ಮದುವೆ ಸೀಸನ್‌ ಬಂದರೂ ಬ್ಯೂಟಿ ಪಾರ್ಲರ್‌ಗಳಿಗೆ ಮೊದಲಿನಂತೆ ಬಿಸ್‌ನೆಸ್‌ ಸಿಗುತ್ತಿಲ್ಲ. ಹಾಗಾಗಿ ಬ್ಯೂಟಿ ಪಾರ್ಲರ್‌ ಬಿಸ್‌ನೆಸ್‌ ವಹಿವಾಟು ಸ್ವಲ್ಪ ಮಂದಗೊಂಡಿದೆ. ಜಿಎಸ್‌ಟಿಯಿಂದ ಮಹಿಳೆಯರ ಸೌಂದರ್ಯದ ಖರ್ಚು ಏರಿಕೆಯಾಗಿದೆಯೇ?

ಬೆಂಗಳೂರಿನ ಪ್ರಸಿದ್ಧ ಸ್ಥಳವೊಂದರ ಬ್ರ್ಯಾಂಡೆಡ್‌ ಬ್ಯೂಟಿಪಾರ್ಲರಿನಲ್ಲಿ ಮಹಿಳೆಯೊಬ್ಬರು ಹೇರ್‌ಕಟಿಂಗ್‌ ಹಾಗೂ ಹೇರ್‌ ಸ್ಪಾ ಮಾಡಿಸಿಕೊಂಡರು. ಬಳಿಕ ಬಿಲ್‌ ನೋಡಿ ಆ ಮಹಿಳೆ ಬ್ಯೂಟಿ ಪಾರ್ಲರ್‌ನ ಉಸ್ತುವಾರಿ ಗಮನಿಸುವ ಮಹಿಳೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಹೇಳಿದಳು, ``ಮುಂಚೆ ನಾನು ಈ ಎರಡೂ ಸೇವೆಗಳನ್ನು ಬಹಳ ಕಡಿಮೆ ಖರ್ಚಿನಲ್ಲಿ ಮಾಡಿಸಿಕೊಳ್ಳುತ್ತಿದ್ದೆ....'' ಕೌಂಟರ್‌ನಲ್ಲಿ ಕುಳಿತಿದ್ದ ಯುವತಿ ಹೇಳಿದಳು, ``ಮೊದಲು ಸರ್ವೀಸ್‌ ಟ್ಯಾಕ್ಸ್ ಶೇ.12ರಷ್ಟು ಇತ್ತು. ಅದೀಗ 18% ಹೆಚ್ಚಾಗಿದೆ.''

ಆ ಮಹಿಳೆಗೆ ಈ ವಿಷಯ ಸರಿಹೋಗಲಿಲ್ಲ. ಹೆಚ್ಚಿನ ಬಿಲ್‌ ಮೊತ್ತವನ್ನು ಆ ಮಹಿಳೆ ಕೊಡಲು ಸಿದ್ಧರಿರಲಿಲ್ಲ. ಆಕೆ ಹೇಳಿದಳು, ``ನೀವು ನನಗೆ ಬಿಲ್‌ ಕೊಡಬೇಡಿ, ನನಗೆ ಟ್ಯಾಕ್ಸ್ ಕೊಡಬೇಕಿಲ್ಲ.''

ಆ ಮಾತಿಗೆ ಸೆಲೂನ್‌ನಲ್ಲಿ ಇದ್ದ ಮಹಿಳೆ ಹೇಳಿದಳು, ``ಬಿಲ್‌ ಇಲ್ಲದೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಟ್ಯಾಕ್ಸ್ ಪಾವತಿ ಮಾಡಲೇಬೇಕು.''

ಸ್ವಲ್ಪ ಹೊತ್ತಿನ ಬಳಿಕ ಆ ಮಹಿಳೆ ಹಣ ಪಾವತಿ ಮಾಡಿದಳು. ಆದರೆ ಹೊರಗೆ ಕಾಲಿಡುತ್ತ ಆಕೆ ಗುಡುಗುತ್ತ ಹೇಳಿದಳು, ``ನೀವು ಟ್ಯಾಕ್ಸ್ ಬಂದ್‌ ಮಾಡದೇ ಇದ್ದರೆ ನಾವು ನಿಮ್ಮ ಬಳಿ ಸರ್ವೀಸ್‌ ತೆಗೆದುಕೊಳ್ಳಲು ಬರುವುದೇ ಇಲ್ಲ.''

ಜಿಎಸ್‌ಟಿಯಿಂದ ದೊಡ್ಡ ಸಂಕಷ್ಟ

ಸೆಲೂನ್‌ನರವರ ಜೊತೆ ಮಾತುಕತೆ ನಡೆಸಿದ ಬಳಿಕ ತಿಳಿದುಬಂದ ವಿಷಯವೇನೆಂದರೆ, ಜಿಎಸ್‌ಟಿ ಶುರುವಾದ ಬಳಿಕ ದಿನ ಈ ತೆರನಾದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿ ಬರುತ್ತಿದೆ. ಕೆಲವು ಗ್ರಾಹಕರು ಹೇಗಿದ್ದಾರೆಂದರೆ, ಅವರು ಯಾವುದೇ ಟ್ಯಾಕ್ಸ್ ಇರದ ಪಾರ್ಲರ್‌ಗಳಿಗೆ ಹೋಗುತ್ತಾರೆ. ಅಂದಹಾಗೆ ಆ ಪಾರ್ಲರ್‌ಗಳು ಯಾವುದೇ ರಸೀದಿ ನೀಡುವುದಿಲ್ಲ. ಆದರೆ ಜಿಎಸ್‌ಟಿ ತೆರಿಗೆ ಅನ್ವಯ ಆದ ಬಳಿಕ ತಮ್ಮ ರೇಟ್‌ಗಳನ್ನು ಹೆಚ್ಚಿಸಿಕೊಂಡರು. ಆದರೆ ಬ್ರ್ಯಾಂಡೆಡ್‌ ಪಾರ್ಲರ್‌ಗಳಿಗೆ ಹೋಲಿಸಿದರೆ ಇವರ ರೇಟುಗಳು ಕಡಿಮೆ ಇರುತ್ತವೆ. ಕಡಿಮೆಯಾದ ತಮ್ಮ ಪಾರ್ಲರ್‌ಗಳ ವಹಿವಾಟನ್ನು ಹೆಚ್ಚಿಸಲು ಬ್ರ್ಯಾಂಡೆಡ್‌ ಪಾರ್ಲರುಗಳು ಹೊಸದೊಂದು ವಿಧಾನದಲ್ಲಿ ಗ್ರಾಹಕರಿಗೆ ತಿಳಿವಳಿಕೆ ನೀಡಲು ಆರಂಭಿಸಿವೆ. ಜಿಎಸ್‌ಟಿ ಶುರುವಾದ ಬಳಿಕ ಪಾರ್ಲರುಗಳ ಸರ್ವೀಸ್‌ ರೇಟ್‌ಗಳು ಬದಲಾಗಿವೆ. ಈ ಬದಲಾದ ದರಗಳಲ್ಲಿ ಗ್ರಾಹಕರಿಂದ ಪಡೆಯಲಾಗುವ ಸರ್ವೀಸ್‌ ಚಾರ್ಜ್‌ಗಳಲ್ಲಿ ಯಾವುದೇ ಬಗೆಯ ತೆರಿಗೆಯನ್ನು ತೋರಿಸಲಾಗುವುದಿಲ್ಲ.

ಅಂದಹಾಗೆ, ಹೇರ್‌ಕಟಿಂಗ್‌ ಮತ್ತು ಹೇರ್‌ ಸ್ಪಾಗಾಗಿ ಮುಂಚೆ 500/ ರೂ. ವಸೂಲಿ ಮಾಡಲಾಗುತ್ತಿತ್ತು. ಜಿಎಸ್‌ಟಿ ಬಳಿಕ ಅದನ್ನು 600 ರೂ.ಗಳಿಗೆ ಹೆಚ್ಚಿಸಲಾಯಿತು. ಈ 600ರೂ.ಗಳಲ್ಲಿ ಗ್ರಾಹಕರಿಂದ ಯಾವುದೇ ತೆರಿಗೆ ವಸೂಲಿ ಮಾಡಲಾಗುವುದಿಲ್ಲ. ಆಗ ಗ್ರಾಹಕನಿಗೆ ತಾನೇನು ತೆರಿಗೆ ಕೊಡುತ್ತಿಲ್ಲ ಎಂದು ಸಮಾಧಾನವಾಗುತ್ತದೆ.

ಈ ಬಗ್ಗೆ ಪಾರ್ಲರಿನವರನ್ನು ಕೇಳಿದರೆ, ಕಂಪನಿಯೇ ನೇರವಾಗಿ ತೆರಿಗೆ ಪಾವತಿಸುತ್ತಿದೆ ಎಂದು ಹೇಳಿಕೆ ನೀಡುತ್ತಾರೆ. ಗ್ರಾಹಕರೊಂದಿಗಿನ ಜಂಜಾಟವಂತೂ ಈ ರೀತಿ ಕಡಿಮೆಯಾಯಿತು. ಗ್ರಾಹಕರಿಗೆ ಅನಿಸುವುದೇನೆಂದರೆ,  ಪಾರ್ಲರಿನವರು ತಮ್ಮ ಸರ್ವೀಸ್‌ ಚಾರ್ಜ್‌ ಹೆಚ್ಚಿಸಿದ್ದಾರೆ. ಗ್ರಾಹಕರು ಬೇರೆ ಬೇರೆ ಸರ್ವೀಸ್‌ ತೆಗೆದುಕೊಳ್ಳಲು ಬಯಸಿದರೆ ಅವರಿಗೆ ತೆರಿಗೆ ಪಾವತಿಸಲು ಹೇಳಲಾಗುತ್ತದೆ. ಒಂದು ವೇಳೆ 2 ರಿಂದ 4 ರಂತೆ ಸರ್ವೀಸ್‌ ಸೇರಿಸಿ ತೆಗೆದುಕೊಂಡರೆ ಅವರಿಂದ ತೆರಿಗೆ ವಸೂಲಿ ಮಾಡಲಾಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ