ಯಾವುದೇ ವಯಸ್ಸಿನ ಪುರುಷನಿಗೆ ಯಾವುದೇ ವಯಸ್ಸಿನ ಮಹಿಳೆಯಿಂದ ಸಿಗಬಹುದಾದ ಖುಷಿಯನ್ನು ಅವನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲು ಇಷ್ಟಪಡುವುದಿಲ್ಲ. ಮಾತುಗಳಿಂದಲೇ ಆಗಿರಬಹುದು ಅಥವಾ ಒಬ್ಬ ಮಹಿಳೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ಮಾಡಿದ ಸ್ಪರ್ಶದಿಂದ ಅವನು ಸಾಕಷ್ಟು ಮನರಂಜನೆ ಪಡೆದುಕೊಳ್ಳುತ್ತಾನೆ. ತಾನು ಮಹಿಳೆಯನ್ನು ಮೂರ್ಖಳನ್ನಾಗಿಸಿ ಖುಷಿ ಪಟ್ಟುಕೊಂಡೆ, ಪುರುಷತ್ವದ ಮಜಾ ಪಡೆದುಕೊಂಡೆ ಎಂದು ಯೋಚಿಸುತ್ತಾನೆ.
ಒಂದು ಸಲ ಒಬ್ಬ ಪುರುಷ ನಾಗರಿಕತೆಯ ಮುಚ್ಚುಮರೆಯಲ್ಲಿ ತನ್ನನ್ನು ತಾನು ಮೌನಿಯಾಗಿಸಿಕೊಳ್ಳಲು ವಿವಶನಾಗುತ್ತಾನೆ. ಆದರೆ ವಾಸ್ತವದಲ್ಲಿ ಹಾಗಾಗಲೂ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅವನ ಬುದ್ಧಿಮಟ್ಟದ ಮುಖವಾಡ ಬಹುಬೇಗನೇ ಕಳಚಿಬೀಳುತ್ತದೆ. ಛೇಡಿಸುವಿಕೆ ಹಾಗೂ ರೇಪ್‌ನ ಇಂತಹ ಹೆಚ್ಚಿನ ಪ್ರಕರಣಗಳು ಇಂದಿನ ಓದುಬರಹ ಬಲ್ಲವರು ಎಂದು ಹೇಳಿಕೊಳ್ಳುವ ನಾಗರಿಕ ಸಮಾಜದಲ್ಲಿ ಸಾಕಷ್ಟು ಪ್ರಕರಣಗಳು ಅರಿವಿಗೆ ಬರುತ್ತವೆ. ದ್ವಂದ್ವಾರ್ಥ ಸಂಭಾಷಣೆ, ಅಶ್ಲೀಲ ಸನ್ನೆ, ವಿಚಿತ್ರ ಹಾವಭಾವದ ಮುಖಾಂತರ ಸಂವಹಿಸುವ ಅವರಲ್ಲಿ ಹಾಗೂ ಕಡಿಮೆ ಓದಿದ ಅಥವಾ ಅನಕ್ಷರಸ್ಥರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಮಹಿಳೆ ಯಾರೇ ಆಗಿರಲಿ, ಇಲ್ಲಿ ಮಾತ್ರ ತನ್ನ ತಾಯಿ, ತಂಗಿ, ಹೆಂಡತಿ, ಮಗಳನ್ನು ಸುರಕ್ಷಿತವಾಗಿಟ್ಟು ಇತರೆ ಮಹಿಳೆಯರನ್ನು ಅವನು ಕೀಳಾಗಿ ಭಾವಿಸುತ್ತಾನೆ.
ಕೀಳು ಆಲೋಚನೆ
ಮಹಿಳೆ ಎಷ್ಟು ವಿವಶಳಾಗಿರುತ್ತಾಳೊ, ಪುರುಷನ ಮೋಜಿನ ದೃಷ್ಟಿ ಅಷ್ಟೇ ಹೆಚ್ಚುತ್ತಾ ಹೋಗುತ್ತದೆ. ಮರ್ಯಾದೆ ಹಾಗೂ ಸಂಸ್ಕಾರಗಳ ಹೆಸರಿನಲ್ಲಿ ಆಕೆ ಸುರಕ್ಷಿತಳಲ್ಲ. ಒಂದು ವೇಳೆ ಆಕೆ ಸುರಕ್ಷಿತಳು ಎಂದರೆ ಕೇವಲ ಸಂಬಂಧಗಳಲ್ಲಷ್ಟೆ. ಏಕೆಂದರೆ ಒಬ್ಬರ ತಾಯಿ, ಸೋದರಿ, ಮಗಳು ಬೇರೆಯವರಿಗೆ ಮೋಜುಮಜಾಕ್ಕೆ ಕಾರಣವಾಗಬಹುದು.
ಆಫೀಸುಗಳಲ್ಲಿ ಮಹಿಳೆಯರು ಪುರುಷರು ಜೊತೆ ಜೊತೆಗೇ ಕೆಲಸ ಮಾಡುತ್ತಾರೆ. ಇದು ಅನಿವಾರ್ಯತೆಯೂ ಹೌದು, ಕೆಲವರಿಗೆ ಮಜ ಹೌದು. ಕೂದಲು ಹಣ್ಣಾದ ವೃದ್ಧರು ಹಾಗೂ ಮಧ್ಯವಯಸ್ಕರು ಕೂಡ ಯುವತಿಯರತ್ತ ಕಳ್ಳನೋಟ ಬೀರುತ್ತಿರುತ್ತಾರೆ. ಪಾರ್ಕ್‌ನಲ್ಲೂ ಕೂಡ ವೃದ್ಧರು ಅಲ್ಲಿಗೆ ಸುತ್ತಾಡಲು ಬರುವ ಮಹಿಳೆಯರತ್ತ ಕಣ್ಣುಹರಿಸುತ್ತಿರುತ್ತಾರೆ. ನಾಲ್ಕನೇ ದರ್ಜೆ ನೌಕರರು ಎರಡನೇ ದರ್ಜೆಯ ಮಹಿಳಾ ಉದ್ಯೋಗಿಗಳ ವಿವಶತೆಯ ಆನಂದ ಪಡೆಯುತ್ತಾರೆ. ಯಾವ ಮಹಿಳೆ ಹೇಗಿದ್ದಾಳೆ, ಅವಳ ಕುಟುಂಬ ಹಿನ್ನೆಲೆ ಏನು ಎಂದು ಅವರ ನಡುವೆ ಚರ್ಚೆ ನಡೆಯುತ್ತಿರುತ್ತದೆ. ಮಹಿಳೆಯೊಬ್ಬಳ ಸೀರೆಯ ಸೆರಗು ಭುಜದಿಂದ ಜಾರಿದರೆ ಅವರ ನೋಟ ಅತ್ತ ಕಡೆಯೇ ನೆಟ್ಟಿರುತ್ತದೆ. ಪರ್ಸ್ ಕೆಳಗೆ ಬಿದ್ದಾಗ ಬಗ್ಗಿ ಅದನ್ನು ಎತ್ತಿಕೊಳ್ಳಲು ಹೋದರೆ ಅವಳ ಕಡೆಯೇ ಅವರು ನೋಡುತ್ತಿರುತ್ತಾರೆ. ಕೆಲವೊಂದು ಆಫೀಸುಗಳಲ್ಲಂತೂ ಯಾವ ಮಹಿಳೆಯ ಪೀರಿಯಡ್ಸ್ ಯಾವಾಗ ಎನ್ನುವುದು ಪುರುಷ ಸಿಬ್ಬಂದಿಯ ನಡುವೆ ಚರ್ಚೆಯೇ ನಡೆಯುತ್ತಿರುತ್ತದೆ. ಇಂತಹ ಕೀಳು ಆಲೋಚನೆಯ ಮೇಲೆ ಅಂಕುಶ ಹೇರುವುದಂತೂ ಸಾಧ್ಯವಿಲ್ಲ. ಇಲ್ಲಿ ಹುಡುಗಿ ಹಾಗೂ ಮಹಿಳೆ ಇಬ್ಬರ ಆಲೋಚನೆಯೂ ಒಂದೇ ರೀತಿ. ಆದರೆ ದೃಷ್ಟಿಯನ್ನು ಗುರುತಿಸುವುದು, ಅಪಾಯವನ್ನು ಅರಿಯುವುದು ಹುಡುಗಿಯರಿಗೆ ಬಹುಬೇಗ ಗೊತ್ತಾಗುತ್ತದೆ.
ಕೆಟ್ಟ ಪದ್ಧತಿಗಳ ಹೆಸರಿನಲ್ಲಿ ಶೋಷಣೆ
ಈಗಲೂ ದೇಶದ ಗುಡ್ಡಗಾಡು ಪ್ರದೇಶದಲ್ಲಿ ಒಂದು ಕೆಟ್ಟ ಪದ್ಧತಿ ರೂಢಿಯಲ್ಲಿದೆ. ಹುಡುಗಿಯೊಬ್ಬಳ ಮದುವೆಯನ್ನು ಹುಡುಗನ ಬಟ್ಟೆಯ ಜೊತೆಗೆ ಮಾಡಲಾಗುತ್ತದೆ. ಅಂದರೆ ಇಲ್ಲಿ ಹುಡುಗಿಯ ಬೆಲೆ ಹುಡುಗನ ಪೋಷಾಕಿಗಿಂತಲೂ ಕಡಿಮೆ. ಪುರುಷತ್ವ ಅಂದರೆ ಇದೇನಾ? ರಜಪೂತರ ಕಾಲದಲ್ಲಿ ಯುದ್ಧದಲ್ಲಿ ನಿರತ ರಜಪೂತನ ವಿವಾಹವನ್ನು ಅವನ ಖಡ್ಗದೊಂದಿಗೆ ಮಾಡಲಾಗುತ್ತಿತ್ತು. ಆ ವಿವಾಹವನ್ನು ಮಾಡಿಸುತ್ತಿದ್ದವರು ವಿದ್ವಾಂಸರೆಂದು ಕರೆಯಿಸಿಕೊಳ್ಳುತ್ತಿದ್ದ ಸಾಧುಸಂತರು. ಇದೆಂಥ ಧರ್ಮ? ತನ್ನದೇ ಅಧೀನದಲ್ಲಿರುವ ಮಹಿಳೆಯ ಜೊತೆ ನಿಷ್ಕರುಣೆ ತೋರಲು ಏನು ಕಾರಣ? ವರನ ಅನುಪಸ್ಥಿತಿಯಲ್ಲಿ ಅಷ್ಟು ತರಾತುರಿಯಲ್ಲಿ ಮದುವೆ ಮಾಡಿ ಮಹಿಳೆಯೊಬ್ಬಳ ಅಸ್ತಿತ್ವವನ್ನೇ ಹೊಸಕಿ ಹಾಕಿದ್ದು ಏನನ್ನು ತಾನೇ ಬಿಂಬಿಸುತ್ತದೆ? ಮಹಿಳೆಯೊಬ್ಬಳ ರವಿಕೆ ಅಥವಾ ಸೀರೆಯ ಜೊತೆಗೆ ಪುರುಷನ ಪುರುಷತ್ವ ಅಂದರೆ ಇದೇನಾ? ಮದುವೆ ಮಾಡಿದ ಉದಾಹರಣೆ ನಮಗೆ ಇತಿಹಾಸದಲ್ಲಿ ಎಲ್ಲಿಯಾದರೂ ನೋಡಲು ಸಿಗುತ್ತದೆಯೇ? ಸ್ತ್ರೀ ಶಿಕ್ಷಣದ ಹೆಸರಿನಲ್ಲಿ ಈಗಲೂ ಅನೇಕ ದುಷ್ಟ ಪದ್ಧತಿಗಳು ಜಾರಿಯಲ್ಲಿವೆ. ಹುಡುಗಿಯರ ಸಾವಿಗೆ ಯಾರೊಬ್ಬರೂ ಕಣ್ಣೀರು ಸುರಿಸುವುದಿಲ್ಲ.