`ಎ ಸ್ಟಿಚ್‌ ಇನ್‌ ಟೈಂ ಸೇಲ್ಸ್ ನೈನ್‌.....' ಎಂಬ ಆಂಗ್ಲ ನಾಣ್ನುಡಿಯಂತೆ ಹೊಲಿಗೆ ಯಂತ್ರ ಅನಾದಿ ಕಾಲದಿಂದಲೂ ಹೆಣ್ಣಿಗೆ ಆರ್ಥಿಕ ನೆರವು ಒದಗಿಸುವ, ಯಾವುದೇ ಬಗೆಯ ಬಟ್ಟೆಯನ್ನು ಸುಂದರವಾಗಿ ಹೊಲಿದು ವಿನ್ಯಾಸಗೊಳಿಸಲು ಅನುಕೂಲಕರವಾಗಿರುವ ಅತ್ಯುತ್ತಮ ಸಾಧನವಾಗಿದೆ. ಹಿಂದಿನ ಕಾಲದ ಹಳೆಯ ಯಂತ್ರಗಳು ಕೇವಲ ಹೊಲಿಗೆಯನ್ನಷ್ಟೇ ಮಾಡುತ್ತಿದ್ದವು. ಆದರೆ ಈಗ ಜನರ ಅನುಕೂಲಕ್ಕೆ ತಕ್ಕಂತೆ ಹೈ ಸ್ಪೀಡ್‌ ಮೆಶೀನ್‌ ಲಭ್ಯವಿದೆ, ಇದಕ್ಕೆ ಬೇಡಿಕೆಯೂ ಹೆಚ್ಚು. ಈ ಯಂತ್ರಗಳು ಎಲೆಕ್ಟ್ರಾನಿಕ್‌ಆಟೋಮ್ಯಾಟಿಕ್‌ ಆಗಿರುವುದರ ಜೊತೆ ಹೊಸ ಹೊಸ ಪ್ರಯೋಗಗಳನ್ನು ಮಾಡಲಿಕ್ಕೂ ಸುಲಭ. ಇವುಗಳ ನೆರವಿನಿಂದ ಕನಿಷ್ಠ ಸಮಯದಲ್ಲಿ ಗರಿಷ್ಠ ಉಡುಪುಗಳನ್ನು ಹೊಲಿಯುವುದು ಮಾತ್ರವಲ್ಲದೆ ಅವನ್ನು ಸ್ಟೈಲಿಶ್‌ಗ್ಲಾಮರಸ್ ಗೊಳಿಸಬಹುದಾಗಿದೆ.

ಆಧುನಿಕ ಯಂತ್ರಗಳ ಬಗೆಗಳು

ಈ ಹೊಸ ಹೊಲಿಗೆ ಯಂತ್ರಗಳಲ್ಲಿ ಹಲವು ಬಗೆಗಳುಂಟು ಪ್ರತಿಯೊಂದಕ್ಕೂ ತಮ್ಮದೇ ಆದ ಪ್ರತ್ಯೇಕತೆಗಳುಂಟು. ಇವನ್ನು ಗೃಹಿಣಿಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಇವುಗಳ ವೈಶಿಷ್ಟ್ಯಗಳು ಎಂದರೆ :

ಆಟೋಮ್ಯಾಟಿಕ್‌ಝಿಗ್‌ ಝಾಗ್‌ ಹೊಲಿಗೆ ಯಂತ್ರ

ಆಟೋಮ್ಯಾಟಿಕ್‌ಫ್ಯಾಷನ್‌ ಸ್ಟಿಚ್‌ ಹೊಲಿಗೆ ಯಂತ್ರ

ಆಟೋಮ್ಯಾಟಿಕ್‌ಸ್ಟಿಚ್‌ ಮ್ಯಾಜಿಕ್‌ ಹೊಲಿಗೆಯಂತ್ರ

ಆಟೋಮ್ಯಾಟಿಕ್‌ವಂಡರ್‌ ಸ್ಟಿಚ್‌ ಹೊಲಿಗೆಯಂತ್ರ

ಡ್ರೀಮ್ ಸ್ಟಿಚ್‌ ಹೊಲಿಗೆ ಯಂತ್ರ

ಡೀಲಕ್ಸ್ ಹೊಲಿಗೆ ಯಂತ್ರ

ಮಹತ್ವಗಳು

ಈ ಎಲ್ಲಾ ಯಂತ್ರಗಳಿಗೂ ತಮ್ಮದೇ ಆದ ಮಹತ್ವವಿದೆ. ಈ ಯಂತ್ರಗಳು ಆಟೋಮ್ಯಾಟಿಕ್‌, ಎಲೆಕ್ಟ್ರಾನಿಕ್‌ ಆಗಿರುವುದರ ಜೊತೆಯಲ್ಲೇ ಲೈಟ್‌ ವೆಯ್ಟ್ ಕೂಡ ಹೌದು. ಇವುಗಳಲ್ಲಿ ಆಟೋಮ್ಯಾಟಿಕ್‌ ನೀಡಲ್, ಥ್ರೆಡ್‌ ಕಟರ್‌, ಕೇರಿಂಗ್‌ ಹ್ಯಾಂಡ್‌, ಸೆಲೆಕ್ಟಿವ್ ಪ್ಯಾಟರ್ನಲ್ ಹಾಗೂ ಅಲ್ಯುಮಿನಿಯಂನ ಪಲ್ಲಿ ಆಟೋಮ್ಯಾಟಿಕ್‌ ಬಾಡಿ ಇರುತ್ತದೆ. ಇವುಗಳ ಮತ್ತೊಂದು ವೈಶಿಷ್ಟ್ಯವೆಂದರೆ ಬಟನ್‌ ಹಾಕುವುದು, ಕಾಜಾ ಕೆಲಸ, ಕಸೂತಿ, ಪ್ಯಾಚ್‌ ವರ್ಕ್‌ ಇತ್ಯಾದಿಗಳನ್ನೂ ಸಹ ಬಲು ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಿಕೊಳ್ಳಬಹುದು. ಎಲ್ಲಕ್ಕೂ ಸ್ಪೆಷಲ್ ವಿಷಯ ಅಂದ್ರೆ, ಇವುಗಳಲ್ಲಿ ಕೈಗಳು ಫ್ರೀಯಾಗಿದ್ದು, ಸ್ಟಿಚಿಂಗ್‌ ಪರ್ಫೆಕ್ಟ್ ಎನಿಸುತ್ತದೆ. ಜೊತೆಗೆ ಈ ಯಂತ್ರಗಳಲ್ಲಿ ಡಿಸೈನಿಂಗ್‌ ಗಾಗಿ ಡಿಸ್‌ ಪ್ಲೇ ವಿಂಡೋ ಸಹ ಇರುತ್ತದೆ.

ಸುದೀರ್ಘ ಬಾಳಿಕೆಗೆ ಸಲಹೆಗಳು

ಹೊಲಿಗೆ ಆರಂಭಿಸಿದ 4 ಗಂಟೆಗಳ ನಂತರ ಯಂತ್ರದ ಸೂಜಿ ಬದಲಿಸಿ. ಏಕೆಂದರೆ ಬಟ್ಟೆ ಹೊಲಿಯುತ್ತಾ ಹೊಲಿಯುತ್ತಾ ಸೂಜಿ ಸವೆಯುತ್ತದೆ. ಒಮ್ಮೊಮ್ಮೆ ಬಟ್ಟೆಗಳಲ್ಲಿ ರಂಧ್ರ ಉಂಟು ಮಾಡಬಹುದು.

ನಿಯಮಿತವಾಗಿ ಹೊಲಿಗೆ ಯಂತ್ರವನ್ನು ಶುಚಿಗೊಳಿಸಬೇಕು ಎಂಬುದನ್ನು ಮರೆಯದಿರಿ ಹಾಗೂ ಮ್ಯಾನ್ಯುಯೆಲ್ ನಲ್ಲಿ ನೀಡಿರುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿ.

ಯಂತ್ರದ ಬಾಡಿ ಹಾಗೂ ಬಾಬಿನ್ಸ್ ನ್ನು ಮಖಮಲ್ ಬಟ್ಟೆಯಲ್ಲಿ ಶುಚಿಗೊಳಿಸುವುದೇ ಸೂಕ್ತ.

ಯಂತ್ರದ ಅಗತ್ಯ ಭಾಗಗಳಿಗೆ ಮೆಶೀನ್‌ ಆಯಿಲ್ ‌ನ್ನು 1-2 ತೊಟ್ಟುಗಳಾಗಿ ಹನಿಸಿರಿ, ಯಂತ್ರದ ಬಾಡಿ ಮೇಲೆ ಅದು ಬೀಳಬಾರದು.

ಒಂದು ಬ್ರಶ್ಶಿನ ನೆರವಿನಿಂದ ಸ್ಟಿಚ್‌ ಪ್ಲೇಟ್‌, ಪ್ರೆಷರ್‌ ಪಟ್‌, ಎಕ್ಸ್ ಟೆನ್ಶನ್‌ ಟೇಬಲ್, ಬಾಬಿನ್‌ ಹುಕ್‌ ಇತ್ಯಾದಿಗಳನ್ನು ಉತ್ತಮ ರೀತಿಯಲ್ಲಿ ಶುಚಿಗೊಳಿಸಬೇಕು. ಇದರಿಂದ ಒಳಗೆ ಕಟ್ಟಿದ ಧೂಳು, ಕೊಳೆ ಸುಲಭವಾಗಿ ಹೊರಬರುತ್ತದೆ.

ಪ್ರತಿ 2 ವರ್ಷಗಳಿಗೊಮ್ಮೆ ನಿಮ್ಮ ಡೀಲರ್‌ ಅಥವಾ ಮೆಕ್ಯಾನಿಕ್‌ ಮೂಲಕ ಯಂತ್ರವನ್ನು ಚೆಕ್‌ ಮಾಡಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ