ತಾಯ್ತನದ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆ ಜೊತೆಗೆ, ಕೆರಿಯರ್‌ನ್ನು ಯಾವ ರೀತಿ ಪೋಷಿಸಬೇಕು ಎಂಬುದನ್ನು ಯಾರಾದರೂ ಕಾಜೋಲ್‌ರಿಂದ ಕಲಿತುಕೊಳ್ಳಬೇಕು. ಇದರ ಕುರಿತಾಗಿ ತಿಳಿಯೋಣವೇ…..?

ಸಿನಿಮಾ ವಾತಾವರಣದಲ್ಲಿಯೇ ಬೆಳೆದ ಕಾಜೋಲ್ ದೇವಗನ್‌ `ಬೇಖುದಿ' ಸಿನಿಮಾದಿಂದ ತಮ್ಮ ಕೆರಿಯರ್‌ ಆರಂಭಿಸಿದರು. ಆದರೆ ಅವರ ಯಶಸ್ವಿ ಚಿತ್ರವೆಂದರೆ `ಬಾಝಿಗರ್‌.' ಕಾಜೋಲ್ ಗೆ ಬಾಲ್ಯದಿಂದಲೇ ಕವಿತೆಗಳನ್ನು ಬರೆಯುವುದು, ಪತ್ತೇದಾರಿ ಸಾಹಿತ್ಯ ಓದುವ ಅಭ್ಯಾಸವಿತ್ತು. ಈಗಲೂ ಸಮಯ ಸಿಕ್ಕರೆ ಅವರು ಓದುವುದು ಇಂಥದೇ ಪುಸ್ತಕಗಳನ್ನು. ಕಾಜೋಲ್-ಶಾರೂಖ್‌ ಜೋಡಿ ಈಗಲೂ ಪ್ರೇಕ್ಷಕರಲ್ಲಿ ಜನಪ್ರಿಯವಾಗಿದೆ. ಕಾಜೋಲ್ ಅತ್ಯಂತ ಸ್ಪಷ್ಟ ಸ್ವಭಾವದವರು. ಈ ಕಾರಣದಿಂದ ಅಜಯ್‌ ದೇವಗನ್‌ ಪ್ರಭಾವಿತರಾದರು. ಅಷ್ಟೇ ಅಲ್ಲ, ಅವರನ್ನು ತಮ್ಮ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡರು.

ಚಿತ್ರರಂಗದಲ್ಲಿನ ಅತ್ಯುತ್ತಮ ಸಾಧನೆಗಾಗಿ ಅವರು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕಾಜೋಲ್ ಯಶಸ್ವಿ ನಟಿ ಹಾಗೂ ತಾಯಿ. ಅವರು ತಾಯಿಯಾದ ಬಳಿಕ ನಟನೆಯ ಎರಡನೇ ಇನ್ನಿಂಗ್ಸ್ ಶುರು ಮಾಡಿದರು. ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಳ್ಳುತ್ತಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಭಾಗ ಇಲ್ಲಿದೆ.

ಎರಡನೇ ಇನ್ನಿಂಗ್ಸ್ ಆರಂಭದ ಶ್ರೇಯಸ್ಸನ್ನು ನೀವು ಯಾರಿಗೆ ಕೊಡಲು ಇಚ್ಛಿಸುವಿರಿ?

ಎಲ್ಲಕ್ಕೂ ಮೊದಲು ನಾನು ಧನ್ಯವಾದ ಹೇಳಬೇಕಾದುದು ಪತಿ ಅಜಯ್‌ಗೆ. ಅವರು ಪ್ರತಿಯೊಂದು ಕೆಲಸದಲ್ಲೂ ನನಗೆ ಸಹಕಾರ ಕೊಟ್ಟವರು. ಮಗಳು `ನ್ಯಾಸಾ' ಹುಟ್ಟಿದ ಬಳಿಕ ಅಜಯ್‌ ಆಗಾಗ ಹೇಳುತ್ತಲೇ ಇರುತ್ತಿದ್ದರು, ``ನೀನೀಗ ಕೆಲಸ ಶುರು ಮಾಡಬಹುದು,'' ಎಂದು. ಆ ಬಳಿಕ ನಾನು `ಫನಾ, ಯು ಮೀ ಔರ್‌ ಹಮ್, ಮೈ ನೇಮ್ ಈಸ್‌ ಖಾನ್‌, ವಿ ಆರ್‌ ಫ್ಯಾಮಿಲಿ' ಮುಂತಾದ ಚಲನಚಿತ್ರಗಳಲ್ಲಿ ನಟಿಸಿದೆ. ಆದರೆ ಮಗ ಯುಗ್‌ ಹುಟ್ಟಿದ ಬಳಿಕ ನಾನು ತಾಯ್ತನಕ್ಕೆ ಪ್ರಾಶಸ್ತ್ಯ ಕೊಟ್ಟೆ. ಯುಗ್‌ನ ಆಗಮನದ ಬಳಿಕ ಮಗಳು ನನಗೆ ಪುನಃ ಚಿತ್ರರಂಗಕ್ಕೆ ಬರಲು ಪ್ರೇರಣೆ ಕೊಟ್ಟಳು.

ತಾಯಿಯಾದುದರಿಂದ ಕೆರಿಯರ್‌ ಮೇಲೆ ಪ್ರಭಾವ ಬೀರಿತು ಎಂದು ನಿಮಗನಿಸಿತಾ?

ಇಲ್ಲ. ನಾನು ಬಾಲ್ಯದಿಂದಲೇ ಅಮ್ಮ ಸದಾ ಕೆಲಸ ಮಾಡುತ್ತಿರುವುದನ್ನು ನೋಡಿದೆ. ಅಮ್ಮ ನನಗೆ ಯಾವಾಗಲೂ ಹೇಳ್ತಿದ್ರು `ಕೆಲಸ ಮಾಡುವುದು ಅತ್ಯಗತ್ಯ.' ಇಂದಿನ ಮಕ್ಕಳು ಅದೆಷ್ಟು ಬುದ್ಧಿವಂತರಿದ್ದಾರೆಂದರೆ, ಅವರಿಗೆ ಹೆಚ್ಚಿಗೆ ತಿಳಿಸಿ ಹೇಳಬೇಕಾದ ಅಗತ್ಯವಿಲ್ಲ. ನಾನು ಕೆಲಸ ಮಾಡುತ್ತಿರುವುದು ಮಕ್ಕಳಿಗೆ ಖುಷಿ ಕೊಟ್ಟಿದೆ. ನಾನು ಮೊದಲ ಬಾರಿಗೆ ತಾಯಿಯಾದಾಗ ನನ್ನ ಮೇಲಿನ ಜವಾಬ್ದಾರಿ ಭಾರಿ ಪ್ರಮಾಣದಲ್ಲಿ ಹೆಚ್ಚಿತ್ತು. ಹೀಗಾಗಿ ನಾನು ಕೆಲವು ದಿನಗಳ ಮಟ್ಟಿಗೆ ಕೆಲಸದಿಂದ ವಿಶ್ರಾಂತಿ ಪಡೆದಿದ್ದೆ. ನನ್ನ ದೃಷ್ಟಿಯಲ್ಲಿ ಮಕ್ಕಳಿಗೆ ಜನ್ಮ ಕೊಡುವುದಷ್ಟೇ ಮುಖ್ಯವಲ್ಲ, ಅವರಿಗೆ ಉತ್ತಮ ಪಾಲನೆ ಪೋಷಣೆ ಕೊಡುವುದು ಕೂಡ ಅಷ್ಟೇ ಮುಖ್ಯ. ನಾನು ನನ್ನ ಮಕ್ಕಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಬಗ್ಗೆ ನನಗೆ ತೃಪ್ತಿ ಇದೆ.

ಮಕ್ಕಳಿಗೆ ನೀವು ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಕೊಡುತ್ತೀರಿ?

ನಾನು ಅತ್ಯಂತ ಸ್ಟ್ರಾಂಗ್‌ ಮದರ್‌. ಅವರಿಗೆ ಸಿಗುವ ಸ್ವಾತಂತ್ರ್ಯ ಕಡಿಮೆಯೇ. ನಾನು ಅವರಿಗೆ ಜೀವನದ ಆದ್ಯತೆಯನ್ನು ಮನವರಿಕೆ ಮಾಡಲು ಪ್ರಯತ್ನಿಸುವೆ. ಅವರು ಬಾಲ್ಯದಲ್ಲಿಯೇ ಇದನ್ನು ಅರಿತುಕೊಂಡರೆ ದೊಡ್ಡವರಾದ ಬಳಿಕ ಅವರಿಗೆ ಯಾವುದೇ ಸಮಸ್ಯೆ ಉಂಟಾಗದು. ಶಾಲೆಯ ಪರೀಕ್ಷೆ ಅಥವಾ ಜೀವನದ ಪರೀಕ್ಷೆಯೇ ಆಗಿರಬಹುದು, ಯಶಸ್ಸು ದೊರೆಯುವತನಕ ಹೋರಾಟ ಮುಂದುವರಿಸಲೇಬೇಕು ಎಂದು ನಾನು ಅವರಿಗೆ ಹೇಳುತ್ತಿರುತ್ತೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ