ಯಾವುದೇ ಭಾಷೆಯ ಚಲನಚಿತ್ರಗಳನ್ನು ನೋಡಿದಾಗ ಅಲ್ಲಿ ನಾಯಕ ನಾಯಕಿ ಸುಂದರ ಪ್ರವಾಸಿ ತಾಣಗಳಲ್ಲಿ ಸುತ್ತಾಡುವ, ಹಾಡುವ ದೃಶ್ಯಗಳು ಇದ್ದೇ ಇರುತ್ತವೆ. ಈ ಪ್ರವಾಸಿ ತಾಣಗಳೇ ಹಾಗೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಖುಷಿ ಕೊಡುವಂಥವು.

ಕೆಲವರು ಕೆಲಸದ ಪ್ರಯುಕ್ತ, ಇನ್ನು ಕೆಲವರು ರಿಲ್ಯಾಕ್ಸ್ ಮಾಡಲು, ಮತ್ತೆ ಕೆಲವರು ರೋಮಾಂಚನದ ಅನುಭವ ಪಡೆದುಕೊಳ್ಳಲು ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ಪ್ರವಾಸದ ಉದ್ದೇಶ ಏನೇ ಇರಲಿ, ಅದು ನಮ್ಮ ದೈನಂದಿನ ಜಂಜಾಟ ಮತ್ತು ಧಾವಂತದ ಒತ್ತಡಭರಿತ ಜೀವನದಿಂದ ಮುಕ್ತಿ ದೊರಕಿಸಿಕೊಟ್ಟು ಮೈ ಮನಸ್ಸಿಗೆ ತಾಜಾತನ ನೀಡುತ್ತದಲ್ಲದೆ, ನಮ್ಮವರನ್ನು ಇನ್ನಷ್ಟು ಹತ್ತಿರ ತರುತ್ತದೆ.

ಪ್ರವಾಸ : ಒಂದು ನೈಸರ್ಗಿಕ ಚಿಕಿತ್ಸೆ

ಇಂದಿನ ಆಧುನಿಕ ಜೀವನದಲ್ಲಿ ಮನುಷ್ಯ ಕೆಲಸದ ಒತ್ತಡದಲ್ಲಿ ಅದೆಷ್ಟು ಕುಗ್ಗಿ ಹೋಗಿದ್ದಾನೆ ಎಂದರೆ, ಆತನಿಗೆ ಮುಕ್ತವಾಗಿ ಉಸಿರಾಡುವುದು ಕೂಡ ಕಷ್ಟವಾಗುತ್ತಿದೆ. ಇಂತಹದರಲ್ಲಿ ಪ್ರವಾಸ ಜೀವನದ ಒತ್ತಡ, ಚಿಂತೆಗಳನ್ನು ನಿವಾರಿಸುತ್ತದೆ. ನಿಮ್ಮ ಕಣ್ಣುಗಳು ನೈಸರ್ಗಿಕ ಆನಂದದ ಮಜ ಪಡೆಯುತ್ತವೆ. ತ್ವಚೆಗೆ ಬಿಸಿಲಿನ ಸ್ಪರ್ಶವಾಗುತ್ತದೆ. ಮುಕ್ತ ವಾತಾವರಣದಲ್ಲಿ ಉಸಿರು ತೆಗೆದುಕೊಳ್ಳುವುದರಿಂದ ಶ್ವಾಸಕೋಶಗಳಿಗೆ ತಾಜಾ ಗಾಳಿ ದೊರೆಯುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ವೈದ್ಯ ವಿಜ್ಞಾನಿಗಳ ಪ್ರಕಾರ, 6 ತಿಂಗಳಿಗೆ ಒಮ್ಮೆ ದೀರ್ಘ ಪ್ರವಾಸಕ್ಕೆ ಹೋಗಬೇಕೆಂದು ಸಲಹೆ ನೀಡುತ್ತಾರೆ. ಸಂಶೋಧನೆಗಳ ಪ್ರಕಾರ, ಪ್ರವಾಸ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ನ್ನು ಕಡಿಮೆಗೊಳಿಸುತ್ತದೆ. ಹೃದಯಕ್ಕೆ ಅಪಾಯಕಾರಿಯಾಗಿರುವ ಸ್ಟ್ರೆಸ್‌ಹಾರ್ಮೋನು ಎಪಿನೆಫ್ರಿನ್‌ನ ಮಟ್ಟವನ್ನು ಕಡಿಮೆಗೊಳಿಸುತ್ತದೆ.

ಪ್ರವಾಸದ ಸಂದರ್ಭದಲ್ಲಿ ನಿಮಗೆ ಸಾಕಷ್ಟು ದೈಹಿಕ ವ್ಯಾಯಾಮ ಆಗುತ್ತದೆ. ನೀವು ಸಮುದ್ರ ತೀರಕ್ಕೆ/ ಗಿರಿಧಾಮಕ್ಕೆ ಇಲ್ಲವೆ ಐತಿಹಾಸಿಕ ಸ್ಥಳಕ್ಕೆ ಹೋಗುತ್ತಿರಬಹುದು. ಇದರಿಂದ ನಿಮ್ಮ ದೇಹ ಆ್ಯಕ್ಟಿವ್ ‌ಆಗಿರುತ್ತದೆ. ನಿಮಗೆ ಒಮ್ಮೆ ಮೆಟ್ಟಿಲು ಹತ್ತಬೇಕಾಗಿ ಬರಬಹುದು, ಇನ್ನೊಮ್ಮೆ ಲಗೇಜ್‌ ಹೊತ್ತುಕೊಂಡು ಹೋಗುವ ಸಂದರ್ಭ ಬರುತ್ತದೆ. ಈ ಎಲ್ಲ ಆಗುಹೋಗುಗಳು ಕ್ಯಾಲರಿ ಬರ್ನ್‌ಮಾಡಲು ಸಹಾಯಕವಾಗಿವೆ. ಇದರಿಂದ ಸ್ಟೆಮಿನಾ ಅಂತೂ ಹೆಚ್ಚುತ್ತದೆ. ಜೊತೆಗೆ ನಿದ್ರೆ ಚೆನ್ನಾಗಿ ಮಾಡಬಹುದು. ಒಂದು ಅಧ್ಯಯನದ ಪ್ರಕಾರ, ಯಾವ ಮಹಿಳೆಯರು 2 ವರ್ಷದಲ್ಲಿ ಒಂದೇ ಒಂದು ಸಲ ಸುತ್ತಾಡಲು ಹೋಗದೇ ಇದ್ದರೆ, ಅಂಥವರು ಖಿನ್ನತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ವರ್ಷದಲ್ಲಿ 2 ಸಲ ಪ್ರವಾಸಕ್ಕೆ ತೆರಳುವ ಮಹಿಳೆಯರು ಮಾನಸಿಕವಾಗಿ ಹೆಚ್ಚು ಗಟ್ಟಿಯಾಗಿರುತ್ತಾರೆ.

ಸಂಬಂಧಗಳಿಗೆ ಹೊಸ ಜೀವ

ಮದುವೆಯ ಬಳಿಕ ನವದಂಪತಿಗಳು ಹನಿಮೂನ್‌ಗೆ ತೆರಳುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆ ಪ್ರವಾಸ ಅವರನ್ನು ಹತ್ತಿರಕ್ಕೆ ತರುತ್ತದೆ. ಜೊತೆಗೆ ಜೀವನದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮನಸಾರೆ ಸಿದ್ಧಪಡಿಸುತ್ತದೆ. ಮದುವೆಯ ಬಳಿಕ ಸಾಮಾನ್ಯವಾಗಿ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಪ್ರೀತಿಗಾಗಿ ಸಾಕಷ್ಟು ಸಮಯ ಕೊಡಲು ಆಗುವುದಿಲ್ಲ. ರೊಮಾನ್ಸ್ ಜೀವನದಿಂದ ಹೊರಟುಹೋಗಿಬಿಡುತ್ತದೆ. ಸೆಕ್ಸ್ ಕೂಡ ಒಂದು ರೊಟಿನ್‌ ಎಂಬಂತೆ ಆಗಿಬಿಡುತ್ತದೆ. ಇಂತಹದರಲ್ಲಿ ನಾವು ಸಂಬಂಧದ ಮಜ ಪಡೆಯಲು ಆಗುವುದಿಲ್ಲ. ಅಂತಹದರಲ್ಲಿ ನಾವು ಜೀವಿಸುತ್ತಿಲ್ಲ. ಜೀವನವೇ ನಮ್ಮನ್ನು ಎಳೆದುಕೊಂಡು ಹೊರಟಿದೆ ಎಂಬಂತೆ ಅನಿಸುತ್ತದೆ. ಇಂತಹ ಸ್ಥಿತಿಯಲ್ಲಿ ಯಾವುದಾದರೊಂದು ಸುಂದರ ಸ್ಥಳಕ್ಕೆ ತೆರಳಿ ನಮ್ಮ ದಾಂಪತ್ಯದಲ್ಲಿ ಹೊಸ ಜೀವ ತುಂಬಬಹುದು. ಪರಸ್ಪರರ ಬಾಹುಗಳಲ್ಲಿ ಒಂದಷ್ಟು ಹೊತ್ತು ನೆಮ್ಮದಿಯ ಕ್ಷಣಗಳನ್ನು ಕಳೆದು ಸಂಬಂಧಕ್ಕೆ ಹೊಸ ಜೀವ ತುಂಬಬಹುದು. ಪ್ರವಾಸ ಅದಕ್ಕಾಗಿ ಒಳ್ಳೆಯ ವಾತಾವರಣದ ಜೊತೆಗೆ ಒಳ್ಳೆಯ ಅವಕಾಶವನ್ನೂ ದೊರಕಿಸಿ ಕೊಡುತ್ತದೆ. ಹೀಗೊಮ್ಮೆ ಯೋಚಿಸಿ. ಒಂದು ಸುಂದರ ಸಂಜೆ ನೀವಿಬ್ಬರೂ ಸಮುದ್ರ ದಂಡೆಯಲ್ಲಿ ಕುಳಿತಿರುವಿರಿ. ಸೂರ್ಯನ ಕಿರಣಗಳು ಸಮುದ್ರದ ಒಡಲಲ್ಲಿ ಸೇರಿಕೊಳ್ಳುತ್ತ ಹೊರಟಿದೆ. ಅಲೆಗಳು ಹಾಡು ಗುನಗುನಿಸುತ್ತಿವೆ. ತಂಗಾಳಿ ನಿಮ್ಮ ಮೈಮನಕ್ಕೆ ತಂಪು ಸ್ಪರ್ಶ ನೀಡುತ್ತಿರಬಹುದು. ಇಂತಹ ಮಧುರ ಕ್ಷಣಗಳನ್ನು ಅನುಭವಿಸಿದ ಬಳಿಕ ನಿಮ್ಮ ಮೈಮನದಲ್ಲಿ ಒಂದು ವಿಚಿತ್ರ ಬಗೆಯ ತಾಜಾತನ ಹಾಗೂ ಶಕ್ತಿಯ ಅನುಭೂತಿ ತುಂಬಿಕೊಳ್ಳುವಿರಿ. ನೀವು 10 ದಿನಗಳ ಮಟ್ಟಿಗೆ ಟೂರ್‌ಗೆ ಹೋದರೂ ಆ ನೆನಪುಗಳು ನಿಮಗೆ ತಿಂಗಳುಗಟ್ಟಲೇ ಕಾಡುತ್ತಲೇ ಇರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ