ಮಿಸೆಸ್‌ ಇಂಡಿಯಾ

ಮದುವೆಯಾದ ನಂತರ ತಮ್ಮ ಕನಸುಗಳನ್ನು ಪೂರೈಸಿಕೊಳ್ಳುವುದು ಕಷ್ಟ ಎಂದುಕೊಳ್ಳುವ ಮಹಿಳೆಯರಿಗೆ ಪ್ರಿಯಾಂಕಾ ಪ್ರೇರಣೆಯಾಗಿದ್ದಾರೆ. ಇವರು ಈ ಮಟ್ಟಕ್ಕೆ ಏರಿದ್ದು ಹೇಗೆ ಎಂದು ವಿವರ ತಿಳಿಯೋಣವೇ…….?

30 ವರ್ಷದ ಪ್ರಿಯಾಂಕಾ ಖುರಾನಾ ದೆಹಲಿಯಲ್ಲಿ ಬೆಳೆದವರು. ಕೋಲ್ಕತಾದಲ್ಲಿ ಎಂಬಿಎ ಓದಿ ಈಗ ಜಪಾನ್‌ ಕಂಪನಿಯಲ್ಲಿ ಎಗ್ಸಿಕ್ಯೂಟಿವ್‌ ಡೈರೆಕ್ಟರ್‌ ಆಗಿದ್ದಾರೆ. 2017ರಲ್ಲಿ ಮರು ಮದುವೆಯಾದ ಪ್ರಿಯಾಂಕಾ 4 ವರ್ಷದ ಮಗನ ತಾಯಿ. 2015ರಲ್ಲಿ ಮಿಸೆಸ್‌ ಇಂಡಿಯಾ ಪ್ರಶಸ್ತಿ ಗೆದ್ದರೆ 2017ರಲ್ಲಿ ಮಿಸೆಸ್‌ ಅರ್ಥ್‌ ಪ್ರಶಸ್ತಿ ಗೆದ್ದರು.

ತಮ್ಮ ಖಾಸಗಿ ಜೀವನದಲ್ಲಿ ಪ್ರಿಯಾಂಕಾ ಯಾವ ರೀತಿ ಪ್ರೊಫೆಶನಲ್ ಲೈಫ್‌ನಲ್ಲೂ ಸಫಲತೆ ಪಡೆದರೆಂದು ಅವರಿಂದಲೇ ತಿಳಿದುಕೊಳ್ಳೋಣ :

ಬ್ಯೂಟಿ ಕಾಂಟೆಸ್ಟ್ ನಲ್ಲಿ ಪಾಲ್ಗೊಳ್ಳುವ ಕನಸು ಯಾವಾಗ ಬಂತು?

ನನಗೆ 16 ವರ್ಷಗಳಾಗಿದ್ದಾಗ ಮಾಡೆಲ್‌ ಆಗಲು ಬಯಸುತ್ತಿದ್ದೆ. ಬ್ಯೂಟಿ ಕಾಂಟೆಸ್ಟ್ ನಲ್ಲಿ ಪಾಲ್ಗೊಳ್ಳಲೂ ಮನಸ್ಸಿತ್ತು. ಆದರೆ ಓದಿನಲ್ಲಿ ಮುಂದಿದ್ದರಿಂದ ನನ್ನ ಪೇರೆಂಟ್ಸ್ ಓದಿಗೆ ಗಮನ ಕೊಡಲು ಹೇಳಿದರು. ಮದುವೆಯಾದ ನಂತರ ಈ ಆಸೆ ಮನಸ್ಸಿನಿಂದ ದೂರವಾಯಿತು. ಮಗ ಹುಟ್ಟಿದ ನಂತರ ಮತ್ತೊಮ್ಮೆ  ಮಾಡೆಲಿಂಗ್‌ ಮಾಡುವ ಮನಸ್ಸಾಯಿತು. ಅದಕ್ಕೆ ಕಾರಣ ನನ್ನ ತಮ್ಮ ಮತ್ತು ಮಗ. ಅಂದಹಾಗೆ ನನ್ನ ತಮ್ಮನಿಗೆ ಇದ್ದಕ್ಕಿದ್ದಂತೆ ಫೋಟೋಗ್ರಫಿ ಹವ್ಯಾಸ ಹತ್ತಿಕೊಂಡಿತು. ಅವನಿಗೆ ಫ್ರೀಯಾಗಿ ಮಾಡುವ ಮಾಡೆಲ್ ಬೇಕಾಗಿತ್ತು. ನಾನು ಮಾಡೆಲ್‌ ಆದೆ. ಆರಂಭದಲ್ಲಿ ಇವೆಲ್ಲಾ ಮಾಡುವುದು ಸರಿಯೇ ಅನ್ನಿಸಿತು. ಇದರ ಮಧ್ಯೆ ನನ್ನ ಮಗನ ಬಗ್ಗೆ ಗಮನ ಕೊಡಬೇಕಾಯಿತು ಅಷ್ಟೇ. ಚಿಕ್ಕ ವಯಸ್ಸಿನಲ್ಲೂ ಎಲ್ಲವನ್ನೂ ಬಹಳ ಉತ್ಸಾಹದಿಂದ ಮಾಡುತ್ತಿದ್ದ. ಅದರ ಪರಿಣಾಮದ ಬಗ್ಗೆ ಯೋಚಿಸುತ್ತಿರಲಿಲ್ಲ. ನನಗೂ ಒಂದು ಅವಕಾಶ ಕೊಟ್ಟುಕೊಳ್ಳಬೇಕೆನಿಸಿತು. ನಾನು ಪ್ರಯತ್ನಿಸಿದಾಗ ಯಶಸ್ಸು ಸಿಕ್ಕಿತು.

ಮಗುವನ್ನು ಬೆಳೆಸುವಾಗ ಯಾವುದಕ್ಕೆ ವಿಶೇಷ ಗಮನಕೊಡುತ್ತೀರಿ?

ನನ್ನ ಮಗನ ಯಾವುದೇ ಸಮಸ್ಯೆಗೆ ನಾನು ಪರಿಹಾರ ಹೇಳುವುದಿಲ್ಲ. ಅವನೇ ಸ್ವತಃ ಪರಿಹಾರ ಕಂಡುಕೊಳ್ಳುವಂತೆ ಯೋಗ್ಯನನ್ನಾಗಿ ಮಾಡುತ್ತೇನೆ. ಅವನು ನನಗೆ ಅಮ್ಮಾ, ಬಾಟಲ್ ಮುಚ್ಚಳ ತೆಗೆದುಕೊಡು ಅಥವಾ ಅದನ್ನು ಕೊಡು ಎಂದು ಕೇಳಿದಾಗ ಅದನ್ನು ಮಾಡುವುದು ನನಗೆ ಸೆಕೆಂಡ್‌ನ ಕೆಲಸ. ಆದರೆ, ನಾನು ಅವನಿಗೇ ಮಾಡಿಕೊಳ್ಳಲು ಹೇಳುತ್ತೇನೆ. ಅದರಿಂದ ಅವನು ಸ್ವತಃ ಹೇಗೆ ಮಾಡುವುದೆಂದು ಕಲಿಯುತ್ತಾನೆ. ಅದನ್ನು ಮಾಡುವಾಗ ಅವನಿಗೆ ಬೇಸರವಾಗುತ್ತದೆ, ಅಳುತ್ತಾನೆ. ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮಕ್ಕಳು ಆ ವಯಸ್ಸಿನಲ್ಲೇ ಎಲ್ಲ ರೀತಿಯ ಎಮೋಶನ್ಸ್ ಎದುರಿಸಲು ಕಲಿಯಬೇಕು. ಎಮೋಶನಲಿ ಮೆಚ್ಯೂರ್‌ ಆದ ಮಕ್ಕಳು ಪ್ರತಿ ಸಮಸ್ಯೆಯಿಂದ ಪಾರಾಗಲು ಬೇಗ ಕಲಿಯುತ್ತಾರೆ. ಈಗ ಮಕ್ಕಳು ಇಂಟೆಲಿಜೆಂಟ್‌ ಆಗುವುದಕ್ಕಿಂತ ಹೆಚ್ಚಾಗಿ ಎಮೋಶನಲಿ ಸ್ಟ್ರಾಂಗ್‌ ಆಗಬೇಕು ಮತ್ತು ಪ್ರತಿ ಸಮಸ್ಯೆಗೆ ತಾವೇ ಪರಿಹಾರ ಹುಡುಕಬೇಕು.

ಕುಟುಂಬಕ್ಕೆ ಕ್ವಾಲಿಟಿ ಟೈಂ ಕೊಡಲು ಇಚ್ಛಿಸುತ್ತೀರೋ ಅಥವಾ ಕ್ವಾಂಟಿಟಿ ಟೈಂ ಕೊಡಲೋ?

ಇಡೀ ದಿನ ಕೆಲಸದಲ್ಲೇ ಕಳೆದುಹೋಗುತ್ತದೆ. ಆದರೆ ಸಂಜೆಯಾದಾಗ ಮನೆಯವರೊಂದಿಗೆ, ನನ್ನ ಮಗನೊಂದಿಗೆ ಕಳೆಯುತ್ತೇನೆ. ಶನಿವಾರ ಮತ್ತು ಭಾನುವಾರ ಮನೆಯವರೊಂದಿಗೆ ಸಿನಿಮಾ ನೋಡಲು, ಹೊರಗೆ ಸುತ್ತಾಡಲು ಬಯಸುತ್ತೇನೆ. ಮನೆಯವರಿಗೆ ಕೊಂಚ ಟೈಂ ಕೊಟ್ಟು ನಾವು ಸಾಕಷ್ಟು ಆನಂದವಾಗಿರಬಹುದು. ಒಮ್ಮೊಮ್ಮೆ ಕ್ವಾಂಟಿಟಿ ಟೈಂ ಕೊಟ್ಟೂ ಸಹ ಆ ಸಂತೋಷ ಸಿಗುವುದಿಲ್ಲ. ಆದ್ದರಿಂದ ಕ್ವಾಂಟಿಟಿ ಟೈಂಗಿಂತಾ ಕ್ವಾಲಿಟಿ ಟೈಂ ಉತ್ತಮ. ಅದನ್ನು ಮುಕ್ತ ಹೃದಯದಿಂದ ಕಳೆದಿರುತ್ತೇವೆ.

ತಾಯಿಯಾದ ನಂತರ ಪ್ರೊಫೆಶನ್‌ಗೆ ಗುಡ್‌ಬೈ ಹೇಳಿದ ಮಹಿಳೆಯರಿಗೆ ಏನು ಸಲಹೆ ನೀಡುತ್ತೀರಿ?

ಪ್ರತಿ ಮನುಷ್ಯನಿಗೂ ತನಗೆ ಯಾವುದು ಸರಿ ಎಂದು ಚೆನ್ನಾಗಿ ತಿಳಿದಿರುತ್ತದೆ. ಆದರೂ ತಾಯಿಯಾದ ಮೇಲೆ 1 ವರ್ಷ ಇಡಿಯಾಗಿ ಪ್ರಾಮಾಣಿಕತೆಯಿಂದ ಮಗುವಿಗೆ ಕೊಡಿ ಎಂದು ಹೇಳುತ್ತೇನೆ. ನಂತರ ನಿಮ್ಮ ಕನಸುಗಳು ಮತ್ತು ಇಚ್ಛೆಗಳನ್ನೂ ಪೂರೈಸಿಕೊಳ್ಳಿ. ಅವನ್ನು ಪೂರೈಸಲೇಬೇಕು ಎಂದೇನಿಲ್ಲ. ಆ ದಾರಿಯಲ್ಲಿ ನಡೆಯಿರಿ. ಹಾಗೆ ಮಾಡುವುದರಿಂದ ನಿಮಗೆ ಖುಷಿಯಾಗುತ್ತದೆ. ನೀವು ಅಂತರಂಗದಲ್ಲಿ ಖುಷಿಯಾದರೆ ಮತ್ತು ಸಂತೃಪ್ತರಾದರೆ ಆಗ ನಿಮ್ಮ ಮಕ್ಕಳು, ಗಂಡ ಮತ್ತು ಮನೆಯವರನ್ನೂ ಖುಷಿಯಾಗಿಡಬಹುದು. ನಮ್ಮ ನೆರೆಹೊರೆಯ ಮಹಿಳೆಯರು ನನಗೆ ನಿಮ್ಮನ್ನು ನೋಡಿದಾಗ ನಮಗೆ ಪ್ರೇರಣೆ ಸಿಗುತ್ತದೆ. ನೀವು ಮನೆ ಮತ್ತು ಉದ್ಯೋಗ ಸಂಭಾಳಿಸುತ್ತಾ ಮಿಸೆಸ್‌ ಇಂಡಿಯಾ ಮತ್ತು ಮಿಸೆಸ್‌ ಅರ್ಥ್‌ ಆಗುವುದಾದರೆ ನಾವು ಏಕೆ ಉದ್ಯೋಗಕ್ಕೆ ಹೋಗಬಾರದು ಎಂದು ಹೇಳುವುದನ್ನು ಕೇಳಿದಾಗ, ನನಗೆ ಖುಷಿಯಾಗುತ್ತದೆ! ಕೆಲವು ಮಹಿಳೆಯರು ನನ್ನನ್ನು ನೋಡಿ, ತಾಯಿಯಾದ ನಂತರ ಉದ್ಯೋಗಕ್ಕೆ ಸೇರಿಕೊಂಡರು.

ನಿಮ್ಮ ಯಶಸ್ಸಿನ ಹಿಂದೆ ಯಾರಿದ್ದಾರೆ?

ಯಶಸ್ಸು ಹಲವಾರು ಬಣ್ಣಬಣ್ಣದ ಹೂಗಳಿಂದ ತಯಾರಾದ ಬೊಕೆ ಇದ್ದಂತೆ. ನನ್ನ ಯಶಸ್ಸಿನ ಹಿಂದೆ ಅನೇಕ ಜನರಿದ್ದಾರೆ. ಅವರಲ್ಲಿ ನನ್ನ ಕುಟುಂಬ, ಗಂಡ, ನನ್ನ ಮಗ, ಅತ್ತೆಮನೆಯವರು, ಆಫೀಸಿನವರು ಇತ್ಯಾದಿ. ಅವರೆಲ್ಲರೂ ಯಾವಾಗಲೂ ನನಗೆ ಪ್ರೋತ್ಸಾಹಿಸುತ್ತಾರೆ ಮತ್ತು ಮುನ್ನುಗ್ಗಲು ಅವಕಾಶ ಮಾಡಿಕೊಡುತ್ತಾರೆ.

– ಪಿ. ಪೂರ್ಣಿಮಾ

Tags:
COMMENT