ರಾಜ್ಯಾದ್ಯಂತ ಖಾಸಗಿ ಬಸ್ ಪ್ರಯಾಣಿಕರಿಗೆ ಇಂದಿನಿಂದ ಟಿಕೆಟ್‌ ದರ ಏರಿಕೆಯ ಬಿಸಿ ತಟ್ಟಲಿದೆ. ಖಾಸಗಿ ವಾಹನ ಬಸ್‌ಗಳ ಪ್ರಯಾಣ ದರವನ್ನ ಶೇ. 5 ರಿಂದ 8 ರಷ್ಟು ಹೆಚ್ಚಳ ಮಾಡಲಾಗಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.

ಡೀಸೆಲ್ ದರ ಏರಿಕೆ, ವಾಹನ ನಿರ್ವಹಣಾ ವೆಚ್ಚ ಹೆಚ್ಚಳ ಹಾಗೂ ನೌಕರರ ವೇತನದ ಒತ್ತಡದಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಖಾಸಗಿ ಬಸ್ ಮಾಲೀಕರು ಸ್ಪಷ್ಟಪಡಿಸಿದ್ದಾರೆ.

ಸ್ಟೇಜ್ ಕ್ಯಾರಿಯೇಜ್ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಫೆಡರೇಷನ್ ಆಫ್ ಸ್ಟೇಜ್ ಕ್ಯಾರಿಯೇಜ್ ಬಸ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರು ಬೆಲೆ ಏರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಟಿಕೆಟ್ ದರ ಶೇಕಡಾ 5 ರಿಂದ ಶೇಕಡಾ 8ರವರೆಗೆ ಹೆಚ್ಚಿಸಲಾಗಿದೆ.

ಒಕ್ಕೂಟದ ರಾಜ್ಯ ಅಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಈ ಬಗ್ಗೆ ಮಾತಾಡಿದ್ದು, ಕೇಂದ್ರ ಸರಕಾರ ನಾಲ್ಕು ಬಾರಿ 8.17 ಡೀಸೆಲ್ ದರ ಹೆಚ್ಚು ಮಾಡಿದೆ. ರಾಜ್ಯ ಸರ್ಕಾರ ಹಿಂದೆ ಏರಿಕೆ ಮಾಡಿತ್ತು. ಹಾಗೇ ವಾಹನಗಳ ಬಿಡಿ ಭಾಗಗಳ ದರ ಹೆಚ್ಚಾಗಿದೆ. ಟಯರ್ ರಿಸೋಲಿಂಗ್ ದರ ಹೆಚ್ಚಾಗಿದ್ದು, ಟೋಲ್ ದರ, ನೌಕರರ ವೇತನ, ತೆರಿಗೆ, ಇನ್ಸೂರೆನ್ಸ್ ಎಲ್ಲವೂ ಹೆಚ್ಚಾಗಿದೆ ಹೀಗಾಗಿ ಬಸ್ ದರ ಏರಿಕೆ ಅನಿವಾರ್ಯ ಎಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ