ಗಣೇಶ ಚತುರ್ಥಿಯ ಸಂಭ್ರಮ ಮುಗಿಯುವಷ್ಟರಲ್ಲಿ ಭಾದ್ರಪದ ಶುಕ್ಲಪಕ್ಷದ ಪಂಚಮಿ ಬರುತ್ತದೆ. ಇದೇ ಪವಿತ್ರ ದಿನವನ್ನು “ಋಷಿಪಂಚಮಿ” ಎಂದು ಕರೆಯಲಾಗುತ್ತದೆ.  ಭಾದ್ರಪದ ಶುಕ್ಲ ಪಂಚಮಿಯಂದು ಬರುವ ಈ ದಿನ ಗಣೇಶ ಚತುರ್ಥಿಯ ಮರುದಿನವೇ ಆಗಿದ್ದು, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಶಿಷ್ಠ ಎಂಬ ಸಪ್ತಋಷಿಗಳು ಹಾಗೂ ಅರುಂಧತಿಯರನ್ನು ಸ್ಮರಿಸಿ ಪೂಜಿಸುವುದು ಪ್ರಮುಖ ಆಚರಣೆ.  ಆದರೆ ಋಷಿಪಂಚಮಿ ಕೇವಲ ಒಂದು ವ್ರತವಲ್ಲ. “ನಾವು ಇಂದು ಅನುಭವಿಸುತ್ತಿರುವ ಜ್ಞಾನ, ಸಂಸ್ಕೃತಿ ಮತ್ತು ಜೀವನಮೌಲ್ಯಗಳ ಹಿಂದೆ ಯಾರ ತ್ಯಾಗವಿದೆ?” ಎಂಬ ಪ್ರಶ್ನೆಯನ್ನು ನಮಗೆ ನೆನಪಿಸುವ ದಿನವೂ ಹೌದು.

ಋಷಿಪಂಚಮಿ ಎಂದರೇನು?

ಸನಾತನ ಪರಂಪರೆಯಲ್ಲಿ ನಮಗೆ ಉಪಕಾರ ಮಾಡಿದವರನ್ನು ಸ್ಮರಿಸುವುದು ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವುದು ಮಹತ್ವದ ಸಂಸ್ಕಾರ. ತಂದೆ–ತಾಯಿಗೆ ಗೌರವ, ಗುರುಗಳಿಗೆ ನಮಸ್ಕಾರ, ದೇವರಿಗೆ ಪೂಜೆ, ಪೂರ್ವಜರಿಗೆ ತರ್ಪಣ—ಇವೆಲ್ಲವೂ ಇದೇ ಕೃತಜ್ಞತೆಯ ಭಾವನೆಯ ವಿವಿಧ ರೂಪಗಳು. ಅದೇ ರೀತಿಯಲ್ಲಿ, ಮಾನವಕುಲದ ಒಳಿತಿಗಾಗಿ ಜ್ಞಾನ, ತಪಸ್ಸು, ಧರ್ಮ, ವೇದವಿದ್ಯೆ ಮತ್ತು ಜೀವನಮೌಲ್ಯಗಳನ್ನು ಉಳಿಸಿ ಬೆಳೆಸಿದ ಋಷಿ–ಮುನಿಗಳನ್ನು ಸ್ಮರಿಸುವ ದಿನವೇ ಋಷಿಪಂಚಮಿ. ಭಾದ್ರಪದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುವ ಈ ವ್ರತದಲ್ಲಿ ಸಪ್ತಋಷಿಗಳಾದ ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಶಿಷ್ಠ  ಮತ್ತು ವಶಿಷ್ಠರ ಪತ್ನಿ ಅರುಂಧತಿಯನ್ನು ಪೂಜಿಸಲಾಗುತ್ತದೆ. ಇಂದಿಗೂ ಈ ದಿನವನ್ನು ಆತ್ಮಶುದ್ಧಿ, ಸಂಯಮ ಮತ್ತು ಋಷಿಗಳ ಮೇಲಿನ ಕೃತಜ್ಞತೆಯ ದಿನವೆಂದು ವಿವಿಧ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ.

ಸಪ್ತಋಷಿಗಳೇ ಏಕೆ ?

ಭಾರತೀಯ ಪರಂಪರೆಯಲ್ಲಿ ಸಪ್ತಋಷಿಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಅವರು ಕೇವಲ ತಪಸ್ವಿಗಳಲ್ಲ. ಅವರು ಜ್ಞಾನವನ್ನು ಹುಡುಕಿದವರು, ಅದನ್ನು ಸಂಗ್ರಹಿಸಿದವರು, ಶಿಷ್ಯರಿಗೆ ನೀಡಿದವರು ಮತ್ತು ಸಮಾಜಕ್ಕೆ ಧರ್ಮ–ನೀತಿ–ಜೀವನದ ಮಾರ್ಗವನ್ನು ತೋರಿಸಿದವರು ಎಂಬ ನಂಬಿಕೆ ಇದೆ. ಅವರ ಹೆಸರುಗಳು ವಿವಿಧ ಪುರಾಣ, ಇತಿಹಾಸ ಮತ್ತು ಪರಂಪರಾ ಗ್ರಂಥಗಳಲ್ಲಿ ವಿಭಿನ್ನ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸಪ್ತಋಷಿಗಳ ಪಟ್ಟಿಯಲ್ಲೂ ಪರಂಪರೆಯ ಪ್ರಕಾರ ಸ್ವಲ್ಪ ವ್ಯತ್ಯಾಸಗಳು ಕಂಡುಬರುತ್ತವೆ. ಆದರೆ ಋಷಿಪಂಚಮಿ ಆಚರಣೆಯಲ್ಲಿ ಮೇಲಿನ ಏಳು ಹೆಸರುಗಳು ಅತ್ಯಂತ ಪ್ರಸಿದ್ಧ.

ಋಷಿಪಂಚಮಿಯ ಮೂಲ ಉದ್ದೇಶ ಮತ್ತು ಯಾವ ವಯಸ್ಸಿನ  ಮಹಿಳೆಯರು  ಆಚರಿಸುತ್ತಾರೆ

ಸಂಪ್ರದಾಯದ ಪ್ರಕಾರ, ಸಾಮಾನ್ಯವಾಗಿ ಮುಟ್ಟು ನಿಂತ ಮಹಿಳೆಯರು (ರಜೋನಿವೃತ್ತಿ ಹೊಂದಿದವರು) ಮತ್ತು 50 ವರ್ಷ ದಾಟಿದವರು ಈ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ.  ಈ ವ್ರತವನ್ನು ಮುಟ್ಟಾಗುವ ಹೆಂಗಸರು ಪ್ರಸ್ತುತ ಋತುಚಕ್ರ ಹೊಂದುತ್ತಿರುವ 50 ವರ್ಷ ದಾಟಿದ ಮಹಿಳೆಯರು ಸಹ ಈ ವ್ರತವನ್ನು ಆಚರಿಸಬಹುದು. ಆದರೆ ವ್ರತದ ದಿನದಂದು (ಭಾದ್ರಪದ ಶುಕ್ಲ ಪಂಚಮಿ) ಮಹಿಳೆಯರು ಪ್ರಸ್ತುತ ಮುಟ್ಟಿನ ದಿನಗಳಲ್ಲಿ ಇರಬಾರದು. ಅಂದರೆ, ಆ ನಿರ್ದಿಷ್ಟ ಪೂಜೆಯ ದಿನದಂದು ಅವರು ಮುಟ್ಟಾಗಿರದೆ, ಶುಚಿಯಾಗಿದ್ದರೆ ಮಾತ್ರ ಪೂಜೆ ಮತ್ತು ಉಪವಾಸವನ್ನು ಮಾಡಲು ಅವಕಾಶವಿರುತ್ತದೆ

ಈ ವ್ರತಕ್ಕೆ ಸಂಬಂಧಿಸಿದ ಪ್ರಮುಖ ಉದ್ದೇಶವೆಂದರೆ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಮುಟ್ಟಾಗುತ್ತಿದ್ದ ದಿನಗಳಲ್ಲಿ (ತಿಳಿದೋ ಅಥವಾ ತಿಳಿಯದೆಯೋ) ಧರ್ಮ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ತಪ್ಪುಗಳು ಅಥವಾ ದೋಷಗಳ ನಿವಾರಣೆಗಾಗಿ (ಋತುದೋಷ ನಿವಾರಣೆ) ಪ್ರಾಯಶ್ಚಿತ್ತ ರೂಪದಲ್ಲಿ ಅದರ ಮುಕ್ತಿಗಾಗಿ ಋಷಿಪಂಚಮಿ ವ್ರತ ಆಚರಿಸುವ ಪದ್ಧತಿ ಬೆಳೆದಿದೆ.  ಋತುಸ್ರಾವವು ಸ್ವಾಭಾವಿಕ ದೈಹಿಕ ಪ್ರಕ್ರಿಯೆಯಾಗಿದ್ದು,, ಋಷಿಪಂಚಮಿಯನ್ನು ಸ್ತ್ರೀಯರ ಮೇಲಿನ ದೋಷಾರೋಪಣೆಯ ದಿನವಲ್ಲ. ಆತ್ಮಪರಿಶೀಲನೆ, ಕೃತಜ್ಞತೆ ಮತ್ತು ಸಂಸ್ಕೃತಿಯ ಸ್ಮರಣೆಯ ದಿನವಾಗಿ ಅರ್ಥೈಸುವುದು ಹೆಚ್ಚು ಅರ್ಥಪೂರ್ಣ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ