ಪತ್ರಿಕಾ ವರದಿ, ಚುನಾವಣಾ ಆಯೋಗದ ಸ್ಪಷ್ಟನೆ ಮತ್ತು ಸುಪ್ರೀಂ ಕೋರ್ಟ್ ನೋಟಿಸ್, ಆರೋಪದಾಚೆ ಸತ್ಯವನ್ನು ಹುಡುಕಬೇಕಾದ ಸಮಯ

ಚುನಾವಣಾ ಆಯೋಗದ ಒಳಚರ್ಚೆಯಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೆ ಅಂತಿಮ ನಿರ್ಣಯಗಳು ಒಮ್ಮತ ಅಥವಾ ಬಹುಮತದಿಂದಲೇ ಆಗಿದ್ದರೆ ಏಕಪಕ್ಷೀಯ ನಿರ್ಧಾರ ಎಂಬ ಆರೋಪಕ್ಕೆ ದಾಖಲೆಗಳೇ ಉತ್ತರಿಸಬೇಕು. ಅದೇ ಸಮಯದಲ್ಲಿ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ರಾಜಕೀಯ ಪ್ರತಿಭಟನೆ ಹೆಸರಿನಲ್ಲಿ ಅವರ ಕುಟುಂಬದ ನಿವಾಸದ ಮೇಲೆ ದಾಳಿ ಅಥವಾ ಅವಹೇಳನಕಾರಿ ಘೋಷಣೆಗಳನ್ನು ಬರೆಯುವುದು ಯಾವುದೇ ರೀತಿಯಲ್ಲೂ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಆರೋಗ್ಯಕರ ರೂಪವಲ್ಲ.

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಕುರಿತ ಚರ್ಚೆ ಕಳೆದ ಕೆಲವು ವಾರಗಳಿಂದ ತೀವ್ರಗೊಂಡಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ತನಿಖಾ ವರದಿಯಲ್ಲಿ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ ಚುನಾವಣಾ ಆಯೋಗದ ಕೆಲವು ನಿರ್ಧಾರಗಳು ಮತ್ತು ಪ್ರಕ್ರಿಯೆಗಳ ಕುರಿತು ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಣೆಗಳನ್ನು ದಾಖಲಿಸಿದ್ದರು ಎಂದು ವರದಿಯಾಯಿತು. ಮತದಾರರ ಪಟ್ಟಿ, Form-6, ಮತದಾರರ ಮಾಹಿತಿಯ ನಿರ್ವಹಣೆ, SIR ಸೇರಿದಂತೆ ಹಲವು ವಿಷಯಗಳು ಈ ವರದಿಯ ಕೇಂದ್ರದಲ್ಲಿದ್ದವು.  ಇದರಿಂದ ಸಹಜವಾಗಿಯೇ ಒಂದು ಗಂಭೀರ ಪ್ರಶ್ನೆ ಉದ್ಭವಿಸಿತು:

ಮೂರು ಸದಸ್ಯರ ಚುನಾವಣಾ ಆಯೋಗದಲ್ಲಿ ನಿಜವಾಗಿಯೂ ಒಬ್ಬರೇ ನಿರ್ಧಾರ ತೆಗೆದುಕೊಂಡರೇ?  ಲಿಖಿತ ಆಕ್ಷೇಪಣೆ ಎಂದರೆ ಅಂತಿಮ ನಿರ್ಧಾರದ ಮೇಲಿನ ಭಿನ್ನಮತವೇ? ಇದರ ಕುರಿತಾಗಿ ಸೂಕ್ತವಾದ ಉತ್ತರ ಸಿಗುವವರೆಗೂ, ಜನರಿಂದ ಚುನಾಯಿತವಾಗಿರುವ ಸರ್ಕಾರಕ್ಕೆ ಮತ್ತು ಸಾಂವಿಧಾನಯುತವಾದ ಹುದ್ದೆಯಲ್ಲಿರುವ ಚುನಾವಣಾ ಆಯುಕ್ತರನ್ನು ಬೀದಿ ಬೀದಿಗಳಲ್ಲಿ ಅಸಹ್ಯಕರ ರೀತಿಯಲ್ಲಿ ಬಯ್ಯುತ್ತಾ, ವಯಕ್ತಿಯವಾಗಿ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡುವ ಮೂಲಕ ದೇಶದಲ್ಲಿ ಅರಾಜಕತೆ ಉಂಟು ಮಾಡಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಹೋರಾಟ ನಿಜಕ್ಕೂ ಹೇಡಿತನ ಎಂದು ಜನರು ಆಡಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಏನಿತ್ತು?

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ನವೆಂಬರ್ 2025ರಿಂದ ಸೆಪ್ಟೆಂಬರ್ 2026ರವರೆಗೆ ಇಬ್ಬರು ಚುನಾವಣಾ ಆಯುಕ್ತರು 14 ಸಂದರ್ಭಗಳಲ್ಲಿ ಅಧಿಕೃತವಾಗಿ ಆಕ್ಷೇಪಣೆಗಳನ್ನು ದಾಖಲಿಸಿದ್ದರು. ಅವುಗಳಲ್ಲಿ ಮತದಾರರ ನೋಂದಣಿ, ಮತದಾರರ ಹೆಸರು ಅಳಿಸುವುದು ಅಥವಾ ಮರುಸೇರ್ಪಡೆ, Form-6 ಬದಲಾವಣೆ, ಚುನಾವಣಾ ದತ್ತಾಂಶಕ್ಕೆ ಪ್ರವೇಶ ಮತ್ತು ತಂತ್ರಜ್ಞಾನ ವ್ಯವಸ್ಥೆಗಳ ನಿರ್ವಹಣೆ ಮುಂತಾದ ವಿಷಯಗಳು ಸೇರಿದ್ದವು.  ಈ ವರದಿಯೇ ದೇಶಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಯಿತು.

2014 ರಿಂದಲೂ ಸುಮಾರು 100 ಕ್ಕೂ ಹೆಚ್ಚಿನಚುನಾವಣೆಗಳಲ್ಲಿ ಸೋಲನ್ನು ಅನುಭವಿಸಿ ಶತಾಯ ಗತಾಯ ಅಧಿಕಾರಕ್ಕೇರಲು ಬಹಸುತ್ತಿರುವ ರಾಹುಲ್ ಗಾಂಧಿ, ದೆಹಲಿಯಲ್ಲಿ ಸೋತು ಸುಣ್ಣವಾಗಿ ಪಂಜಾಬಿನಲ್ಲಿಯೂ ಅಧಿಕಾರವನ್ನು ಕಳೆದುಕೊಳ್ಳುವ ಭಯದಲ್ಲಿರುವ ಕೇಜ್ರೀವಾಲ್, ಜೆನ್ ಝೀಗಳ ಮೂಲಕ ದೇಶಾದ್ಯಂತ ಅರಾಜಕತೆ ಎಬ್ಬಿಸಿ ನೇಪಾಳ, ಬಾಂಗ್ಲಾ ದೇಶದಲ್ಲಾದಂತೆ ದಿಢೀರ್ ಎಂದು ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕೇಜ್ರೀವಾಲನ ಬಿ-ಟೀಮ್ ಸಿಜೆಪಿ ಸೇರಿದಂತೆ ಅನೇಕ  ವಿರೋಧ ಪಕ್ಷಗಳು ಇದನ್ನು ಚುನಾವಣಾ ಆಯೋಗದ ಒಳಗಿನ ಗಂಭೀರ ಭಿನ್ನಾಭಿಪ್ರಾಯ ಎಂದು ಬಣ್ಣಿಸಿದವು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನೂ ಹಲವು ಪಕ್ಷಗಳು ಆಗ್ರಹಿಸಿದವು. ಆದರೆ ಚುನಾವಣಾ ಆಯೋಗದ ಪ್ರತಿಕ್ರಿಯೆ ವಿಭಿನ್ನವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ