ನಾವು ಯಾರಿಗೇನು ಕಡಿಮೆ? :

ಜೆಸ್ಸಿಕಾ ಎಡ್ವರ್ಡ್ಸ್ ಡಾಕ್ಯುಮೆಂಟರಿ ಫಿಲ್ಮ್ ತಯಾರಿಸುತ್ತಾಳೆ. ಇತ್ತೀಚೆಗೆ ಅವಳು ಸ್ಕೇಟ್‌ ಬೋರ್ಡ್‌ ಆಡುವ ಹುಡುಗಿಯರ ಕುರಿತಾದ ಡಾಕ್ಯುಮೆಂಟರಿ ಮಾಡಿದಳು. ಅವರು ಈ ಫೀಲ್ಡಿಗೆ ಹೊಸಬರು. ಇಲ್ಲಿಯವರೆಗೂ ಹುಡುಗರ ಆಟವೊಂದೇ ಖ್ಯಾತಿಗೊಂಡಿದ್ದ ಸ್ಕೇಟ್‌ ಬೋರ್ಡ್‌, ಹುಡುಗಿಯರು ಅದನ್ನು ಆಡಿದರೆ ಸಮಾಜ ಆಡಿಕೊಂಡು ನಗುತ್ತಿತ್ತು. ಈಗ ಹುಡುಗಿಯರೂ ಇದರಲ್ಲಿ ಪಳಗಿ, ಹುಡುಗರಿಗಿಂತ ತಾವು ಅದರಲ್ಲಿ ನುರಿತವರೆಂದು ನಿರೂಪಿಸಿದ್ದಾರೆ. ಈ ಡಾಕ್ಯುಮೆಂಟರಿಯ ವೈಶಿಷ್ಟ್ಯ ಎಂದರೆ, ಜೆಸ್ಸಿಕಾ ಪ್ರಸಿದ್ಧ ಚಿತ್ರ ನಿರ್ಮಾಪಕಿಯೂ ಹೌದು, ಅನೇಕ ಉತ್ತಮ ಯಶಸ್ವಿ ಪ್ರಾಜೆಕ್ಟ್ಸ್ ಮಾಡಿದ್ದಾಳೆ.

ಪ್ರಚಾರದ ಹೊಸ ಪರಿ :

ಚೂಸಿ ಕುತೆ ಎಂಬ ಬ್ರಾಂಡ್‌, ಈಗ ಕೇವಲ ಫ್ಯಾಂಟಸಿಯನ್ನು ತನ್ನ ಪ್ರಚಾರದ ಕ್ಯಾಂಪೇನ್‌ ಗೆ ಆರಿಸಿಕೊಂಡದ್ದಲ್ಲದೆ, ಗ್ರಾಹಕರು ನೋಡಿದೊಡನೆ ದಂಗಾಗಿ ಕನಸಿನ ಲೋಕಕ್ಕೆ ಜಾರುವಂಥ ಫೋಟೋಗ್ರಫಿ ಸಹ ಆವರಿಸಿದೆ. ಈ ಡ್ರೆಸ್‌ ಗಳೇನೋ ಮಾಡ್‌ ಸರಿ, ಆದರೆ ಇದನ್ನು ಧರಿಸಿದರೆ ಬೀದಿ ಕಾಮಣ್ಣರು ನಿಮ್ಮ ಹಿಂದೆ ಬೀಳುವುದರಲ್ಲಿ ಸಂದೇಹವಿಲ್ಲ. ಫ್ಯಾಷನ್‌ ಮಾಡುವುದು ಒಂದು ವಿಷಯವಾದರೆ, ಅಂಥ ಉಡುಗೆ ಮಾರುವುದು ಅತಿ ಕಷ್ಟದ ವಿಷಯ. ಯಾವ ಡ್ರೆಸ್‌ ಗ್ರಾಹಕರನ್ನು ಮರುಳು ಮಾಡುವುದೋ ಹೇಳಲಾಗದು. ಹೀಗಾಗಿ ಫೋಟೋಗ್ರಫಿ ಅತಿ ಎಚ್ಚರದಿಂದ ಮಾಡಿಸಬೇಕು. ಇದರ ಪ್ರಚಾರಕ್ಕಂತೂ ಬಹಳ ಹಣ ಖರ್ಚಾಗುತ್ತದೆ. ಇವೆಲ್ಲ ಸೇರಿಸಿ ಡ್ರೆಸ್‌ ಬೆಲೆ ನಿರ್ಧಾರ ಆಗುತ್ತದೆ.

ಹೆಂಗಸರನ್ನು ನಿರ್ಲಕ್ಷಿಸಿ ಬಲಿಪಶು ಆಗಿಸುವ ದೊಡ್ಡ ನಿರ್ಣಯಗಳು :

ಈ ಫೋಟೋದಲ್ಲಿ ವಿಶ್ವದ ಅತಿ ಶಕ್ತಿವಂತರಾದ 30 ದೇಶಗಳ ವ್ಯಕ್ತಿಗಳನ್ನು ಕಾಣುವಿರಿ. ಇದರಲ್ಲಿ ಹೆಂಗಸರು ಎಷ್ಟು? ಮೈಕ್ರೋಸ್ಕೋಪ್‌ ಹಿಡಿದು ಹುಡುಕಿರಿ. ಯೂಕ್ರೇನಿನ ಸಂಕಟದ ಕುರಿತು ಚರ್ಚಿಸಲು ಒಟ್ಟುಗೂಡಿದ ಈ ದೇಶಗಳು ರಷ್ಯಾವನ್ನು ಆರ್ಥಿಕವಾಗಿ ಧೂಳೀಪಟಗೊಳಿಸಲು ನಿರ್ಧರಿಸಿದವು. ಆ ಕಾರಣಕ್ಕಾಗಿಯೇ ಇಲ್ಲಿ ಜಮೆಗೊಂಡವು. ಯೂಕ್ರೇನಿನಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಮಾಮೂಲಿಯಾಗಿದೆ, ರಷ್ಯಾ ಸೈನಿಕರು ಇವರನ್ನು ಅಲ್ಲಿಗೆ ಎಳೆದೊಯ್ದು ದಾಸಿಯರನ್ನಾಗಿಸಿ ಕೊಂಡಿದ್ದಾರೆ. ಈ 30 ದೇಶಗಳ ನಿರ್ಣಯಗಳಿಂದಾಗಿ ರಷ್ಯಾ ದೇಶದ ಪ್ರತಿ ಮನೆಯೂ ದಿವಾಳಿ ಆಗಲಿದೆ. ಅಲ್ಲಿ ಊಟಕ್ಕೆ ಹಾಹಾಕಾರ ಏಳಲಿದೆ, ನಿರುದ್ಯೋಗ ತಾಂಡವವಾಡಲಿದೆ, ಈ ಎರಡೂ ದೇಶಗಳ ಮುಗ್ಧ ಜನತೆ ರಷ್ಯಾದ ತಲೆಕೆಟ್ಟ ಒಬ್ಬನ ದುರಾಡಳಿತದಿಂದಾಗಿ ಘನಘೋರ ಸಾವುನೋವಿಗೆ ಈಡಾಗಲಿದೆ.

ಯಶಸ್ಸಿನ ರಹಸ್ಯ :

ಇದೀಗ ಆಸ್ಟ್ರೇಲಿಯಾಗೆ ವಿಶ್ವದ ನಾನಾ ದೇಶಗಳ ಜನ ಬಂದು ವಾಸಿಸತೊಡಗುತ್ತಿದ್ದಾರೆ. ಇಲ್ಲಿಯೂ ಗ್ಲಾಸ್ ಸೀಲಿಂಗ್‌ ನ ದಾಂಧಲೆ ದಟ್ಟವಾಗಿದೆ. ಇದರರ್ಥ, ಒಂದು ಹಂತ ತಲುಪಿದ ನಂತರ ಪ್ರಗತಿ ಇಲ್ಲವೇ ಇಲ್ಲ! ಹೆಣ್ಣು ಇಲ್ಲಿ ಏಳಿಗೆ ಕಾಣಲು ಒಂದು ಹಂತ ತಲುಪಬಹುದು, ನಂತರ ಅವಳ ದಾರಿಗೆ ಎಲ್ಲವೂ ಮುಳುವೇ! ಡೇಡೇಕೋ ಕಂಪನಿಯ ಡಾಫೇನ್‌ಪ್ರಕಾರ, ಟೆಕ್ನಾಲಜಿ ಕಾರಣ ಹೆಣ್ಣಿಗೆ ವಿಶ್ರಾಂತಿ ಏನೋ ದೊರಕುತ್ತಿದೆ, ಕಂಪನಿಯ ಯಶಸ್ವಿ ಆಗುವವರೆಗೂ ಉದ್ಯಮದ ಹಿನ್ನೆಲೆಯಿಂದ ಬರುತ್ತಿರುವ ಹುಡುಗಿಯರು ಇದೀಗ ಹುಡುಗರಷ್ಟೇ ಜವಾಬ್ದಾರಿಯುತರಾಗುತ್ತಿದ್ದಾರೆ, ಇದೇ ಅವರ ಯಶಸ್ಸಿನ ರಹಸ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ