- ರಾಘವೇಂದ್ರ ಅಡಿಗ ಎಚ್ಚೆನ್

ವಿಶ್ವ ಹೃದಯ ದಿನಾಚರಣೆ ಸಂದರ್ಭದಲ್ಲಿ, ವೈದ್ಯಕೀಯ ಆವಿಷ್ಕಾರ, ಉತ್ಕೃಷ್ಟ ಆರೈಕೆ, ಅಖಿಲ ಭಾರತ ಮಟ್ಟದ ವ್ಯಾಪ್ತಿ ಹಾಗೂ ಅಮೂಲ್ಯವಾದ ಜೀವದಾನದ ಮಹತ್ವ ಸಾರಲು 40ಕ್ಕೂ ಹೆಚ್ಚು ಹೃದಯ ಮತ್ತು ಶ್ವಾಸಕೋಶ ಕಸಿ ಫಲಾನುಭವಿಗಳು ಒಂದೆಡೆ ಸೇರಿದ್ದರು.

ಬೆಂಗಳೂರು, ಸೆಪ್ಟೆಂಬರ್ 23, 2026 : ಪ್ರತಿಷ್ಠಿತ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯು ಅಂತಿಮ ಹಂತದ ಹೃದಯ ಹಾಗೂ ಶ್ವಾಸಕೋಶ ವೈಫಲ್ಯದಿಂದ ತೀವ್ರ ಅನಿಶ್ಚಿತತೆ ಮತ್ತು ಸಾವಿನಂಚಿನಲ್ಲಿದ್ದ 136 ಮಂದಿಗೆ ಯಶಸ್ವಿ ಅಂಗಾಂಗ ಕಸಿ ಚಿಕಿತ್ಸೆಯ ಮೂಲಕ ಹೊಸ ಬದುಕು ಕಲ್ಪಿಸಿಕೊಟ್ಟಿದೆ. ಸೆಪ್ಟೆಂಬರ್ 29ರ ವಿಶ್ವ ಹೃದಯ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಂಭ್ರಮಾಚರಣೆ ಸಮಾವೇಶದಲ್ಲಿ 40ಕ್ಕೂ ಹೆಚ್ಚು ಕಸಿ ಶಸ್ತ್ರಚಿಕಿತ್ಸಾ ಫಲಾನುಭವಿಗಳು ಹಾಗೂ ಅವರ ಕುಟುಂಬ ಸದಸ್ಯರು ಒಗ್ಗೂಡಿ ತಮ್ಮ ಮರುಜನ್ಮದ ಸಂಭ್ರಮವನ್ನು ಹಂಚಿಕೊಂಡರು.

ನಾರಾಯಣ ಹೆಲ್ತ್ ಸಿಟಿಯು ಈವರೆಗೆ ಸಂಕೀರ್ಣವಾದ 136 ಜೀವ ರಕ್ಷಕ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿಂದಾಗಿ ವಯಸ್ಕರು ಹಾಗೂ ಪುಟ್ಟ ಮಕ್ಕಳ ಸಂಕೀರ್ಣ ಕಸಿ ಶಸ್ತ್ರಚಿಕಿತ್ಸೆಗಳನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ಕಸಿ ಮಾಡಿಸಿಕೊಂಡವರಲ್ಲಿ ಶೇಕಡಾ 95ರಷ್ಟು ರೋಗಿಗಳು ಸಂಪೂರ್ಣ ಗುಣಮುಖರಾಗಿ ಸಾಮಾನ್ಯ ಬದುಕಿಗೆ ಮರಳಿದ್ದಾರೆ. ಮಕ್ಕಳು ಶಾಲೆಗೆ ಮರಳಿರುವುದು ಹಾಗೂ ಕಸಿ ಫಲಾನುಭವಿಗಳು ಕ್ರೀಡೆಗಳಲ್ಲಿ ಮಿಂಚುತ್ತಿರುವುದು ಈ ಚಿಕಿತ್ಸೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ವೈದ್ಯರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲವು ರೋಗಿಗಳು ತಮ್ಮ ಸ್ಪೂರ್ತಿದಾಯಕ ಯಶೋಗಾಥೆಗಳನ್ನು ಹಂಚಿಕೊಂಡರು. ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬರೋಬ್ಬರಿ 16 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ವಿ.ಕೆ. ಅವರು ದೀರ್ಘಾಯುಷ್ಯದ ಭರವಸೆ ಮೂಡಿಸಿದರೆ, ಹೃದಯ ವೈಫಲ್ಯದಿಂದ ಚೇತರಿಸಿಕೊಂಡು ವರ್ಲ್ಡ್ ಟ್ರಾನ್ಸ್‌ ಪ್ಲಾಂಟ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಎಸ್.ಎಸ್. ಅವರ ಸಾಧನೆ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನು ಕೇವಲ 14 ತಿಂಗಳ ಹಸುಗೂಸಾಗಿದ್ದಾಗ ಹೃದಯ ಕಸಿ ಮಾಡಿಸಿಕೊಂಡು ದೇಶದಲ್ಲೇ ಅತ್ಯಂತ ಕಿರಿಯ ಫಲಾನುಭವಿಯಾದ ಬೇಬಿ ಕೆ ಹಾಗೂ 68ನೇ ವಯಸ್ಸಿನಲ್ಲಿ ಸಂಯುಕ್ತ ಹೃದಯ-ಶ್ವಾಸಕೋಶ ಕಸಿ ಮಾಡಿಸಿಕೊಂಡು ಇದೀಗ 75ರ ಹರೆಯದಲ್ಲೂ ಲವಲವಿಕೆಯಿಂದಿರುವ ಕೆ.ಎಸ್. ಅವರ ಉಪಸ್ಥಿತಿ ಎಲ್ಲರ ಗಮನ ಸೆಳೆಯಿತು. 2022ರಲ್ಲಿ ಕಸಿ ಮಾಡಿಸಿಕೊಂಡ ಎ.ಎಫ್.ಎಂ ಮತ್ತು 2025ರಲ್ಲಿ ಚಿಕಿತ್ಸೆ ಪಡೆದ ಎನ್.ಎನ್ ಅವರಂತಹ ರೋಗಿಗಳು ಎರಡೂ ಅಂಗಗಳ ಕಸಿ ಮಾಡಿಸಿಕೊಂಡು ಹೊಸ ಜೀವನ ಕಂಡುಕೊಂಡಿದ್ದಾರೆ.

ಅಂಗದಾನಿಗಳು ಲಭ್ಯವಾಗುವವರೆಗೂ ಕಾಯಲು ಸಾಧ್ಯವಾಗದಂತಹ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಎಕ್ಮೋ (ಎಕ್ಷ್ಟ್ರಾ ಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜನೇಷನ್) ಹಾಗೂ ವ್ಯಾಡ್ಸ್ (ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸಸ್) ನಂತಹ ಕೃತಕ ರಕ್ತಪರಿಚಲನಾ ಉಪಕರಣಗಳು ಜೀವ ರಕ್ಷಕ ಕೊಂಡಿಯಾಗಿ ನೆರವಾದವು. 24 ಗಂಟೆಗಳ ತುರ್ತು ನಿಗಾ, ಸುಧಾರಿತ ಕಾರ್ಡಿಯಾಕ್ ಇಮೇಜಿಂಗ್ ಹಾಗೂ ನಿಖರ ವೈದ್ಯಕೀಯ ಮಧ್ಯಸ್ಥಿಕೆಯು ಅನಿಶ್ಚಿತತೆಯಲ್ಲಿದ್ದ ರೋಗಿಗಳು ಸ್ಥಿರವಾಗಿರಲು ನೆರವಾಯಿತು ಎಂದು ಸಂಸ್ಥೆಯ ತಜ್ಞರು ವಿವರಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ