ನಮ್ಮ ದೇಶದ  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕೀಯ ವ್ಯವಹಾರಗಳು, ಕೌಟುಂಬಿಕ ಕಲಹಗನ್ನು ವ್ಯಂಗ್ಯದ ವಿಡಂಬನೆಯ ದೃಷ್ಟಿಯಿಂದ ವಿವರವಾಗಿ ತಿಳಿಯೋಣವೇ ?

ಜೀವನದ ದಾರಿಯಲ್ಲಿ ಓಡದಿದ್ದರೆ ನಡೆಯಲು ಕಲಿಯಿರಿ

ಜೀವನದ ಓಟ ಈಗ ದೀರ್ಘ ಎನಿಸಲಾರಂಭಿಸಿದೆ. ಮಹಿಳೆಯರಿಗೂ ಕೂಡ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಮನೆಗಿಂತ ಹೆಚ್ಚಾಗಿ ಹೊರಗಡೆಯೇ ಇರಲಾರಂಭಿಸಿದರೆ ತಾಯಿ ಕಾವಲುಗಾರನ ರೀತಿಯಲ್ಲಿ ಮನೆಯಲ್ಲಿ ಉಳಿದುಬಿಡುತ್ತಿದ್ದಳು. ಇದು ಉದ್ಯೋಗಸ್ಥ ಹಾಗೂ ವೃತ್ತಿಪರ ಮಹಿಳೆಯರ ಜೊತೆಗೂ ಆಗುತ್ತಿದೆ. ನಟಿಯರಿಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕಾಗಿ ಬರುತ್ತದೆ ಅಥವಾ ಮದುವೆಯಾಗಿ ಅಪರಿಚಿತರಂತೆ ಜೀವನ ನಡೆಸಬೇಕಾಗುವುದು ಅನಿವಾರ್ಯವಾಗುತ್ತದೆ. ಈಗ ಕಾಲ ಮತ್ತೆ ಮರುಕಳಿಸುತ್ತಿದೆ.

ಖ್ಯಾತ ನಟಿ ಶ್ರೀದೇವಿ `ಇಂಗ್ಲಿಷ್‌ ವಿಂಗ್ಲಿಷ್‌’ ಹೆಸರಿನ ಚಿತ್ರದ ಮೂಲಕ ಸಾಕಷ್ಟು ಹೆಸರು ಮಾಡಿದರು. ಈಗ ಅವರ 300ನೇ ಚಲನಚಿತ್ರ ರಿಲೀಸ್‌ ಆಗಲಿದೆ. ರಾಣಿ ಮುಖರ್ಜಿ ಕೂಡ `ಹಿಚಕಿ’ ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಕಾಜೋಲ್ ತಮಿಳು ಸಿನಿಮಾದಲ್ಲಿ ಧನುಷ್‌ ಜೊತೆ ನಟಿಸುತ್ತಿದ್ದಾಳೆ. ಐಶ್ವರ್ಯಾ ರೈ ಕೂಡ ಹಲವು ಚಲನಚಿತ್ರಗಳಲ್ಲಿ ಅಭಿನಯ ಮುಂದುವರಿಸಿದ್ದಾಳೆ.

ವಾಸ್ತವದಲ್ಲಿ ಮಕ್ಕಳು ದೊಡ್ಡವರಾದ ಬಳಿಕ ಏನಾದರೊಂದು ಮಾಡಲು ಅವರ ಬಳಿ ಸಾಕಷ್ಟು ಸಮಯಾವಕಾಶ ಇರುತ್ತದೆ. ಆದರೆ ಕೌಟುಂಬಿಕ ಒತ್ತಡ, ರೀತಿನೀತಿ ಹಾಗೂ ತಮಗೆ ತಾವೇ ಎಳೆದುಕೊಂಡ ಆಲಸ್ಯತನದಿಂದಾಗಿ 40ರ ಆಸುಪಾಸಿನಲ್ಲಿ ಅವರು ಮನೆಯಲ್ಲಿಯೇ ಕುಳಿತುಕೊಳ್ಳಲು ಇಚ್ಛಿಸುತ್ತಾರೆ. ಯಾರು ಕೆಲಸ ಮಾಡುತ್ತಿರುತ್ತಾರೊ ಅವರು ಹೊಸ ಹೊಸ ಪ್ರಯೋಗ ಮಾಡುವುದನ್ನು ನಿಲ್ಲಿಸಿ, ಹೇಗಿದ್ದೇವೋ ಹಾಗಿದ್ದು ಬಿಡೋಣ ಎಂದು ಒಪ್ಪಿಕೊಂಡು ಬಿಡುತ್ತಾರೆ. ಒಂದು ರೀತಿಯಲ್ಲಿ ಅವರಿಗೆ ತುಕ್ಕು ಹಿಡಿದಂತಾಗುತ್ತದೆ.

ಒಂದು ಸಂಗತಿಯಂತೂ ಸತ್ಯ. ಅದೇನೆಂದರೆ, ಪ್ರತಿಯೊಬ್ಬರ ಬಳಿಯೂ ಏನಾದರೊಂದು ಮಾಡಲು ಸಮಯ ಹಾಗೂ ನೈಪುಣ್ಯ ಇರುತ್ತದೆಂದೇನಿಲ್ಲ. ಆದರೆ ಕಣ್ತೆರೆದುಕೊಂಡು ವಾಟ್ಸಪ್‌, ಕಿಟಿಪಾರ್ಟಿಗಳ ಮೋಹ ತೊರೆದು, ಅದಕ್ಕೂ ಮುಂದಿನ ದಾರಿಯ ಬಗ್ಗೆ ಯೋಚಿಸಿದರೆ ಪುನಃ ಕೆರಿಯರ್‌ ರೂಪಿಸಿಕೊಳ್ಳುವುದು ಸಾಧ್ಯವಿದೆ.

ಮಕ್ಕಳಿಗೆ ಜನ್ಮ ಕೊಡುವುದು, ಅವರನ್ನು ಬೆಳೆಸುವುದು, ಅವರಿಗಾಗಿ ಸುರಕ್ಷಿತ ವಾತಾರಣ ಕಲ್ಪಿಸುವುದು ಕೂಡ ಒಂದು ಕೆರಿಯರ್‌ನಂತೆಯೇ. ಒಂದು ವೇಳೆ ಈ ಕೆರಿಯರ್‌ನಲ್ಲಿ ಖುಷಿ ಸಿಗುವುದು ಕಡಿಮೆಯಾದ ಬಳಿಕ ಸಮಯ ಹಾಗೂ ಶಕ್ತಿಯನ್ನು

ವ್ಯರ್ಥಗೊಳಿಸುವುದಕ್ಕಿಂತ ಏನನ್ನಾದರೂ ಹೊಸದನ್ನು ಮಾಡಲು ಸನ್ನದ್ಧರಾಗಿರಿ. ಕಿಟಿ ಪಾರ್ಟಿಗಳು, ಸತ್ಸಂಗ, ಭಜನೆ ಮತ್ತು ಸಾಮಾಜಿಕ ಜಾಲತಾಣಗಳು ನಮ್ಮ ಕ್ರಿಯಾಶೀಲತೆಯನ್ನು ಹೊಸಕಿ ಹಾಕುತ್ತವೆ. ಅವು ಮಹಿಳೆಯರ ಪ್ರಗತಿಯಲ್ಲಿ, ಆತ್ಮವಿಶ್ವಾಸದಲ್ಲಿ ತಡೆ ಗೋಡೆಗಳಾಗಿವೆ.

ನನ್ನ ಬಳಿ ಸಮಯವೇ ಇಲ್ಲ ಎಂದು ಹೇಳುವುದು ತಪ್ಪು. ಸಾಕಷ್ಟು ಸಮಯವಿದೆ, ಸಾಮಾನ್ಯವಾಗಿ ಹಣವಂತ ಸ್ತ್ತೀಯರು ತಮ್ಮನ್ನು ತಾವು ಬಹುಮೂಲ್ಯ ಎಂದು ಭಾವಿಸುತ್ತಾರೆ. ಮನೆಯಲ್ಲಿ ಸಿಗುವ ಗೌರವ, ಹಣ, ಖುಷಿ ಹೊರಗಿನ ಪ್ರಪಂಚದಲ್ಲೂ ದೊರೆಯಬೇಕೆಂದು ಬಯಸುತ್ತಾರೆ. ಆದರೆ ಇದು ಸಾಧ್ಯವಿಲ್ಲ. ಎಲ್ಲಿಯವರೆಗೆ ಮಾರುಕಟ್ಟೆ ನಿಮ್ಮ ಮೌಲ್ಯವನ್ನು ಗುರುತಿಸುವುದಿಲ್ಲವೋ ಅಲ್ಲಿಯವರೆಗೆ ನಿಮಗೆ ಯಾವುದೇ ಬೆಲೆ ಇಲ್ಲ. ಆದರೆ ಮಾರುಕಟ್ಟೆಯ ಲೆಕ್ಕಾಚಾರ ನಿಮಗೆ ಏನಾದರೂ ಸಿಕ್ಕೇ ಸಿಗುತ್ತದೆ.

ಮನೆಯ ಕಾವಲುಗಾರ್ತಿ, ಕಿಟಿ ಪಾರ್ಟಿಯಲ್ಲಿ ಅಥವಾ ಭಜನಾ ಮಂಡಳಿಯಲ್ಲಿ ಜೋರಾಗಿ ಚಪ್ಪಾಳೆ ತಟ್ಟುವವಳಿಗಿಂತ ಒಬ್ಬ ಮಹಿಳೆ ಒಂದು ಸ್ಟೋರ್‌ನಲ್ಲಿ 4 ಗಂಟೆಗಳ ಕಾಲ ಕ್ಯಾಶಿಯರ್‌ನ ಕೆಲಸ ಮಾಡುವುದು ಹೆಚ್ಚು ಲಾಭದಾಯಕ ಎನಿಸುತ್ತದೆ. ಇಂತಹ ನೂರಾರು ನೌಕರಿಗಳು ಅಥವಾ ಅವಕಾಶಗಳು ಮುಕ್ತವಾಗಿ ತೆರೆದುಕೊಂಡಿವೆ. ಆದರೆ ಇವುಗಳಲ್ಲಿ ಮನೆಯಂತಹ ಖುಷಿ, ಗತ್ತುಗಾರಿಕೆ ಯಾವುದೂ ಇಲ್ಲ. ಮಾಡು ಅಥವಾ ಮಡಿಗೆ ಅವಕಾಶ ಇಲ್ಲ.

ಜೀವನದ ಓಟದಲ್ಲಿ ಓಡಲಾಗದಿದ್ದರೆ ನಡೆಯುವುದನ್ನಾದರೂ ಕಲಿತುಕೊಳ್ಳಬೇಕು. ಖಾಲಿ ಮಾತ್ರ ಕುಳಿತುಕೊಳ್ಳಬೇಡಿ. ಇದೇ ಜೀವನದ ಮಹತ್ವದ ತಿರುವು.

ಸರ್ಕಾರದ ಉದ್ದೇಶದ ಬಗ್ಗೆ ಸಂದೇಹ

ಸರ್ಕಾರ ಚಿಕಿತ್ಸೆಯನ್ನು ಇನ್ನಷ್ಟು ಸುಲಭ ಹಾಗೂ ಕೈಗೆಟುಕುವ ಬೆಲೆಯಲ್ಲಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾನೂನು ರಚಿಸಲು ಹೊರಟಿದೆ. ವೈದ್ಯರು ಪ್ರಿಸ್ಕ್ರಿಪ್ಶನ್‌ ಅಥವಾ ಔಷಧಿ ಚೀಟಿ ಬರೆದು ಕೊಡುವಾಗ ಅದರಲ್ಲಿ ಔಷಧಿಗಳ ಬ್ರ್ಯಾಂಡ್‌ ನೇಮ್ ಬರೆಯದೆ ಕೆಮಿಕಲ್ ಹೆಸರು ಬರೆಯಬೇಕಾಗುತ್ತದೆ. ಏಕೆಂದರೆ ರೋಗಿ ಆ ಔಷಧಿಗಳನ್ನು ಯಾವುದೇ ಕಂಪನಿಯದ್ದಾದರೂ ತೆಗೆದುಕೊಳ್ಳಬಹುದು.

ಬ್ರ್ಯಾಂಡೆಡ್‌ ಔಷಧಿಗಳನ್ನು ಬರೆದುಕೊಡುವ ಟ್ರೆಂಡ್‌ನಿಂದಾಗಿ ವೈದ್ಯಕೀಯ ವಲಯದಲ್ಲಿ ಭಾರಿ ಅಪ್ರಾಮಾಣಿಕತೆ ಆವರಿಸಿಕೊಂಡಿದೆ. ಸರ್ಕಾರದ ಯೋಚನೆಯೆಂದರೆ, ಈ ಕಾನೂನು ರಚನೆಯಿಂದ ಆ ಟ್ರೆಂಡ್‌ ನಿಲ್ಲುತ್ತದೆ ಹಾಗೂ ಚಿಕಿತ್ಸೆ ರೋಗಿಗೆ ಕೈಗೆಟುಕುವಂತಾಗುತ್ತದೆ.

ಬ್ರ್ಯಾಂಡೆಡ್‌ ಔಷಧಿಗಳು ಬಹು ದುಬಾರಿ ಎಂಬ ಆರೋಪವಿದೆ. ಏಕೆಂದರೆ ಔಷಧಿ ಕಂಪನಿಗಳು ವೈದ್ಯರಿಗೆ ಲಂಚ ಕೊಟ್ಟು, ದುಬಾರಿ ಔಷಧಿಗಳನ್ನು ಬರೆದುಕೊಡುವಂತೆ ಅನಿವಾರ್ಯ ವಾತಾವರಣ ಸೃಷ್ಟಿಸುತ್ತವೆ. ಅದಕ್ಕಾಗಿ ವೈದ್ಯರಿಗೆ ದುಬಾರಿ ಉಡುಗೊರೆ, ನಗದು ಕಮಿಷನ್‌, ಉಚಿತ ವಿದೇಶ ಪ್ರವಾಸಗಳನ್ನೂ ಏರ್ಪಡಿಸುತ್ತವೆ.

ಇಂಡಿಯನ್‌ ಜರ್ನಲ್ ಆಫ್‌ ಫಾರ್ಮಕಾಲಜಿಯ ಒಂದು ವರದಿಯ ಪ್ರಕಾರ, ಆ್ಯಂಟಿ ಅಲರ್ಜಿಕ್‌ ಔಷಧಿ ಅಲರಿಡ್‌ನ 10 ಮಾತ್ರೆಯ ಬೆಲೆ 35 ರೂ. ಅದೇ 10 ಮಾತ್ರೆಯ ಸೆಟ್‌ ಒಳ್ಳೆಯ ಕಂಪನಿಗಳ ಹೆಸರಿನಲ್ಲಿ ಹೋಲ್ ಸೇಲ್ ನಲ್ಲಿ ಕೇವಲ 2.50ಕ್ಕೆ ಸಿಗುತ್ತದೆ. ದುಬಾರಿ ಔಷಧಿಗಳಲ್ಲಿ ಈ ವ್ಯತ್ಯಾಸ ದೊಡ್ಡ ಪ್ರಮಾಣದಲ್ಲಿದೆ. ಹೊಸ ರೀತಿಯ ಚಿಕಿತ್ಸೆ ಬಂದರೂ ಬಡ ಜನರು ಮಾತ್ರ ಸಾಯುವ ಸ್ಥಿತಿ ಉಂಟಾಗಿದೆ.

ಆದರೆ ಇದಕ್ಕೆ ಪರಿಹಾರ ಫಾರ್ಮಾ ಕಂಪನಿಗಳನ್ನು ಸುಲಿಗೆ ಮಾಡುವುದಲ್ಲ, ಔಷಧಿ ಕಂಪನಿಗಳು ಅತ್ಯಂತ ಸ್ಪರ್ಧಾತ್ಮಕ ವಾತಾವರಣದಲ್ಲಿ ಕೆಲಸ ಮಾಡುತ್ತವೆ. ಒಂದು ಬ್ರ್ಯಾಂಡೆಡ್‌ ಔಷಧಿಗೆ ಹಲವು ಪರ್ಯಾಯ ಔಷಧಿಗಳು ಲಭಿಸುತ್ತವೆ. ಎಷ್ಚೋ ಸಲ ಹಲವು ಕಂಪನಿಗಳು ಸೇರಿಕೊಂಡು ಕಾಂಪೀಟ್‌ ಮಾಡುತ್ತವೆ. ಆದರೆ ಇದರ ಹೊರತಾಗಿ ಅವುಗಳಿಗೆ ಉಡುಗೊರೆ, ಡಿಸ್ಕೌಂಟ್‌, ಕ್ರೆಡಿಟ್‌ ಸೌಲಭ್ಯ ಕೊಡಬೇಕಾಗುತ್ತದೆ. ಅವು ಭಾರಿ ಲಾಭ ಗಳಿಸುತ್ತಿವೆ ಎನ್ನುವುದೇನೋ ನಿಜ. ಅದರ ಹಿಂದೆ ಔಷಧಿ ಕಂಪನಿಗಳ ಶ್ರಮವಿದೆ, ದುರಾಸೆಯೊಂದೇ ಇಲ್ಲ.

ಔಷಧಿಗಳನ್ನು ಅಭಿವೃದ್ಧಿಪಡಿಸಲು ಹಾಗೂ ಹಲವು ರೋಗಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಹಲವು ಲಕ್ಷಗಳಲ್ಲ, ಅದೆಷ್ಟೋ ಕೋಟಿ ರೂ.ಗಳನ್ನು ವಿನಿಯೋಗಿಸುತ್ತವೆ. ಹಾಗೊಮ್ಮೆ ಆ ಔಷಧಿ ತೃಪ್ತಿದಾಯಕ ಎನಿಸಿದರೂ ಅದು ಪ್ರತಿಯೊಬ್ಬ ರೋಗಿಗೂ ಸೂಕ್ತ ಅನಿಸುತ್ತದೋ ಇಲ್ಲವೋ ಎಂದು ಹೇಳಲಾಗದು. ವೈದ್ಯರಿಗೆ ಈ ನಿಟ್ಟಿನಲ್ಲಿ ತರಬೇತಿ ಕೊಡುವುದು ಕೂಡ ಕಷ್ಟಕರ ಕೆಲಸವೇ. ಏಕೆಂದರೆ ವೈದ್ಯರಂತೂ ಇಡೀ ದೇಶಾದ್ಯಂತ ಪಸರಿಸಿದ್ದಾರೆ. ಯಾವಾಗ ಯಾವ ಔಷಧಿ ನಿರರ್ಥಕವಾಗುತ್ತವೋ, ಎದುರಾಳಿಗಳ ಔಷಧಿಗಳು ಮಾರುಕಟ್ಟೆಗೆ ಬರುತ್ತವೆ ಎಂದು ಹೇಳಲಿಕ್ಕಾಗದು.

ಕೊನೆಗೊಮ್ಮೆ ಈ ರಿಸ್ಕ್ ತೆಗೆದುಕೊಳ್ಳಬೇಕಾದವರು ರೋಗಿಗಳೇ. ಔಷಧಿಗಳ ಬೆಲೆ ಕಡಿಮೆ ಮಾಡುವ ಭರದಲ್ಲಿ  ಔಷಧಿ ಕಂಪನಿಗಳ ಉತ್ಸಾಹವೇ ಕುಗ್ಗಿ ಹೋಗಬಾರದು. ಔಷಧಿಗಳೇ ಲಭ್ಯ ಆಗದ ಸ್ಥಿತಿ ಉತ್ಪನ್ನವಾಗಬಾರದು. ಇಲ್ಲದಿದ್ದರೆ ಜನರು ದೇವಸ್ಥಾನ, ಮಸೀದಿಗಳಲ್ಲಿ ಆಶೀರ್ವಾದಕ್ಕೆ ಮೊರೆ ಹೋಗಬೇಕಾಗಿ ಬರಬಹುದು.

ದೇಗುಲ ನಿರ್ಮಾಣದ ಒಳ ಉದ್ದೇಶವನ್ನಿಟ್ಟುಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರಬಹುದೆ?

ಪ್ರೀತಿ ಸಂಬಂಧಕ್ಕಿಂತ ಹಣವೇ ಮೇಲು!

ಭಾರತೀಯ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಸಂಜಯದತ್ತನ ಮಾಜಿ ಪತ್ನಿ ರಿಯಾ ಪಿಳ್ಳೈ ಜೊತೆ ಲಿವ್‌ ಇನ್‌ ಪಾರ್ಟನರ್‌ ಆಗಿ ಇರಲು ನಿರ್ಧರಿಸಿದಾಗ ತಾನು ಒಂದು ಟ್ರೋಫಿಗಿಂತ ಹೆಚ್ಚು ಮೌಲ್ಯವಾಗಿರುವವಳನ್ನು ಗೆದ್ದು ಬಂದಿದ್ದೇನೆ ಎಂದುಕೊಂಡಿದ್ದರೋ ಏನೋ? ತಾನೊಂದು ಜೇಡರ ಬಲೆಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಆಗ ಅವರಿಗೆ ಖಂಡಿತ ಅನಿಸಿರಲಿಲ್ಲವೇನೋ? ಸುಮಾರು 8 ವರ್ಷಗಳ ಕಾಲ ಲಿವ್ ಇನ್‌ ರಿಲೇಷನ್‌ನಲ್ಲಿದ್ದ ಅವರ ಮೊಕ್ಕದ್ದಮೆ ಈಗ ಸುಪ್ರೀಂ ಕೋರ್ಟ್‌ ತನಕ ತಲುಪಿದೆ. ಅಲ್ಲೂ ಕೂಡ ನ್ಯಾಯಾಧೀಶರು ಈ ಪ್ರಕರಣದ ಬಗ್ಗೆ ಕೈಚೆಲ್ಲಿ ಕುಳಿತಿದ್ದಾರೆ. 2014ರಲ್ಲಿ ರಿಯಾ, ಪೇಸ್‌ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಳು.

ರಿಯಾ ಪಿಳ್ಳೈ ಪೇಸ್‌ರಿಂದ ಪ್ರತ್ಯೇಕಗೊಳ್ಳಲು 20 ಕೋಟಿ ರೂ. ಹಾಗೂ ಒಂದು ಬಂಗ್ಲೆ ಕೇಳುತ್ತಿದ್ದಾಳೆ. ಒಂದು ತಮಾಷೆಯ ಸಂಗತಿಯೆಂದರೆ ಸಂಜಯದತ್ತನಿಂದ ಬಿಡುಗಡೆ ಹೊಂದುವಾಗ ಆಕೆ ಒಂದು ಬಂಗಲೆ ಪಡೆದಿದ್ದಳು. ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ತಮ್ಮ ಚೇಂಬರಿಗೆ ಇಬ್ಬರನ್ನೂ ಕರೆಸಿ ತಿಳಿಸಿ ಹೇಳಲು ನೋಡಿದರು. ಅವರು ಹೇಳಿದ್ದಷ್ಟೇ ಬಂತು. ಆದರೆ ಅದು ಆಕೆಯ ಕಿವಿಗೆ ಹೋಗಲೇ ಇಲ್ಲ. ಏಕೆಂದರೆ ಹಸಿದ ಹೆಣ್ಣು ಹುಲಿಗೆ ತನಗೆ ದೊರೆತ ಬೇಟೆ ಎಂಥದು ಎಂದು ಗೊತ್ತಿದೆ.

ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಹೈಪ್ರೊಫೈಲ್ ವಿಚ್ಛೇದನದ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪತ್ನಿಯರೇ ಜೋರಾಗಿರುತ್ತಾರೆ. ಏನೇ ಆಗಲಿ ಗಂಡನಿಗೆ ಪಾಠ ಕಲಿಸಲೇಬೇಕು ಎಂಬುದು ಅವರ ಧೋರಣೆಯಾಗಿರುತ್ತದೆ. ತನ್ನಂತಹ ಸುಂದರ, ಸ್ಮಾರ್ಟ್‌ ಹೆಂಡತಿಯನ್ನು ಬಿಟ್ಟು ಬಿಡಲು ಯೋಚನೆ ಮಾಡಿದ್ದೇ ತಪ್ಪು ಎನ್ನುವುದು ಅವರ ಯೋಚನೆಯಾಗಿರುತ್ತದೆ. ಹಾಗೆ ನೋಡಿದರೆ ಆಕೆಗೆ ನೂರಾರು ಅಭಿಮಾನಿಗಳೇನೂ  ಇಲ್ಲ, ಇದ್ದ ಒಬ್ಬಿಬ್ಬರು ಅಭಿಮಾನಿ ಪುರುಷರು ತಮ್ಮ ಹೆಂಡತಿ, ಉದ್ಯೋಗ ಎಲ್ಲವನ್ನೂ ಬಿಟ್ಟು ಇವರ ಹಿಂದೆ ಹಿಂದೆಯೇ ಗಿರಕಿ ಹೊಡೆಯುತ್ತಿರುತ್ತಾರೆ. ಅವಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಸದಾ ಸನ್ನದ್ಧರಾಗಿರುತ್ತಾರೆ. ಕರಿಷ್ಮಾ ಕಪೂರ್‌ಳ ಜೊತೆಗೂ ಹೀಗೆಯೇ ಆಯಿತು. ಸುನಂದಾ ಪುಷ್ಕರ್‌ ಕೂಡ ಇದೇ ಶ್ರೇಣಿಗೆ ಸೇರುತ್ತಾಳೆ.

ಸುಂದರ, ಸ್ಮಾರ್ಟ್‌ ಆಗಿರುವುದರ ಅರ್ಥ ಯಾರು ಯಾರನ್ನೋ ಹೇಗೇಗೋ ಉಪಯೋಗಿಸಿಕೊಂಡರಾಯಿತು ಎಂದಲ್ಲ. ಅದೊಂದು ಜವಾಬ್ದಾರಿ ಕೂಡ ಆಗಿದೆ. ತನ್ನ ಬಗೆಗೂ ಕೂಡ. ಭಾರಿ ಹಠಮಾರಿತನ ಯಾವಾಗಲೂ ದುಬಾರಿಯಾಗಿ ಪರಿಣಮಿಸುತ್ತದೆ. ಯೌವನದಲ್ಲಿ ಎಲ್ಲ ಸರಿಯೆನಿಸುತ್ತದೆ. ಆ ಬಳಿಕ ಏಕಾಂಗಿತನ ಕಾಡುತ್ತದೆ.

ಆ ಏಕಾಂಗಿತನ ಮದ್ಯದ ಬಾಟಲ್ ಗಳಿಂದ ದೂರ ಇರುತ್ತದೆ. ಏಕಾಂಗಿತನ ಮಹಿಳೆಯರನ್ನು ನಿರಾಶೆಗೆ ದೂಡುವಂತೆ ಮಾಡುತ್ತದೆ. ಯಾವ ಮಕ್ಕಳು ತಾಯಿಯನ್ನೇ ಅಲಂಬಿಸಿರುತ್ತವೆ, ಅದು ತಾಯಂದಿರ ಹಠಮಾರಿತನದ ಧೋರಣೆಯಿಂದಾಗಿ ಬಹಳ ಹಿಂಸೆ ಪಡುವಂತಾಗುತ್ತದೆ.

ಗಂಡಹೆಂಡತಿಯ ಸಂಬಂಧದ ನಡುವೆ ಯಾವುದೇ ಭೇದಭಾವ ಇಲ್ಲ. ಸೌಂದರ್ಯದ ಬಲದ ಮೇಲೆ ಮಹಿಳೆಯರು ತಮ್ಮನ್ನು ತಾವು ಅತಿವಿಶಿಷ್ಟ ಎಂದು ಭಾವಿಸಿದರೆ, ಆ ಬಗ್ಗೆ ಅವರು ಪಶ್ಚಾತ್ತಾಪ ಪಡಬೇಕಾಗುತ್ತದೆ. ರಿಯಾ ಪಿಳ್ಳೈ ಬೇಡಿಕೆ ಎಷ್ಟೇ ತಾರ್ಕಿಕವಾಗಿದ್ದರೂ, ಸುಪ್ರೀಂ ಕೋರ್ಟ್‌ ನ್ಯಾಯಾಧೀಶರೂ ಕೂಡ ಆಕೆಗೆ ತಿಳಿವಳಿಕೆ ಹೇಳಲು ಸಾಧ್ಯವಾಗಲಿಲ್ಲವೆಂದರೆ ಆಕೆಗೆ ಸ್ವಲ್ಪ ಅಹಂಕಾರ ಜಾಸ್ತಿಯೇ ಆಗಿದೆ ಎಂದರ್ಥ. ಪಾಪ, ಲಿಯಾಂಡರ್‌ ಪೇಸ್‌!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ