ಮಹಿಳೆಯರ ಉಡುಪುಗಳ ಬಗ್ಗೆ ಮತ್ತೊಮ್ಮೆ ಗದ್ದಲ ಶುರುವಾಗಿದೆ. ಈ ಬಾರಿ ಚಂಡೀಗರ್‌ನ ಮಹಿಳೆಯರು ಸುದ್ದಿಯಲ್ಲಿದ್ದಾರೆ. ಅಂದಹಾಗೆ 2016ರ ಏಪ್ರಿಲ್ ‌ರಂದು ಅಡ್ಮಿನಿಸ್ಟ್ರೇಶನ್‌ ಮೂಲಕ ನಗರದಲ್ಲಿ ಆರಂಭವಾದ, `ಕಂಟ್ರೋಲಿಂಗ್‌ ಆಫ್‌ ಫೇಸಸ್‌ ಆಫ್‌ಪಬ್ಲಿಕ್‌ ಅಮ್ಯೂಸ್‌ಮೆಂಟ್‌, 2016' ಪಾಲಿಸಿ ಅಡಿಯಲ್ಲಿ ಡಿಸ್ಕೋಥೆಕ್‌ನಲ್ಲಿ ಮಹಿಳೆಯರು ಕಡಿಮೆ ಬಟ್ಟೆ, ವಿಶೇಷವಾಗಿ ಶಾರ್ಟ್‌ ಸ್ಕರ್ಟ್‌ ಧರಿಸಿ ಹೋಗಲು ನಿಷೇಧ ಹೇರಿದೆ. ಅಡ್ಮಿನಿಸ್ಟ್ರೇಶನ್‌ನವರು ನೈಟ್‌ ಕ್ಲಬ್‌ಗಳು ಮತ್ತು ಬಾರುಗಳಲ್ಲಿ ಮಹಿಳೆಯರು ಕಡಿಮೆ ಹಾಗೂ ಉತ್ತೇಜಿಸುವ ಡ್ರೆಸ್‌ ಧರಿಸಿ ಬರುವುದನ್ನು ಇನ್‌ಡೀಸೆಂಟ್‌ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ, ಪಾಲಿಸಿಯ ಆಧಾರದಲ್ಲಿ ಡಿಸ್ಕೋಥಿಕ್‌ನ ಟೈಮಿಂಗ್‌ನ್ನೂ 2 ಗಂಟೆ ಕಡಿಮೆ ಮಾಡಿದರು. ಮೊದಲು ಬಾರು ಮತ್ತು ನೈಟ್‌ ಕ್ಲಬ್‌ಗಳು ರಾತ್ರಿ 2 ಗಂಟೆಯವರೆಗೆ ತೆರೆದಿರುತ್ತಿದ್ದವು. ಈಗ ರಾತ್ರಿ 12 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ. ಪಾಲಿಸಿಯ ಅಡಿಯಲ್ಲಿ ಒಂದು ನೋಡ್ ಕಮಿಟಿಯನ್ನು ರಚಿಸಲಾಗಿದೆ. ಸದ್ಯಕ್ಕೆ ಮಾರ್‌ ಪೊಲೀಸಿಂಗ್‌ ಹೆಸರಿನಲ್ಲಿ ಶಾಸನದ ಮೂಲಕ ಹೇರಿರುವ ಈ ತೀರ್ಮಾನಕ್ಕೆ ನಗರದ ಬಾರು ಮತ್ತು ಡಿಸ್ಕೋಥೆಕ್‌ ಸಂಚಾಲಕರು ವಿರೋಧಿಸುತ್ತಿದ್ದಾರೆ. ಮಹಿಳೆಯರ ಬಟ್ಟೆಗಳ ಮೇಲೆ ಆದೇಶ ಕೊಡುವವರು ಯಾರು ಎಂದು ಅವರು ಕೀಳುತ್ತಿದ್ದಾರೆ. ಇದು ಮಹಿಳೆಯರ ಹಕ್ಕಿನ ಕಗ್ಗೊಲೆಯಾಗಿದೆ. ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಡೆಗೆ ಮಹಿಳೆಯರ ಉಡುಪು ಇಷ್ಟೊಂದು ಮಹತ್ವಪೂರ್ಣವೇ? ಮಹಿಳೆಯರು ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎಂದು ಯಾವಾಗಲೂ ಪುರುಷರೇ ಏಕೆ ತೀರ್ಮಾನಿಸುತ್ತಾರೆ? ಯಾವ ಸ್ಥಳದಲ್ಲಿ ಅವರು ಏನನ್ನು ಧರಿಸಬೇಕು ಎಂಬ ಬಗ್ಗೆ ಕೆಲವು ವರ್ಷಗಳಿಂದ ವಿವಾದ ನಡೆಯುತ್ತಿದೆ. ಕೆಲವೊಮ್ಮೆ ಕಾಲೇಜ್‌ ಹಾಗೂ ಗುಡಿಗಳಲ್ಲಿ  ಜೀನ್ಸ್ ಪ್ಯಾಂಟ್‌ ಧರಿಸಿ ಹೋಗಲು ನಿರ್ಬಂಧ ಹೇರಿದರೆ, ಕೆಲವೊಮ್ಮೆ  ಕ್ಲೀವೇಜ್‌ ತೋರಿಸುವ ಬಗ್ಗೆ ಗದ್ದಲ ಶುರುವಾಗುತ್ತದೆ. ಮಹಿಳೆಯರಿಗೆ ತಮ್ಮ ಮರ್ಜಿಗೆ ತಕ್ಕಂತೆ ಉಡುಪು ಧರಿಸಲು ಸ್ವಾತಂತ್ರ್ಯವೇಕಿಲ್ಲ?

ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್‌ ಕೂಡ ತಮ್ಮ ಒಂದು ಲೇಖನದಲ್ಲಿ ಅದರ ಬಗ್ಗೆ ಹೀಗೆ ಹೇಳುತ್ತಾರೆ, ``ನನ್ನ ಅಣ್ಣ ತಮ್ಮಂದಿರು ಮನೆಯಲ್ಲಿ ಯಾವ ರೀತಿ ಮುಕ್ತವಾಗಿ ಬನಿಯನ್‌, ನಿಕ್ಕರ್‌ ಧರಿಸಿ ಓಡಾಡುತ್ತಾರೋ ಹಾಗೆ ನಾನೇಕೆ ಓಡಾಡಲು ಸಾಧ್ಯವಿಲ್ಲ ಎಂದು ಚಿಕ್ಕಂದಿನಿಂದಲೇ ಯೋಚಿಸುತ್ತಿದ್ದೆ. ಸೆಕೆಯಾದಾಗ ಅವರು ತಮ್ಮ ಶರ್ಟ್‌ ಬಿಚ್ಚಿದಂತೆ ನಾನೇಕೆ ಮಾಡಲಾಗುವುದಿಲ್ಲ? ನನಗೂ ಸೆಕೆ ಆಗುತ್ತೆ. ಆದರೆ ನನ್ನ ದೈಹಿಕ ರಚನೆ ಅವರಿಗಿಂತ ಭಿನ್ನ ಇರುವುದರಿಂದ ಹಾಗಿರಬಹುದು.''

ಮಹಿಳೆಯರಿಂದ ಮಾತ್ರ ನಿರೀಕ್ಷೆ

ಎಲ್ಲ ಅಕ್ಕತಂಗಿಯರ ಅಥವಾ ಎಲ್ಲ ಮಹಿಳೆಯರ ಮನದಲ್ಲಿ ಉಡುಪುಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ತಮಗೇಕೆ ಇಲ್ಲವೆಂದು ಎಂದಾದರೊಮ್ಮೆ ಅನಿಸುತ್ತಿರುತ್ತದೆ. ಕೆಲವೊಮ್ಮೆ ಸಮಾಜದ ಗುತ್ತಿಗೆದಾರರು ಹಾಗೂ ಕೆಲವೊಮ್ಮೆ ಮನೆಯಲ್ಲೇ ತಂದೆ ತಾಯಿಯರು ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ `ಹೀಗೆ ಕುಳಿತುಕೊ,' `ಕಾಲು ಮಡಚಿಕೊ,' `ಇದನ್ನು ಧರಿಸಬೇಡ,' ಎಂದೆಲ್ಲ ಹೇಳಿ ಅವರ ಬಟ್ಟೆಗಳ ಆಯ್ಕೆ ಹಾಗೂ ಇಷ್ಟನ್ನು ಹತ್ತಿಕ್ಕಲು ಪ್ರಯಾಸಪಡುತ್ತಾರೆ. ಅವರು ಹಿಂಜರಿಯುವಂತೆ ಮಾಡುತ್ತಾರೆ, ಸಂಸ್ಕಾರಗಳ ಘೋಷಣೆ ಕೂಗುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ