝ್ಯಾಗ್ ಪ್ಯಾಟರ್ನ್ ವಿಶಿಷ್ಟ ಎನಿಸಿದೆ. ಈ ಉಡುಗೆ ಮುಚ್ಚಿಟ್ಟಿರುವುದಕ್ಕಿಂತ ಬಿಚ್ಚಿಟ್ಟಿರುವುದೇ ಹೆಚ್ಚಾಗಿದೆ ಅಲ್ಲವೇ?
ಗುಂಪುಗಾರಿಕೆ ಗದ್ದಲಗಳಿಲ್ಲ : ಅಮೆರಿಕಾದ ದ. ಕೆರೋಲಿನಾ ಯೂನಿವರ್ಸಿಟಿಯಲ್ಲಿ 8,700ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ವಿಡಂಬನೆ ಎಂದರೆ ಅಲ್ಲಿ ಎಲ್ಲಾ ತರಹದ ಬಣ್ಣ, ಭಾಷೆ, ದೇಶ, ಧರ್ಮಗಳ ವಿದ್ಯಾರ್ಥಿಗಳು ಒಂದಾಗಿದ್ದಾರೆ. ಈ ಭಿನ್ನತೆ ಕಾರಣ ನಮ್ಮಲ್ಲಿ ಸದಾ ಗುಂಪುಗಾರಿಕೆ ಗದ್ದಲ ನಡೆಯುವಂತೆ ಅಲ್ಲಿ ಖಂಡಿತಾ ಗೌಜಲಗಳಿಲ್ಲ ಕಾರಣ, ಅಲ್ಲಿ ಅಡ್ಮಿಷನ್ ಸಿಗುವುದೇ ಮಹಾ ಕಷ್ಟ ಹಾಗೂ ರಿಸಲ್ಟ್ ಅತ್ಯುತ್ತಮ! ನಿಜ ಅರ್ಥದಲ್ಲಿ ಕಲಿಯಲು ಬಂದ ಇವರಿಗೆ ಇಂಥ ಅನಗತ್ಯ ಚಟುವಟಿಕೆಗಳಿಗೆ ಪುರಸತ್ತಿಲ್ಲ.
ಜಪಾನಿಯರೇನೂ ಕಡಿಮೆಯಲ್ಲ : ಸಧ್ಯ! ಭಾರತೀಯರು ಮಾತ್ರವೇ ಸದಾ ಕೊಳಕು, ಗಲೀಜು ಹರಡುತ್ತಾ ಊರೆಲ್ಲ ಗಬ್ಬೆಬ್ಬಿಸುತ್ತಾರೆ ಅಂದುಕೊಂಡಿದ್ದರೆ ಅದು ತಪ್ಪು, ಈ ನಿಟ್ಟಿನಲ್ಲಿ ಜಪಾನೀಯರೇನೂ ಕಡಿಮೆಯಲ್ಲ! ರಾಜಧಾನಿ ಟೋಕಿಯೋದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಕಾಮಾಕುರಾ ಎಂಬಲ್ಲಿಗೆ ಪ್ರವಾಸಿಗರು ಅತಿ ಹೆಚ್ಚಾಗಿ ಹೋಗುತ್ತಾರೆ. ಅಲ್ಲಿ ಬುದ್ಧನ ವಿಶಾಲ ಕಂಚಿನ ಮೂರ್ತಿ ಸುಮಾರು 11.4 ಮೀ. ಎತ್ತರವಿದ್ದು, ಅದು 1252ರಲ್ಲಿ ಸ್ಥಾಪಿಸಲ್ಪಟ್ಟಿತಂತೆ! ಅಷ್ಟು ದೂರದ ಪರ್ವತ ಪ್ರದೇಶಕ್ಕೆ ಜನ ದಾರಿಯುದ್ದಕ್ಕೂ ಏನಾದರೂ ತಿಂದುಣ್ಣುತ್ತಾ ಬರುತ್ತಾರೆ. ಹೀಗಾಗಿ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಆಹಾರ ವಸ್ತುಗಳಾದ್ದರಿಂದ ಎಲ್ಲೆಡೆ ದುರ್ನಾತ ಹರಡುತ್ತದೆ, ಬೆಕ್ಕುಗಳಂಥವು ಅವಕ್ಕೆ ಮುತ್ತಿಕೊಂಡು ಇನ್ನಷ್ಟು ಗಲೀಜು ಮಾಡುತ್ತವೆ. ಹೀಗಾಗಿ ನಡೆದಾಡುತ್ತಾ ತಿನ್ನುವುದನ್ನು ಅಲ್ಲಿ ಬ್ಯಾನ್ ಮಾಡಲಾಗಿದೆ.
ಉನ್ಮುಕ್ತ ವ್ಯವಹಾರ : ದ. ಅಮೆರಿಕಾದ ದೇಶಗಳು ಕೆನಡಾ, ಉ. ಅಮೆರಿಕಾದಂತೆ ಶ್ರೀಮಂತವಲ್ಲ. ಆದರೆ ಅಲ್ಲಿ ಮೋಜುಮಸ್ತಿಯ ಉನ್ಮುಕ್ತ ವ್ಯವಹಾರಕ್ಕೇನೂ ಕೊರತೆ ಇಲ್ಲ. ಅಲ್ಲಿ ಸಾಲ್ಸಾ, ಸಾಂಬಾ, ಚಾ ಚಾ, ಮ್ಯಾಂಬೋ ತರಹದ ಡ್ಯಾನ್ಸ್ ಶುರುವಾಗಿ ವಿಶ್ವವೆಲ್ಲ ಹರಡಿದೆ. ಅಲ್ಲಿ ಹಗಲೂ ರಾತ್ರಿ ಸತತ ನಡೆಯುವ ಕಾರ್ನಿವಾಲ್‌ಗಳಿಗೆ ಕೊರತೆಯಿಲ್ಲ. ಇಲ್ಲಿನ ಕೊಲಂಬಿಯಾದ ಸಣ್ಣ ನಗರ ರಾಂಕಿಲಾ ನೋಡಿ. ಇಲ್ಲಿನ ಫೋಟೋ ನಮ್ಮ ಭಾರತೀಯ ಢೋಲಿನಂತೆಯೇ ಇದೆಯಲ್ಲವೇ? ಆಹಾ.... ಇಲ್ಲಿನ ರಂಗು, ಮೋಜು, ಮಸ್ತಿ, ಆಕರ್ಷಣೆಗಳನ್ನು ನೋಡಿಯೇ ತಣಿಯಬೇಕು. ಉ. ಅಮೆರಿಕಾದರ ಶ್ರೀಮಂತಿಕೆ ಅವರ ಪಾಡಿಗಿರಲಿ, ನಮ್ಮಲ್ಲಿನ ಈ ಮೋಜುಮಸ್ತಿ ನಿಮಗುಂಟೆ ಎಂದು ಕೇಳುತ್ತಿರುವಂತಿದೆ. ನಮ್ಮ ಬಳಿ ಏನಿದೆಯೋ ಅದರಲ್ಲಿ ತೃಪ್ತಿ ಪಡುವುದಕ್ಕಿಂತ ಹೆಚ್ಚಿನದೇನಿದೆ?