ದಲಿತ ಸಮಾಜದಲ್ಲಿ ಹೆಂಗಸರ ಕಷ್ಟಗಳಿಗೆ ಹೆಗಲಾದವರು

ಸೋಶಿಯ್‌ ಇಂಪ್ಯಾಕ್ಟ್ ಅಚೀವರ್‌ ಅವಾರ್ಡ್‌

ಡಾ. ಕಿರುಬಾ ಮುನಿಸ್ವಾಮಿ 1986ರಲ್ಲಿ ತಮಿಳುನಾಡಿನ ಒಂದು ದಲಿತ ಕುಟುಂಬದಲ್ಲಿ ಹುಟ್ಟಿದರು. ಅನಾದಿ ಕಾಲದಿಂದ ಶೋಷಣೆ ಸಹಿಸುತ್ತಲೇ ಬಾಳಿದ ಸಮಾಜದಲ್ಲಿ ಹುಟ್ಟಿದ ದಲಿತರಿಗೆ ಮಾತ್ರ ಆ ನೋವು ಗೊತ್ತು. ಅದರಲ್ಲೂ ಹೆಣ್ಣಾಗಿ ಹುಟ್ಟಿದರೆ ಆ ಕಷ್ಟಗಳು ಸಾವಿರ ಪಟ್ಟು ಹೆಚ್ಚುತ್ತವೆ.

ಕಿರುಬಾ ಬಾಲ್ಯದಿಂದಲೇ ದಲಿತರ ಜೊತೆ ಉಚ್ಚ ಜಾತಿಯವರು ನಡೆಸುವ ಅನಾದರ ಕಂಡವರು. ದಲಿತ ಸಮಾಜದಲ್ಲಿ ಹೆಣ್ಣಿನ ನೋವನ್ನು ಗುರುತಿಸಿದರು. ಈ ಕಾರಣದಿಂದಲೇ ಈಕೆ ಕಾನೂನಿನ ಕ್ಷೇತ್ರದಲ್ಲಿ ತನ್ನ ಕೆರಿಯರ್‌ ಕಂಡುಕೊಳ್ಳುತ್ತಾ ಮುನ್ನಡೆದರು. ಆದರೆ ದಲಿತಳಾದ ಒಬ್ಬ ಹೆಣ್ಣು ಇಂಥ ದೊಡ್ಡ ಕನಸು ಕಂಡರೆ ಅದು ಸುಲಭಕ್ಕೆ ನನಸಾದೀತೇ? ಇದಕ್ಕಾಗಿ ಆಕೆ ಅನೇಕ ಸಾಮಾಜಿಕ, ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಯಿತು.

ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಬದ್ಧತೆ

ಈಕೆ ಶಾಲೆಯಿಂದ ಕಾಲೇಜುವರೆಗೆ ಜಾತಿ ಕಿರುಕುಳ ಸಹಿಸಬೇಕಾಯಿತು. ಪ್ರತಿ ಹೆಜ್ಜೆಯಲ್ಲೂ ಸಿಗುತ್ತಿದ್ದ ತಿರಸ್ಕಾರ, ಅಪಮಾನಗಳನ್ನೇ ತನ್ನ ಶಕ್ತಿ ಆಗಿಸಿಕೊಂಡರು. ಇಂದು ಆಕೆ ಮಾನವ ಹಕ್ಕುಗಳ ಒಬ್ಬ ಪ್ರತಿಷ್ಠಿತ ವಕೀಲೆ ಹಾಗೂ ಅಂಬೇಡ್ಕರ್ ವಾದಿ ಕಾರ್ಯಕರ್ತೆ. ಸಾಮಾಜಿಕ ನ್ಯಾಯಕ್ಕಾಗಿ ತನ್ನ ಕಡು ಪ್ರತಿಬದ್ಧತೆಯನ್ನು ವಿಶ್ವಾದ್ಯಂತ ತನ್ನ ಐಡೆಂಟಿಟಿ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಜಾಗತಿಕ ಭೇದಭಾವ ಹಾಗೂ ಲೈಂಗಿಕ ಹಿಂಸೆಯ ವಿರುದ್ಧ ಒಂದು ದೊಡ್ಡ ಹೋರಾಟವನ್ನೇ ನಡೆಸಿಕೊಂಡು ಬಂದಿದ್ದಾರೆ. ಇಂದೂ ಈ ಹೋರಾಟ ಮುಂದುವರಿದಿದೆ.

ಈಕೆ ಭಾರತದ ಸುಪ್ರೀಂ ಕೋರ್ಟಿನಲ್ಲಿ ಒಬ್ಬ ಸ್ವತಂತ್ರ ವಕೀಲೆ. ಈಕೆ ಜಾಗತಿಕ ಶೋಷಣೆ, ಲಿಂಗಾಧಾರಿತ ಹಿಂಸೆ, ಸಾಮಾಜಿಕ ಅನ್ಯಾಯಗಳಂಥ ಪ್ರಕರಣಗಳನ್ನೇ ಮೇಲೆತ್ತಿ ಹಿಡಿದು ಹೋರಾಡುತ್ತಾರೆ.

ಈಕೆ `ಲೀಗಲ್ ಇನಿಶಿಯೇಟಿವ್ ‌ಫಾರ್‌ ಈಕ್ವಾಲಿಟಿ'ಯ ಸಂಸ್ಥಾಪಕರು ಹಾಗೂ ಕಾರ್ಯಕಾರಿ ನಿರ್ದೇಶಕರು. ಈಕೆಯ ಈ ಸಂಸ್ಥೆ ಹತಾಶರಾದ ಮಂದಿಗೆ ಕಾನೂನಿನ ತೆರವು ನೀಡುವ ಕೆಲಸ ಮಾಡುತ್ತದೆ. ಈಕೆ ವಿಭಿನ್ನ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಾಗತಿಕ ಭೇದಭಾವ ಮತ್ತು ಮಾನವಹಕ್ಕುಗಳಿಗಾಗಿ ಧ್ವನಿಯಾಗಿದ್ದಾರೆ.

ಸಮರ್ಪಣೆ ಮತ್ತು ಸಂಘರ್ಷ

ಈಕೆ `ಆನರ್‌ ಕಿಲ್ಲಿಂಗ್‌'ನ ಹೈಪ್ರೊಫೈಲ್ ಪ್ರಕರಣಗಳಲ್ಲಿ ದೋಷಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ, ಜೊತೆಗೆ ಟ್ರಾನ್ಸ್ ಜೆಂಡರ್ಸ್‌ ವಿರುದ್ಧ ನಡೆಯುವ ಅಪರಾಧಗಳಲ್ಲಿಯೂ ಸಹ, ಶೋಷಿತರ ಪರ ವಕಾಲತ್ತು ವಹಿಸುತ್ತಾರೆ.

ಈಕೆ 2017ರಲ್ಲಿ ನೆದರ್‌ ಲ್ಯಾಂಡಿನ ನಿಜ ಮ್ಯಾಗೆಝೆನ್‌ ನಲ್ಲಿ ಆಯೋಜಿಸಲಾಗಿದ್ದ ಹ್ಯೂಮನ್‌ ರೈಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೋಗ್‌ ಇಂಡಿಯಾ ಸಹಿತ ವಿಭಿನ್ನ ಮೀಡಿಯಾ ಔಟ್‌ ಲೆಟ್‌ ಗಳಲ್ಲಿ ತನ್ನ ಸಾಹಸಿ ಕಾರ್ಯಗಳಿಗಾಗಿ ಸನ್ಮಾನ ಪಡೆದರು.

ನ್ಯಾಯಸಮಾನತೆಗಾಗಿ ಸಮರ್ಪಣೆ ಹಾಗೂ ಅನ್ಯಾಯದ ವಿರುದ್ಧ ನಿರಂತರ ಸಂಘರ್ಷಕ್ಕಾಗಿಯೇ ಈಕೆಗೆ ಭಾರತ ಮಾತ್ರವಲ್ಲದೆ, ವಿಶ್ವವಿಡೀ ತಮ್ಮ ಐಡೆಂಟಿಟಿ ಸ್ಥಾಪಿಸಿಕೊಂಡರು. ಈಕೆಯನ್ನು ನಾವು ಇಂದಿನ `ಫೀಮೇಲ್ ‌ಅಂಬೇಡ್ಕರ್‌' ಎಂದರೆ ಖಂಡಿತಾ ಅದು ಉತ್ಪ್ರೇಕ್ಷೆಯಲ್ಲ! ಈಕೆ ಸಾಮಾಜಿಕ ನ್ಯಾಯಗಳಿಗಾಗಿ ಹೋರಾಡಿದ ಪರಿಯನ್ನು ಕಂಡೇ ಗೃಹಶೋಭಾ ಇವರನ್ನು ಇನ್‌ ಸ್ಪೈರ್ ಅವಾರ್ಡ್ಸ್ ಗಾಗಿ ಆವರಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ