ಲಕ್ಷಾಂತರ ಕನ್ನಡ ಸಾಹಿತ್ಯಾಸಕ್ತರ ಆಗಮನದೊಂದಿಗೆ ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನ ಕಳೆಗಟ್ಟಿದ್ದ ಸಾಹಿತ್ಯ ಸಂತೆಯಲ್ಲಿ ಎಲ್ಲರ ಅಕ್ಕರೆಯ ಮಾತು ಕನ್ನಡ ಡಿಂಡಿಮ ಬಾರಿಸಿತು. ಈ ಬಾರಿ ಸಾಹಿತ್ಯದ ಜೊತೆ ಬಾಡೂಟ ಸವಿಯಬೇಕೆಂಬ ಕೆಲವರ ಒತ್ತಾಸೆಯ ವಿವಾದದ ನಡುವೆಯೂ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆ.. ಪುಸ್ತಕಗಳ ಖರೀದಿ ಭರಾಟೆ.. ಹಲವು ಕವಿಗೋಷ್ಠಿಗಳು.. ಮೂರು ದಿನಗಳ ಸಂವಾದಗಳಲ್ಲಿ ಕೇಳಿಬಂದ ಬಾಡೂಟದ ನಗೆಚಟಾಕಿಗಳು.. ಶುದ್ಧಸಸ್ಯಾಹಾರಿ ಭೋಜನ ವ್ಯವಸ್ಥೆ.. ಬಸ್​ ನಿಲ್ದಾಣದಿಂದ ಸಮ್ಮೇಳನ ಸ್ಥಳಕ್ಕೆ ಉಚಿತ ಬಸ್​ ವ್ಯವಸ್ಥೆ.. ಮಂಡ್ಯ ನಗರದೆಲ್ಲೆಡೆ ರಾರಾಜಿಸಿದ ಕನ್ನಡ ಬಾವುಟಗಳು.. ಹೀಗೆ ಹತ್ತು ಹಲವು ವಿಶೇಷತೆಯ ಜೊತೆ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿತು.

FB_IMG_1735101348343

ಸಮಸ್ಯೆಗೆ ಸಾಹಿತ್ಯವೇ ಖಡ್ಗವಾಗಲಿ : ಮಂಡ್ಯ ನಗರದ ಹೊರವಲಯದ ಶ್ರೀನಿವಾಸಪುರ ಬಳಿ ರಾಜಮಾತೆ ಕೆಂಪರಾಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್​ ಪ್ರಧಾನ ವೇದಿಕೆಯಲ್ಲಿ ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ‘ನುಡಿ ಬಿಟ್ಟರೆ ನಾಡು ಬಿಟ್ಟಂತೆ.. ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ’ ಅನ್ನೋ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಜನರ ಸಮಸ್ಯೆಗೆ ಸಾಹಿತ್ಯವೇ ಖಡ್ಗವಾಗಲಿ ಎಂದು ಕರೆ ಕೊಟ್ಟರು. ಕನ್ನಿಡಗರ ಮಾತೃಭಾಷೆ ಕನ್ನಡ ಉಳಿಯಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯವಾಗಿದೆ. ಪ್ರಸ್ತುತ ಹಳೆಯ ವೈದಿಕ ಶಿಕ್ಷಣ ವ್ಯವಸ್ಥೆಯಂತೆಯೇ ಬಾಯಿಪಾಠ ಮಾಡುವ ಉಪಯೋಗವಿಲ್ಲದ ವ್ಯವಸ್ಥೆಯಾಗಿದೆ. ಬದಲಾವಣೆ ಮಾಡಿದರೆ ಮಾತ್ರ ಕನ್ನಡದಲ್ಲಿ ಯೋಚಿಸುವ, ಸಂಶೋಧನೆ ಮಾಡುವ, ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುವ ಭಾಷೆಯಾಗಿ ಕನ್ನಡ ಬೆಳೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು.

FB_IMG_1735101357075

ಕನ್ನಡಾಭಿವೃದ್ಧಿಗೆ ಗೊರುಚ 16 ಹಕ್ಕೊತ್ತಾಯ: ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ 96ರ ಇಳಿವಯಸ್ಸಿನ ಸಾಹಿತ್ಯ ಗೊ.ರು. ಚನ್ನಬಸಪ್ಪ ಅವರು ಮೊದಲ ದಿನದ ತಮ್ಮ ಭಾಷಣದಲ್ಲಿ ಕನ್ನಡಾಭಿವೃದ್ಧಿಗೆ ಅಗತ್ಯವಾದ 16 ಹಕ್ಕೊತ್ತಾಯಗಳನ್ನು ಮಂಡಿಸಿದರು. ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲೀಷ್​​​​​​ ಮಾಧ್ಯಮದ ಶಾಲೆಗಳನ್ನು ತೆರೆಯಲು ಅನುಮತಿ ನೀಡಬಾರದು. ಅಗತ್ಯವೆನಿಸಿರುವ ಇಂಗ್ಲಿಷ್​ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು. ಕನ್ನಡ ವಿಶ್ವವಿದ್ಯಾಲಯ ಮತ್ತು ಜಾನಪದ ವಿವಿಗಳು ಅನುಭವಿಸುತ್ತಿರುವ ಹಣಕಾಸು ಮತ್ತು ಬೋಧನಾ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗೊರುಚ ಅವರು ಒತ್ತಿ ಹೇಳಿದರು.

FB_IMG_1735101334558

ಸರ್ಕಾರದ ಸಚಿವಾಲಯ, ಕಚೇರಿಗಳ ಹೊರತಾಗಿ ಉಳಿದ ಇಲಾಖೆಗಳ ನಿರ್ದೇಶನಾಲಯ ಕಚೇರಿಗಳನ್ನು ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾಯಿಸಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಕಚೇರಿಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರುವುದು ಕಡ್ಡಾಯವಾಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಯಾವುದೇ ಕಾರಣಕ್ಕೂ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು ಎಂದು ಸಮ್ಮೇಳನಾಧ್ಯಕ್ಷರು ಪರಭಾಷೆಯ ಒತ್ತಡವನ್ನು ಬಲವಾಗಿ ವಿರೋಧಿಸಿದರು. ಸರ್ವಾಧ್ಯಕ್ಷರು ಪ್ರಮುಖವಾಗಿ 18 ವರ್ಷ ಮೇಲ್ಪಟ್ಟವರನ್ನುದ್ದೇಶಿಸಿ ಮಾತನಾಡಿ ತಂತ್ರಜ್ಞಾನದ ಜತೆಜತೆಗೆ ಕನ್ನಡದ ಏಳ್ಗೆ ಕಾಣಬೇಕೆನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದು ಇಡೀ ಏಳೂವರೆ ಕೋಟಿ ಕನ್ನಡಿಗರ ಆಶಯದಂತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ