ದಿನೇ ದಿನೇ ಗಗನಕ್ಕೇರುತ್ತಿರುವ ಇಂದಿನ ಬೆಲೆ ಕೇಳಿದರೆ, ಮತ್ತೆ ಮತ್ತೆ ಉಣ್ಣೆ ಬಟ್ಟೆಗಳನ್ನು ಕೊಳ್ಳುವುದು ಖಂಡಿತಾ ಸುಲಭವಲ್ಲ. ಹೀಗಿರುವಾಗ ನಮ್ಮ ಹಳೆಯ ವುಲ್ಲನ್ ಡ್ರೆಸ್‌ಗಳನ್ನು ಸಾಧ್ಯವಾದಷ್ಟೂ ಜೋಪಾನಾಗಿಟ್ಟುಕೊಂಡರೆ, ಅವನ್ನು ಸುದೀರ್ಘ ಕಾಲ ಬಾಳಿಕೆ ಬರುವಂತೆ ಮಾಡಬಹುದು.
ಹತ್ತಿಯ ರಜಾಯಿಗಳನ್ನು ನೈಸರ್ಗಿಕವಾಗಿ ಬೆಚ್ಚಗಿಡುವಂತೆ ಮಾಡಲು ಅದನ್ನು ಪ್ರತಿದಿನ 2-3 ತಾಸು ಬಿಸಿಲಿಗೆ ಹರಡಬೇಕು.
ಮೆಹಂದಿ ಅಥವಾ ಅತ್ತರನ್ನು ರಜಾಯಿಗಳಿಗೂ ಬಳಸಿಕೊಳ್ಳಬಹುದು. ಹತ್ತಿಯಿಂದ ರಜಾಯಿ ಹೊಲಿಸುವಾಗ ಇದನ್ನು ಹತ್ತಿ ಜೊತೆ ತುಂಬಿಸಿದರೆ, ರಜಾಯಿ ಹೆಚ್ಚು ದಿನ ಬೆಚ್ಚಗೆ ಉಳಿಯುತ್ತದೆ.
ಹೊಸ ರಜಾಯಿ ಅಥವಾ ದಿಂಬುಗಳನ್ನು ಹತ್ತಿಯಿಂದ ತುಂಬಿಸುವಾಗ, ತುಸು ಕರ್ಪೂರ ತುಂಬಿಸಿ. ಆಗ ತಿಗಣೆಗಳೆಂದಿಗೂ ರಜಾಯಿ ಬಳಿ ಬರುವುದಿಲ್ಲ.
ಹಿನಾ, ಶಮಾಮಾ, ಮಶ್ಕೀನಾ ಮುಂತಾದ ಅತ್ತರುಗಳನ್ನು ಉಣ್ಣೆಯ ವಸ್ತ್ರಗಳ ಮೇಲೆ ಚಿಮುಕಿಸಿಕೊಳ್ಳುವುದರಿಂದ, ದೇಹಕ್ಕೆ ನೈಸರ್ಗಿಕ ಶಾಖ ಸಿಗುತ್ತದೆ.
ಉಣ್ಣೆ ವಸ್ತ್ರಗಳನ್ನು ತಜ್ಞರ ಸೂಚನೆ ನೀಡಲಾಗಿರುವ ಡಿಟರ್ಜೆಂಟ್‌ನಿಂದಲೇ ಒಗೆಯಬೇಕು. ವುಲ್ಲನ್ ಡ್ರೆಸ್‌ಗಳಲ್ಲಿ ಹೆಚ್ಚು ಮಡಿಕೆ ಬಿದ್ದಿದ್ದರೆ, ಸ್ಟೀಂ ಬಾಥ್‌ರೂಮಿನಲ್ಲಿರಿಸಿ.
ಇವನ್ನು ಇಸ್ತ್ರೀ ಮಾಡಲು ಸ್ಟೀಂ ಐರನ್ ಬಾಕ್ಸ್ ನ್ನೇ ಉಪಯೋಗಿಸಿ.
ಉಣ್ಣೆ ವಸ್ತ್ರ ಧರಿಸುವ ಮೊದಲು ಅಗತ್ಯ ಡ್ರೈ ಕ್ಲೀನ್ ಮಾಡಿಸಿ, ಇಲ್ಲದಿದ್ದರೆ ಕೊಳೆಯಿಂದಾಗಿ ಅವು ಹೆಚ್ಚು ಗಟ್ಟಿ ಆಗುತ್ತವೆ.
ಒದ್ದೆ ಅಥವಾ ನೀರು ಬಿದ್ದ ಉಣ್ಣೆ ಬಟ್ಟೆಗಳ ಮೇಲೆ ನೇರ ಪ್ರೆಸ್ ಮಾಡಬೇಡಿ. ಹಾಗೆ ಮಾಡಿದರೆ ಅವುಗಳ ಹೊಳಪು ಬೇಗ ಹೋಗುತ್ತವೆ. ಇವನ್ನು ಹ್ಯಾಂಗರ್‌ಗಳಲ್ಲಿ ನೇತುಹಾಕುವ ಬದಲು, ನೀಟಾಗಿ ಫೋಲ್ಡ್ ಮಾಡಿಡಿ.
ಇವನ್ನೆಂದೂ ಬ್ಲೀಚ್ ಮಾಡಲು ಹೋಗಬೇಡಿ. ಅವುಗಳ ಉಣ್ಣೆಯ ಎಳೆ, ಬಣ್ಣ ಹಾಳಾಗುತ್ತದೆ.
ಉಣ್ಣೆ ಬಟ್ಟೆಗಳನ್ನು ಒಣಗಿಸುವಾಗ, ಅವುಗಳ ತೋಳುಗಳತ್ತ (ಸ್ಲೀವ್ಸ್) ಗಮನವಿರಲಿ. ಇಲ್ಲದಿದ್ದರೆ ಅವು ಜೋತಾಡುವಂತೆ ಸಡಿಲ ಆಗಬಾರದು.
ಉಣ್ಣೆ ವಸ್ತ್ರಗಳನ್ನು ಒಗೆಯುವಾಗ ಮತ್ತು ಒಣಗಿಸುವಾಗ ಅವು ಸದಾ ಉಲ್ಟಾ ಆಗಿರಲಿ.
ಒದ್ದೆ ಇರುವಂಥ ಜಾಗದಲ್ಲಿ ವುಲ್ಲನ್ ಡ್ರೆಸ್ ಇಡಲೇಬೇಡಿ. ಇಲ್ಲದಿದ್ದರೆ ಅವು ಹಾಳಾಗುತ್ತವೆ.
ಕೈಯಲ್ಲೇ ಹೆಣೆದ ವುಲ್ಲನ್ ಸ್ವೆಟರ್ಸ್‌ನ್ನು ಮನೆಯಲ್ಲೇ ಒಗೆಯಬಹುದು. ಆದರೆ ರೆಡಿಮೇಡ್ (ಮೆಶೀನ್ ಸ್ಟಿಚ್ಡ್) ವುಲ್ಲನ್ ಸ್ವೆಟರ್ಸ್‌ನ್ನು ಡ್ರೈ ಕ್ಲೀನಿಂಗ್ ಮಾಡಿಸುವುದೇ ಸರಿ.
ಅಕಸ್ಮಾತ್ ಉಣ್ಣೆ ವಸ್ತ್ರದ ಭಾಗ ಒದ್ದೆ ಆದರೆ, ತಕ್ಷಣ ಅವನ್ನು ದಪ್ಪ ಟರ್ಕಿ ಟವೆಲ್‌ನಲ್ಲಿ ಸುತ್ತಿಕೊಂಡು ಅದರ ತೇವಾಂಶ ಹೋಗಲಾಡಿಸಿ. ನಂತರ ನೆರಳಿನಲ್ಲಿ ಒಣಗಿಸಬೇಕು.
ನಿಮ್ಮ ವುಲ್ಲನ್ ಡ್ರೆಸ್ ಮೇಲೆ ಕಾಫಿ/ಟೀ ಬಿದ್ದುಬಿಟ್ಟರೆ, ಕಲೆ ಆಗಬಹುದು. ಸಮಪ್ರಮಾಣದಲ್ಲಿ ಆಲ್ಕೋಹಾಲ್ ಹಾಗೂ ವೈಟ್ ವಿನಿಗರ್ ಬೆರೆಸಿ, ಇದನ್ನು ಕಲೆ ಮೇಲೆ ಸರಿ ಸರಿಪಡಿಸಬಹುದು. ನಂತರ ಬಿಳಿಯ ಕಾಟನ್ ಬಟ್ಟೆಯಿಂದ ಆ ಭಾಗ ಕ್ಲೀನ್ ಮಾಡಿ. ಕಲೆ ದೂರವಾಗುತ್ತದೆ.
ಇವುಗಳ ಮೇಲೆ ಎಣ್ಣೆ ತುಪ್ಪ, ಸಾಸ್, ಗ್ರೀಸ್ ಕಲೆಗಳಾದರೆ ಅದನ್ನು ಚಮಚದಿಂದ ಕೆರೆಯಿರಿ. ನಂತರ ಆ ಭಾಗಕ್ಕೆ ಡ್ರೈಕ್ಲೀನ್ ಫ್ಲೂಯಿಡ್‌ನಿಂದ ಸವರಿ, ನಿಧಾನವಾಗಿ ಒರೆಸಿರಿ, ಉಜ್ಜಿಬಿಡಿ. ನಂತರ ಅದರ ಮೇಲೆ ವೈಟ್ ವಿನಿಗರ್ ಸರಿ, ಸರಿಪಡಿಸಿ.