ಹುಡುಗಿಯರಿಗೆ, ``ನೀವು ದೊಡ್ಡವರಾದ ಬಳಿಕ ಏನು ಆಗಲು ಬಯಸುತ್ತೀರಿ?'' ಎಂಬ ಪ್ರಶ್ನೆಗೆ ನಾನು ಡಾಕ್ಟರ್‌, ಎಂಜಿನಿಯರ್‌, ವಕೀಲೆ, ಕಲಾವಿದೆ... ಹೀಗೆ ಏನೆಲ್ಲ ಉತ್ತರಗಳು ಕೇಳಿ ಬರುತ್ತವೆ. ನಿಮ್ಮ ಮಗಳು, ನಾನು ಪತ್ತೇದಾರಿಣಿ ಆಗ್ತೀನಿ. ಎಂದು ಉತ್ತರ ಕೊಟ್ಟರೆ ಬಹುಶಃ ನಿಮ್ಮ ಮುಖದ ಬಣ್ಣವೇ ಬದಲಾಗಿ ಬಿಡಬಹುದು. ನಾವು ಟಿ.ವಿ. ಚಾನೆಲ್‌ಗಳಲ್ಲಿ ಪತ್ತೇದಾರಿ ಧಾರಾವಾಹಿಗಳನ್ನು ನೋಡುವಾಗ ಅದರಲ್ಲಿ ಪತ್ತೇದಾರನಿಗೆ ಮಹಿಳೆ ಸಹಾಯಕಿ ಆಗಿರುವುದು ಕಂಡುಬರಬಹುದು. ಇಲ್ಲಿ ಆಕೆ ಅದರಲ್ಲಿ ಮೋಜಿನ ಪಾತ್ರ ನಿರ್ವಹಿಸುತ್ತಿರಬಹುದು. ಆದರೆ ರಜನಿ ಪಂಡಿತ್‌ ದೇಶದ ಮೊದಲ ಮಹಿಳಾ ಪತ್ತೇದಾರಿಣಿಯಾಗಿ ವಿಶೇಷ ಸಾಧನೆ ಮಾಡಿದ್ದಾರೆ. ಅವರು ಪ್ರಸಿದ್ಧ ವ್ಯಕ್ತಿಗಳ, ಉದ್ಯಮಿಗಳ, ಉದ್ಯೋಗಿಗಳ ಹಲವು ಸಮಸ್ಯೆಗಳನ್ನು ಬಗೆಹರಿಸಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೀಗಾಯ್ತು ಆರಂಭ...

ಆರಂಭದಿಂದಲೇ ರಜನಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಕೆಟ್ಟ ದಾರಿಯಲ್ಲಿ ಸಾಗುತ್ತಿದ್ದ ಯುವತಿಯೊಬ್ಬಳ ಬಗ್ಗೆ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ ಆಕೆಯ ತಾಯಿಗೆ ಒಪ್ಪಿಸಿದ್ದರು.

ಪ್ರೊಫೆಶನಲ್ ಪತ್ತೇದಾರಿಣಿ ಆದದ್ದು ಹೇಗೆ ಮತ್ತು ಯಾವಾಗ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸುತ್ತಾರೆ, ``ನಾನು ಪತ್ರಕರ್ತರೊಬ್ಬರ ಕ್ಲಿಷ್ಟಕರ ಸಮಸ್ಯೆಯೊಂದನ್ನು ಬಗೆಹರಿಸಿದ್ದೆ. ಆ ಬಳಿಕ ಆ ಪತ್ರಕರ್ತರು ನನ್ನ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟಿಸಿದ್ದರು. ಬಳಿಕ ದೂರದರ್ಶನ, ಮ್ಯಾಗಝೀನ್‌ಗಳ ಗಮನ ನನ್ನತ್ತ ಹರಿಯಿತು.''  ಒಂದು ಆಶ್ಚರ್ಯದ ಸಂಗತಿಯೆಂದರೆ, ಆ ಮುಂಚೆ ಅವರ ಪತ್ತೇದಾರಿ ವೃತ್ತಿಯ ಬಗೆಗಿನ ಜಾಹೀರಾತನ್ನು ಹಾಕಲು ಯಾವುದೇ ಪತ್ರಿಕೆಗಳು ತಯಾರಿರಲಿಲ್ಲ. ಅವರ ಜಾಹೀರಾತು ಹಾಕಲು ನಿರಾಕರಿಸಿದ ಪತ್ರಿಕೆಗಳೇ ಮುಂದೆ ಅವರ ವಿಶೇಷ ಸಂದರ್ಶನವನ್ನು ಪ್ರಕಟ ಮಾಡಿದ. ಆಗ ಅನೇಕ ಜಾತಿ ಧರ್ಮದವರು ತಮ್ಮ ಸಮಸ್ಯೆಗಳನ್ನು ಹೊತ್ತು ಅವರ ಬಳಿ ಬರತೊಡಗಿದರು. ಒಂದು ವಾಸ್ತವ ಸಂಗತಿಯೆಂದರೆ, ಅವರು ಯಾವ ಜಾಣ್ಮೆಯಿಂದ ಹಲವು ಕೇಸ್‌ಗಳನ್ನು ಬಗೆಹರಿಸಿದ್ದರೊ ಅದೇ ನೈಪುಣ್ಯತೆಯೇ ಅವರ ಬಳಿ ಅನೇಕರು ಬಾಗಿಲು ತಟ್ಟುವಂತೆ ಮಾಡಿತ್ತು.

`ಮೂರ್ಸ್‌ ಅಂಡ್‌ ಶೇಖರ್ಸ್‌' ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಮೂಡಿಬಂದ ನಂತರವಂತೂ ಇವರ ಖ್ಯಾತಿ ಮತ್ತಷ್ಟು ಹೆಚ್ಚಿತು. ದುಬೈನ ಒಬ್ಬ ವ್ಯಕ್ತಿ ಇವರನ್ನು ಭೇಟಿಯಾಗಿ ತಮ್ಮ ಸಮಸ್ಯೆಯೊಂದನ್ನು ಬಗೆಹರಿಸಲು ಕೇಸ್‌ ಕೊಟ್ಟಿದ್ದರು. ರಜನಿಯವರು ಆ ಕೇಸನ್ನು ಲೀಲಾಜಾಲವಾಗಿ ಬಗೆಹರಿಸಿ ತಮ್ಮ ಜಾಣ್ಮೆಯ ಪ್ರದರ್ಶನ ಮಾಡಿದರು.

ಪತ್ತೇದಾರಿಣಿಯ ವಿಭಿನ್ನ ಕಾರ್ಯವೈಖರಿ

ಯಾವುದೇ ಒಂದು ಕೇಸನ್ನು ರಜನಿ ಕೈಗೆತ್ತಿಕೊಳ್ಳುತ್ತಿದ್ದಂತೆ ಅದನ್ನು ಯಾವುದೇ ಕಾರಣಕ್ಕೂ ಎಕ್ಸ್ಪೋಸ್‌ ಮಾಡಲು ಹೋಗುವುದಿಲ್ಲ. ಎಲ್ಲ ಪುರಾವೆಗಳನ್ನು ಒಗ್ಗೂಡಿಸಿದ ಬಳಿಕವೇ ಅವರು ಆ ಕೇಸ್‌ ಕೊಟ್ಟ ವ್ಯಕ್ತಿಗೆ ಒಪ್ಪಿಸಿ ತಟಸ್ಥರಾಗಿ ಅವರ ತಪ್ಪಿನ ಬಗ್ಗೆ ತಿಳಿವಳಿಕೆ ಕೊಡಲು ಪ್ರಯತ್ನಿಸುತ್ತಾರೆ. ಪ್ರೀತಿಸಿ ಮೋಸ ಹೋದ ಹುಡುಗ ಹುಡುಗಿಯರಿಗೂ ಅವರು ಕೌನ್ಸೆಲಿಂಗ್‌ಮಾಡುತ್ತಾರೆ. ಅವರು ಈಗಾಗಲೇ ಇಂತಹ 2,000ಕ್ಕೂ ಹೆಚ್ಚು ಪ್ರಕರಣಗಳನ್ನು ಬಿಡಿಸಿ, ಅವರಿಗೆ ಕೌನ್ಸೆಲಿಂಗ್‌ ಮಾಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ