ಇವರ ಇಚ್ಛಾಶಕ್ತಿಗೆ ದೊಡ್ಡ ಸವಾಲ್!

ಜಯಲಲಿತಾ ಹಾಗೂ ಮಮತಾ ಬ್ಯಾನರ್ಜಿ ನಂತರ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಮಾಯಾವತಿ ಮತ್ತೆ ಅಧಿಕಾರಕ್ಕೆ ಬರುವವರೇ ಎಂಬುದು ಏಕೋ ಅನುಮಾನಾಸ್ಪದವಾಗಿದೆ.

ಮಾಯಾವತಿ ಗೆಲ್ಲುತ್ತಾರೋ ಇಲ್ಲವೋ ಅದು ಬೇರೆ ವಿಚಾರ, ಆದರೆ ಈ  ಮೂವರಲ್ಲೂ ಒಂದು ಸಾಮಾನ್ಯ ಅಂಶವಂತೂ  ಇದ್ದೇ ಇದೆ, ಈ ಮೂವರೂ ಎಂದೂ ಯಾವ ಪುರುಷ ನಾಯಕನ ಬೆನ್ನುಹತ್ತಿ ಹೋದವರಲ್ಲ. ಹಾಗೆ ನೋಡಿದರೆ ಎಷ್ಟೋ ಮಹಿಳಾ ಮುಖ್ಯಮಂತ್ರಿಗಳು ಬಂದರು, ಇಂದಿಗೂ ವಸುಂಧರಾ ರಾಜೇ ಅಂಥವರಿದ್ದಾರೆ, ಆದರೆ ಇವರುಗಳು ತಮ್ಮ ಸ್ವಶಕ್ತಿಯಿಂದ ಮೇಲೇರಿದವರಲ್ಲ.

ಮಮತಾ, ಲಲಿತಾ, ಮಾಯಾ ಮೂವರೂ ಯಾವುದೇ ಗಂಡಸಿನ ನೆರವಿಲ್ಲದೆ ರಾಜಕೀಯದಂಥ ಪುರುಷ ಪ್ರಧಾನ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ ತೋರಿಸಿದ್ದಾರೆ ಹಾಗೂ ರಾಜ್ಯದಲ್ಲಿನ ಅರ್ಧದಷ್ಟು ಪ್ರಜೆಗಳು ಹೆಂಗಸರನ್ನೇ ಅವಲಂಬಿಸಿದ್ದಾರೆ ಎಂಬುದನ್ನು ಆಡಿ ತೋರಿಸದೆ ಮಾಡಿದ್ದಾರೆ.

ಈ ಮೂವರ ರಾಜಕಾರಣ, ಅನ್ಯ ಪುರುಷ ರಾಜಕಾರಣಿಗಳ ನೀತಿ ನಿರ್ಧಾರಗಳ ತರಹವೇ ನಡೆಯುತ್ತದೆ. ಜೊತೆಗೆ ದಿನೇ ದಿನೇ ನಡೆಯುವ ರಾಜಕೀಯ ಆಕ್ರಮಣಗಳು, ದೈನಂದಿನ ಸಮಸ್ಯೆಗಳು, ಬಂದು ಸೇರುವ ಬಿಟ್ಟುಹೋಗುವ ಜನರ ಕಿರುಕುಳ ಇತ್ಯಾದಿ ಎಲ್ಲವನ್ನೂ ಸಹನೆಯಿಂದ ಎದುರಿಸುತ್ತಾರೆ.

ಈ ಮೂವರಿಗೂ ಈ ಗದ್ದುಗೆ ಪಾರಂಪರಿಕವಾಗಿ ಏನೂ ಸಿಗಲಿಲ್ಲ, ಇವರು ತಾವಾಗಿ ಕಿತ್ತುಕೊಂಡದ್ದು. ಇವರುಗಳು ಯಶಸ್ವಿಯಾಗಿ ನಡೆಯುತ್ತಿದ್ದ ಪಕ್ಷಗಳನ್ನು ಸೋಲಿಸಿ ತಮ್ಮ ಗೆಲುವನ್ನು ಸಾಧಿಸಿದ್ದಾರೆ. ಇವರು ಅಧಿಕಾರದಿಂದ ಹೊರಗಿದ್ದ ಕಾಲದಲ್ಲೂ ಎಂದೂ ಹತಾಶರಾಗಿ ಕೈಚೆಲ್ಲಿದವರಲ್ಲ ಹಾಗೂ ಘಳಿಗೆಗೊಂದು ಗಂಡಾಂತರ ಎದುರಿಸುತ್ತಲೇ ಇರುತ್ತಾರೆ.

ಇಂಥದೇ ಕಥೆ ಈಗ ಮನೆಮನೆಗಳಲ್ಲೂ ಕಾಣಬಹುದಾಗಿದೆ. ಎಷ್ಟೋ ಲಕ್ಷಾಂತರ ಮನೆಗಳು ಈಗ ಕೇವಲ ಹೆಂಗಸರ ಸ್ವಶಕ್ತಿಯಿಂದ ನಡೆಯುವಂತಾಗಿವೆ. ಈ ಮೂವರು ಮಹಿಳಾ ಮಂತ್ರಿಗಳಂತೆಯೇ ಪುರುಷ ಶಕ್ತಿಯೊಂದಿಗೆ ಹೋರಾಡುತ್ತಾ ನೆಮ್ಮದಿಯಾಗಿ ಬದುಕುತ್ತಿದ್ದಾರೆ, ಅಂದಿನ ಕಾಲದ ಅಬಲೆಯರಾಗಿ ಅಳುತ್ತಾ ಮೂಲೆ ಸೇರಿಲ್ಲ. ಈಗ ಅವರಿಗೆ ತಂದೆ, ಗಂಡ, ಅಣ್ಣ ತಮ್ಮ ಅಥವಾ ಮಗನ ಸಹಾಯ ಬೇಕಾಗಿಲ್ಲ.

ಆಧುನಿಕ ಶಿಕ್ಷಣದ ಎಲ್ಲಕ್ಕೂ ದೊಡ್ಡ ಕೊಡುಗೆ ಎಂದರೆ, ಈಗ ಹೆಂಗಸರಿಗೂ ಸಹ ಗಂಡಸರಿಗೆ ತಿಳಿಯುತ್ತಿದ್ದ ಎಲ್ಲಾ ಸಂಗತಿಗಳೂ ಗೊತ್ತು ಹಾಗೂ ಗಂಡಸರು ಕೈಯಾಡಿಸುತ್ತಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಇರುವ ದಿಟ್ಟವಾಗಿ ಹೆಜ್ಜೆಯೂರಬಲ್ಲರು.

ಕೇವಲ ಇಸ್ಲಾಂ ದೇಶಗಳನ್ನು ಹೊರತುಪಡಿಸಿ ವಿಶ್ವವಿಡೀ ಹೆಂಗಸರು, ಇಂದು ಮಾಯಾತಿ ತರಹ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಸಮರ್ಥರಾಗಿದ್ದಾರೆ. ಹಾಗಿದ್ದಾರೆ ಅದು ರಾಜಕೀಯದ ಅಧಿಕಾರವೇ ಇರಲಿ, ಮನೆಯ, ಬಿಸ್‌ನೆಸ್‌ನ, ವ್ಯವಸ್ಥೆಯ ಕುರಿತಾಗಿರಲಿ, ಇಡೀ ರಾಜ್ಯ ಅಥವಾ ದೇಶದ್ದೇ ಇರಲಿ, ಎಲ್ಲ ಸಲೀಸೆನಿಸಿದೆ.

ಜರ್ಮನಿಯ ಏಂಜೆಲಾ ಮಾರ್ಕೆಲ್ ‌ತಮ್ಮ ಸ್ವಶಕ್ತಿಯಿಂದ ಯೂರೋಪಿನ ಅತಿ ಶಕ್ತಿಶಾಲಿ ನಾಯಕಿ ಎನಿಸಿದ್ದಾರೆ. ಹಿಲೆರಿ ಕ್ಲಿಂಟನ್ ರಾಷ್ಟ್ರಪತಿ ಆಗಿದ್ದಾರೆಂದರೆ ಅದು ಬಿಲ್ ‌ಕ್ಲಿಂಟನ್‌ರ ಸಹಾಯದಿಂದಲ್ಲ ತಮ್ಮ ಸ್ವಶಕ್ತಿಯ ಆಧಾರದಿಂದ ಮಾತ್ರ.

ಇಲ್ಲಿ ಅಗತ್ಯ ಇರುವುದೆಲ್ಲ ಕೇವಲ ಧೈರ್ಯದ್ದು ಮಾತ್ರ, ಸಂಕಲ್ಪದ್ದು ಮಾತ್ರ…. ಇದು ಎಲ್ಲಾ ಸ್ತ್ರೀ-ಪುರುಷರಲ್ಲೂ ಸಮಾನವಾಗಿ ಕಂಡುಬರುತ್ತದೆ. ಅಗತ್ಯ ಇರುವುದು ಸಾಮಾಜಿಕ ಸಂಘಟನೆ ಮಾತ್ರ, ಇದು ಸ್ತ್ರೀ-ಪುರುಷರ ಮೇಲೆ ಬಂಧನ ಹೇರುವುದಿಲ್ಲ ಅಥವಾ ಸರಿಸಮಾನ ಬಂಧನ ಹೇರುತ್ತದೆ. ಜೆಂಡರ್‌ ಇಂದಿನ ಯುಗದಲ್ಲಿ ನಿರರ್ಥಕ ಎನಿಸಿದೆ.

ಮಾಯಾತಿ ಹಾಗೂ ಹಿಲೆರಿ ಕ್ಲಿಂಟನ್‌ ಗೆಲ್ಲುತ್ತಾರೋ ಇಲ್ಲವೋ, ಅವರ ಹೆಸರು ರೇಸ್‌ನಲ್ಲಿ ಸದಾ ಮುಂದಿರುತ್ತದೆ, ಅಷ್ಟು ಸಾಕು.

ನನ್ನ ಗರ್ಭ ನನ್ನ ಇಚ್ಛೆ

ಅತ್ಯಾಚಾರಕ್ಕೆ ಗುರಿಯಾದ ಒಬ್ಬ ಬಡ ಮಹಿಳೆಗೆ 20 ವಾರಗಳ ಕಾನೂನು ಒಪ್ಪಿಗೆಯ ಮಿತಿ ದಾಟಿ 24ನೇ ವಾರದಲ್ಲಿ ಗರ್ಭಪಾತ ಮಾಡಿಸಲು ಸುಪ್ರೀಂಕೋರ್ಟ್‌ನ ಬಾಗಿಲು ತಟ್ಟಬೇಕಾಗಿ ಬಂತು. ಸಂತೋಷದ ವಿಷಯವೆಂದರೆ ಆಕೆಯ ಕೇಸ್‌ ಸಾವಿರಾರು ಕೇಸುಗಳಂತೆ ಹತ್ತಿಕ್ಕಾಗಲಿಲ್ಲ. ಎರಡೇ ದಿನಗಳಲ್ಲಿ ತೀರ್ಮಾನ ಬಂತು. ಅವಳಿಗೆ ಬೇಡದ ಗರ್ಭದಿಂದ ಮುಕ್ತಿ ಸಿಕ್ಕಿತು.

ಆದರೆ ದೇಶದ ಸಾವಿರಾರು ಮಹಿಳೆಯರು ಪ್ರತಿ ವರ್ಷ ಈ ರೀತಿ ಪೀಡಿತರಾಗುತ್ತಾರೆ. ಅತ್ಯಾಚಾರದಿಂದ ಅಥವಾ ಇಚ್ಛೆ ಪಟ್ಟು ಉಂಟಾದ ಗರ್ಭ ತೆಗೆಸುವ ನಿರ್ಣಯವನ್ನು ಅವಿವೇಕಿ ಹುಡುಗಿಯರು ಮತ್ತು ಯುವತಿಯರು ವಾರಗಟ್ಟಲೇ ತೆಗೆದುಕೊಳ್ಳುವುದಿಲ್ಲ. ಸೆಕ್ಸ್ ನಿಂದಾಗಿ ತಾವು ಗರ್ಭಿಣಿಯಾದೆವೆಂದು ಕೆಲವರಿಗೆ ತಿಳಿಯುವುದೇ ಇಲ್ಲ. ಮನೆಯವರಿಗೆ ತಿಳಿಯುವಷ್ಟರಲ್ಲಿ ತಡವಾಗಿರುತ್ತದೆ. ವೈದ್ಯರು ಗರ್ಭಪಾತ ಮಾಡಲು ಒಪ್ಪುವುದಿಲ್ಲ. ಆಗ ಹೆಚ್ಚು ಹಣ ಕೊಟ್ಟು ಸದ್ದಿಲ್ಲದೇ ಗರ್ಭಪಾತ ಮಾಡಿಸಬೇಕಾಗುತ್ತದೆ ಅಥವಾ ಅನನುಭವಿ ವೈದ್ಯರಿಗೆ ತಮ್ಮನ್ನು ಒಪ್ಪಿಸಿಕೊಳ್ಳಬೇಕಾಗುತ್ತದೆ.

ಕೆಲವು ಮಹಿಳೆಯರು ಪದೇ ಪದೇ ಪದೇ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಏಕೆಂದರೆ ಅವರು ಸ್ವತಃ ಸ್ವಚ್ಛಂದ ಲೈಂಗಿಕತೆ ಬಯಸುತ್ತಾರೆ ಅಥವಾ ಬಿಂದಾಸ್‌ ಆಗಿರುತ್ತಾರೆ ಮತ್ತು ಗರ್ಭಪಾತ ಮಾಡಿಸುವುದನ್ನು ಮಾಸಿಕ ಕ್ರಮವೆಂದು ತಿಳಿದಿರುತ್ತಾರೆ.

ಗರ್ಭಪಾತದ ಕಾನೂನು ಸಾಕಷ್ಟು ಉದಾರವಾಗಿರುವ ದೇಶಗಳಲ್ಲಿ ಭಾರತ ಒಂದಾಗಿರುವುದು ಸಮಾಧಾನಕರ ವಿಷಯವಾಗಿದೆ. ಅಮೆರಿಕಾ ಆಧುನಿಕವಾಗಿದ್ದರೂ ಇಂದಿಗೂ ಗರ್ಭಪಾತವೆಂದರೆ ಹುಬ್ಬು ಗಂಟಿಕ್ಕುತ್ತದೆ. ಪ್ರೊಲೈಫ್‌ ಅಂದರೆ ಗರ್ಭದಲ್ಲಿರುವ ಮಗುವಿನ ಬದುಕಿನ ಹಕ್ಕಿನ ಬಗ್ಗೆ ಅಲ್ಲಿನ ಶಕ್ತಿಶಾಲಿ ಚರ್ಚ್‌ ರಸ್ತೆಗಳು, ವಿಧಾನಸಭೆಗಳು ಮತ್ತು ಕೋರ್ಟ್‌ನಲ್ಲೂ ಮಾತಾಡುತ್ತಿರುತ್ತದೆ.

ಗರ್ಭದಲ್ಲಿರುವ ಮಗುವಿನ ಮಾಲೀಕಳೆಂದರೆ ಅದನ್ನು ಹೊತ್ತ ಮಹಿಳೆ ಮಾತ್ರ. ಅವಳ ಗರ್ಭದ ಮೇಲೆ ಧರ್ಮ, ಸಮಾಜ, ಸರ್ಕಾರ ಮತ್ತು ಯಾವ ಪುರುಷ ಗರ್ಭಕ್ಕೆ ಕಾರಣನಾದನೋ ಅವನಿಗೂ ಯಾವುದೇ ಹಕ್ಕಿಲ್ಲ. ಏನೇ ಅಪಾಯ ಸಂಭವಿಸಿದರೂ ಈ ತೀರ್ಮಾನ ಆ ಮಹಿಳೆಯದೇ ಆಗಿರುತ್ತದೆ. ಗರ್ಭದಲ್ಲಿ ಅರಳುತ್ತಿರುವ ಭ್ರೂಣದ ಕಾನೂನು ಶ್ರೇಣಿ ಯಾವುದು? ಭ್ರೂಣದ ಲಿಂಗ ಯಾವುದು? ಇದನ್ನೆಲ್ಲಾ ತಿಳಿದುಕೊಳ್ಳುವ ಹಕ್ಕೂ ಅವಳಿಗಿದೆ. ಮುಕ್ತ ಪರಿಸರದಲ್ಲಿ ಉಸಿರಾಡುವುದು ಆ ಮಹಿಳೆಯ ಹಕ್ಕಾಗಿದೆ, ಅವಳ ನಿರ್ಧಾರವಾಗಿದೆ.

ಸುಪ್ರಿಂ ಕೋರ್ಟ್‌ ಬಳಿ ಒಂದು ಅವಕಾಶವಿತ್ತು. ವೈದ್ಯರ ಪ್ಯಾನೆಲ್ ಬದಲು ಪ್ರತಿ ವಿಷಯದಲ್ಲೂ ನಿರ್ಧಾರ ಕೈಗೊಳ್ಳುವುದು ಆ ಮಹಿಳೆಯ ಹಾಗೂ ಅವಳ ವೈದ್ಯರುಗಳದ್ದಾಗಿದೆ. ವೈದ್ಯರು ತಮ್ಮ ಸೌಲಭ್ಯಕ್ಕಾಗಿ ಅಲ್ಚ್ರಾಸೌಂಡ್‌ ಮೆಷಿನ್‌ ಅಥವಾ ಸಕ್ಷನ್‌ಮೆಷಿನ್‌ ಹಾಕಿಸುವುದು ಅವರ ಇಚ್ಛೆಯಾಗಿರುತ್ತದೆ. ತಪ್ಪಾದರೆ ವೈದ್ಯರನ್ನು ದೋಷಿಯನ್ನಾಗಿ ಮಾಡಬಹುದು. ಗರ್ಭಪಾತ ಮಾಡಿದರೆ ಅಥವಾ ಭ್ರೂಣದ ಲಿಂಗ ಪತ್ತೆ ಹಚ್ಚಿದರೆ ಅಲ್ಲ. ಮಹಿಳೆಯರು ಧರ್ಮ ಅಥವಾ ಮನುಷ್ಯತ್ವದ ಮರೆಯಲ್ಲಿ ತಮ್ಮ ಹಕ್ಕನ್ನು ಬಲಹೀನಗೊಳಿಸಿಕೊಂಡಿದ್ದಾರೆ.

ಮದುವೆಯ ಕಾನೂನು ವ್ಯಾವಹಾರಿಕ ದೃಷ್ಟಿಯಿಂದ ಬದಾಗಲಿ

ಭಾರತೀಯ ಜನತಾ ಪಕ್ಷದ ಸರ್ಕಾರ ಸಮಾನ ವೈಯಕ್ತಿಕ ಕಾನೂನಿನ ಬಗ್ಗೆ ವಿಚಾರ ಮಾಡಲು ಸಿದ್ಧವಾಗಿಲ್ಲದಿರುವುದು ವಿಷಾದದ ಸಂಗತಿ. ಕೇಸರಿ ದಳದವರ ಹಳೆಯ ಅಜೆಂಡಾ ಏನೆಂದರೆ ವೈಯಕ್ತಿಕ ಕಾನೂನು ಒಂದೇ ಆಗಿರಲಿ ಎಂದು. ಏಕೆಂದರೆ ಅವರು ಮುಸಲ್ಮಾನರಿಂದ ತಲಾಕ್‌, ಕೃಪೆ ಮತ್ತು 4 ಪತ್ನಿಯರನ್ನು ಇಟ್ಟುಕೊಳ್ಳುವ ಹಕ್ಕನ್ನು ಕಿತ್ತುಕೊಳ್ಳಬಹುದೆಂಬುದು. ಆದರೆ  ಮತಾಂಧರಿಗೆ ಸಮಾನ ವೈಯಕ್ತಿಕ ಕಾನೂನಿನಲ್ಲಿ ಹಿಂದೂ ವಿವಾಹ ಕಾಯ್ದೆ ಮತ್ತು ಹಿಂದೂ ಒಟ್ಟು ಕುಟುಂಬ ಪುಡಿಯಾಗುವುದೆಂದು ಗೊತ್ತಿಲ್ಲ.

ಇಂದು ಹಿಂದೂ ವಿವಾಹ ಧರ್ಮದ ಸೋಗಿನ ಒಂದು ದೊಂಬಿಯಾಗಿದೆ. ಶುಭ ಮುಹೂರ್ತ, ಜಾತಕ, ಪುರೋಹಿತರ ಘಂಟಾನಾದ, ಹೋಮ, ಹವನ, ದೇವತಾಹ್ವಾನ, ಸಪ್ತಪದಿ, ಇತರ ಶಾಸ್ತ್ರಗಳು ಇತ್ಯಾದಿ ಹಿಂದೂ ವಿವಾಹದ ಭಾಗವಾಗಿದೆ. ಕೆಲವು ಕಾನೂನಿನ ಮಿತಿಯಲ್ಲಿ ಬರುತ್ತವೆ, ಕೆಲವು ಬರುವುದಿಲ್ಲ. ಒಂದುವೇಳೆ ಸಮಾನ ವಿವಾಹ ಕಾನೂನು ಉತ್ತರಾಧಿಕಾರ, ದತ್ತು ಸ್ವೀಕಾರ ಇತ್ಯಾದಿ. ಆದರೆ ಪುರೋಹಿತಶಾಹಿ ಉರುಳಿ ಹೋಗುತ್ತದೆ.

ಭಾಜಪ ಸರ್ಕಾರ ಬಂದ ಮೇಲೆ ಕಾನೂನಿನ ಕರಡು ಪ್ರತಿ ತಯಾರಿಸುವಾಗ ಪಾರ್ಟಿಯ ಆಧಾರ, ಧರ್ಮವನ್ನು ಈ ಸಮಾನ ಕಾನೂನು ನಿರರ್ಥಕವಾಗಿಸುತ್ತದೆಂದು ಅರಿವಾಯಿತು.

ಸಮಾನ ವಿವಾಹ ಕಾನೂನಿನ ಅರ್ಥ ಎಲ್ಲ ಧರ್ಮದವರು ಪರಸ್ಪರ ಯಾವುದೇ ಸಂಬಂಧವಿಲ್ಲದೆ ಮದುವೆ ಮಾಡಿಕೊಳ್ಳಬಹುದು ಮತ್ತು ಮದುವೆ ಕೋರ್ಟುಗಳಲ್ಲಿ ಅಥವಾ ಕಾನೂನು ಪ್ರಕಾರ ನಿಯುಕ್ತರಾದ ಪಬ್ಲಿಕ್‌ ನೋಟರಿಯವರ ಮೂಲಕ ಆಗುತ್ತದೆ. ಆಗ ಜಾತಕ ನೋಡಿ ಮದುವೆ ಮಾಡಿಸಿದರೆ ಪುರೋಹಿತರಿಗೆ ಸಿಗುವ ಹೆಚ್ಚಿನ ಮೊತ್ತದ ಹಣ ಮತ್ತು ಇಡೀ ರಾತ್ರಿ ಸಪ್ತಪದಿ ಹಾಕಿಸುತ್ತಾ ಜಾಗರಣೆ ಮಾಡಿಸುವುದೆಲ್ಲಾ ನಿಂತುಹೋಗುತ್ತದೆ.

ಮುಸ್ಲಿಂ ಕಾನೂನಿನಲ್ಲಿ ಆಗುವ ಬದಲಾವಣೆಗಳು ಹಿಂದೂ ಕಾನೂನಿನಲ್ಲಿ ಆಗುವ ಬದಲಾವಣೆಗಳಷ್ಟು ಮಹತ್ವವಾಗಿರುವುದಿಲ್ಲ. ಏಕೆಂದರೆ ಮುಸ್ಲಿಂ ವೈಯಕ್ತಿಕ ಕಾನೂನು ಕೆಲವು ಹಂತದವರೆಗೆ ಮಹಿಳೆಯ ಒಪ್ಪಿಗೆಯನ್ನು ಅಲಂಬಿಸಿರುತ್ತದೆ. ಆದರೆ ಹಿಂದೂ ವಿವಾಹ ಕಾನೂನಿನಲ್ಲಿ ಅವಳನ್ನು ವರನಿಗೆ ದಾನದ ರೂಪದಲ್ಲಿ ಕೊಡಲಾಗುತ್ತದೆ.

ಮುಸ್ಲಿಂ ವಿವಾಹ ಕಾನೂನು ಪರಿರ್ತನೆ ಬಯಸುತ್ತದೆ. ಆದರೆ ಅವರು 5 ರಿಂದ 25ರಷ್ಟು ಆಗುತ್ತಿದ್ದಾರೆ ಎನ್ನುವುದು ಬೋಗಸ್‌. ಪ್ರತಿ ಮುಸ್ಲಿಂ ಪುರುಷ 4 ಪತ್ನಿಯರನ್ನು ಇಟ್ಟುಕೊಳ್ಳುತ್ತಾನೆ ಎನ್ನುವುದೂ ತಪ್ಪು. ಏಕೆಂದರೆ ಪುರುಷರು ಮತ್ತು ಮಹಿಳೆಯರ ಜನಸಂಖ್ಯೆಯ ಅನುಪಾತ 1:4 ಆಗಿರಬೇಕಿತ್ತು. ಅಂದರೆ ಮಹಿಳೆಯರು 4 ಪಟ್ಟು ಹೆಚ್ಚು ಇರಬೇಕಿತ್ತು.

ಸಮಾನ ವೈಯಕ್ತಿಕ ಕಾನೂನಿನ ಗುಮ್ಮ ಕೇವಲ ಚುನಾವಣೆಯ ಉಪಾಕ್ಯವಾಗಿದೆ. ಅಚ್ಛೇ ದಿನ್‌ ಬರುವಿಕೆ ಅಥವಾ ವಿದೇಶದಿಂದ ಕಪ್ಪು ಹಣ ತಂದ ಮೇಲೆ ಪ್ರತಿ ವ್ಯಕ್ತಿಗೆ 15 ಲಕ್ಷ ರೂ. ಕೊಡುವಿಕೆ. ಮದುವೆಯ ಕಾನೂನುಗಳಲ್ಲಿ ಪರಿವರ್ತನೆಯಾಗಲಿ. ಆದರೆ ಅದನ್ನು ರಾಜಕಾರಣದ ದೃಷ್ಟಿಯಲ್ಲಿ ನೋಡದೆ ವ್ಯಾವಹಾರಿಕ ದೃಷ್ಟಿಯಿಂದ ನೋಡಬೇಕು. ಹಿಂದೂ ಮುಸ್ಲಿಂ ಎರಡೂ ಸಮಾಜಗಳಲ್ಲಿ ವೈಯಕ್ತಿಕ ಕಾನೂನುಗಳಲ್ಲಿ ಬಹಳಷ್ಟು ಬದಲಾವಣೆಯ ಅಗತ್ಯವಿದೆ. ಏಕೆಂದರೆ ಮಹಿಳೆಯರು ಕೋರ್ಟಿನ ಮೆಟ್ಟಿಲುಗಳಲ್ಲಿ ವರ್ಷಗಟ್ಟಲೆ ಚಪ್ಪಲಿಗಳನ್ನು ಸವೆಸುವಂತಾಗಬಾರದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ