ಅಂತರಿಕ್ಷದ ಬಗ್ಗೆ ಅರಳು ಹುರಿದಂತೆ ಮಾತನಾಡುತ್ತಾರೆ ನಿಖಿತಾ.

ರಾಕೆಟ್‌ ಸೈನ್ಸ್ ಎಂದರೆ...... ಸಾಮಾನ್ಯವಾಗಿ ನಮಗೆ ಯಾವುದಾದರೂ ವಿಷಯ ಗೊತ್ತಿಲ್ಲದಿದ್ದರೆ `ನನಗೆ ಅದು ಸ್ವಲ್ಪ ಗೊತ್ತಿಲ್ಲ. ನನಗೆ ರಾಕೆಟ್‌ ಸೈನ್ಸ್ ಇದ್ದ ಹಾಗೆ' ಎನ್ನುವುದು ರೂಢಿ. ರಾಕೆಟ್‌ ಎಂದರೆ ಏನು ಎಂದು ಹದಿಹರೆಯದ ಹುಡುಗರನ್ನು ಕೇಳಿದರೆ, ಅವರಿಗೆ ಹುಡುಗಿಯರ ಮೇಲೆ ಕಾಗದದ ರಾಕೆಟ್‌ ಬಿಡುವುದಷ್ಟೇ ಗೊತ್ತು. ಅದಕ್ಕಿಂತ ಸ್ವಲ್ಪ ಹೆಚ್ಚು ಮುಂದುವರಿದಾಗ ವಾರ್ತೆಗಳಲ್ಲಿ ಬರುವ ರಾಕೆಟ್‌ ಗಳ ಬಗ್ಗೆ ಸ್ವಲ್ಪ ತಿಳಿದಿದೆ. ಜೊತೆಗೆ ಆಗಾಗ ಟಿವಿ ಮೂಲಕ ಹೊಸ ಸ್ಯಾಟ್‌ ಲೈಟ್‌ ನ್ನು ಅಂತರಿಕ್ಷಕ್ಕೆ ಬಿಡುತ್ತಾರಂತೆ, ಅದರಿಂದ ಬಹಳ ಉಪಯೋಗಗಳಿವೆಯಂತೆ. ಮಾಹಿತಿ ದೊರಕುತ್ತದೆಯಂತೆ, ಕೃಷಿಯಿಂದ ಹಿಡಿದು ಎಲ್ಲಕ್ಕೂ ಅನುಕೂಲಂತೆ ಎನ್ನುವುದು ಸ್ವಲ್ಪ ಸ್ವಲ್ಪ ಗೊತ್ತಷ್ಟೇ ಹೊರತು ಪೂರ್ಣ ಚಿತ್ರಣ ಯಾರಿಗೂ ಇಲ್ಲ. ಇತ್ತೀಚೆಗೆ ಮಂಗಳ ಗ್ರಹದ ಬಗ್ಗೆ ಮೋದಿಜಿಯವರ ಭಾಷಣ, ಅಲ್ಲಿಗೆ ನಮ್ಮ ಉಪಗ್ರಹವನ್ನು ಕಳುಹಿಸಿರುವ ಬಗ್ಗೆ ಸ್ವಲ್ಪ ಗೊತ್ತು. ನಿಜಕ್ಕೂ ಬಹಳಷ್ಟು ಜನಕ್ಕೆ ಇದಕ್ಕಿಂತಾ ಹೆಚ್ಚು ಗೊತ್ತಿರಲಿಕ್ಕಿಲ್ಲ. ಏಕೆಂದರೆ ನಾವು ಶಾಲೆಯಲ್ಲಿ ಗ್ರಹ, ಖಗೋಳವೆಂದರೆ ನಕ್ಷತ್ರ, ಚಂದ್ರ, ಗ್ರಹಣವನ್ನು ಬಿಟ್ಟು ಹೆಚ್ಚಾಗಿ ಏನೂ ಕಲಿತಿಲ್ಲ. ಆದ್ದರಿಂದ ಆಕಾಶ ನಮಗೆ ದೂರವಾಗಿಯೇ ಉಳಿದಿರಲು ಅದೂ ಒಂದು ಕಾರಣವೆನ್ನಬಹುದು.

ಕಂಪ್ಯೂಟರ್ಕ್ರಾಂತಿ

ಯಾವ ವಿಷಯವಾದರೂ ಅಷ್ಟೇ, ಉದಾಹರಣೆಗೆ ಸ್ವಲ್ಪ ವರ್ಷಗಳ ಹಿಂದೆ ಕಂಪ್ಯೂಟರ್‌ ಎಂದರೆ ತಾನೇ ಏನು ಗೊತ್ತಿತ್ತು? ಹೊಸದಾಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಪ್ರಾರಂಭಿಸಿದಾಗ ಎಲ್ಲರೂ ಸಿವಿಲ್ ‌ತೆಗೆದುಕೊಳ್ಳುತ್ತಿದ್ದರೇ ಹೊರತು ಇದನ್ನು ತೆಗೆದುಕೊಂಡಿದ್ದಿಲ್ಲ. ಆದರೆ ಈಗ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ ವಿಷಯಕ್ಕೆ ಎಲ್ಲಿಲ್ಲದ ಡಿಮ್ಯಾಂಡು. ಈಗ ಆ ನಿಟ್ಟಿನಲ್ಲಿ ದೊಡ್ಡ ಕ್ರಾಂತಿಯೇ ಆಗಿದೆ ಎನ್ನಬಹುದು. ವಿಶ್ವದಾದ್ಯಂತ ಭಾರತದ ಟೆಕ್ಕಿಗಳೇ ಆರಿಸಿಕೊಂಡು ಬಿಟ್ಟಿದ್ದಾರೆ!

ಅಂತರಿಕ್ಷದ ಬಗ್ಗೆ.....

ಅಂತೆಯೇ ಅಂತರಿಕ್ಷದ ಬಗ್ಗೆ ಅಥವಾ ಬಾಹ್ಯಾಕಾಶದ ಬಗ್ಗೆ ಮಾತನಾಡುವಾಗ ನಮಗೆ ಹೆಚ್ಚು ಗೊತ್ತಿಲ್ಲ. ಶಾಲೆಯಲ್ಲಿ ವಿಜ್ಞಾನ ಎಂದಾಗ ನಮಗೆ ಬಾಹ್ಯಾಕಾಶದ ಬಹಳ ಸ್ವಲ್ಪ ವಿಷಯ ಅಲ್ಲಿರುತ್ತದೆ. ಹೀಗಾಗಿ ಅಂತರಿಕ್ಷ ಅಥವಾ ಬಾಹ್ಯಾಕಾಶದ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ಇಲ್ಲ. ಏಕೆಂದರೆ ನಮಗೆ ಅದರ ಬಗ್ಗೆ ಹೆಚ್ಚಿನ ಅರಿವಿಲ್ಲ. ಆದರೆ 23ರ ಹರೆಯದ ತರುಣಿ ನಿಖಿತಾ ಈ ಬಗ್ಗೆ ಬಹಳ ಗಂಭೀರವಾದ ಚಿಂತನೆಯನ್ನೇ ಮಾಡಿದ್ದಾರೆ. ಪುಟ್ಟ ಮಕ್ಕಳು ಅದರಲ್ಲೂ ಎಲ್ಲ ವರ್ಗದ ಮಕ್ಕಳೂ ತಿಳಿದುಕೊಳ್ಳಲಿ ಎನ್ನುವ ದೃಷ್ಟಿಯಿಂದ ದೊಡ್ಡ ಕ್ರಾಂತಿಯನ್ನೇ ಪ್ರಾರಂಭ ಮಾಡಿದ್ದಾರೆ ಎನ್ನಬಹುದು. ಅನೇಕ ವಿದ್ಯಾರ್ಥಿಗಳು ನಾವು ದೊಡ್ಡವರಾದ ಮೇಲೆ ಅಸ್ಟ್ರಾನಮಿ, ಆ್ಯಸ್ಟ್ರೋಫಿಸಿಕ್ಸ್ ಓದುತ್ತೇವೆ ಎನ್ನುತ್ತಾರೆ. ಆದರೆ ಆ ಬಗ್ಗೆ ಸರಿಯಾದ ಮಾರ್ಗದರ್ಶನ ಸಿಗುವುದು ಸುಲಭವಲ್ಲ.

ಇಸ್ರೋ ಸಂಸ್ಥೆ 50 ವರ್ಷಗಳಷ್ಟು ಹಳೆಯದಾದರೂ ಬಾಹ್ಯಾಕಾಶ ಎನ್ನುವುದು ಅಲ್ಲಿ ಕೆಲಸ ಮಾಡುವ ಕೆಲವಷ್ಟು ಜನರು ಮತ್ತು ಅವರ ಕುಟುಂಬಗಳಿಗಷ್ಟೇ ಗೊತ್ತಿರುವ ವಿಷಯ. ಆದರೆ ಅಂತರಿಕ್ಷ ಜೀವಿಗಳ ಬಗ್ಗೆ ತಿಳಿಯಲು ಯಾರಿಗೂ ಆಸಕ್ತಿ ಇಲ್ಲ. ಈ ರೀತಿ ಆಕಾಶದಲ್ಲಿನ ಚಂದ್ರನನ್ನು ನೋಡಿಯೇ ಊಟ ಮಾಡಿದ ಬಾಲ್ಯ ನಮ್ಮೆಲ್ಲರದು. ರಾತ್ರಿಯಾದರೆ ಚಂದ್ರ ಹೇಗೆ ಬರ್ತಾನೆ, ಸೂರ್ಯ ಯಾಕೆ ಮುಳುಗ್ತಾನೆ, ನಕ್ಷತ್ರಾನಾ ಕೈಯಲ್ಲಿ ಹಿಡಿಯೋಕೆ ಅಗಲ್ಲಾ ಎನ್ನುವ ನೂರಾರು ಪ್ರಶ್ನೆಗಳು ನಮ್ಮ ಬಾಲ್ಯದಲ್ಲಿ ಮೂಡಿದ್ದುಂಟು. ಆದರೆ ಇದಕ್ಕೆ ಸರಿಯಾದ ಉತ್ತರ ಗೊತ್ತಿರಲಿಲ್ಲ. ಅಮ್ಮ ಪುರಾಣದ ಕಥೆ ಹೇಳಿ ಬಾಯಿ ಮುಚ್ಚಿಸುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ