ಒಬ್ಬರೇ ಮಗುವನ್ನು ಪೋಷಿಸುವ ಜೊತೆ ಜೊತೆಗೆ ಕಾಮ್ಯಾ ತಮ್ಮ ವೃತ್ತಿ ಬದುಕನ್ನು ಹೇಗೆ ಸಂಭಾಳಿಸುತ್ತಿದ್ದಾರೋ ಅದು ಯಾವುದೇ ದೃಷ್ಟಾಂತಕ್ಕೆ ಕಡಿಮೆಯಿಲ್ಲ. ಇವರ ಬಗ್ಗೆ ಇನ್ನಷ್ಟು ವಿವರ ತಿಳಿಯೋಣವೇ.....?

ಟೆಲಿವಿಷನ್‌ನ ಖ್ಯಾತ ಖಳನಾಯಕಿ ಕಾಮ್ಯಾ ಪಂಜಾಬಿ ತಮ್ಮ ಕೆರಿಯರ್‌ನ ಪ್ರಾರಂಭವನ್ನು 2002ರಲ್ಲಿ `ಕೆಹತಾ ಹೈ ದಿಲ್‌' ಧಾರಾವಾಹಿಯಿಂದ ಮಾಡಿದರು. ನಂತರ `ಪಿಯಾ ಕಾ ಘರ್‌,' `ಅಸ್ತಿತ್ವ ಏಕ್‌ ಪ್ರೇಮಕಹಾನಿ,' `ವೋ ರೆಹನೆವಾಲಿ ಮಹಲೋಂ ಕೀ'ಯಂತಹ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಆದರೆ `ಬನೂ ಮೈ ತೇರಿ ದುಲ್ಹನ್‌' ಧಾರಾವಾಹಿಯಲ್ಲಿ ಸಿಂಧೂರಾ ಪಾತ್ರ ಅವರನ್ನು ಯಶಸ್ವಿಯಾಗಿಸಿತು.

ನಿಮ್ಮ ಲೈಫ್‌ನಲ್ಲಿ ಬಹಳಷ್ಟು ಏರಿಳಿತಗಳನ್ನು ಕಂಡಿದ್ದೀರಿ. ಅವನ್ನು ಹೇಗೆ ನಿಭಾಯಿಸುತ್ತೀರಿ?

ನನಗೆ ಯಾರ ಋಣ ಇಲ್ಲ. ನಾನು ಯಾರಿಗೂ ಹೆದರುವುದಿಲ್ಲ. ಹೀಗಾಗಿ ಯಾವ ತೊಂದರೆ ಬಂದರೂ ಪರಿಹರಿಸಿಕೊಳ್ಳುತ್ತೇನೆ. ಇನ್ನೊಂದು ಸತ್ಯವೆಂದರೆ ಇವೆಲ್ಲಾ ನಾನು ನನ್ನ ತಾಯಿಯಿಂದ ಕಲಿತಿದ್ದು. ನಾವು ಚಿಕ್ಕವರಿದ್ದಾಗಲೂ ನಮಗೆ ಬಹಳ ಕಷ್ಟಗಳಿದ್ದವು. ಆದರೆ ನನ್ನ ತಾಯಿ ಒಳ್ಳೆಯ ರೀತಿಯಿಂದ ಪರಿಹರಿಸಿಕೊಳ್ಳುತ್ತಿದ್ದರು. ಅವರು ಸೋಲೊಪ್ಪಿಕೊಳ್ಳುತ್ತಿರಲಿಲ್ಲ, ಎಂದೂ ಹೆದರುತ್ತಿರಲಿಲ್ಲ. ಅವರೆಂದೂ ಬಿಟ್ಟುಕೊಡಲಿಲ್ಲ. ನಾನೆಂದೂ ಬಿಟ್ಟುಕೊಡಲಿಲ್ಲ. ಮುಂದೆಯೂ ಬಿಟ್ಟುಕೊಡುವುದಿಲ್ಲ. ನನ್ನ ತಾಯಿ ಇಂದಿಗೂ ನನ್ನ ಜೀವನದಲ್ಲಿ ಆಧಾರಸ್ತಂಭದಂತೆ ಇದ್ದಾರೆ. ನನಗೂ ಅವರಂತೆ ಒಳ್ಳೆಯ ತಾಯಿಯಾಗಲು ಇಷ್ಟ.

ನಿಮ್ಮ ಮಗಳನ್ನು ಬೆಳೆಸುವಾಗ ಯಾವ ವಿಷಯಗಳನ್ನು ಗಮನದಲ್ಲಿಡುತ್ತೀರಿ?

ಒಬ್ಬ ತಾಯಿ ತನ್ನ ಮಗುವನ್ನು ಪಾಲನೆ ಮಾಡುವಾಗ ಅದರ ಖುಷಿಯನ್ನು ಗಮನಿಸುತ್ತಾಳೆ. ಅದರ ರಕ್ಷಣೆ ಮತ್ತು ಸೌಕರ್ಯದ ಬಗ್ಗೆ ಗಮನಿಸುತ್ತಾಳೆ. ಮಗುವಿಗೆ ಪ್ರಪಂಚದ ಎಲ್ಲ ಸಂತೋಷವನ್ನೂ ಕೊಡಲು ಇಚ್ಛಿಸುತ್ತಾಳೆ. ಪ್ರಪಂಚದ ಕೆಟ್ಟದ್ದರಿಂದ ಯಾವಾಗಲೂ ದೂರವಿಡಲು ಬಯಸುತ್ತಾಳೆ. ನಾನೂ ಅದನ್ನೇ ಬಯಸುತ್ತೇನೆ. ನಾನು ನನ್ನ ಮಗಳ ಒಳ್ಳೆಯ ಗೆಳತಿ ಎಂದು ನನಗೆ ಖುಷಿಯಿದೆ. ಅವಳು ತನ್ನ ಎಲ್ಲ ವಿಷಯಗಳನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಾಳೆ. ಆದರೆ ನಾನು ಅವಳಿಗೆ ಒಳ್ಳೆಯ ಗೆಳತಿ ಆಗಿಲ್ಲ. ಮುಂದಿನ 10 ವರ್ಷಗಳು ಆಗಲೂ ಇಚ್ಛಿಸುವುದಿಲ್ಲ. ಅವಳು ದೊಡ್ಡವಳಾದ ಮೇಲೆ ಖಂಡಿತಾ ಗೆಳತಿಯಾಗಲು ಇಚ್ಛಿಸುತ್ತೇನೆ. ನಾನು ಈಗಲೇ ಗೆಳತಿಯಾಗಿ ಅವಳ ತಾಯಿ ಯಾವ ಪರಿಸ್ಥಿತಿಯಲ್ಲಿದ್ದಳು, ಈಗ ಹೇಗಿದ್ದಾಳೆ ಎಂದು ಅವಳಿಗೆ ತಿಳಿಸಲು ಇಚ್ಛಿಸುವುದಿಲ್ಲ. ನನ್ನ ಮಗಳೇ ನನ್ನ ಬಂಡವಾಳ. ಅವಳು ನನ್ನ ಶಕ್ತಿಯೂ ಹೌದು, ಬಲಹೀನತೆಯೂ ಹೌದು.

ಸಿಂಗಲ್ ಮದರ್‌ ಆಗಿದ್ದು ಮಗಳನ್ನು ಸಾಕುವುದು ಎಷ್ಟು ಚಾಲೆಂಜಿಂಗ್‌ ಆಗಿರುತ್ತದೆ?

ನನ್ನ ಮಗಳಿಗೆ ಒಳ್ಳೆಯ ಪೋಷಣೆ ನೀಡುತ್ತಿದ್ದೇನೆ. ಒಳ್ಳೆಯ ಸ್ಕೂಲಿನಲ್ಲಿ ಓದಿಸುತ್ತಿದ್ದೇನೆ. ಪೋಷಕರು ತಮ್ಮ ಮಕ್ಕಳಿಗೆ ಮಾಡುವುದನ್ನೆಲ್ಲಾ ಮಾಡುತ್ತಿದ್ದೇನೆ. ಸಿಂಗಲ್ ಮದರ್‌ ಆದರೂ ಅಬಲೆ ಎಂದುಕೊಳ್ಳುವುದಿಲ್ಲ. ಆದರೆ  ನನ್ನ ಮಗಳು ಎಂದಾದರೂ ಮುಗ್ಧತೆಯಿಂದ ನನ್ನ ಫ್ರೆಂಡ್‌ ಅಪ್ಪ ಅವರ ಜೊತೆಗೆ ಇದ್ದಾರೆ. ನನಗೇಕಿಲ್ಲ? ಎಂದು ಕೇಳಿದಾಗ ಬೇಸರ ಆಗುತ್ತದೆ. ಅವಳ ಈ ಪ್ರಶ್ನೆ ನನಗೆ ಚಾಲೆಂಜಿಂಗ್‌ ಆಗಿರುತ್ತದೆ. ಏಕೆಂದರೆ ನಾನು ಸುಳ್ಳು ಹೇಳುವುದಿಲ್ಲ. ಮಗಳಿಗೆ ಈಗಲೇ ನಿಜವನ್ನು ಹೇಳಲು ಇಷ್ಟವಿಲ್ಲ. ಅವಳಿಗಿನ್ನೂ 7 ವರ್ಷ. ನೀನು ದೊಡ್ಡವಳಾದ ಮೇಲೆ ನಿನಗೆ ಎಲ್ಲ ತಿಳಿಯುತ್ತದೆ ಎಂದು ತಳ್ಳಿಹಾಕುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ