ಸ್ಕೂಲ್ ಟೀಚರ್‌ನಿಂದ ಮಾಸ್ಟರ್‌ ಶೆಫ್‌ ತನಕ ತಮ್ಮ ಜೀವನ ಪಯಣ ನಡೆಸಿದ ಪಂಕಜ್‌ ಅವರು, ಪ್ರತಿಭೆಯಿದ್ದೂ ಅಪರಿಚಿತರಾಗುಳಿಯುವ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ. ಇವರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ….….?

2010ರಲ್ಲಿ  ಮಾಸ್ಟರ್‌ ಶೆಫ್‌ ಸೀಸನ್‌-1ರ ವಿಜೇತೆ ಪಂಕಜ್‌ ಭದೋರಿಯಾ ಅವರ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. `ಶೆಫ್‌ ಪಂಕಜ್‌ ಕಾ ಜಾಯಕಾ,' `ಕಿಫಾಯ್ತಿ ಕಿಚನ್‌,' `3 ಕೋರ್ಸ್‌ ವಿದ್‌ ಪಂಕಜ್‌,' `ರಸೋಯಿ ಮೇ ಪಂಕಜ್‌ ಕೆ ಸಾಥ್‌' ಕಾರ್ಯಕ್ರಮಗಳು ಅವರಿಗೆ ಮನೆ ಮನೆಯಲ್ಲಿ ಪರಿಚಯ ತಂದುಕೊಟ್ಟಿವೆ. ಅವರ 2 ಕುಕ್‌ಬುಕ್‌ಗಳು, `ಬಾರ್ಬಿ ಐ ಆ್ಯಮ್ ಶೆಫ್‌' ಮತ್ತು `ಚಿಕನ್‌ ಫ್ರಮ್ ಮೈ ಕಿಚನ್‌' ಸಾಕಷ್ಟು ಪ್ರಸಿದ್ಧಿ ಪಡೆದವು. 2 ಮಕ್ಕಳ ತಾಯಿಯಾಗಿರುವ ಪಂಕಜ್‌ ಸ್ಕೂಲ್‌ ಟೀಚರ್‌ನಿಂದ ಮಾಸ್ಟರ್‌ ಶೆಫ್‌ ಹೇಗಾದರು? ಯಾವ ರೀತಿ ಅವರು ಕುಟುಂಬವನ್ನು ಸಂಭಾಳಿಸುತ್ತ ಕೆರಿಯರ್‌ನಲ್ಲಿ ಉತ್ತುಂಗಕ್ಕೇರಿದರು ಎಂಬುದನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳಿ.

ಕುಕ್ಕಿಂಗ್‌ನಲ್ಲಿ ನಿಮಗೆ ಆಸಕ್ತಿ ಹೇಗೆ ಬಂತು?

ನನ್ನ ಪೋಷಕರಿಗೆ ಕುಕ್ಕಿಂಗ್‌ನಲ್ಲಿ ಸಾಕಷ್ಟು ಆಸಕ್ತಿ ಇತ್ತು. ಅವರು ಬಹುದೊಡ್ಡ ಹೋಮ್ ಕುಕ್‌ ಆಗಿದ್ದರು. ಜನರನ್ನು ಪಾರ್ಟಿಗೆ ಕರೆಯುವುದು ಹಾಗೂ ತಮ್ಮ ಕೈಯಾರೆ ತಯಾರಿಸಿದ ಬಗೆಬಗೆಯ ರೆಸಿಪಿಗಳ ರುಚಿಯನ್ನು ಸವಿಯುವಂತೆ ಮಾಡುವುದು ಅವರಿಗೆ ಬಹಳ ಇಷ್ಟವಾಗುತ್ತಿತ್ತು. ಆ ಸಂದರ್ಭದಲ್ಲಿ ನನಗೆ ಅನಿಸುತ್ತಿದ್ದ ಒಂದು ಸಂಗತಿಯೆಂದರೆ, ಒಳ್ಳೆಯ ಅಡುಗೆ ತಯಾರಿಸುವುದರಿಂದ ಕೇವಲ ಒಳ್ಳೆಯ ರುಚಿಯಷ್ಟೇ ಲಭಿಸವುದಿಲ್ಲ. ಜನರಿಂದ ಒಳ್ಳೆಯ ಪ್ರಶಂಸೆ ಕೂಡ ದೊರೆಯುತ್ತದೆ. ಆ ಕಾರಣದಿಂದ ನನಗೂ ಅಡುಗೆಯಲ್ಲಿ ಆಸಕ್ತಿ ಮೂಡತೊಡಗಿತು. 11 ವರ್ಷದಳಿದ್ದಾಗಲೇ ನಾನು ಅಡುಗೆ ಮಾಡಲು ಕಲಿತುಕೊಂಡೆ. ಆರಂಭದಲ್ಲಿ ಅಡುಗೆ ಮನೆಯಲ್ಲಿ ಏನಾದರೊಂದು ಪ್ರಯೋಗ ಮಾಡುವ ಹವ್ಯಾಸ ನನಗೆ ಅಂಟಿಕೊಂಡುಬಿಟ್ಟಿತ್ತು. ಮದುವೆಯಾದ ಬಳಿಕ ಪತಿ ಕೂಡ ತಿನ್ನುವ ಹವ್ಯಾಸಿಯೇ ಆಗಿದ್ದರಿಂದ ನನ್ನ ಪ್ರಯೋಗ ಪರಂಪರೆ ಹಾಗೆಯೇ ಮುಂದುವರಿಯಿತು.

ಚಿಕ್ಕ ವಯಸ್ಸಿನಲ್ಲಿಯೇ ನೀವು ಪೋಷಕರನ್ನು ಕಳೆದುಕೊಂಡಿರಿ. ಇಂತಹದರಲ್ಲಿ ನಿಮ್ಮ ಕೆರಿಯರ್‌ಗೆ ಎಷ್ಟರಮಟ್ಟಿಗೆ ಪರಿಣಾಮ ಉಂಟಾಯಿತು?

ನಾನು 13 ವರ್ಷದಳಿದ್ದಾಗ ಅಪ್ಪನನ್ನು ಕಳೆದುಕೊಂಡೆ. ನನ್ನ 21ನೇ ವಯಸ್ಸಿನಲ್ಲಿ ಅಮ್ಮ ತೀರಿಕೊಂಡರು. ನನ್ನ ಅಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಶಿಕ್ಷಣ ಎಂತಹದೊಂದು ಆಭರಣವೆಂದರೆ, ಅದನ್ನು ಯಾರೊಬ್ಬರೂ ಕದಿಯಲು ಸಾಧ್ಯವಿಲ್ಲ. ಹಾಗಾಗಿ ಓದನ್ನು ಮುಂದುವರಿಸು. ಏಕೆಂದರೆ ನನ್ನ ಅಮ್ಮ ಓದಿದ್ದು ಬಹಳ ಕಡಿಮೆ. ಹೀಗಾಗಿ ಅವರ ತಂದೆ ತೀರಿದ ಬಳಿಕ ಅವರಿಗೆ ಯಾವುದೇ ಒಳ್ಳೆಯ ಉದ್ಯೋಗ ಲಭಿಸಲಿಲ್ಲ. ಈ ಕಾರಣದಿಂದಲೇ ಅವರು ನನಗೆ ಸದಾ ಓದಲು ಸಲಹೆ ನೀಡುತ್ತಿದ್ದರು. ನಾನು ಇಂಗ್ಲಿಷ್‌ ಎಂ.ಎ. ಮಾಡಿದೆ ಹಾಗೂ ಶಾಲೆಯೊಂದರಲ್ಲಿ ಶಿಕ್ಷಕಿಯಾದೆ. ಆ ಬಳಿಕ ಮದುವೆಯಾಯಿತು. ಅತ್ತೆಯ ಮನೆಯಲ್ಲಿ ಪಾರ್ಟಿಗೆ ಬರುತ್ತಿದ್ದ ಜನರು ನಾನು ಮಾಡಿದ ರೆಸಿಪಿಗಳನ್ನು ಸವಿದು ಮನಸಾರೆ ಹೊಗಳುತ್ತಿದ್ದರು. ಆಗ ನನಗೆ ನನ್ನಲ್ಲಿ ಏನೋ ವಿಶೇಷ ಇದೆ ಎನಿಸಿತ್ತು. ಅದೇ ಸಮಯದಲ್ಲಿ ಟಿ.ವಿಯಲ್ಲಿ ಮಾಸ್ಟರ್‌ ಶೆಫ್‌ ಜಾಹೀರಾತು ಬರುತ್ತಲಿತ್ತು. ಈ ಶೋ ಬೇರೆ ಶೋಗಳಿಗಿಂತ ವಿಭಿನ್ನ ಅನಿಸಿತು. ನನ್ನಲ್ಲಿರುವ ವಿಶೇಷತೆಯನ್ನು ಅಲ್ಲಿ ತೋರಿಸಿಕೊಡಬಹುದೆಂದು ನನಗೆ  ಅನಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ