ತುಟಿಯ ಮೇಲೆ ತುಂಟ ಕಿರುನಗೆ.... : ತುಟಿಗಳು ಎಂದಾಕ್ಷಣ ಹೂನಗೆ... ಕೆಂಡಸಂಪಿಗೆ.... ತೊಂಡೆಹಣ್ಣಿನ ಹೋಲಿಕೆಗಳೇ ನೆನಪಾಗುವಾಗ ಮೈ ಮರೆಯುವ ತುಟಿಗಳ ಮತ್ತಿನಲ್ಲಿ ಲೋಕವನ್ನೇ ಮರೆಯುವಂತಿದ್ದರೆ...? ಪ್ರೇಮಿಗಳ ಈ ಬಯಕೆ ಹೇಗೋ ಏನೋ, ಆದರೆ ಪ್ಯಾರಿಸ್‌ನಲ್ಲಿ ಇತ್ತೀಚೆಗೆ ನಡೆದ ಒಂದು ಫರ್ನೀಚರ್‌ ಮೇಳದಲ್ಲಿ ಪ್ರದರ್ಶನಕ್ಕಾಗಿ ಭಾರಿ ತುಟಿಗಳ ಆಕಾರದ ಇಂಥದೊಂದು ಸೋಫಾ ಸಿದ್ಧಗೊಂಡಿತ್ತು. ಇಂಥ ವಿಭಿನ್ನ ಡಿಸೈನ್‌ಗಳು ಅಲ್ಲಿ ಲಭ್ಯವಿದ್ದವು.

ಹುಡುಗಿಯರನ್ನು ಬಿಟ್ಟು ಹಕ್ಕಿಗಳನ್ನು ಹುಡುಕಿ : `ಪಕ್ಷಿ ವೀಕ್ಷಣೆ' ನಿಜಕ್ಕೂ ಒಂದು ಅದ್ಭುತ, ರೋಮಾಂಚಕಾರಿ ಅನುಭವ! ಅವನ್ನು ಅರಸುತ್ತಾ ಹೋಗುವುದೇ ಒಂದು ಚಂದ. ಆದರೆ ಎ.ಸಿ. ಕೋಣೆಗಳಲ್ಲಿ ಕುಳಿತು ಸದಾ ವಿಡಿಯೋ ನೋಡುವವರಿಗೆ ಇದರ ಅನುಭವ ಆಗಬೇಕು ಹೇಗೆ? ಇಂಥವನ್ನು ನೈಸರ್ಗಿಕವಾಗಿ ನೋಡಲಾಗದೆ ಟಿ.ವಿ.ಯ ಅನಿಮಲ್ ಪ್ಲಾನೆಟ್‌ನಂಥ ಕಾರ್ಯಕ್ರಮಗಳಲ್ಲಿ ನೋಡಿ ನಲಿಯಬೇಕಷ್ಟೆ. ಬಿಕಿನಿ ಧರಿಸಿದ ಸುಂದರಿಯರನ್ನು ಬೆನ್ನು ಹತ್ತುವ ಹುಡುಗರು, ಅವರ ಮಾನೋಪೊಲಿ ತೊರೆದು ಹವ್ಯಾಸ ಬದಲಿಸಿದರೆ ಕಷ್ಟ!

ಇಂಥ ಬೆಡಗು ಮತ್ತೆಲ್ಲಿ ಸಿಕ್ಕೀತು? : ಫ್ರೆಂಚರ ಕ್ಯಾನ್‌ ಕ್ಯಾನ್‌ ಡ್ಯಾನ್ಸ್ ನಮ್ಮ ಮರಾಠಿಯ ಲಮಾಣಿ ನೃತ್ಯದಂತೆ ಬಲು ಸೆಕ್ಸಿ ನೃತ್ಯ ಎನಿಸಿದೆ. ಇದರಲ್ಲಿ ನರ್ತಕಿಯರ ಕಾಲು ಮೇಲಕ್ಕೆ ಹೋದಂತೆ, ಪಡ್ಡೆ ಹುಡುಗರ ಹೃದಯ ಜಾರಿ ಜಾರಿ ಕೆಳಗಿಳಿದಿರುತ್ತದೆ. ಇಂಥ ಮಾದಕ ಮೋಹಕ ನೃತ್ಯ ನೋಡಿದರ ಎದೆ ಧಸಕ್‌ ಎಂದಿತೋ ಇಲ್ಲವೇ, ಆದರೆ ಅವರು ಬರಿದಾದ ಹೃದಯದೊಡನೆ ಮರಳುವುದಂತೂ ಖಚಿತ.

ಬನ್ನಿ ಕುಣಿಯುವ... ಜೊತೆ ಜೊತೆಯಲಿ : ಇಂದಿನ ಸಮೂಹ ನೃತ್ಯಗಳು ಸೋಲೋ ಡ್ಯಾನ್ಸ್ ಗಳನ್ನು ಹಿಂದಿಕ್ಕಿ ಮುನ್ನುಗುತ್ತಿವೆ. ನಿರ್ದೇಶಕರು 100-100 ಮಂದಿ ನರ್ತಕರಿಗೆ ಅವರವರ ಪಾತ್ರ ಒಪ್ಪಿಸಿ, ವಿಭಿನ್ನ ಭಾವಭಂಗಿಗಳಲ್ಲಿ ಆ್ಯಕ್ಷನ್‌ಗಾಗಿ ತಯಾರು ಮಾಡಿ ನಿಲ್ಲಿಸಿರುತ್ತಾರೆ. ವೀಕ್ಷಕರ ಕಣ್ಣೋಟ ವೇದಿಕೆಯಲ್ಲಿ ಎತ್ತ ಸರಿದರೂ ಹಬ್ಬವೋ ಹಬ್ಬ! ಈ ಕಲೆ ಇತ್ತೀಚೆಗೆ ನಮ್ಮ ಚಿತ್ರಗಳಲ್ಲೂ ವಾಡಿಕೆಯಾಗಿದೆ. ಸಿನಿಮಾ ನೃತ್ಯಗಳಲ್ಲಿ ಪ್ರತಿಯೊಬ್ಬ ಎಕ್ಸ್ ಟ್ರಾ ಏನಾದರೊಂದು ಮಾಡುತ್ತಲೇ ಇರುತ್ತಾರೆ. ನ್ಯೂಯಾರ್ಕ್‌ನ ಸ್ಪೆಕ್ಟ್ಯಾಕ್ಯುಲರ್‌ ಶೋಗಳಲ್ಲಿ ಮನದಣಿಯೆ ಇಂಥ ನೃತ್ಯ ವೀಕ್ಷಿಸಬಹುದು.

ದೃಷ್ಟಿ ನಡುವೆ ಮಾತ್ರವಲ್ಲ... ಎಲ್ಲಾ ಕಡೆಯೂ! : ಇತ್ತೀಚಿನ ರಾಂಪ್‌ ಶೋಗಳಲ್ಲಿ ಮೇಲ್ ‌ಮಾಡೆಲ್‌ಗಳಿಗೂ ಸಮಾನಾವಕಾಶ ಸಿಗುತ್ತಿರುವುದು ವಿಡಂಬನೆಯೇ ಸರಿ. ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನಡೆದ ಒಂದು ಫ್ಯಾಷನ್‌ ಶೋನಲ್ಲಿ, ಒಬ್ಬ ಆಕರ್ಷಕ ಫೀಮೇಲ್ ‌ಮಾಡೆಲ್ ‌ಜೊತೆ ಮೇಲ್ ‌ಮಾಡೆಲ್ಸ್ ಸಹ ಎದೆ ಸೆಟೆಸಿ ನಡೆದಾಗ, ಲಿಪ್‌ಸ್ಟಿಕ್‌ ಬಳಿದ ಎಷ್ಟು ಬಾಯಿಗಳಿಂದ ಆಹಾ.... ಓಹೋ.... ಉದ್ಗಾರಗಳು ಹೊರಟವೋ ಗೊತ್ತಿಲ್ಲ.

ತಿನ್ನುವುದೋ ಬಿಡುವುದೋ? :  ಆ್ಯಪಲ್ ಕಂಪ್ಯೂಟರ್‌ನ ತಿನ್ನಲ್ಪಟ್ಟ ಸೇಬಿನ ಭಾಗ ಅಪಾಯಕಾರಿ ಎಂದು ಸಾಬೀತಾಗಿದೆ. ಹಾಗಾಗಿ ಒಬ್ಬ ಆರ್ಟಿಸ್ಟ್ ಆ ಭಾಗವನ್ನು ಮತ್ತೆ ಹೊಲಿದು ಹೀಗೆ ಪ್ರಸ್ತುತಪಡಿಸಿದ್ದಾನೆ. ಈ ದಪ್ಪ ಹೊಲಿಗೆ ನಿಜಕ್ಕೂ ಹೀಗೆ ಮುರಿದ ಹೃದಯಗಳನ್ನು ಒಂದಾಗಿ ಬೆಸೆಯಬಲ್ಲದೇ ಎಂಬುದೇ ಈಗಿರುವ ಯಕ್ಷ ಪ್ರಶ್ನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ