ಪ್ರಚಾರಕ್ಕಾಗಿ  ಧರ್ಮ ಯಾವುದಕ್ಕೂ ರೆಡಿ ! : ನಮ್ಮ ಪ್ರಾಚೀನ ಗ್ರಂಥಗಳಲ್ಲಿ ರೋಚಕ ಪ್ರೇಮಕಥೆಗಳು ತುಂಬಿರುವಂತೆ, ಕ್ರೈಸ್ತ ಧರ್ಮದಲ್ಲೂ ನೃತ್ಯ ಸಂಗೀತ, ನಾಟಕಗಳಲ್ಲಿ ಬೇಕಾದಷ್ಟು ಕಾಮುಕ ಭಂಗಿಗಳನ್ನು ಬಳಸಲಾಗುತ್ತದೆ, ಆಗ ಭಕ್ತರ ದಂಡು ಸಹಜವಾಗಿ ಹೆಚ್ಚುತ್ತದೆ. ಬ್ರೆಝಿ್‌ನ ಇವಾನ್‌ಜೆಲಿಕ್‌ ಚರ್ಚ್‌ ಬೈಬಲ್ ಕಥೆಯಾಧಾರಿತ ರಿಯೋ ಡೀ ಜನೆರಿಯೋ, ಬ್ರೆಝಿಲ್‌ನಲ್ಲಿ ಇಂಥದೇ ಒಂದು ರಂಗೀಲಾ ನಾಟಕವನ್ನು ಆಯೋಜಿಸಿತ್ತು. ಧರ್ಮದ ಜೊತೆ ಮಸ್ತಿಯೂ ಕೂಡಿದ ಮೇಲೆ, ಅಂಥ ಕಡೆ ಹೋಗಿ ಮಂಡಿಯೂರಲು ಭಕ್ತರಿಗೆ ನಷ್ಟವೇನೂ ಇಲ್ಲ, ಮೂಢನಂಬಿಕೆ ಹೀಗೆ ಢಾಳಾಗಿ ವಿಜೃಂಭಿಸುತ್ತದೆ.

ಬೆಲ್ಟ್ ತಪ್ಪು ಜಾಗದಲ್ಲೇನೂ ಧರಿಸಿಲ್ಲ : ಇದಂತೂ ಆಧುನಿಕ ಫ್ಯಾಷನ್ನಿನ ಅಚ್ಚ ಹೊಸ ಬ್ಲೌಸ್‌. ನಮ್ಮ ದೇಶಕ್ಕೆ ಇನ್ನೂ ಬಂದಿಲ್ಲ ಬಿಡಿ. ಇಲ್ಲಂತೂ ಜನ ಇತರರ ಆಹಾರ, ಉಡುಪು, ಮಾತುಗಳ ಬಗ್ಗೆ ಏನಾದರೊಂದು ಸಿಡುಕುತ್ತಿರುತ್ತಾರೆ. ತಾವು ಏನಾದರೂ ಮಾಡಲಿ ಬಿಡಲಿ, ತಲೆಯ ಮೇಲೆ ವಸ್ತ್ರ ಹೊದ್ದು ಕಾನೂನನ್ನೇ ಕೈಗೆ ತೆಗೆದುಕೊಳ್ಳಲಿ, ಯಾರ ತಲೆಯಾದರೂ ಒಡೆಯಲಿ.... ಅಂಥ ಸಮಯದಲ್ಲೆಲ್ಲ ಈ ಬೆಲ್ಟ್ ಸುರಕ್ಷೆಯ ಕೆಲಸಕ್ಕೆ ಒದಗುತ್ತದೋ ಇಲ್ಲವೋ ಹೇಳಲಾಗದು.

ಹೀಗೇಕೆ ಚಿಲ್ ಮಾಡಬಾರದು? :  ಮೇಕಪ್‌ ಹೇಗಿರಬೇಕು ಅಂದ್ರೆ ನೋಡಿದವರು ದಂಗಾಗಬೇಕು! ಇಂಥದ್ದನ್ನು ಹಿಂದೆ ಕಂಡಿರಬಾರದು, ಮುಂದೆ ಕಾಣಬಾರದು! ಇತ್ತೀಚೆಗೆ ಫ್ರಾನ್ಸ್ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಒಬ್ಬಾಕೆ ಸ್ಪರ್ಧಿಸಿದ್ದು ಹೀಗೆ.... ಮುಂದಿನ ಕಿಟಿ ಪಾರ್ಟಿ ನೀವು ಏಕೆ ಹೀಗೆ ಚಿಲ್‌ ಮಾಡಬಾರದು?

ಇದಲ್ಲವೇ ಅಸಲಿ ಮೇಕಪ್‌! : ಫ್ಯಾಷನ್‌, ಗ್ಲಾಮರ್‌, ಸ್ಟೈಲ್ ಗಳಲ್ಲಿ ಓವರ್‌ ಡೂ ಇಲ್ಲದಿದ್ದರೆ ಅದರಲ್ಲಿ ಮಜವೇನು ಬಂತು? ಈಕೆಯ ತರಹ ಪ್ರಯೋಗ ಮಾಡಿ ಯಾರು ಎಷ್ಟು ಭಯಾನಕ ಕ್ಷಮಿಸಿ, ಆಕರ್ಷಕ ಮೇಕಪ್‌, ಹೇರ್‌ ಡೂ, ಕಲರ್‌ ಮಾಡಿ ಟ್ರೈ ಮಾಡಬಾರದು? ಆಗ ಪೈಪೋಟಿಗೆ ಅಸಲಿ ಕಳೆ ಬರುತ್ತದೆ.

ಸ್ವಾಗತ ಕೋರುವ ಸುಂದರಿಯರು : ಚೀನಾದ ಪಾರ್ಲಿಮೆಂಟ್‌ನಲ್ಲಿ 300-400 ಅಲ್ಲ, ಬರೋಬ್ಬರಿ 3,000 ಸದಸ್ಯರಿದ್ದಾರೆ! ಅಲ್ಲಿನ ಮುಖ್ಯ ಆಕರ್ಷಣೆ ಅಲ್ಲಿ ನಡೆಯುವ ಚರ್ಚೆಯಂತೂ ಖಂಡಿತಾ ಅಲ್ಲ.... ಏಕೆಂದರೆ ಆ ಸದನದಲ್ಲಿ ವರ್ಷವಿಡೀ `ಹ್ಞೂಂ' ಎಂಬುದಕ್ಕೆ `ಹ್ಞೂಂ' ಎಂಬುದೇ ಮೊಳಗುತ್ತಿರುತ್ತದೆ, ಸರ್ವಾಧಿಕಾರದ ಕಾಲದಲ್ಲಿನ ಹಾಗೆ. ಈ ಸದಸ್ಯರಿಗೆ ಸ್ವಾಗತವಂತೂ ಭರ್ಜರಿಯಾಗಿ ಇರುತ್ತದೆ..... ನೀವೇ ನೋಡಿ, ಜಂಭದಿಂದ ಬೀಗುತ್ತಾ ನಿಂತಿರುವ ಈ ಹೋಸ್ಟೆಸ್‌ನ್ನು ಕಂಡರೆ ತಿಳಿಯುವುದಿಲ್ಲವೇ?

ನಮ್ಮಲ್ಲಂತೂ ಇಲ್ಲಿ ಉಲ್ಟಾ ನಡೆಯುತ್ತದಷ್ಟೆ : ಜಪಾನಿನಲ್ಲಿ ಸಿಬ್ಬಂದಿ ಗಂಟೆಗಟ್ಟಲೆ ಕೆಲಸ ಮಾಡುತ್ತಾರೆ. ಹೀಗಾಗಿ ಸರ್ಕಾರ ಮತ್ತು ಖಾಸಗಿ ಕಂಪನಿಗಳೆರಡೂ ತಮ್ಮ ಸಿಬ್ಬಂದಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸತೊಡಗಿದೆ. ಒಂದು ಖ್ಯಾತ ಕಂಪನಿಯಂತೂ ಪ್ರತಿ ತಿಂಗಳ ಕೊನೆಯ ಶುಕ್ರವಾರ ಸಂಜೆ 3 ಗಂಟೆಗೇ ರಜೆ ನೀಡಿ, ಎಲ್ಲರಿಗೂ ಗ್ರಾಂಡ್‌ ಪಾರ್ಟಿ ಕೊಡುತ್ತಿದೆಯಂತೆ! ನಮ್ಮಲ್ಲಿ ಎಲ್ಲ ಉಲ್ಟಾ ಬಿಡಿ, ಇಲ್ಲಂತೂ ಕೆಲಸ ಆಗುವುದೇ ದಿನಕ್ಕೆ 2 ಗಂಟೆಗಳ ಕಾಲ, ಬಾಕಿ ಜಾಲಿಯೋ ಜಾಲಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ