ಪತ್ತೆದಾರಿ ಎಂದು ಮನಸ್ಸಿನಲ್ಲಿ ಮೂಡುತ್ತಿದ್ದಂತೆಯೇ ಥಟ್ ಎಂದು ಹೊಳೆಯುವುದೇ ಪ್ರಸಿದ್ಧ ಪತ್ತೆದಾರ ಶರ್ಲಾಕ್ ಹೋಮ್ಸ್ ಎಂದರೂ ತಪ್ಪಾಗದು. ಆರ್ಥರ್ ಕಾನನ್ ಡಾಯ್ಲ್ ಎಂಬ ಆಂಗ್ಲ ಲೇಖಕ  ಷರ್ಲಾಕ್ ಹೋಮ್ಸ್ ಒಳಗೊಂಡ ಸುಮಾರು 56 ಸಣ್ಣ ಕಥೆಗಳು ಮತ್ತು ನಾಲ್ಕು ಕಾದಂಬರಿಗಳನ್ನು ಬರೆದಿದ್ದರೆ, ಪತ್ತೇದಾರ ಪುರುಷೋತ್ತಮ ಎಂಬ ಪುಸ್ತಕದಿಂದ ಆರಂಭಿಸಿ ಸುಮಾರು 550ಕ್ಕೂ ಹೆಚ್ಚಿನ ಪತ್ತೇದಾರಿ ಕಥೆ ಕಾದಂಬರಿಗಳನ್ನು ಬರೆದಿರುವ ಜನಪ್ರಿಯ ಲೇಖಕರಾದ ಶ್ರೀ ಎನ್.ನರಸಿಂಹಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ.

nar3

ಸ್ವತಃ ಅಶುಕವಿಗಳಾಗಿದ್ದಂತಹ ಚಿತ್ರದುರ್ಗ ಮೂಲದ ಶ್ರೀ ಸಿ.ನಂಜಪ್ಪನವರು ಮತ್ತು ಚಿಕ್ಕಮಗಳೂರು ಮೂಲದ ಯಲ್ಲಮ್ಮ ದಂಪತಿಗಳ ಪುತ್ರರಾಗಿ 1925ರ ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ  ಎನ್. ನರಸಿಂಹಯ್ಯನವವರ ಜನನವಾಗುತ್ತದೆ. ಅದಾಗಲೇ ಜನಪದ ಕವಿ ಎಂದು ಗುರುತಿಸಿಕೊಂಡಿದ್ದ  ಅವರ ತಂದೆಯವರು ಬ್ರಿಟಿಷರ ಬಗ್ಗೆ ಲಾವಣಿ ಕಟ್ಟಿ ಹಾಡಿದಾಗ ಇವರ ಕಾವ್ಯ ಶಕ್ತಿಗೆ ಮೆಚ್ಚಿದ ಬ್ರಿಟಿಷರು, ದುರ್ಗದ ವಂಶಸ್ಥರೆಂದು ಗೌರವಿಸಿ ಇವರಿಗೆ ಭೂಮಿ ಮಂಜೂರು ಮಾಡಿದ್ದರೂ, ಇಡೀ ಕುಟುಂಬ ಬೆಂಗಳೂರಿನಲ್ಲಿದ್ದು, ನರಸಿಂಹಯ್ಯನವರು 4ನೇ ತರಗತಿಯಲ್ಲಿ ಓದುತ್ತಿರುವಾಗ, 1936ರಲ್ಲಿ ಅವರ ತಂದೆಯವರ  ಅಕಾಲಿಕ ಮೃತ್ಯುವಾಗಿ,  ಅವರ ಆಶ್ರಯದಾತರಾದ ಚಿಕ್ಕಪ್ಪನವರೂ ಸಹಾ ಒಂದೇ ವರ್ಷದಲ್ಲಿ ಮರಣ ಹೊಂದಿದ ಪರಿಣಾಮ, ಅವರ ಓದು ಅರ್ಧಕ್ಕೇ ನಿಂತು ಹೋಗಿ, ಜೀವನೋಪಾಯಕ್ಕಾಗಿ ತಮ್ಮ ತಾಯಿಯ ಜೊತೆ ಅವರ ತವರೂರಾದ ಚಿಕ್ಕಮಗಳೂರಿಗೆ ಹೋಗಿ   1938 ರಲ್ಲಿ, ತಮ್ಮ 13ನೆಯ ವರ್ಷದಲ್ಲಿಯೇ ಸಣ್ಣ ಪುಟ್ಟ ಕೆಲಸವನ್ನು ಮಾಡಲು ಆರಂಭಿಸಿ ಕಡೆಗೆ ಕಾಫೀ ತೋಟದಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ಆ ತೋಟದಲ್ಲಿದ್ದ ಹಿರಿಯರೊಬ್ಬರ ಸಲಹೆಯ ಮೇರೆಗೆ ಕೈಗಾರಿಕಾ ಪಾಠಶಾಲೆಯಲ್ಲಿ 3 ವರ್ಷಗಳ ತರಬೇತಿಗೆ ಸೇರಿಕೊಂಡು ತರಭೇತಿ ಮುಗಿಸಿದ ನಂತರ 1942ರಲ್ಲಿ ಬಸ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡವರು 1944ರಲ್ಲಿ ಬಸ್ ಕಂಡಕ್ಟರ್ ಆಗಿ ಭಡ್ತಿ ಹೊಂದುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಕೈಗೆ ಸಿಕ್ಕ ಪುಸ್ತಕಗಳನ್ನು ಓದುವ ಉತ್ತಮ ಹವ್ಯಾಸವನ್ನು ಬೆಳಿಸಿಕೊಂಡು, ಹೀಗೆ ಆರ್ಥಿಕವಾಗಿ ಸ್ವಲ್ಪ ಸಢೃಢರಾಗುತ್ತಿದ್ದಂತೆಯೇ  1947ರಲ್ಲಿ ನಾಗರತ್ನಮ್ಮನವರ ಜೊತೆ ಇವರ ಮದುವೆಯಾದ ನಂತರ ಬರುವ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟ ಎನಿಸಿದಾಗ, 1948ರಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದು ಬಾಡಿಗೆ ಮನೆ ಮಾಡಿ ಲಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಬಿಡುವಿನ ಸಮಯದಲ್ಲಿ ತಮ್ಮದೇ ಅದ ಗ್ರಂಥಾಲಯವನ್ನೇಕೆ ಪ್ರಾರಂಭಿಸಬಾರದೆಂದು ಆಲೋಚಿಸಿ  ತಿಂಗಳಿಗೆ ಎಂಟಾಣೆ ಸದಸ್ಯತ್ವದ ಸಣ್ಣದಾದ ಗ್ರಂಥಾಲಯವನ್ನು ಆರಂಭಿಸಿ ಅಲ್ಲಿ ಉಳಿದ ಪುಸ್ತಕಗಳಿಗಿಂತಲೂ ಬಾಲಸರಸ್ವತಿ, ವೆಂಕಟಾಚಾರ್ಯ, ಗುರುರಾಜಾಚಾರ್ಯ, ಗುಂಡಾಶಾಸ್ತ್ರಿ ಮುಂತಾದವರುಗಳ ಪತ್ತೇದಾರಿ ಕಾದಂಬರಿಗಳನ್ನೆಲ್ಲಾ ಸಂಗ್ರಹಿಸಿರುತ್ತಾರೆ. ಹೀಗೆ ತಮ್ಮ ಗ್ರಂಥಾಲಯಕ್ಕೆ ಪುಸ್ತಕ ಕೊಳ್ಳಲು ಟಿ. ನಾರಾಯಣ ಅಯ್ಯಂಗಾರ್ ಎಂಬ ಪತ್ತೇದಾರಿ ಕಾದಂಬರಿಗಳನ್ನು ಪ್ರಕಟಿಸುತ್ತಿದ್ದ ಪ್ರಕಾಶಕರ ಬಳಿ ಹೋಗುತ್ತಿದ್ದರಿಂದ ಅವರೊಡನೆ ಉತ್ತಮವಾದ ಸ್ನೇಹವೇರ್ಪಟ್ಟು ಅದೊಮ್ಮೆ ಹಾಗೇ ಸುಮ್ಮನೇ, ನಾನು ಪತ್ತೇದಾರಿ ಕಾದಂಬರಿ ಬರೆದರೆ ಪ್ರಕಟಿಸುತ್ತೀರಾ? ಎಂದು ಹೇಳಿದಾಗ, ಅವರೂ ಸಹಾ. ಅರೇ! ನಿಮಗೆ ಇಲ್ಲಾ ಎನ್ನಲಾಗುತ್ತದೇ, ಪುಸ್ತಕ ಬರೆದು ತನ್ನಿ! ಎಂದು ಹೇಳಿದ್ದೇ ತಡ, ಒಂದು ಸಣ್ಣ ನೋಟ್ ಪುಸ್ತಕ ತೆಗೆದುಕೊಂಡು ತಮ್ಮ ಮುದ್ದಾದ ಚಿತ್ತಿಲ್ಲದ ಬರವಣೆಗೆಯಲ್ಲಿ  ಪತ್ತೇದಾರಿ ಪುರುಷೋತ್ತಮನ ಸಾಹಸ ಎಂದು 1952ರಲ್ಲಿ ಪ್ರಕಟಿಸುತ್ತಿದ್ದಂತೆಯೇ,  ಅಂದಿನ ಕನ್ನಡ ಪತ್ತೆದಾರಿ ಕಾದಂಬರಿಗಳಿಗಿಂತಲೂ ವಿಭಿನ್ನವಾಗಿ ಯಾವುದೇ ಆಂಗ್ಲ ಪತ್ತೆದಾರಿ ಕಾದಂಬರಿಗೆ ಕಡಿಮೆ ಇಲ್ಲದಂತಿದ್ದ  ಆ ಪುಸ್ತಕ ನೋಡ ನೋಡುತ್ತಿದ್ದಂತೆಯೇ ಬಹಳ ಪ್ರಸಿದ್ಧಿಯನ್ನು ಪಡೆದು ಕೊಳ್ಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ