ಆಯುರ್ವೇದಂ ಆರೋಗ್ಯಂ ಆಯುಷ್ಯಂ. ಹೌದು, ಶತಶತಮಾನಗಳಿಂದ ಮನುಕುಲದ ಜೀವನದ ಭಾಗವಾಗಿರುವ, ದಶಕಗಳಿಂದಲೂ ಮನುಷ್ಯನ ಜೀವನ ಶೈಲಿ ಬದಲಾದರೂ, ಬದಲಾಗದೇ ಇರುವ ಆಯುರ್ವೇದ ಈಗ ನರಮಾನವನ ದೀರ್ಘಾಯಸ್ಸಿನ ಸತ್ಯ. ಆಧುನಿಕತೆಯ ಈ ಯುಗದಲ್ಲಿ ತಂತ್ರಜ್ಞಾನ, ವಿಜ್ಞಾನ ಅದೆಷ್ಟೇ ಬೆಳೆದರೂ ಜನರೀಗ ಪೂರ್ವಜರು ಅನುಸರಿಸುತ್ತಿದ್ದ ಆರೋಗ್ಯ ಪದ್ಧತಿಯ ಮೊರೆ ಹೋಗುತ್ತಿದ್ದಾರೆ. ಅಲೋಪತಿ ಹಿಂದೆ ಬಿದ್ದು ಹಾನಿಕಾರಕ ಮೆಡಿಸನ್ ಗೀಳು ಹಚ್ಚಿಕೊಂಡು ಅಲ್ಪಾಯುಷಿ ಆಗುವುದಕ್ಕಿಂತ ಆಯುರ್ವೇದದಲ್ಲೇ ನೆಮ್ಮದಿ ಆರೋಗ್ಯ ಕಂಡುಕೊಳ್ಳಲು ಜನ ಮುಂದಾಗಿದ್ದಾರೆ. ಹಾಗಂತ ಎಲ್ಲೆಂದರಲ್ಲಿ ಸಿಕ್ಕಸಿಕ್ಕ ಗಿಡಮೂಲಿಕೆಗಳನ್ನು ಬಳಸುವುದು, ಆಯುರ್ವೇದ ಔಷಧಿ ಸೇವನೆ ಒಳ್ಳೇದಲ್ಲ. ಹಾಗಾಗಿಯೇ ಜನರಿಗೆ ನಂಬಿಕಾರ್ಹ ಆಯುರ್ವೇದ ಚಿಕಿತ್ಸೆ ಕೊಡುತ್ತಿದೆ ಪ್ರತಿಧೀ ಆಯುರ್ವೇದ ಕೇಂದ್ರ.

ಯಾವುದೇ ದುರುದ್ದೇಶವಿಲ್ಲದೇ, ಯಾವುದೇ ಕಲಬೆರಕೆ ಇಲ್ಲದೇ ಅಪ್ಪಟ ಔಷಧೀಯ ಗಿಡಮೂಲಿಕೆಗಳ ಚಿಕಿತ್ಸೆ ಕೊಡುತ್ತಿರುವ ಪ್ರತಿಧೀ ಆಯುರ್ವೇದ ಕೇಂದ್ರದ ಬಗ್ಗೆ ಬರೆಯುವುದಕ್ಕೂ ಮುನ್ನ ಪ್ರತಿಧೀ ಹಿಂದಿನ ಶಕ್ತಿಯ ಕುರಿತು ಹೇಳಲೇಬೇಕು. ಜನರ ಆರೋಗ್ಯಕ್ಕಾಗಿ ಸದಾ ಸೇವಾನಿರತ ಪ್ರತಿಧೀ ಆಯುರ್ವೇದ ಕೇಂದ್ರವನ್ನು ಸಂಸ್ಥಾಪಿಸಿದವರೇ ಡಾ. ಪ್ರಜ್ವಲಾ ರಾಜ್. ಪ್ರಾಚೀನ ಆಯುರ್ವೇದ ವಿಜ್ಞಾನ ಕ್ಷೇತ್ರದಲ್ಲಿ ಡಾ.ಪ್ರಜ್ವಲಾ ರಾಜ್ ಅವರು ಸುಮಾರು ೨೦ ವರ್ಷಗಳ ಅನುಭವ ಹೊಂದಿದ್ದಾರೆ. ಔಷಧೀಯ ಗಿಡಮೂಲಿಕೆಗಳ ಬಗ್ಗೆ ಸಂಶೋಧನೆ, ಅಧಿಕೃತ ಆಯುರ್ವೇದ ಚಿಕಿತ್ಸೆಯನ್ನು ಒದಗಿಸುವ ಏಕೈಕ ಉದ್ದೇಶದಿಂದ ಆಸ್ಪತ್ರೆಯನ್ನು ಆರಂಭಿಸಿದರು. ವೃತ್ತಿಯಲ್ಲಿ ಆಯುರ್ವೇದ ತಜ್ಞೆಯಾಗಿರುವ ಡಾ. ಪ್ರಜ್ವಲಾ ರಾಜ್, ಕೇವಲ ತಮ್ಮ ಆಸ್ಪತ್ರೆ ಕೆಲಸಗಳಿಗೆ ಮಾತ್ರ ಸೀಮಿತರಾಗಿರದೆ, ಹಲವಾರು ಸಮಾಜಮುಖಿ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮೂಲತಃ ಬೆಂಗಳೂರಿನವರಾದ ಆಯುರ್ವೇದ ತಜ್ಞೆ ಪ್ರಜ್ವಲಾ ರಾಜ್, ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ತಂದೆ ಸರ್ಕಾರಿ ಆಯುರ್ವೇದ ಹಾಸ್ಪಿಟಲ್‌ನಲ್ಲಿ ಫಾರ್ಮಸಿಸ್ಟ್ ಹಾಗೂ ತಾಯಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಸಿಸ್ಟೆಂಟ್ ಡೈರಕ್ಟರ್ ಆಗಿದ್ದವರು.

ಅತ್ತಿಗುಪ್ಪೆ, ಚಂದ್ರಾಲೇಔಟ್ ಹಾಗೂ ರಾಜಾಜಿನಗರದಲ್ಲಿ ಆಯುರ್ವೇದ ಕೇಂದ್ರಗಳನ್ನು ಸ್ಥಾಪಿಸಿರುವ ಪ್ರಜ್ವಲಾ ರಾಜ್, ಕಸ್ಟಮೈಸ್ಟ್ ಮೆಡಿಸನ್ ಕೊಡುತ್ತಾ ಬಂದಿದ್ದಾರೆ. ರೋಗಿಯ ದೇಹ ಪ್ರಕೃತಿ, ವಾತ, ಪಿತ್ತ, ಕಫ ಹಾಗೂ ಕಾಯಿಲೆಯ ಮೂಲ ಎಲ್ಲಿಂದ ಆರಂಭವಾಯಿತು ಎಂಬ ಹಿನ್ನೆಲೆ ಅವಲೋಕಿಸಿ ಅದಕ್ಕೆ ಯಾವ ಔಷಧ, ಚಿಕಿತ್ಸೆ ಸೂಕ್ತ ಎಂಬುದನ್ನು ಪರಿಗಣಿಸಿ ತಾವೇ ಖುದ್ದಾಗಿ ಔಷಧಗಳನ್ನು ತಯಾರಿಸಿ ನೀಡುತ್ತಿದ್ದಾರೆ.

 ಕ್ಯಾನ್ಸರ್ ತಡೆಗೆ ಪ್ರಜ್ವಲಾ ರಾಜ್ ಪ್ರತಿಜ್ಞೆ

ಸಾಮಾನ್ಯವಾಗಿ ಎಲ್ಲಿಂದಲೋ ಆಯುರ್ವೇದ ಔಷಧಿ ಅಂತಾ ತರಿಸಿ ಕೊಡುವ ಇವತ್ತಿನ ಪರಿಸ್ಥಿತಿಯಲ್ಲಿ ತಾವೇ ಖುದ್ದು ರೋಗಕ್ಕೆ ತಕ್ಕ ಗಿಡಮೂಲಿಕೆಗಳ ಮದ್ದನ್ನ ತಯಾರಿಸಿ ಕೊಡುತ್ತಿರುವ ಡಾ. ಪ್ರಜ್ವಲಾ ರಾಜ್ ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ. ಅಷ್ಟೇ ಅಲ್ಲ, ಕ್ಯಾನ್ಸರ್ ತಡೆಗಟ್ಟಲು ಡಾ. ಪ್ರಜ್ವಲಾ ರಾಜ್ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಈಗಾಗಲೇ ಅಧ್ಯಯನ ಕೂಡ ನಡೆಸಿದ್ದಾರೆ.

“ಗೃಹಶೋಭಾ” ಜೊತೆ ಮಾತನಾಡಿದ ಡಾ. ಪ್ರಜ್ವಲಾ ರಾಜ್, "ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್ ಮತ್ತು ಸರ್ವೇಕಲ್ ಕ್ಯಾನ್ಸರ್‌ನಲ್ಲಿ ಇಂಡಿಯಾ ನಂಬರ್ ಒನ್ ಎನಿಸಿಕೊಂಡಿದೆ. ಕ್ಯಾನ್ಸರ್ ಕಾಯಿಲೆಗೆ ಏನೇನು ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ಬಹಳಷ್ಟು ಸಂಶೋಧನೆಗಳನ್ನು ನಡೆಸಿದ್ದೇನೆ ಹಾಗೂ ಅಧ್ಯಯನವನ್ನೂ ಮಾಡಿದ್ದೇನೆ. ನಮ್ಮದೇ ಆದ ಫಾರ್ಮುಲೇಶನ್ ಕೂಡಾ ಮಾಡಿಕೊಂಡಿದ್ದೇವೆ. ಒಂದು ಪ್ರಿವೆಂಟಿವ್ ಮೆಜರ್, ಮತ್ತೊಂದು ಟ್ರೀಟ್‌ಮೆಂಟ್ ಮೆಜರ್. ಮೊದಲನೆಯದು ಕ್ಯಾನ್ಸರ್ ಅಥವಾ ಯಾವುದೇ ಕಾಯಿಲೆಗಳು ಬರದಂತೆ ಜೀವನವನ್ನು ಹೇಗೆ ನಡೆಸಬೇಕು, ಆರೋಗ್ಯವಂತ ವ್ಯಕ್ತಿ ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಾದರೆ, ಮತ್ತೊಂದು, ಕಾಯಿಲೆ ಬಂದ ಮೇಲೆ ಹೇಗೆ ಜೀವನ ಸಾಗಿಸಬೇಕು ಎಂಬುದಾಗಿದೆ. ಇದರಿಂದ ರೋಗ ಲಕ್ಷಣಗಳು ಕಡಿಮೆಯಾಗುತ್ತಾ ಬರುತ್ತವೆ. ಔಷಧಗಳ ಜೊತೆ, ಯೋಗ, ಧ್ಯಾನ, ಮ್ಯೂಸಿಕ್ ಥೆರಪಿ, ಕೌನ್ಸಿಲಿಂಗ್, ಅಕ್ಯುಪ್ರಶರ್, ಅಕ್ಯುಪಂಚರ್‌ನ್ನೂ ಕೂಡಾ ನೀಡಲಾಗುತ್ತದೆ. ಇದರಲ್ಲಿ ಕ್ಯಾನ್ಸರ್ ರೋಗಿ ಮತ್ತು ರೋಗಿಯ ಕುಟುಂಬದವರಿಗೂ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ" ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ